Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ನೆಲದನಿ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಲಂಡನ್ ಡೈರಿ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಮನೋ ಚರಿತ್ರ
  5. ಇತಿಹಾಸದ ಚಾರಿತ್ರ್ಯವಧೆ

ಇತಿಹಾಸದ ಚಾರಿತ್ರ್ಯವಧೆ

ಯೋಗೇಶ್ ಮಾಸ್ಟರ್ಯೋಗೇಶ್ ಮಾಸ್ಟರ್22 Nov 2026 10:25 AM IST
share
ಇತಿಹಾಸದ ಚಾರಿತ್ರ್ಯವಧೆ

ವಾಸ್ತವದಲ್ಲಿ ಸರಳವಾಗಿರುವ ಎಲ್ಲಾ ಸ್ವಾಭಾವಿಕ ಲಕ್ಷಣಗಳನ್ನು ಮನಸ್ಸು ಹೊಂದಿದ್ದರೂ, ಮನಸ್ಸಿಗೆ ಇರುವ ಮಾನಸಿಕ ಪರಿಸರವು ಅದು ಸಂಕೀರ್ಣಗೊಳ್ಳುವಂತೆ ತನ್ನ ಪ್ರಭಾವಗಳನ್ನು ಬೀರುತ್ತದೆ. ಸರಳವಾಗಿ ಇರಬೇಕಾದ ಮನಸ್ಸು ಸಂಕೀರ್ಣವಾಗಿ ಒತ್ತಡಕ್ಕೆ, ಆತಂಕಕ್ಕೆ, ಆಗ್ರಹಕ್ಕೆ ಒಳಗಾಗಿ ನಂಬಿಕೆ ಮತ್ತು ಅಹಂಕಾರವನ್ನು ಬೆಳೆಸಿಕೊಳ್ಳುತ್ತದೆ. ನಂಬಿಕೆ ಮತ್ತು ಅಹಂಕಾರ; ಈವೆರಡೂ ಸಯಾಮಿ ಅವಳಿಗಳು. ನಂಬಿಕೆಯಾಗಲಿ ಅಥವಾ ಅಹಂಕಾರವಾಗಲಿ ವಾಸ್ತವತೆ ಅಥವಾ ಸತ್ಯ ಏನೆಂದು ನೋಡುವುದಕ್ಕೆ ಒಲವು ತೋರುವುದಕ್ಕಿಂತ ತನಗೆ ರೂಢಿಯಾಗಿರುವ ಧೋರಣೆಯಲ್ಲೇ ಹಿತವನ್ನು ಕಾಣುವುದಲ್ಲದೇ ಅದನ್ನೇ ಸತ್ಯವೆಂದೂ ಪ್ರತಿಪಾದಿಸಲು ಅಥವಾ ವಾದಿಸಲೂ ಸಿದ್ಧವಾಗುತ್ತದೆ. ಸತ್ಯ ಎಂಬುದಕ್ಕೆ ಮೌಲ್ಯಾರೋಪಣೆ ಮಾಡಿರುವ ಕಾರಣದಿಂದ ತನ್ನ ನಂಬಿಕೆ ಮತ್ತು ಅಹಂಕಾರವನ್ನೇ ಸತ್ಯ ಎಂದು ನಿರೂಪಿಸಲು ಹೆಣಗುತ್ತಾನೆ.

ಲೇಖಕರು, ಚಿಂತಕರು, ಸಂಶೋಧಕರು, ರಾಜಕಾರಣಿಗಳು ಮತ್ತು ಸಾಮಾನ್ಯ ಜನರೂ ಇದಕ್ಕೆ ಹೊರತಲ್ಲ. ಐತಿಹಾಸಿಕ ಪ್ರಸಂಗಗಳನ್ನು, ದಾಖಲೆಗಳನ್ನು, ಚಾರಿತ್ರಿಕ ವ್ಯಕ್ತಿಗಳನ್ನು, ಅವರ ಜೀವನ, ಸಾಧನೆ, ಬೋಧನೆಗಳನ್ನೂ ಕೂಡಾ ತಮ್ಮ ಅಹಂಕಾರ ಮತ್ತು ನಂಬಿಕೆಗೆ ಅನುಗುಣವಾಗಿ ಬದಲಾಯಿಸಲು ಅಥವಾ ನಿರೂಪಿಸಲು, ಪ್ರದರ್ಶಿಸಲು ಯತ್ನಿಸುತ್ತಾರೆ. ಇದು ಯಾವಾಗಲಿಂದಲೂ ಕಂಡುಬರುತ್ತಿರುವಂತಹ ವಿದ್ಯಮಾನ. ಹಾಗಾಗಿ ನಾವು ಕೇಳಿಕೊಳ್ಳಬೇಕಾದ ಪ್ರಶ್ನೆ ಏನೆಂದರೆ, ಮನುಷ್ಯ ತನ್ನ ನಂಬಿಕೆಯನ್ನು ಮತ್ತು ಅಹಂಕಾರವನ್ನು (ತನ್ನತನದ ಗುರುತು) ಸತ್ಯಕ್ಕೆ ಅನುಗುಣವಾಗಿ ಬದಲಾಯಿಸಿಕೊಳ್ಳುವ ಬದಲು, ಸತ್ಯವನ್ನೇ ತನ್ನ ನಂಬಿಕೆಗೆ ಮತ್ತು ಅಹಮಿನ ಧೋರಣೆಗೆ ಅನುಗುಣವಾಗಿ ಬದಲಾಯಿಸಿಕೊಳ್ಳಲು ಏಕೆ ಪ್ರಯತ್ನಿಸುತ್ತಾನೆ? ಇದು ಯಾವುದೋ ಒಂದು ಪೌರಾಣಿಕ ಕತೆಯನ್ನು ತಮ್ಮ ಗ್ರಹಿಕೆಗೆ ತಕ್ಕಂತೆ ರೂಪಕವನ್ನು ವಿವರಿಸಲು ಯತ್ನಿಸುವ ವಿಷಯವಲ್ಲ. ಬದಲಾಗಿ ಸಮಾಜದ ಐತಿಹಾಸಿಕ ಸ್ಮತಿಯನ್ನು ಬದಲಾಯಿಸುವ ಮೂಲಕ ವರ್ತಮಾನದ ಜನರ ಮನಸ್ಸನ್ನು ನಿಯಂತ್ರಿಸುವ ಪ್ರಯತ್ನಗಳ ಕುರಿತಾದ ಬಹಳ ಗಂಭೀರವಾದ ಪ್ರಶ್ನೆ.

ಇಲ್ಲಿ ನಾವು ಮೂರು ಸಂಗತಿಗಳನ್ನು ಪ್ರತ್ಯೇಕಿಸಬೇಕು. ಒಂದು, ಐತಿಹಾಸಿಕ ವ್ಯಕ್ತಿಗಳ ನಿಲುವು ಮತ್ತು ಕೃತಿಗಳನ್ನು ಸಾಕ್ಷ್ಯಾಧಾರಗಳೊಂದಿಗೆ ವಿಮರ್ಶಿಸುವುದು. ಎರಡು, ಅವರ ವಿಚಾರಗಳನ್ನು ತಮ್ಮ ಗ್ರಹಿಕೆಯ ಇತಿಮಿತಿಯಂತೆ ತಪ್ಪಾಗಿ ಅರ್ಥೈಸುವುದು ಅಥವಾ ಆಯ್ದ ಘಟನೆಗಳ ಮೂಲಕ ಅಪೂರ್ಣ ಚಿತ್ರಣವನ್ನು ಕಟ್ಟುವುದು. ಮೂರು, ಉದ್ದೇಶಪೂರ್ವಕವಾಗಿ ಅಪಪ್ರಚಾರ ಮಾಡಿ, ಅವರ ಕುರಿತು ಜನಸಮೂಹದಲ್ಲಿ ದ್ವೇಷ, ತಿರಸ್ಕಾರ ಮತ್ತು ಅಪನಂಬಿಕೆ ಹುಟ್ಟಿಸುವುದು.

ಮೊದಲನೆಯದು ಆರೋಗ್ಯಕರ ಐತಿಹಾಸಿಕ ಅಧ್ಯಯನ. ಎರಡನೆಯದು ಜ್ಞಾನದ ಮಿತಿ ಅಥವಾ ಪೂರ್ವಾಗ್ರಹದ ಪರಿಣಾಮವಾಗಿರಬಹುದು. ಮೂರನೆಯದು ಸಾಮಾಜಿಕ ಮನೋವೈಜ್ಞಾನಿಕ ಕುಶಲ (ಕುಟಿಲ) ತಂತ್ರವಾಗಬಹುದು.

ಅದರಲ್ಲಿಯೂ ಐತಿಹಾಸಿಕ ವ್ಯಕ್ತಿತ್ವಗಳ ಅಪನಿರೂಪಣೆಯಿಂದ ಇತಿಹಾಸದ ಚಾರಿತ್ರ್ಯಹರಣ ಮಾಡುವುದಲ್ಲದೇ ಅವರು ಸಾಮೂಹಿಕ ಸ್ಮತಿಯ ಮೇಲೆ ಮನೋವೈಜ್ಞಾನಿಕ ದಾಳಿಯನ್ನು ಮಾಡುತ್ತಾರೆ. ಇದು ದ್ವೇಷದ ಮನೋವಿಜ್ಞಾನ ಮತ್ತು ಸಾಮಾಜಿಕ ಸ್ಮತಿಯ ರಾಜಕಾರಣವಾಗಿರುತ್ತದೆ.

ನಾವು ಮರೆಯಬಾರದಾಗಿರುವುದೇನೆಂದರೆ, ಒಬ್ಬ ಮನುಷ್ಯ ಸತ್ತ ಮೇಲೂ ಅವನ ವಿರುದ್ಧ ಯುದ್ಧ ನಡೆಯಬಹುದು! ಮನುಷ್ಯನೊಬ್ಬನನ್ನು ಕೊಲ್ಲಬಹುದು. ಆದರೆ ಅವನು ಪ್ರತಿಪಾದಿಸಿದ ವಿಚಾರಗಳು, ಅವನ ಬದುಕಿನ ಅನುಭವಗಳು, ಅವನು ನಡೆಸಿದ ಹೋರಾಟಗಳು ಮತ್ತು ಅವನು ಸಮಾಜದಲ್ಲಿ ಮೂಡಿಸಿದ ಪ್ರಭಾವಗಳು ಅವನ ಮರಣದೊಂದಿಗೆ ಕೊನೆಗೊಳ್ಳುವುದಿಲ್ಲ. ಅವು ಮುಂದಿನ ತಲೆಮಾರುಗಳ ಸ್ಮತಿಯಲ್ಲಿ ಉಳಿಯುತ್ತವೆ. ಸಾಹಿತ್ಯ, ಕಲೆ, ಶಿಕ್ಷಣ, ಆಚರಣೆ, ಸಾರ್ವಜನಿಕ ಸಂವಾದ ಮತ್ತು ಸಾಮಾಜಿಕ ಚಳವಳಿಗಳ ಮೂಲಕ ಮುಂದುವರಿಯುತ್ತವೆ. ಆದ್ದರಿಂದ ಒಬ್ಬ ವ್ಯಕ್ತಿಯ ದೇಹವನ್ನು ನಾಶಮಾಡುವುದರಿಂದ ಅವನ ಸಾಮಾಜಿಕ ಪ್ರಭಾವವನ್ನು ಸಂಪೂರ್ಣವಾಗಿ ನಾಶಮಾಡಲು ಸಾಧ್ಯವಾಗುವುದಿಲ್ಲ. ಅವನ ಪ್ರಭಾವವನ್ನು ನಾಶಮಾಡಲು ಅಥವಾ ದುರ್ಬಲಗೊಳಿಸಲು ಅವನ ಕುರಿತು ಸಮಾಜ ಹೊಂದಿರುವ ಸ್ಮತಿಯನ್ನೇ ಬದಲಾಯಿಸಬೇಕಾಗುತ್ತದೆ. ಇಲ್ಲಿಯೇ ಐತಿಹಾಸಿಕ ವ್ಯಕ್ತಿಗಳ ಚಾರಿತ್ರ್ಯಹರಣದ ರಾಜಕಾರಣ ಆರಂಭವಾಗುತ್ತದೆ.

ಒಂದು ಕಾಲದಲ್ಲಿ ಸಮಾಜದ ಅನ್ಯಾಯಗಳನ್ನು ಪ್ರಶ್ನಿಸಿದ ವ್ಯಕ್ತಿಯನ್ನೇ ಅನ್ಯಾಯದ ಪ್ರತಿನಿಧಿಯನ್ನಾಗಿ ಚಿತ್ರಿಸುವುದು; ಶಾಂತಿ ಮತ್ತು ಸಹಬಾಳ್ವೆಗಾಗಿ ಶ್ರಮಿಸಿದ ವ್ಯಕ್ತಿಯನ್ನೇ ಸಾಮಾಜಿಕ ಸಂಘರ್ಷಗಳಿಗೆ ಕಾರಣವೆಂದು ನಿರೂಪಿಸುವುದು; ಸಮಾನತೆಯನ್ನು ಪ್ರತಿಪಾದಿಸಿದ ವ್ಯಕ್ತಿಯನ್ನೇ ಸ್ವಾರ್ಥಿ, ಅಧಿಕಾರಲೋಭಿ ಅಥವಾ ವಂಚಕನೆಂದು ಬಿಂಬಿಸುವುದು; ಇವೆಲ್ಲವೂ ಒಂದೇ ಬಗೆಯ ನಿರೂಪಣಾತ್ಮಕ ತಂತ್ರಗಳಾಗಿರಬಹುದು.

ಇಂತಹ ಪ್ರಕ್ರಿಯೆಯಲ್ಲಿ ಐತಿಹಾಸಿಕ ವ್ಯಕ್ತಿಯ ನಿಜವಾದ ಬದುಕಿಗಿಂತ ಅವನ ಕುರಿತು ನಿರ್ಮಿಸಲಾದ ಕಥನವೇ ಜನರ ಮನಸ್ಸಿನಲ್ಲಿ ಹೆಚ್ಚು ಪ್ರಭಾವಶಾಲಿ ಯಾಗಬಹುದು.

ಇತಿಹಾಸದಲ್ಲಿ ಏನು ಸಂಭವಿಸಿತು ಎನ್ನುವುದಕ್ಕಿಂತ, ಇತಿಹಾಸದಲ್ಲಿ ಏನು ಸಂಭವಿಸಿತೆಂದು ಜನರು ನಂಬುತ್ತಾರೆ ಎನ್ನುವುದು ಅವರ ವರ್ತನೆಯನ್ನು ರೂಪಿಸುವಲ್ಲಿ ಪ್ರಭಾವಶಾಲಿ ಯಾಗಬಹುದು. ಇದು ಸಾಮೂಹಿಕ ಸ್ಮತಿಯ ರಾಜಕಾರಣದ ಅತ್ಯಂತ ಅಪಾಯಕಾರಿ ಸಾಧ್ಯತೆ. ಆದರೆ ಇತಿಹಾಸದ ವಿಮರ್ಶೆ ಮತ್ತು ಚಾರಿತ್ರ್ಯಹರಣದ ನಡುವಿನ ವ್ಯತ್ಯಾಸ ಇದೆ. ಯಾವುದೇ ಐತಿಹಾಸಿಕ ವ್ಯಕ್ತಿಯನ್ನು ವಿಮರ್ಶೆಗೆ ಅತೀತನನ್ನಾಗಿ ಮಾಡಬಾರದು. ಗಾಂಧೀಜಿಯವರ ಧಾರ್ಮಿಕ ಮತ್ತು ರಾಜಕೀಯ ನಿಲುವುಗಳನ್ನು ವಿಮರ್ಶಿಸಬಹುದು. ಅಂಬೇಡ್ಕರರ ರಾಜಕೀಯ ನಿರ್ಧಾರಗಳನ್ನು ಪ್ರಶ್ನಿಸಬಹುದು. ಬಸವಣ್ಣನವರ ವಚನಗಳ ನಡುವಿನ ತಾತ್ವಿಕ ಸಂಬಂಧಗಳನ್ನು ಪರಿಶೀಲಿಸಬಹುದು. ಬುದ್ಧನ ಬೋಧನೆಗಳ ಐತಿಹಾಸಿಕ ವಿಕಾಸವನ್ನು ಅಧ್ಯಯನ ಮಾಡಬಹುದು. ಏಸುಕ್ರಿಸ್ತ ಮತ್ತು ಪ್ರವಾದಿ ಮುಹಮ್ಮದರ ಕುರಿತು ಧಾರ್ಮಿಕ ಪರಂಪರೆಗಳು ನೀಡಿರುವ ವಿವರಣೆಗಳನ್ನು ಐತಿಹಾಸಿಕ ವಿಧಾನಗಳಿಂದ ಪರಿಶೀಲಿಸಬಹುದು. ಇವೆಲ್ಲವೂ ಅಗತ್ಯವಾದ ಅಧ್ಯಯನಗಳೇ.

ಆದರೆ ವಿಮರ್ಶೆ ಮತ್ತು ಚಾರಿತ್ರ್ಯಹರಣದ ನಡುವೆ ಮೂಲಭೂತವಾದ ವ್ಯತ್ಯಾಸವಿದೆ. ವಿಮರ್ಶೆಯ ಉದ್ದೇಶ ಸತ್ಯವನ್ನು ತಿಳಿಯುವುದು. ಜೊತೆಗೆ ತಮಗೆ ದಾಟಿಸಲಾದ ವಿಚಾರ ಮತ್ತು ವಿಷಯಗಳನ್ನು ಇನ್ನಷ್ಟು ಸ್ಪಷ್ಟಗೊಳಿಸಿಕೊಳ್ಳುವುದು. ಕೆಲವೊಮ್ಮೆ ಹೊಟ್ಟು ಕಾಳುಗಳನ್ನು ಬೇರ್ಪಡಿಸುವ ಕೆಲಸವೂ ಆಗುವುದು. ಆದರೆ, ಚಾರಿತ್ರ್ಯಹರಣದ ಉದ್ದೇಶ ವ್ಯಕ್ತಿಯ ಕುರಿತು ನಿರ್ದಿಷ್ಟವಾದ ನಕಾರಾತ್ಮಕ ಅಭಿಪ್ರಾಯವನ್ನು ಮೂಡಿಸುವುದಾಗಿರುತ್ತದೆ.

ವಿಮರ್ಶೆ ತನ್ನ ಅಭಿಪ್ರಾಯಕ್ಕೆ ವಿರುದ್ಧವಾದ ಸಾಕ್ಷ್ಯಗಳನ್ನೂ ಪರಿಶೀಲಿಸುತ್ತದೆ. ಚಾರಿತ್ರ್ಯಹರಣವು ತನಗೆ ಅನುಕೂಲವಾದ ಸಂಗತಿಗಳನ್ನು ಮಾತ್ರ ಆಯ್ಕೆಮಾಡಿಕೊಳ್ಳುತ್ತದೆ. ವಿಮರ್ಶೆ ವ್ಯಕ್ತಿಯ ಒಳ್ಳೆಯ ಮತ್ತು ಕೆಟ್ಟ ನಿರ್ಧಾರಗಳನ್ನು ಪ್ರತ್ಯೇಕವಾಗಿ ಗುರುತಿಸುತ್ತದೆ. ಚಾರಿತ್ರ್ಯಹರಣವು ಒಂದು ತಪ್ಪನ್ನು ಆ ವ್ಯಕ್ತಿಯ ಸಂಪೂರ್ಣ ವ್ಯಕ್ತಿತ್ವದ ವ್ಯಾಖ್ಯಾನವನ್ನಾಗಿ ಪರಿವರ್ತಿಸುತ್ತದೆ.

ವಿಮರ್ಶೆ ಹೊಸ ಸಾಕ್ಷ್ಯ ದೊರೆತಾಗ ತನ್ನ ನಿರ್ಣಯ ವನ್ನು ಬದಲಾಯಿಸಿಕೊಳ್ಳುತ್ತದೆ. ಚಾರಿತ್ರ್ಯಹರಣವು ತನ್ನ ನಿರ್ಣಯವನ್ನು ಉಳಿಸಿಕೊಳ್ಳಲು ಸಾಕ್ಷ್ಯಗಳ ಅರ್ಥವನ್ನೇ ಬದಲಾಯಿಸುತ್ತದೆ.

(ಅಂಕಣಕಾರರು: ಹಿರಿಯ ಬರಹಗಾರರು, ಚಿಂತಕರು)

Tags

Character AssassinationhistoryYogesh MasterwritersResearchersPoliticians
share
ಯೋಗೇಶ್ ಮಾಸ್ಟರ್
ಯೋಗೇಶ್ ಮಾಸ್ಟರ್
Next Story
X