Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಮನೋ ಚರಿತ್ರ
  5. ಗಿರಕಿಯ ಮನೋಗುಣ

ಗಿರಕಿಯ ಮನೋಗುಣ

ಯೋಗೇಶ್ ಮಾಸ್ಟರ್ಯೋಗೇಶ್ ಮಾಸ್ಟರ್7 Dec 2025 4:32 PM IST
share
ಗಿರಕಿಯ ಮನೋಗುಣ

ನಮ್ಮ ಮನಸ್ಸು ಪ್ರಕೃತಿಯ ಅದ್ಭುತ ಸೃಷ್ಟಿಗಳಲ್ಲಿ ಒಂದು ಎಂಬುದನ್ನು ನಿರಾಕರಿಸುವಂತಿಲ್ಲ. ಅಪಾರ ಶಕ್ತಿಶಾಲಿ, ಕಲ್ಪನಾಶೀಲ ಹಾಗೂ ಅತಿಹೆಚ್ಚು ಸೂಕ್ಷ್ಮವಾದುದು. ಆದರೆ ಅದರ ಮೇಧಾಶಕ್ತಿಯ ಹಿಂದೆ ನಮ್ಮ ಯೋಚನೆ, ಭಾವನೆ ಮತ್ತು ವರ್ತನೆಯನ್ನು ನಿಶ್ಯಬ್ದವಾಗಿ ನಿಯಂತ್ರಿಸುವ ಕೆಲವು ಆಂತರಿಕ ಗುಣಲಕ್ಷಣಗಳು ಇವೆ. ಅವು ತಮ್ಮಷ್ಟಕ್ಕೆ ತಾವೇ ಕಾರ್ಯನಿರ್ವಹಿಸುತ್ತವೆ; ನಮ್ಮ ನಿರ್ಧಾರಗಳು, ಅಭ್ಯಾಸಗಳು, ಮಾನಸಿಕ ಪ್ರತಿಕ್ರಿಯೆಗಳೆಲ್ಲವೂ ಇವುಗಳ ಮೂಲಕವೇ ರೂಪುಗೊಳ್ಳುತ್ತವೆ.

ಯಾವುದೇ ವಿಷಯ, ಪ್ರಸಂಗ, ಚಿಂತನೆ ಅಥವಾ ಮಾತುಕತೆ ಪೂರ್ಣವಾಯಿತೆಂದರೆ ಅದನ್ನು ಬಿಟ್ಟು ಮನಸ್ಸು ನಿರಾಳವಾಗಿಬಿಡುತ್ತದೆ. ಒಂದು ವೇಳೆ ಅವು ಪೂರ್ಣವಾಗಿರದಿದ್ದರೆ ಮನಸ್ಸು ಆ ವಿಷಯದ ಸುತ್ತಲೇ ಗಿರಕಿ ಹೊಡೆಯುತ್ತಿರುತ್ತದೆ. ಇದನ್ನು Zeigಚಿಡಿಟಿiಞ ಇಜಿಜಿeಛಿಣ ಎಂದು ಕರೆಯಲಾಗುತ್ತದೆ.

ಕೆಲಸ ಪೂರ್ಣವಾಗದೇ ಇರುವುದರಿಂದ ಅದರ ಬಗ್ಗೆ ತೀವ್ರ ಗಮನವಿಡುವುದರಿಂದ ಮಾನಸಿಕವಾಗಿ ಉದ್ವಿಗ್ನತೆ ಉಂಟಾಗುತ್ತದೆ. ಒಳಗೆ ಒತ್ತಡವನ್ನು ಸೃಷ್ಟಿಸುವುದು ಮನಸ್ಸಿನ ಸ್ವಭಾವವೇ ಆಗಿದೆ.

ಒಟ್ಟಾರೆ ಅಪೂರ್ಣವಾದುದು ಅಥವಾ ಪರಿಹಾರ ಇಲ್ಲದ್ದು ಒಳಮನಸ್ಸಿನಲ್ಲಿ ಅಂಟಿಕೊಂಡಿರುತ್ತದೆ. ಯಾವುದು ಪೂರ್ಣವಾಗುವುದೋ ಅದನ್ನು ಮನಸ್ಸು ಬಿಟ್ಟುಬಿಡುತ್ತದೆ.

ಮನಸ್ಸಿನ ಈ ಸ್ವಭಾವವನ್ನು ಆಧುನಿಕ ಮನಶಾಸ್ತ್ರದಲ್ಲಿ ಬ್ಲೂಮಾ ಝೈಗಾರ್ನಿಕ್ (ಃಟumಚಿ Zeigಚಿಡಿಟಿiಞ) ಎಂಬ ಮನೋವಿಜ್ಞಾನಿಯ ಹೆಸರಿನಲ್ಲೇ ಕರೆಯಲಾಗಿದೆ.

ಅವರು 1920ರ ದಶಕದಲ್ಲಿ ಬರ್ಲಿನ್‌ನಲ್ಲಿ ಪ್ರಸಿದ್ಧ ಮನೋವಿಜ್ಞಾನಿ ಕುರ್ಟ್ ಲೆವಿನ್ ಅವರ ವಿದ್ಯಾರ್ಥಿಯಾಗಿದ್ದರು. ಒಂದು ದಿನ ಅವರು ಒಂದು ಕೆಫೆಯಲ್ಲಿ ಆಸಕ್ತಿದಾಯಕವಾದ ಸಂಗತಿಯನ್ನು ಗಮನಿಸಿದರು: ಅದೇನೆಂದರೆ, ವೈಟರ್‌ಗಳು ಪಾವತಿ ಆಗದ ಆರ್ಡರ್‌ಗಳನ್ನು ಬಹಳ ನಿಖರವಾಗಿ ನೆನಪಿಟ್ಟುಕೊಳ್ಳುತ್ತಿದ್ದರು. ಆದರೆ ಬಿಲ್ ಪಾವತಿಯಾದ ತಕ್ಷಣವೇ ಅದನ್ನು ಸಂಪೂರ್ಣ ಮರೆತುಬಿಡುತ್ತಿದ್ದರು!

ಹೀಗೆ ಗಮನಿಸಿದ ಈ ಪ್ರಸಂಗದ ಆಧಾರದಲ್ಲಿ ಅವರು ಪ್ರಯೋಗಗಳನ್ನು ನಡೆಸಿದರು. ಅವರ ಪ್ರಯೋಗಗಳ ತೀರ್ಮಾನವೇನು ಎಂದರೆ: ಅಪೂರ್ಣವಾದ ಕೆಲಸಗಳು ಮಾನಸಿಕ ಒತ್ತಡವನ್ನು ಉಂಟುಮಾಡುತ್ತವೆ. ಆ ಒತ್ತಡದ ಕಾರಣದಿಂದ ಮನಸ್ಸು ಆ ಕೆಲಸವನ್ನು ನಿರಂತರ ನೆನಪಿನಲ್ಲಿ ಇಟ್ಟುಕೊಳ್ಳುತ್ತದೆ. ಅದಕ್ಕೆ ಈ ಪರಿಣಾಮಕ್ಕೆ ಅವರ ಹೆಸರನ್ನೇ Zeigಚಿಡಿಟಿiಞ ಇಜಿಜಿeಛಿಣ ಎಂದು ಇಡಲಾಗಿದೆ.

ಝೈಗಾರ್ನಿಕ್ ಪರಿಣಾಮದ ಮೂಲ ನಮ್ಮ ಪೂರ್ವಜರಿಂದ ಬಂದ ಮಾನಸಿಕ ಪರಂಪರೆಯಲ್ಲಿದೆ. ನಮ್ಮ ಆದಿಮ ಮಾನವನಿಗೆ ಬದುಕು ಎಂದರೆ ಜಾಗರೂಕತೆ, ಗಮನ ಮತ್ತು ಅಪೂರ್ಣ ಕೆಲಸಗಳನ್ನು ಮರೆಯಲಾಗದ ಸಾಮರ್ಥ್ಯ. ಬೇಟೆ ಮತ್ತು ಆಹಾರ ಸಂಗ್ರಹದಲ್ಲಿರುತ್ತಿದ್ದ ನಮ್ಮ ಆದಿಮ ಕಾಲದ ಪೂರ್ವಜರು ಒಂದು ಪ್ರಾಣಿಯ ಹೆಜ್ಜೆ ಗುರುತು ಕಂಡಾಗ ಹುಡುಕಲೇ ಬೇಕು. ಅವುಗಳ ಜಾಡು ಮತ್ತು ಇರುವುದು ತಿಳಿದು ಮುಗಿಸದೇ ಇದ್ದರೆ ಆ ರಾತ್ರಿ ತಮ್ಮ ಸುರಕ್ಷತೆಗೇ ಅಪಾಯ ತರಬಹುದು. ಕಂಡು ಮುಗಿಸದ ಅಪೂರ್ಣ ಗುರುತು ಮನಸ್ಸಿನಲ್ಲಿ ಜಾಗರೂಕತೆಯನ್ನು ತರುತ್ತದೆ.

ಪೂರ್ವಜರು ನಿರ್ಮಿಸುವ ನೆಲೆಯನ್ನು ಅರ್ಧಕ್ಕೆ ಬಿಟ್ಟರೆ ಮಳೆ, ಚಳಿ ಅಥವಾ ಮೃಗಗಳಿಂದ ಅಪಾಯ ಎದುರಾಗುವುದು. ಈ ಅಪೂರ್ಣ ಕೆಲಸದಿಂದ ಮೆದುಳಿನಲ್ಲಿ ಒತ್ತಡ ಉಂಟಾಗಿ ಮುಗಿಸಬೇಕು ಎಂಬ ಸಂದೇಶವನ್ನು ತಮ್ಮ ಮೆದುಳಿಂದ ಪಡೆದುಕೊಳ್ಳುತ್ತಿದ್ದರು.

ಅಲೆಮಾರಿಗಳಾಗಿರುವ ಅವರಿಗೆ ಗುಡ್ಡದಲ್ಲಿಯೋ, ಪೊದೆಗಳಲ್ಲಿಯೇ ಏನಾದರೂ ಸದ್ದು ಕೇಳಿದರೆ ಅದು ಅಪಾಯಕರ ಪ್ರಾಣಿಯೋ ಅಥವಾ ನಿರ್ಲಕ್ಷಿಸಬಹುದಾದ ಜೀವಿಯೋ ಎಂದು ತಿಳಿದುಕೊಳ್ಳುವವರೆಗೂ ಮನಸ್ಸಿನಲ್ಲಿ ಎಚ್ಚರಿಕೆಯ ಗಂಟೆ ಮೊಳಗುತ್ತಲೇ ಇರುತ್ತಿತ್ತು.

ಅಷ್ಟೇ ಅಲ್ಲದೆ ಬುಡಕಟ್ಟುಗಳಲ್ಲಿ ಬದುಕುತ್ತಿದ್ದ ಪೂರ್ವಜರಿಗೆ ಅವರ ವಿವಿಧ ಕುಲ ಅಥವಾ ಗೋತ್ರಗಳ ನಡುವೆ ಉಂಟಾಗುತ್ತಿದ್ದ ಜಗಳ ಅಥವಾ ಭಿನ್ನಾಭಿಪ್ರಾಯ ಇತ್ಯರ್ಥ ಆಗಲೇ ಬೇಕಿತ್ತು. ಇಲ್ಲವಾದರೆ ಗುಂಪು ಗುಂಪುಗಳಲ್ಲಿ ಸಂಘರ್ಷ ಉಂಟಾಗಿ ಜೀವಗಳಿಗೇ ಅಪಾಯಕಾರಿಯಾಗಿರುತ್ತಿತ್ತು. ‘ಗೆಲ್ಲು ಇಲ್ಲವೇ ಸಾಯಿ’ ಎಂಬಂತೆ ಅವರು ತಮ್ಮ ಜಗಳಗಳನ್ನು ಪೂರ್ಣಗೊಳಿಸಿಕೊಳ್ಳಲು ಸಿದ್ಧವಾಗಿರುತ್ತಿದ್ದರು. ಆದ್ದರಿಂದ ಮನಸ್ಸು ಜಗಳವನ್ನು ಮರೆತಿಡದೆ, ಮುಗಿಯುವವರೆಗೆ ಹಿಡಿದುಕೊಳ್ಳುತ್ತಿತ್ತು.

ಹಾಗಂತ ಇದೇನು ನಮ್ಮ ವಂಶವಾಹಿನಿ ಗುಣಗಳಿಂದ ಬಂದಿರುವುದೇನಲ್ಲ. ಆದರೆ ಈ ಪರಿಣಾಮವನ್ನು ಸೃಷ್ಟಿಸುವ ಮೆದುಳಿನ ವ್ಯವಸ್ಥೆಗಳು ಪ್ರಧಾನ ಪಾತ್ರ ವಹಿಸುವುದು. ಮೆದುಳಿನಲ್ಲಿರುವ ಗಮನ ಕೇಂದ್ರಗಳು, ಕಾರ್ಯಸ್ಮರಣೆ (ತಿoಡಿಞiಟಿg memoಡಿಥಿ), ಡೊಪಮೈನ್ ಪ್ರೇರಣೆ ವ್ಯವಸ್ಥೆ, ಭಾವನಾತ್ಮಕ ಜಾಗರೂಕತೆ; ಇಂತವೆಲ್ಲ ವಂಶಾನುಗತವಾಗಿ ಬರುತ್ತವೆ.

ಅಂದರೆ ಮುಗಿಯದ ವಿಷಯದ ಬಗ್ಗೆ ಗಿರಕಿ ಹೊಡೆಯುವ ಝೈಗಾರ್ನಿಕ್ ಪರಿಣಾಮ ‘ಒಂದು ಜೀನ್’ ಆಗಿ ಬರಲಿಲ್ಲ, ಆದರೆ ‘ಮೆದುಳಿನ ವಿನ್ಯಾಸ’ವಾಗಿ ಪೀಳಿಗೆಯಿಂದ ಪೀಳಿಗೆ ಬಂದಿತು.

ನಾವು ಕೆಲಸವನ್ನು ಆರಂಭಿಸಿ ಸಂಪೂರ್ಣವಾಗಿ ಮುಗಿದರೆ ಡೊಪಮೈನ್ ಬಿಡುಗಡೆ ಆಗುತ್ತದೆ. ಅಲ್ಲಿಗೆ ನೆಮ್ಮದಿ. ಒಂದು ವೇಳೆ ಆದರೆ ಕೆಲಸ ಅಪೂರ್ಣವಾಗಿದ್ದರೆ? ಡೊಪಮೈನ್ ಚಕ್ರ ಮುಗಿಯುವುದಿಲ್ಲ. ದಣಿವು, ಜಂಜಾಟ ಮತ್ತು ಅಸಮಾಧಾನ ಉಂಟಾಗುತ್ತದೆ. ಮೆದುಳು ನೆನಪಿಸುತ್ತಿರುತ್ತದೆ: ‘ಮುಗಿಸು, ಮುಗಿಸು’ ಎಂದು. ಹಾಗಾಗಿಯೇ ಅಪೂರ್ಣ ಕೆಲಸ ಮನಸ್ಸಿಗೆ ಭಾರವಾಗುತ್ತದೆ.

ಪ್ರಿಫ್ರಾಂಟಲ್ ಕಾರ್ಟೆಕ್ಸ್ ಎಂಬುದು ಮೆದುಳಿನ ಮ್ಯಾನೇಜರ್. ಇದು ಯೋಜನೆ, ನಿರ್ಧಾರ ಮತ್ತು ಸ್ಮರಣೆಗಳ ಜವಾಬ್ದಾರಿ ಹೊತ್ತಿರುವುದು. ಒಂದು ವೇಳೆ ಅಪೂರ್ಣ ಕೆಲಸ ಇದ್ದರೆ, ಅದನ್ನು ಕೆಲಸದ ಪಟ್ಟಿಯಲ್ಲಿ ಸಕ್ರಿಯವಾಗಿಡುತ್ತದೆ. ಮನಸ್ಸಿಗೆ ವಿಶ್ರಾಂತಿ ಕೊಡದೆ ‘ಇದಿನ್ನೂ ಮುಗಿದಿಲ್ಲ’ ಎಂದು ಸೂಚಿಸುತ್ತಲೇ ಇರುತ್ತದೆ.

ನಮ್ಮ ತಪ್ಪುಗಳನ್ನು ಅಥವಾ ಪೂರ್ಣಗೊಳಿಸದ ವಿಷಯಗಳನ್ನು ಪತ್ತೆ ಹಚ್ಚುವ ಯಂತ್ರಕ್ಕೆ ಂಅಅ (ಂಟಿಣeಡಿioಡಿ ಅiಟಿguಟಚಿಣe ಅoಡಿಣex) ಎನ್ನುತ್ತೇವೆ. ಇದರ ಕೆಲಸವೇ ಗೊಂದಲ ಮತ್ತು ಅಪೂರ್ಣ ಮಾಹಿತಿಯನ್ನು ಪತ್ತೆಹಚ್ಚುವುದು. ಅಪೂರ್ಣ ಜಗಳ, ಉತ್ತರಿಸದ ಪ್ರಶ್ನೆ, ಬಗೆ ಹರಿಯದ ಅನುಮಾನಗಳೆಲ್ಲವನ್ನೂ ಪರಿಗಣಿಸಿ ನನೆಗುದಿಯಲ್ಲಿಟ್ಟಿರುತ್ತದೆ.

ಇನ್ನು ಅಮೈಗ್ಡಲಾ ಒಂದು ‘ಭಾವನಾತ್ಮಕ ಅಲಾರಂ’. ಇದೇ ನಮ್ಮ ಪೂರ್ವಜರಿಗೆ ಅಪೂರ್ಣ ಮಾಹಿತಿಯನ್ನು ಅಪಾಯ ಎಂದು ಎಚ್ಚರಿಸುತ್ತಿದ್ದದ್ದು. ನಮ್ಮಲ್ಲಾಗಿರುವ ಅಪೂರ್ಣ ಜಗಳ, ಉತ್ತರಿಸದ ಸಂದೇಶ, ಸ್ಪಷ್ಟತೆ ಸಿಗದ ಅನುಮಾನ; ಇವೆಲ್ಲವೂ ಅಮೈಗ್ಡಲಾವನ್ನು ಚುರುಕುಗೊಳಿಸುತ್ತವೆ. ಅದರಿಂದ ಅಶಾಂತಿ, ಜೊತೆಗೆ ಭಾವನೆಗಳ ಒತ್ತಡ.

ನಮ್ಮಲ್ಲಿ ಮತ್ತೊಂದು ಕ್ರಿಯಾಶೀಲವಾಗಿರುವುದು ‘ವರ್ಕಿಂಗ್ ಮೆಮೊರಿ’. ಅದಂತೂ ನಮ್ಮ ಮೆದುಳಿನ ಹಿಂಬದಿಯಲ್ಲಿ ಓಡುತ್ತಿರುವ ಅಪ್ಲಿಕೇಷನ್. ಅಪೂರ್ಣ ಕೆಲಸಗಳು ಅದರಲ್ಲಿ ಓಡುತ್ತಲೇ ಇರುತ್ತವೆ. ಇದರಿಂದ ಫೋನ್ ಬ್ಯಾಟರಿ ಇಳಿದಂತೆ ಮನಸ್ಸಿನ ಶಕ್ತಿ ಕುಂಠಿತವಾಗುತ್ತದೆ.

ಹಾಗಾಗಿಯೇ ವಿವೇಕಿಗಳು ಹೇಳುವರು, ‘‘ಅತ್ತುಬಿಡು, ಜಗಳವಾಡಿಬಿಡು, ಒಳಗಿರುವುದನ್ನೆಲ್ಲಾ ಹೊರಕ್ಕೆ ಕಕ್ಕಿ ಬಿಡು’’ ಎಂದು. ಕೆಲವರಲ್ಲಿ ಬಾಲ್ಯದಿಂದಲೂ ವಯಸ್ಕರ ಜೀವನದವರೆಗೂ ಅನಿಸಿದ್ದನ್ನು ಹೇಳಲಾಗದೆ, ಮಾಡಲಾಗದೆ ಅಪೂರ್ಣ ಭಾವನೆಗಳನ್ನು, ಆಲೋಚನೆಗಳನ್ನು, ಪ್ರತ್ರಿಕ್ರಿಯೆಗಳನ್ನು ಹೊತ್ತುಕೊಂಡೇ ಇಡೀ ಬದುಕನ್ನೇ ಒತ್ತಡದಲ್ಲಿ ಇಟ್ಟುಕೊಂಡಿರುವರು. ರಹಸ್ಯಗಳನ್ನು ಹೊಂದಿರುವವರ ಕತೆಯೂ ಇದೇ ಒತ್ತಡದ ವ್ಯಥೆಗಳೇ!

share
ಯೋಗೇಶ್ ಮಾಸ್ಟರ್
ಯೋಗೇಶ್ ಮಾಸ್ಟರ್
Next Story
X