Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಮನೋ ಚರಿತ್ರ
  5. ರಾಜಕೀಯದಲ್ಲಿ ಭಯ ಭಕ್ತಿ

ರಾಜಕೀಯದಲ್ಲಿ ಭಯ ಭಕ್ತಿ

ಯೋಗೇಶ್ ಮಾಸ್ಟರ್,ಯೋಗೇಶ್ ಮಾಸ್ಟರ್,22 March 2026 10:04 AM IST
share
ರಾಜಕೀಯದಲ್ಲಿ ಭಯ ಭಕ್ತಿ

ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ನಾಗರಿಕರು ತಮ್ಮ ನಾಯಕರನ್ನು ಗೌರವಿಸುವುದು ಸಹಜ. ಒಬ್ಬ ನಾಯಕ ಸಮಾಜಕ್ಕೆ ಪ್ರೇರಣೆ ನೀಡಬಹುದು, ಜನರನ್ನು ಒಗ್ಗೂಡಿಸಬಹುದು, ಆಶೆಯನ್ನು ಮೂಡಿಸಬಹುದು. ಆದರೆ ಗೌರವ ನಿಧಾನವಾಗಿ ಅವಿಚಾರಿತ ಭಕ್ತಿಗೆ ತಿರುಗಿದಾಗ, ಅದು ಪ್ರಜಾಸತ್ತಾತ್ಮಕ ವ್ಯವಸ್ಥೆಗೆ ಸವಾಲಾಗಿ ಪರಿಣಮಿಸುತ್ತದೆ. ರಾಜಕೀಯದಲ್ಲಿ ಈ ಸ್ಥಿತಿಯೇ ಅಭಿಮಾನದ ಅಥವಾ ಭಕ್ತ ರಾಜಕೀಯ.

ಅಭಿಮಾನವೆನ್ನುವುದು ಗೀಳಾಗಿ ಪರಿಣಮಿಸಿ ಅದು ವಿಪರೀತಕ್ಕೆ ಹೋದಾಗ ರಾಜಕೀಯ ಕ್ಷೇತ್ರದಲ್ಲಿ ಭಕ್ತ ರಾಜಕೀಯ ಎನಿಸುತ್ತದೆ. ಈ ಭಕ್ತಿಯ ಮನೋವಿಜ್ಞಾನವನ್ನು ಗಮನಿಸಿದರೆ, ಭಕ್ತಿ ಎಂಬುದೇನೂ ತಪ್ಪಲ್ಲ. ಮಾನವ ಸಮಾಜದಲ್ಲಿ ವ್ಯಕ್ತಿಯ ಮೇಲೆ ಭಕ್ತಿ ಒಂದು ಶಕ್ತಿಯುತ ಭಾವನೆ. ಆದರೆ ಅದು ಸಾಮಾನ್ಯವಾಗಿ ಪ್ರಶ್ನೆಗಳನ್ನು ನಿಲ್ಲಿಸುವ ಗುಣವನ್ನು ಹೊಂದಿದೆ. ಒಬ್ಬ ನಾಯಕನ ಬಗ್ಗೆ ಭಕ್ತಿಭಾವ ಬೆಳೆದಾಗ, ಜನರು ಎರಡು ವಿಷಯಗಳನ್ನು ಮರೆತುಬಿಡುತ್ತಾರೆ.

ನಾಯಕರು ಕೂಡ ಮನುಷ್ಯರೇ, ಅವರೂ ತಪ್ಪುಮಾಡಬಹುದು ಎಂಬುದು ಒಂದಾದರೆ, ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಪ್ರಶ್ನೆಗಳು ಅತ್ಯವಶ್ಯಕ ಎಂಬುದನ್ನು ಮರೆತು ಭಕ್ತ ರಾಜಕೀಯದಲ್ಲಿ ನಾಯಕನು ನಿಧಾನವಾಗಿ ವಿಮರ್ಶೆಗೆ ಮೀರಿದ ವ್ಯಕ್ತಿ ಆಗಿ ಕಾಣಲು ಆರಂಭಿಸುತ್ತಾನೆ.

ವಿಮರ್ಶೆಯ ಭಯ ಇರುವವರು ಸಾರ್ವಜನಿಕವಾಗಿ ಸಾಮಾಜಿಕ ಪ್ರಶ್ನೆಗಳಿಂದ ತಪ್ಪಿಸಿಕೊಳ್ಳಲುಯತ್ನಿಸುತ್ತಾರೆ. ಪ್ರಜಾಸತ್ತಾತ್ಮಕ ವ್ಯವಸ್ಥೆಯ ಶಕ್ತಿ ವಿಮರ್ಶಿಸುವಲ್ಲಿ ಇದೆ. ಪ್ರಶ್ನೆಗಳನ್ನು ಕೇಳುವ ಸಮಾಜವೇ ಆರೋಗ್ಯಕರ ಪ್ರಜಾಸತ್ತಾತ್ಮಕ ಸಮಾಜ. ಆದರೆ ಭಕ್ತ ರಾಜಕೀಯದಲ್ಲಿ ಒಂದು ವಿಭಿನ್ನ ವಾತಾವರಣ ನಿರ್ಮಾಣವಾಗುತ್ತದೆ.

ಟೀಕೆ ಮಾಡುವವರನ್ನು ರಾಷ್ಟ್ರವಿರೋಧಿ ಎಂದು ಕರೆಯಲಾಗುತ್ತದೆ. ಅವರನ್ನು ದ್ವೇಷಿಗಳೆಂದು ಗುರುತಿಸಲಾಗುತ್ತದೆ ಅಥವಾ ಸಮಾಜದ ಶತ್ರುಗಳಂತೆ ಚಿತ್ರಿಸಲಾಗುತ್ತದೆ. ಯಾವಾಗ ಇಂತಹ ಪರಿಸ್ಥಿತಿ ಉಂಟಾಗುತ್ತದೆಯೋ, ದೈನಂದಿನ ಬದುಕಿಗೆ ಹೆಣಗುವ ಜನರು ನಿಧಾನವಾಗಿ ಮೌನವಾಗಲು ಪ್ರಾರಂಭಿಸುತ್ತಾರೆ.

ಭಕ್ತ ರಾಜಕೀಯದಲ್ಲಿ ನಾಯಕನ ಚಿತ್ರಣ ಮತ್ತು ನಾಯಕನಿಗೆ ತಾವಿರುವ ನಿಷ್ಠ್ಠೆಯ ಪಾತ್ರ ಬಹಳ ದೊಡ್ಡದಾಗಿರುತ್ತದೆ. ಭಕ್ತ ರಾಜಕೀಯ ಯಾವತ್ತೂ ಅಗತ್ಯವಿರುವ ರಾಜಕೀಯ ಚರ್ಚೆಗಳನ್ನು ನಿಧಾನವಾಗಿ ನೀತಿಗಳಿಂದ ದೂರ ಸರಿಸುತ್ತದೆ. ಜನರು ಪ್ರಶ್ನಿಸುವುದಕ್ಕಿಂತ, ತಮ್ಮ ನಿಷ್ಠೆಯನ್ನು ಪ್ರದರ್ಶಿಸಲು ಪ್ರಾರಂಭಿಸುತ್ತಾರೆ. ಅಲ್ಲಿ ಪ್ರಮುಖ ಪ್ರಶ್ನೆಗಳಾದ ಉದ್ಯೋಗ, ಶಿಕ್ಷಣ, ಆರೋಗ್ಯ, ಪರಿಸರ ಇವುಗಳ ಬಗ್ಗೆ ಚರ್ಚೆ ಕಡಿಮೆಯಾಗುತ್ತದೆ.

ರಾಜಕೀಯ ಸಂಭಾಷಣೆ ಒಂದು ರೀತಿಯ ಭಾವನಾತ್ಮಕ ಶಿಬಿರಗಳಾಗಿ ವಿಭಜನೆಯಾಗುತ್ತದೆ. ಭಾರತೀಯ ಸಂದರ್ಭದಲ್ಲಂತೂ ಭಾರತದ ರಾಜಕೀಯದಲ್ಲಿ ಭಾವನಾತ್ಮಕ ನಿಷ್ಠೆ ಹೊಸ ವಿಷಯವಲ್ಲ. ನಮ್ಮ ಇತಿಹಾಸದಲ್ಲಿ ನಾಯಕರು ಜನರ ಮನಸ್ಸಿನಲ್ಲಿ ದೊಡ್ಡ ಸ್ಥಾನ ಪಡೆದಿದ್ದಾರೆ. ಆದರೆ ಪ್ರಜಾಸತ್ತಾತ್ಮಕ ವ್ಯವಸ್ಥೆಯ ಸೌಂದರ್ಯವೆಂದರೆ, ಜನರು ನಾಯಕನನ್ನು ಪ್ರೀತಿಸಬಹುದು, ಆದರೆ ಅವನನ್ನು ಪ್ರಶ್ನಿಸಬಹುದು ಕೂಡ. ಈ ಎರಡರ ನಡುವಿನ ಸಮತೋಲನ ಕಳೆದುಹೋದಾಗ ಸಮಸ್ಯೆ ಆರಂಭವಾಗುತ್ತದೆ.

ಸಂಕಲಿತ ಮನಸ್ಥಿತಿಯಾದ ಪ್ರಜಾಸತ್ತಾತ್ಮಕ ಜಾಗೃತಿಯಿಂದ ವ್ಯವಸ್ಥೆಯನ್ನು ನೋಡುವುದಾದರೆ, ಒಂದು ಪ್ರಜಾಸತ್ತಾತ್ಮಕ ಸಮಾಜದಲ್ಲಿ ನಾಗರಿಕರ ಮನೋಭಾವ ಹೇಗಿರಬೇಕು ಎಂಬುದನ್ನು ಮೊದಲಿಗೆ ಗಮನಿಸಬೇಕು. ನಾವು ನಾಯಕರನ್ನು ಗೌರವಿಸಬಹುದು. ಆದರೆ ನಾವು ಪ್ರಶ್ನಿಸುವ ಹಕ್ಕನ್ನು ಬಿಡಬಾರದು. ನಾವು ಅವರಿಂದ ಪ್ರೇರಣೆಗಳನ್ನು ಪಡೆಯಬಹುದು. ಆದರೆ ನಾವು ವಿವೇಕವನ್ನು ಕಳೆದುಕೊಳ್ಳಬಾರದು. ಪ್ರಜಾಸತ್ತಾತ್ಮಕತೆಯ ನಿಜವಾದ ಚೈತನ್ಯ ಭಕ್ತಿಯಲ್ಲಿ ಅಲ್ಲ, ಜಾಗೃತಿಯಲ್ಲಿ ಇದೆ.

ಜನರಲ್ಲಿ ಅಂಧಾಭಿಮಾನವಾಗುವಂತಹ ಭಕ್ತ ರಾಜಕೀಯ ನಿಧಾನವಾಗಿ ಬೆಳೆಯುತ್ತದೆ. ಅದು ಮೊದಲಿಗೆ ಘೋಷಣೆಗಳೊಂದಿಗೆ ಬರುವುದಿಲ್ಲ. ಅದು ಮೌನವಾಗಿ ಪ್ರಶ್ನೆಗಳನ್ನು ದುರ್ಬಲಗೊಳಿಸುತ್ತದೆ. ನಂತರ ತಮ್ಮ ಭಕ್ತರ ಸಂಖ್ಯೆ ಮತ್ತು ಬೆಂಬಲ ದೊಡ್ಡದಾಗಿದೆ ಎಂದು ಅರಿವಾದಾಗ ಘೋಷಣೆಗಳನ್ನು ನಿರ್ಭೀತಿಯಿಂದ ಹೊಮ್ಮಿಸುತ್ತಾರೆ. ಅವರಿಗೆ ಗಾತ್ರವೇ ಶಕ್ತಿ. ಆದರೆ ಒಂದು ಜಾಗೃತ ಸಮಾಜ ಅದನ್ನು ಗುರುತಿಸಬಹುದು. ಒಂದು ರಾಷ್ಟ್ರದ ಭವಿಷ್ಯ ನಾಯಕನಿಗೆ ಇರುವ ಭಕ್ತಿಯಲ್ಲಿ ಖಂಡಿತ ಇರುವುದಿಲ್ಲ. ಅದು ಜನರ ವಿವೇಕದಲ್ಲಿ ಮತ್ತು ಪ್ರಶ್ನಿಸುವ ಧೈರ್ಯದಲ್ಲಿ ಮಾತ್ರ ಇರುವುದು.

ಆದರೆ ಭಕ್ತ ರಾಜಕೀಯವು ತಮ್ಮ ಗಾತ್ರದ ಭರವಸೆ ಮತ್ತು ಬಲದಿಂದ ಸಾಮಾನ್ಯ ಸಮಾಜದಲ್ಲಿ ಭಯದ ರಾಜಕೀಯವನ್ನು ಮಾಡತೊಡಗುತ್ತದೆ.

ಪ್ರಜಾಸತ್ತಾತ್ಮಕ ರಾಜಕೀಯದಲ್ಲಿ ಆಸೆ ಒಂದು ಶಕ್ತಿಯುತ ಭಾವನೆ. ನಾಯಕರು ಜನರಿಗೆ ಭವಿಷ್ಯದ ಬಗ್ಗೆ ಆಶ್ವಾಸನೆಗಳನ್ನು ನೀಡುವರು. ಆದರೆ ಅಧಿಕಾರಿಗಳಲ್ಲಿ ಮತ್ತು ವಿರೋಧಿಸುವ ರಾಜಕಾರಣಿಗಳಲ್ಲಿ ಇನ್ನೊಂದು ಭಾವನೆ ಹೆಚ್ಚು ಪ್ರಭಾವ ಬೀರುವಂತೆ ಮಾಡುತ್ತಾರೆ, ಅದು ಭಯ.

ಭಯ ಮಾನವ ಮನಸ್ಸಿನಲ್ಲಿ ಅತ್ಯಂತ ವೇಗವಾಗಿ ಕಾರ್ಯನಿರ್ವಹಿಸುವ ಭಾವನೆ. ಆಶೆ ನಿಧಾನವಾಗಿ ಜನರನ್ನು ಒಗ್ಗೂಡಿಸಬಹುದು. ಆದರೆ ಭಯ ಕ್ಷಣಾರ್ಧದಲ್ಲಿ ಸಮಾಜವನ್ನು ಸಂಚಲನೆಗೊಳಿಸುತ್ತದೆ. ಈ ಕಾರಣದಿಂದಲೇ ಅಧಿಕಾರದಲ್ಲಿ ಇರುವ ರಾಜಕಾರಣಿಗಳು ಭಯದಲ್ಲಿ ಇಡುವುದನ್ನು ಒಂದು ಅದೃಶ್ಯ ರಾಜಕೀಯ ಸಾಧನವಾಗಿ ಬಳಸುತ್ತಾರೆ.

ಮನೋವಿಜ್ಞಾನ ಹೇಳುವ ಒಂದು ಸರಳ ಸತ್ಯ ಇದೆ. ಅದೆಂದರೆ ಭಯದಲ್ಲಿರುವವರು ಹೆಚ್ಚು ಪ್ರಶ್ನೆ ಕೇಳುವುದಿಲ್ಲ. ಅವರು ತಮ್ಮ ಸುರಕ್ಷತೆ ಹುಡುಕುತ್ತಾರೆೆ. ತಮಗಿರುವ ಸಂಪತ್ತು, ತಮ್ಮವರ ಭದ್ರತೆ ಮತ್ತು ತಮ್ಮ ಮುಂದಿನ ಪೀಳಿಗೆಯ ಭವಿಷ್ಯಕ್ಕೆ ಹೆಣಗಾಡುತ್ತಾರೆ. ಈ ಪರಿಸ್ಥಿತಿಯಲ್ಲಿ ರಾಜಕೀಯ ಸಂದೇಶಗಳು ಸಾಮಾನ್ಯವಾಗಿ ಎರಡು ಭಾಗಗಳಾಗಿರುತ್ತವೆ: ನೀವು ಭಕ್ತರಾಗದಿದ್ದರೆ ಒಂದು ಅಪಾಯವನ್ನು ಎದುರಿಸಬೇಕು. ನಮ್ಮ ಜೊತೆಗೆ ಬಂದರೆ ಮಾತ್ರ ಅಧಿಕಾರದ ಬಲದಿಂದ ಅದನ್ನು ಎದುರಿಸಬಹುದು. ಇದು ಅವರು ಸೃಷ್ಟಿಸುವ ಸನ್ನಿವೇಶ. ಭವಿಷ್ಯದಲ್ಲಿ ಹುಟ್ಟಿಸುವ ಈ ರೀತಿಯ ಕಥನಗಳು ಜನರಲ್ಲಿ ಭಾವನಾತ್ಮಕ ಪ್ರತಿಕ್ರಿಯೆಯನ್ನು ಉಂಟುಮಾಡುತ್ತವೆ. ‘ನಾವು’ ಮತ್ತು ‘ಅವರು’. ಭಯ ರಾಜಕೀಯದ ಪ್ರಮುಖ ತಂತ್ರಗಳಲ್ಲಿ ಒಂದು ಏನೆಂದರೆ ಸಮಾಜವನ್ನು ಎರಡು ಭಾಗಗಳಾಗಿ ವಿಭಜಿಸುವುದು.

‘ನಾವು’ ಎಂಬವರು ಒಂದು ನಿರ್ದಿಷ್ಟ ರಾಜಕೀಯ ಪಕ್ಷ ಮತ್ತು ಅದರ ಸಿದ್ಧಾಂತಗಳೊಂದಿಗೆ ಗುರುತಿಸಿಕೊಂಡವರು. ಇನ್ನು ಅವರು ಎಂಬುದು ಭಿನ್ನತೆಯನ್ನು ಸೃಷ್ಟಿಸಿ ಅದರ ಚೌಕಟ್ಟಿನಲ್ಲಿ ಅಳವಡಿಸುವ ಒಂದು ಸಮೂಹ. ಇಲ್ಲಿ ‘ಅವರು’ ಯಾರು ಎಂಬುದು ಸಂದರ್ಭಕ್ಕೆ ತಕ್ಕಂತೆ ಬದಲಾಗಬಹುದು: ಬೇರೆ ಧರ್ಮದವರು, ಬೇರೆ ಜಾತಿಯವರು, ಬೇರೆ ರಾಜಕೀಯ ಅಭಿಪ್ರಾಯ ಹೊಂದಿರುವವರು ಅಥವಾ ವಿದೇಶಿ ಶಕ್ತಿಗಳು. ಇಂತಹ ವಿಭಜನೆ ಭಯವನ್ನು ಸದಾ ಜೀವಂತವಾಗಿರಿಸುತ್ತದೆ.

ಇದು ಪ್ರಜಾಸತ್ತಾತ್ಮಕ ಸಂವಾದದ ಮೇಲೆ ನೇರ ಪರಿಣಾಮ ಬೀರುತ್ತದೆ. ಭಯ ರಾಜಕೀಯ ಹೆಚ್ಚಾದಾಗ ರಾಜಕೀಯ ಸಂಭಾಷಣೆ ನಿಧಾನವಾಗಿ ಬದಲಾಗುತ್ತದೆ. ಸಾಂವಿಧಾನಿಕ ನೀತಿಗಳ ಬಗ್ಗೆ ಚರ್ಚೆ ಕಡಿಮೆಯಾಗುತ್ತದೆ. ಭಾವನಾತ್ಮಕ ಪ್ರತಿಕ್ರಿಯೆಗಳು ಹೆಚ್ಚಾಗುತ್ತವೆ. ಜನರು ಪ್ರಶ್ನಿಸುವುದಕ್ಕಿಂತ ಯಾರನ್ನು ಬೆಂಬಲಿಸಬೇಕು ಮತ್ತು ಯಾರನ್ನು ವಿರೋಧಿಸಬೇಕು ಎಂಬುವುದರಲ್ಲಿ ಭಾವನಾತ್ಮಕ ಆಯ್ಕೆಗಳತ್ತ ತಿರುಗುತ್ತಾರೆ.

Tags

Feardevotionpolitics
share
ಯೋಗೇಶ್ ಮಾಸ್ಟರ್,
ಯೋಗೇಶ್ ಮಾಸ್ಟರ್,
Next Story
X