Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಮನೋ ಚರಿತ್ರ
  5. ಪರಿಣಾಮಕಾರಿ

ಪರಿಣಾಮಕಾರಿ

ಯೋಗೇಶ್ ಮಾಸ್ಟರ್ಯೋಗೇಶ್ ಮಾಸ್ಟರ್27 April 2025 3:26 PM IST
share
ಪರಿಣಾಮಕಾರಿ

ನಮ್ಮ ಮೈಯಲ್ಲಿ ರಕ್ತ, ಮಾಂಸ, ಜೀವಕೋಶಗಳು, ನರಗಳೇ ಮೊದಲಾದ ಅಗತ್ಯವಾದ ಅಂಶಗಳು ಮಾತ್ರವೇ ಇರುತ್ತದೆ. ಆ ಅಂಶಗಳೆಲ್ಲವೂ ಒಂದಕ್ಕೊಂದು ಪೂರಕವಾಗಿ ಮತ್ತು ಸಹಕಾರತತ್ವದಲ್ಲಿ ಕೆಲಸ ಮಾಡುತ್ತಾ ಇಡೀ ದೇಹವನ್ನು ಆರೋಗ್ಯಕರವಾದ ಸ್ಥಿತಿಯಲ್ಲಿ ಇಟ್ಟಿರುತ್ತವೆ. ಒಂದು ವೇಳೆ ಯಾವುದೇ ಅನ್ಯ ವಸ್ತುವು ಯಾವುದೇ ಕಾರಣದಿಂದ ಸೇರಿದರೂ ಅಥವಾ ಅಲ್ಲಿಯೇ ಬೆಳವಣಿಗೆಯಾದರೂ ಅದು ಅನಾರೋಗ್ಯಕ್ಕೆ ಕಾರಣವಾಗುತ್ತದೆ. ಅದನ್ನು ನಿವಾರಿಸಿದರೆ ಅಥವಾ ಉಪಶಮನಗೊಳಿಸಿದರೆ ಮತ್ತೆ ಆರೋಗ್ಯ ಸುಧಾರಣೆಯಾಗುತ್ತದೆ. ಉದಾಹರಣೆಗೆ ಕಿಡ್ನಿಯಲ್ಲಿ ಅನಗತ್ಯ ಲವಣಾಂಶವು ಸೇರಿ ಹರಳುಗಟ್ಟಿದರೆ ಕಲ್ಲು ಬೆಳೆದಿದೆ ಎನ್ನುತ್ತಾರೆ. ಅದು ಕಿಡ್ನಿಗೆ ತೊಂದರೆ ಉಂಟು ಮಾಡುತ್ತದೆ. ನಂತರ ಅದನ್ನು ಶಸ್ತ್ರ ಚಿಕಿತ್ಸೆ ಮೂಲಕ ತೆಗೆದು ಹಾಕಬೇಕು ಅಥವಾ ಔಷಧೋಪಚಾರದ ಮೂಲಕ ಕರಗಿಸಬೇಕು. ಆಮೇಲೆ ನೋವು, ಬಾವು ಎಲ್ಲಾ ಹೋಗಿ ಆರೋಗ್ಯ ಮರುಕಳಿಸುತ್ತದೆ. ಹೀಗೆ ದೈಹಿಕ ಆರೋಗ್ಯದ ವಿಷಯದಲ್ಲಿ ಯಾವುದೇ ಫಾರಿನ್ ಆಬ್ಜೆಕ್ಟ್ ಇರಬಾರದು ಅಥವಾ ಎಕ್ಸ್ಟ್ರಾ ಗ್ರೋತುಗಳು ಆಗಲೇ ಬಾರದು.

ಅನ್ಯ ಮತ್ತು ಅನಗತ್ಯ ಅಂಶಗಳು ಸೇರಿ ದೈಹಿಕ ಆರೋಗ್ಯವನ್ನು ಹದಗೆಡಿಸುವಂತೆ, ಬೇಡದ ವಿಷಯಗಳು ಮನಸ್ಸಿನಲ್ಲಿ ಸೇರಿ ಮನಸ್ಸಿನ ಆರೋಗ್ಯವನ್ನು ಹದಗೆಡಿಸುತ್ತವೆ. ದೇಹದಲ್ಲಿ ಜೈವಿಕ ಬಲದ ಉಳಿವು, ಬೆಳವಣಿಗೆಗಳಿರುವಂತೆ ಮನಸ್ಸಿನಲ್ಲಿಯೂ ಕೂಡಾ ಅನ್ಯ ಮತ್ತು ಅನಗತ್ಯ ವಿಷಯಗಳು ಸೇರಿದರೆ ಅವುಗಳು ತಮ್ಮ ಪಾಡಿಗೆ ತಾವು ಮಾನಸಿಕ ಆರೋಗ್ಯವನ್ನು ಕೆಡಿಸುವಂತಹ ಕೆಲಸವನ್ನು ಮಾಡುತ್ತಿರುತ್ತವೆ.

ಈಗ ನಾವು ಜಾಗ್ರತೆಯಿಂದ ಮತ್ತು ಪ್ರಜ್ಞಾಪೂರ್ವಕವಾಗಿ ಮಾಡಬೇಕಾದ ಕೆಲಸವೇನೆಂದರೆ ಬರುವ ಆಲೋಚನೆಗಳನ್ನು ಮತ್ತು ಮೂಡುವ ಭಾವನೆಗಳನ್ನು ಕೂಲಂಕಷವಾಗಿ ಪರಿಶೀಲನೆ ಮಾಡುವುದು. ಅನ್ಯ ವಿಷಯಗಳೆಂದರೆ ನಮ್ಮ ಜೀವಂತಿಕೆಗೆ, ಆನಂದಕ್ಕೆ, ಕರ್ತವ್ಯಕ್ಕೆ, ಹೊಣೆಗಾರಿಕೆಗೆ ಮುಳುವಾಗುವಂತಹದ್ದು. ವಿಪರ್ಯಾಸವೆಂದರೆ ಆಲೋಚನೆಗಳನ್ನು ಜರಡಿ ಹಿಡಿದು ಸೋಸ ಬೇಕಾಗಿರುವುದೂ ಕೂಡಾ ಆಲೋಚನೆಗಳೇ. ಆಲೋಚನೆಗಳಿಂದಲೇ ಆಲೋಚನೆಗಳನ್ನು ಗಮನಿಸಬೇಕು. ಗಮನಿಸುವಂತಹ ಆಲೋಚನೆಗಳು ವಿವೇಕಪೂರ್ಣ ಆಲೋಚನೆಗಳು.

‘‘ಅವನಿಗೇನು ಬುದ್ಧಿ ಗಿದ್ದಿ ಇಲ್ವೇನೋ, ಹಾಗೆ ಮಾಡಿದ. ತಾನು ಮಾಡೋ ಕೆಲಸದಿಂದ ಅಥವಾ ತಾನು ಆಡೋ ಮಾತಿನಿಂದ ಏನಾಗತ್ತೆ ಅಂತ ಗ್ಯಾನ ಇಲ್ವಾ’’ ಅಂತ ಅಂತಾರಲ್ಲಾ, ಪಾಪದ ಆ ವ್ಯಕ್ತಿಗೆ ತಾನು ಆ ಕೆಲಸ ಮಾಡಿದ ಮೇಲೆ ಪರಿಣಾಮ ಏನಾಗುತ್ತದೆ, ಫಲ ಏನು ಸಿಗುತ್ತದೆ ಎಂದು ಆಲೋಚನೆ ಮಾಡುವ ಸಾಮರ್ಥ್ಯ ಇರುವುದಿಲ್ಲ. ಮತ್ತೆ ಆಲೋಚನೆ ಮಾಡುವ ಸಾಮರ್ಥ್ಯ ಕೂಡಾ ಪದೇ ಪದೇ ಗಮನದಿಂದ ಮಾಡುವ ಆಲೋಚನೆಯ ರೂಢಿಯಿಂದಲೇ ಬರುತ್ತದೆ.

ಒಟ್ಟಾರೆ ನಾವು ಯಾರನ್ನು ವಿವೇಕಿ ಎನ್ನುತ್ತೇವೆ? ಯಾರಿಗೆ ತನ್ನ ಆಲೋಚನೆ, ಭಾವನೆ, ನಡೆ, ನುಡಿ, ಕೆಲಸ, ವರ್ತನೆಗಳೆಲ್ಲವೂ ಯಾವ ರೀತಿಯ ಪರಿಣಾಮವನ್ನು ಬೀರುತ್ತದೆ ಎಂಬುದನ್ನು ಮುಂದಾಗಿ ಆಲೋಚಿಸಲು ಸಾಧ್ಯವಾಗುತ್ತದೆಯೋ ಅವನೇ ವಿವೇಕಿಯಾಗಿರುತ್ತಾನೆ.

ಒಟ್ಟಾರೆ ಯಾವ ವ್ಯಕ್ತಿಯು ತನ್ನ ಒತ್ತಡಗಳೊಂದಿಗೆ, ಒಡಕುಗಳೊಂದಿಗೆ ಮತ್ತು ಗಾಢವಾದ ಭಾವನೆಗಳೊಂದಿಗೆ ಸಮತೋಲನ ಸಾಧಿಸಬೇಕೆಂದು ಬಯಸುತ್ತಾನೋ ಅವನಿಗೆ ಇರುವ ಶಕ್ತಿಯೇ ಪರಿಣಾಮಕಾರಿಯಾಗಿ ಆಲೋಚಿಸುವುದು, ಭಾವಿಸುವುದು, ಕೆಲಸ ಮಾಡುವುದು, ವರ್ತಿಸುವುದು, ಪ್ರತಿಕ್ರಿಯಿಸುವುದು, ಸ್ಪಂದಿಸುವುದು.

ಮನಸ್ಸಿನ ಪರಿಣಾಮಕಾರಿತ್ವದ ವಿಷಯವೆಂದರೆ ಅದು ಇಷ್ಟೇ. ತನ್ನ ಆಲೋಚನೆ, ಕೆಲಸ, ವರ್ತನೆ ಮತ್ತು ಮಾತುಗಳೇ ಮೊದಲಾದವುಗಳಿಂದ ಯಾವ ಪರಿಣಾಮ ಉಂಟಾಗುತ್ತದೆ, ಯಾವ ಫಲ ಸಿಗುತ್ತದೆ ಎಂದು ಮುಂಗಾಣುವಂತಹ ವಿವೇಕವನ್ನು ಹೊಂದಿರುವುದು. ಹಾಗೆಯೇ ತನ್ನ ಮನಸ್ಸಿನಲ್ಲಿ ಬೆಳವಣಿಗೆಗೆ, ಜೈವಿಕವಾಗಿರುವುದಕ್ಕೆ, ವಿಕಾಸಕ್ಕೆ, ಆನಂದಕ್ಕೆ ಮಾರಕವಾಗುವಂತಹ ಅನ್ಯ ಆಲೋಚನೆಗಳನ್ನು ಬರಗೊಡುವುದು. ಬಂದರೂ ಸೋಸಿ ಎಸೆಯುವುದು. ಹಾಗಾದಾಗ ಮಾಡುವ ಆಲೋಚನೆಗಳು ಪರಿಣಾಮಕಾರಿಯಾಗಿರುತ್ತವೆ. ವ್ಯರ್ಥವಾಗುವುದಿಲ್ಲ. ರಚನಾತ್ಮಕವಾಗಿರುತ್ತವೆ. ಅದೇ ರೀತಿ ತನ್ನ ನಡೆ, ನುಡಿ, ಕಾಯಕಗಳೆಲ್ಲವೂ ಪರಿಣಾಮಕಾರಿಯಾಗಿರುವುದೇ ಎಂದು ತೂಗಿ ನೋಡುವುದು.

ಮನಸ್ಸು ಸ್ವಭಾವತಃ ಚಲನಶೀಲವಾಗಿರುವ ಗುಣವುಳ್ಳದ್ದು ಮತ್ತು ನುಗ್ಗುವ ಶಕ್ತಿಯುಳ್ಳದ್ದು. ಹಾಗಾಗಿ ಎತ್ತಲೆತ್ತಲೋ ನುಗ್ಗುತ್ತಿರುತ್ತದೆ. ಒಟ್ಟಾರೆ ಅದಕ್ಕೆ ತನ್ನ ಶಕ್ತಿ ಬಳಕೆಯಾಗಬೇಕು. ಸುಮ್ಮನಿರಲಾಗದು. ಯಾವುದನ್ನಾದರೂ ಬಳಸಿಕೊಳ್ಳುತ್ತದೆ. ಅದಕ್ಕೆ ಬಸವಣ್ಣನವರು ‘ಅತ್ತಲಿತ್ತಲು ಹೋಗದಂತೆ ಹೆಳವನ ಮಾಡಯ್ಯ ತಂದೆ’ ಎಂದು ಪ್ರಾರಂಭವಾಗುವ ವಚನದಲ್ಲಿ ‘ನಿಮ್ಮ ಶರಣರ ಪಾದವಲ್ಲದೆ ಅನ್ಯವಿಷಯಕ್ಕೆಳಸದಂತೆ ಇರಿಸೋ’ ಎಂದು ಕೂಡಲಸಂಗಮನಲ್ಲಿ ಪ್ರಾರ್ಥಿಸುತ್ತಾರೆ. ತನ್ನ ಆದ್ಯತೆಯನ್ನು ತಾನು ಗುರುತಿಸಿಕೊಂಡಿದ್ದೇನೆ. ತನ್ನ ಕರ್ತವ್ಯವನ್ನು ತಾನು ಮನಗಂಡಿದ್ದೇನೆ. ತಾನೇನು ಮಾಡಬೇಕೆಂದು ತನಗೆ ಗೊತ್ತಿದೆ. ಆದರೂ ಅನ್ಯವಿಷಯಗಳ ಸೆಳೆತಕ್ಕೆ ಮನಸ್ಸು ಸಿಕ್ಕಿಬೀಳುತ್ತದೆ. ಪರಿಣಾಮಕಾರಿಯಾಗಿ ಮನಸ್ಸು, ಭಾವನೆ, ದೇಹ, ಕೆಲಸಗಳು ಇರದೇ ವ್ಯರ್ಥವಾಗಿ ನಿಷ್ಫಲವಾಗುತ್ತವೆ. ‘ಪರಿಣಾಮಿಗಳಲ್ಲದವರಲ್ಲಿ ನೈವೇದ್ಯವನ್ನೊಲ್ಲಯ್ಯ ನೀನು’ ಎಂದು ಅಕ್ಕಮಹಾದೇವಿ ‘ತನುಕರಗದವರಲ್ಲಿ’ ವಚನದಲ್ಲಿ ಯಾರು ಪರಿಣಾಮಕಾರಿಯಾಗಿ ಬದುಕು ಮಾಡಲಾಗುವುದಿಲ್ಲವೋ ಅವರಿಂದ ನೈವೇದ್ಯವನ್ನು ಚೆನ್ನಮಲ್ಲಿಕಾರ್ಜುನ ಪಡೆಯುವುದಿಲ್ಲ ಎಂದು ರೂಪಕವಾಗಿ ಹೇಳುತ್ತಾಳೆ.

ಒಟ್ಟಾರೆ ಪರಿಣಾಮಕಾರಿಯಾಗಿ ತನ್ನ ಆಲೋಚನೆ, ಭಾವನೆ, ವರ್ತನೆ, ಕೆಲಸ, ಸಂಬಂಧ, ಹೂಡಿಕೆ, ಅಭ್ಯಾಸ, ಹವ್ಯಾಸ, ಚಟುವಟಿಕೆಗಳೆಲ್ಲಾ ಇದೆಯೋ ಇಲ್ಲವೋ ಎಂಬುದನ್ನು ಗಮನಿಸಿಕೊಳ್ಳುವ ರೂಢಿ ಮನಸ್ಸಿನಲ್ಲಿ ಅನ್ಯ ಮತ್ತು ಅನಗತ್ಯ ವಿಷಯಗಳು ನುಸುಳಿ ಅನಾರೋಗ್ಯಕ್ಕೆ ಎಡೆ ಮಾಡದಂತೆ ನೋಡಿಕೊಳ್ಳುತ್ತದೆ. ನಮ್ಮಲ್ಲಿ ಮೂಡುವಂತಹ ಕೋಪ, ದುಃಖ, ಆವೇಶ, ರೋಷ, ದ್ವೇಷ, ವರ್ತನೆ, ಕೆಲಸ, ಮಾತಾಡಿಸುವ ರೀತಿ; ಯಾವುದೇ ಆಗಲಿ ಪರಿಣಾಮಕಾರಿಯಾಗಿರಬೇಕು. ಅಂದರೆ ಯಾವ ಪರಿಣಾಮ ಬೀರುವುದು ಎಂದು ವಿವೇಚನೆ ಹೊಂದಿದ್ದೇ ಆದರೆ ರಚನಾತ್ಮಕವಾದ, ಫಲದಾಯಕವಾದ ಬದುಕು ಮತ್ತು ಸಂಬಂಧಗಳನ್ನು ಹೊಂದಲು ಸಾಧ್ಯವಾಗುತ್ತದೆ.

share
ಯೋಗೇಶ್ ಮಾಸ್ಟರ್
ಯೋಗೇಶ್ ಮಾಸ್ಟರ್
Next Story
X