Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಮನೋ ಚರಿತ್ರ
  5. ಪ್ರಜಾಸತ್ತಾತ್ಮಕ ಮನೋಬಲ

ಪ್ರಜಾಸತ್ತಾತ್ಮಕ ಮನೋಬಲ

ಯೋಗೇಶ್ ಮಾಸ್ಟರ್,ಯೋಗೇಶ್ ಮಾಸ್ಟರ್,16 Aug 2026 10:20 AM IST
share
ಪ್ರಜಾಸತ್ತಾತ್ಮಕ ಮನೋಬಲ

ಪ್ರಜಾಪ್ರಭುತ್ವವೆನ್ನುವುದು ಬರಿಯ ಆಡಳಿತ ವ್ಯವಸ್ಥೆಯ ಒಂದು ಬಗೆ ಮಾತ್ರವಲ್ಲ. ಅದು ಒಂದು ಮಾನಸಿಕ ಸ್ಥಿತಿಯೂ ಕೂಡಾ. ಪ್ರಜಾಪ್ರಭುತ್ವದ ವ್ಯವಸ್ಥೆಯು ಇರುವ ಯಾವುದೇ ಸಮಾಜದಲ್ಲಿ ವ್ಯಕ್ತಿ, ಸಂಬಂಧಗಳು, ಕುಟುಂಬ, ಸಾಂಸ್ಕೃತಿಕ ಮತ್ತು ಧಾರ್ಮಿಕ ನೆಲೆಗಟ್ಟಿನ ಪ್ರಭಾವಗಳನ್ನೆಲ್ಲಾ ಪರಿಶೀಲನೆ ಮಾಡಿಕೊಳ್ಳುವ ಅಗತ್ಯವಂತೂ ಇರುತ್ತದೆ.

ಪ್ರಜಾಪ್ರಭುತ್ವಕ್ಕೆ ಬೇಕಾದ ಮನಸ್ಸಿನ ಸಾಮರ್ಥ್ಯವೆಂದರೆ, ನನ್ನಷ್ಟೇ ಹಕ್ಕು, ಘನತೆ ಮತ್ತು ಧ್ವನಿ ಇನ್ನೊಬ್ಬನಿಗೂ ಇದೆ ಎಂಬ ಅರಿವಿನೊಂದಿಗೆ ಬದುಕುವ ವ್ಯಕ್ತಿಯ ಮಾನಸಿಕ ಸಾಮರ್ಥ್ಯವಾಗಿರುತ್ತದೆ. ಅಧಿಕಾರ ಜನರಿಗೆ ದೊರೆತಾಗ ಮಾತ್ರ ಪ್ರಜಾಪ್ರಭುತ್ವ ಆರಂಭವಾಗುವುದಿಲ್ಲ; ಒಂದು ಮಾನವ ಮನಸ್ಸು ಮತ್ತೊಂದು ಮಾನವ ಮನಸ್ಸಿನೊಂದಿಗೆ ಅಧಿಕಾರವನ್ನು ಹಂಚಿಕೊಳ್ಳಲು ಕಲಿತಾಗ ಮಾನಸಿಕವಾದಂತಹ ಪ್ರಜಾಪ್ರಭುತ್ವ ಆರಂಭವಾಗುತ್ತದೆ.

ಒಬ್ಬ ವ್ಯಕ್ತಿಯ ಬೌದ್ಧಿಕ ಸಾಮರ್ಥ್ಯವನ್ನು ವಿವರಿಸಲು ನಾವು IQ ಎನ್ನುತ್ತೇವೆ. ವ್ಯಕ್ತಿಯು ತನ್ನದೇ ಭಾವನೆಗಳನ್ನು ಗುರುತಿಸಿ ನಿಭಾಯಿಸುವ ಸಾಮರ್ಥ್ಯದ ಕುರಿತು EQ ಮಾತನಾಡುತ್ತದೆ. ಅದೇ ರೀತಿ ಸಾಮಾಜಿಕ ಮತ್ತು ನೈತಿಕ ಸಾಮರ್ಥ್ಯಗಳನ್ನು ವಿವರಿಸಲು ಇನ್ನೂ ಹಲವು ಪರಿಕಲ್ಪನೆಗಳಿವೆ. ಅವುಗಳಲ್ಲಿ ಒಂದು ಪ್ರಮುಖವಾದ ಪರಿಕಲ್ಪನೆ ಪ್ರಜಾಪ್ರಭುತ್ವ ಮನೋಬಲ (Democratic Intelligence - DQ) ಎಂದು ಕರೆಯೋಣ. ಇದು ಈಗಾಗಲೇ ಸ್ಥಾಪಿತವಾದ ಮನೋವೈಜ್ಞಾನಿಕ ಪರೀಕ್ಷೆಯ ಹೆಸರಲ್ಲ. ಬದಲಾಗಿ ಪ್ರಜಾಪ್ರಭುತ್ವವನ್ನು ಕೇವಲ ಆಡಳಿತ ವ್ಯವಸ್ಥೆಯಾಗಿ ನೋಡದೆ, ಮನುಷ್ಯನ ಮನಸ್ಸಿನ ಸಾಮರ್ಥ್ಯವಾಗಿ ಅರ್ಥಮಾಡಿಕೊಳ್ಳಲು ಬಳಸಬಹುದಾದ ಒಂದು ಪರಿಕಲ್ಪನಾ ರಚನೆ (conceptual framework). ಸರಳವಾಗಿ ಹೇಳುವುದಾದರೆ, ‘‘ನನ್ನಷ್ಟೇ ಹಕ್ಕು, ಘನತೆ ಮತ್ತು ಧ್ವನಿ ಇನ್ನೊಬ್ಬನಿಗೂ ಇದೆ’’ ಎಂಬ ಅರಿವಿನೊಂದಿಗೆ ಬದುಕುವ ಸಾಮರ್ಥ್ಯವೇ ಪ್ರಜಾಪ್ರಭುತ್ವ ಮನೋಬಲ (Democratic Intelligence). ವ್ಯಕ್ತಿಯೊಬ್ಬನು ಬುದ್ಧಿವಂತನಾಗಿದ್ದ ಮಾತ್ರಕ್ಕೆ ಪ್ರಜಾಪ್ರಭುತ್ವದ ನಿಲುವು ಹೊಂದಿರುವುದಿಲ್ಲ ಅಥವಾ Democratic ಆಗುವುದಿಲ್ಲ. ಒಬ್ಬ ವ್ಯಕ್ತಿಗೆ ಅತ್ಯುತ್ತಮ IQ ಇರಬಹುದು. ಅವನು ವಿಜ್ಞಾನಿಯಾಗಿರಬಹುದು, ಸಾಹಿತಿಯಾಗಿರಬಹುದು, ಪ್ರಾಧ್ಯಾಪಕ ಆಗಿರಬಹುದು, ರಾಜಕಾರಣಿಯಾಗಿರಬಹುದು, ದೊಡ್ಡ ಉದ್ಯಮಿಯಾಗಿರಬಹುದು. ಆದರೆ ತನ್ನನ್ನು ಪ್ರಶ್ನಿಸಿದರೆ ಸಹಿಸಿಕೊಳ್ಳಲಾಗದಿದ್ದರೆ? ತನ್ನ ಅಭಿಪ್ರಾಯಕ್ಕೆ ವಿರುದ್ಧವಾದ ಮಾತನ್ನು ಕೇಳಲಾಗದಿದ್ದರೆ? ತನ್ನ ಕೆಳಗಿನವರ ಅಭಿಪ್ರಾಯಕ್ಕೆ ಬೆಲೆ ಕೊಡದಿದ್ದರೆ? ತಾನು ತಪ್ಪಿದ್ದೇನೆ ಎಂದು ಒಪ್ಪಿಕೊಳ್ಳಲಾಗದಿದ್ದರೆ? ಅವನಿಗೆ ಬೌದ್ಧಿಕ ಸಾಮರ್ಥ್ಯ (intellectual intelligence) ಇರಬಹುದು; ಆದರೆ ಪ್ರಜಾಸತ್ತಾತ್ಮಕ ಮನೋಗುಣ ಅಥವಾ ಮನೋಬಲ ಇರಲು ಸಾಧ್ಯವೇ?

ಏಕೆಂದರೆ ಪ್ರಜಾಪ್ರಭುತ್ವಕ್ಕೆ ಜ್ಞಾನ ಮಾತ್ರ ಸಾಲದು. ಮನಸ್ಸಿಗೆ ಒಂದು ಅವಕಾಶದ ಸಾಮರ್ಥ್ಯ ಬೇಕು. ತನ್ನಲ್ಲೇ ಇನ್ನೊಬ್ಬನಿಗೂ ಸ್ಥಳಾವಕಾಶ ಕೊಡುವಷ್ಟು ಮನೋಭಾವ ಇರಬೇಕು.

ಪ್ರಜಾಸತ್ತಾತ್ಮಕ ಮನೋಬಲದ ಮೊದಲ ಗುಣವೇ ಕೇಳಿಸಿಕೊಳ್ಳುವುದು. ಕೇಳಿಸಿಕೊಳ್ಳುವುದೆಂದರೆ ಇನ್ನೊಬ್ಬ ಮಾತನಾಡುವವರೆಗೆ ಬಾಯಿ ಮುಚ್ಚಿಕೊಂಡು ಸುಮ್ಮನಿರುವುದಲ್ಲ. ಅವನು ಹೇಳುತ್ತಿರುವುದರಲ್ಲಿ ನನಗೆ ತಿಳಿಯದ ಯಾವುದಾದರೂ ಸತ್ಯ ಇರಬಹುದೇ ಎಂದು ಗಮನಿಸುವುದು. ‘‘ನಾನು ನಿನ್ನ ಮಾತನ್ನು ಒಪ್ಪುವುದಿಲ್ಲ’’ ಎನ್ನುವುದಕ್ಕೂ ಮೊದಲು ‘‘ನೀನು ಏಕೆ ಹಾಗೆ ಯೋಚಿಸುತ್ತೀಯ?’’ ಎಂದು ಕೇಳಬಲ್ಲ ಮನಸ್ಸು.

ಪ್ರಜಾಸತ್ತಾತ್ಮಕತೆಯ ಮನೋಬಲ ಅಲ್ಲಿಂದ ಆರಂಭವಾಗುತ್ತದೆ. ಎರಡನೆಯದು ನಮ್ಮದನ್ನು ಒಪ್ಪದೇ ಇರುವುದನ್ನು ಸಹಿಸಿಕೊಳ್ಳುವುದು (Disagreement Tolerance). ನಮ್ಮ ಅಭಿಪ್ರಾಯವನ್ನು ಯಾರಾದರೂ ವಿರೋಧಿಸಿದಾಗ ಮೆದುಳು ಕೆಲವೊಮ್ಮೆ ಅದನ್ನು ಕೇವಲ ವಿಚಾರದ ವಿರೋಧವಾಗಿ ತೆಗೆದುಕೊಳ್ಳುವುದಿಲ್ಲ; ತನ್ನ ವ್ಯಕ್ತಿಗತವಾದ ಗುರುತಿಗೆ ಬಂದ ಸವಾಲಿನಂತೆ ಭಾವಿಸುತ್ತದೆ. ಆಗ ಮಾಡಬೇಕಾದ ಚರ್ಚೆ, ವಾದ ವಿವಾದಗಳಿಗೆ ಜಾರಿ ಅದು ಅಹಂಕಾರಗಳ ನಡುವಿನ ಸಂಘರ್ಷವಾಗಿ ಪರಿಣಮಿಸುತ್ತದೆ. ಪ್ರಜಾಸತ್ತಾತ್ಮಕ ಮನೋಬಲ ಇರುವವನು ಒಂದು ಸೂಕ್ಷ್ಮವಾದ ವ್ಯತ್ಯಾಸವನ್ನು ಅರಿತಿರುತ್ತಾನೆ. ಅದೇನೆಂದರೆ, ಎದುರಿಗಿನ ವ್ಯಕ್ತಿಯು ನನ್ನ ಅಭಿಪ್ರಾಯವನ್ನು ತಿರಸ್ಕರಿಸುವುದು ಎಂದರೆ ನನ್ನನ್ನು ತಿರಸ್ಕರಿಸುವುದಲ್ಲ ಎಂಬುದು. ನನ್ನ ದೇವರನ್ನು ನೀನು ನಂಬದಿರಬಹುದು. ನನ್ನ ಪಕ್ಷವನ್ನು ಬೆಂಬಲಿಸದಿರಬಹುದು. ನನ್ನ ತತ್ವವನ್ನು ಪ್ರಶ್ನಿಸಬಹುದು. ಆದರೂ ನಾವು ಇಬ್ಬರೂ ಸಮಾನ ಘನತೆಯ ನಾಗರಿಕರಾಗಿರಲು ಸಾಧ್ಯ ಎಂಬ ಸತ್ಯ ತಿಳಿದಿರುವುದು. ಇದನ್ನು ಸಹಿಸಿಕೊಳ್ಳುವ ಮಾನಸಿಕ ಸಾಮರ್ಥ್ಯವೇ ಪ್ರಜಾಪ್ರಭುತ್ವದ ಕೇಂದ್ರೀಯ ನರಶಕ್ತಿಯಾಗುತ್ತದೆ.

ಇನ್ನು ಮೂರನೆಯ ಮನೋಗುಣವೆಂದರೆ ಅದು ಅಧಿಕಾರ ಹಂಚಿಕೆ (Power Sharing). ಅಧಿಕಾರ ಸಿಕ್ಕಾಗ ಮನುಷ್ಯನ ನಿಜವಾದ ಪ್ರಜಾಸತ್ತಾತ್ಮಕತೆಯ ಪ್ರಬುದ್ಧತೆ (democratic maturity) ಪರೀಕ್ಷೆಯಾಗುತ್ತದೆ. ನಾನು ನಿರ್ಧಾರ ತೆಗೆದುಕೊಳ್ಳಬಲ್ಲೆ ಎಂದ ಮಾತ್ರಕ್ಕೆ ಎಲ್ಲ ನಿರ್ಧಾರವನ್ನೂ ನಾನೇ ತೆಗೆದುಕೊಳ್ಳಬೇಕೇ? ಗಮನಿಸಿ, ಮಕ್ಕಳ ವಿಷಯದಲ್ಲಿ ಪೋಷಕರು, ವಿದ್ಯಾರ್ಥಿಗಳ ವಿಷಯದಲ್ಲಿ ಶಿಕ್ಷಕರು, ಉದ್ಯೋಗಿಗಳ ವಿಷಯದಲ್ಲಿ ವ್ಯವಸ್ಥಾಪಕ ಮಂಡಳಿ, ನಾಗರಿಕರ ವಿಷಯದಲ್ಲಿ ಸರಕಾರವೇ ನಿರ್ಧಾರ ತೆಗೆದುಕೊಂಡುಬಿಡಬಹುದೇ?

ಯಾವಾಗಲೇ ಆಗಲಿ, ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಒಂದು ಪ್ರಶ್ನೆ ಕೇಳಿಕೊಳ್ಳಬಹುದು, ಈ ನಿರ್ಧಾರದ ಪರಿಣಾಮ ಅನುಭವಿಸುವವರು ನಿರ್ಧಾರ ತೆಗೆದುಕೊಳ್ಳುವುದರಲ್ಲಿ ಎಷ್ಟರ ಮಟ್ಟಿಗೆ ಧ್ವನಿಗೂಡಿಸಿದ್ದಾರೆ? ಎಂದು. ಆಕಿ ಅಥವಾ ಪ್ರಜಾಸತ್ತಾತ್ಮಕ ಮನೋಬಲ ಇರುವ ನಾಯಕ ತನ್ನ ಅಧಿಕಾರವನ್ನು ಕಳೆದುಕೊಳ್ಳುವುದಿಲ್ಲ. ಆದರೆ ಅದನ್ನು ಪಾಲುದಾರಿಕೆಯ ಅಧಿಕಾರವನ್ನಾಗಿ (participatory authority) ಪರಿವರ್ತಿಸುತ್ತಾನೆ.

ಇನ್ನು ನಾಲ್ಕನೆಯದು ಬೌದ್ಧಿಕ ವಿನಯಶೀಲತೆ (Intellectual Humility). ಯಾವ ವ್ಯಕ್ತಿಗೆ ನಾನು ತಪ್ಪಿರಬಹುದು ಎನಿಸುತ್ತದೆಯೋ ಅದು ದೌರ್ಬಲ್ಯದ ಲಕ್ಷಣವಲ್ಲ. ಬದಲಾಗಿ ಬೌದ್ಧಿಕ ಶಕ್ತಿಯ ಗುಣ. ನನಗೆ ತಿಳಿದಿರುವುದು ಅಪೂರ್ಣವಾಗಿರಬಹುದು. ಹೊಸ ಪುರಾವೆ (evidence) ಬಂದರೆ ನನ್ನ ಅಭಿಪ್ರಾಯ ಬದಲಿಸಬಹುದು. ನನ್ನ ವಿರೋಧಿಯೂ ನನಗಿಂತ ಉತ್ತಮವಾಗಿ ಯಾವುದೋ ವಿಷಯದಲ್ಲಿ ಸರಿಯಾಗಿರಬಹುದು. ಇದನ್ನು ಒಪ್ಪಿಕೊಳ್ಳಲಾಗದ ಮನಸ್ಸಿಗೆ ಚರ್ಚೆ (debate)ಬೇಕಾಗುವುದಿಲ್ಲ; ಬರೀ ಒಪ್ಪಿಗೆ (confirmation) ಮಾತ್ರ ಬೇಕಾಗುತ್ತದೆ. ಅಂತಹ ಮನಸ್ಸು ತಾನಿರುವ ಕುಟುಂಬದಲ್ಲಾಗಲಿ ಅಥವಾ ಸರಕಾರದಲ್ಲಾಗಲಿ ಪ್ರಜಾಪ್ರಭುತ್ವವನ್ನು ನಿಧಾನವಾಗಿ ತಾವು ಹೇಳುವುದನ್ನೇ ಧ್ವನಿಸುವ ಗೂಡನ್ನಾಗಿ (echo chamber) ಮಾರ್ಪಾಡು ಮಾಡುತ್ತದೆ.

Tags

DemocraticAdministrative system
share
ಯೋಗೇಶ್ ಮಾಸ್ಟರ್,
ಯೋಗೇಶ್ ಮಾಸ್ಟರ್,
Next Story
X