Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಮನೋ ಚರಿತ್ರ
  5. ಹುಟ್ಟಾಗುರುತುಗಳು

ಹುಟ್ಟಾಗುರುತುಗಳು

ಯೋಗೇಶ್ ಮಾಸ್ಟರ್,ಯೋಗೇಶ್ ಮಾಸ್ಟರ್,17 May 2026 9:38 AM IST
share
ಹುಟ್ಟಾಗುರುತುಗಳು

ವ್ಯಕ್ತಿ ಜೈವಿಕವಾಗಷ್ಟೇ ತಾನು ಸ್ವತಂತ್ರವಾಗಿ ಹುಟ್ಟುವುದು. ಆದರೆ ಅವನ ಮನಸ್ಸು ಸಮಾಜದ ಸಂಕಲಿತ ಮನಸ್ಸಿನ ಫಲ. ವ್ಯಕ್ತಿಯು ಸ್ವತಂತ್ರವಾಗಿ ಚಿಂತಿಸುವ ಮೊದಲು ಸಮಾಜವೇ ಯಾವುದನ್ನು ಸ್ವೀಕರಿಸಬೇಕು, ಗ್ರಹಿಸಬೇಕು, ಯಾವುದಕ್ಕೆ ಹೆದರಬೇಕು, ಏನನ್ನು ಗೌರವಿಸಬೇಕು ಮತ್ತು ಯಾವುದನ್ನು ಹೇಗೆ ನೋಡಬೇಕು ಎಂದೆಲ್ಲಾ ಕಲಿಸುತ್ತದೆ. ಇದು ಮಾನವ ಮನಸ್ಸಿನ ವಿಕಾಸದ ಮೂಲ ತತ್ವ.

ಮಗುವು ಹುಟ್ಟಿದಾಗ ಅದರೊಡನೆ ಪ್ರವೃತ್ತಿಗಳು, ಭಾವನೆಗಳು, ಇಂದ್ರಿಯ ಸಂವೇದನೆಗಳನ್ನು ಮತ್ತು ಭಾಷೆ ಕಲಿಯುವ ಹಾಗೂ ತರ್ಕ ಮಾಡುವ ಸಾಮರ್ಥ್ಯಗಳು ಇರುವವು. ಆದರೆ ತಾನು ಯಾರು? ಯಾವುದು ತಪ್ಪು-ಸರಿ, ಪವಿತ್ರ-ಅಪವಿತ್ರ, ನಮ್ಮವರು ಅಥವಾ ಪರಕೀಯರು? ಯಾವುದನ್ನು ಬಯಸಬೇಕು ಅಥವಾ ಯಾವುದಕ್ಕೆ ಭಯಪಡಬೇಕು? ಯಶಸ್ಸು-ವೈಫಲ್ಯ ಎಂದರೆ ಏನು? ಜೀವನ ಮತ್ತು ಸಾವಿನ ಅರ್ಥವೇನು; ಇದನ್ನೆಲ್ಲಾ ಕಲಿಸುವುದು ಸಮಾಜ.

ಅನಾದಿ ಕಾಲದಿಂದಲೂ ಮನುಷ್ಯ ತನ್ನ ಆಹಾರ, ರಕ್ಷಣೆ, ಸಂಭೋಗದ ಅವಕಾಶ, ಮಕ್ಕಳ ಪಾಲನೆ ಪೋಷಣೆ, ಅರಿವು ಎಲ್ಲದ್ದಕ್ಕೂ ಸಮೂಹವನ್ನು ಅನಿವಾರ್ಯವಾಗಿ ಅವಲಂಬಿಸ ಬೇಕು. ಸಮೂಹವು ವ್ಯಕ್ತಿಯ ಭಾವನೆಗಳನ್ನು ನಿಯಂತ್ರಿಸುವ ಅಥವಾ ಹತೋಟಿಯಲ್ಲಿಡುವುದನ್ನೂ ಕೂಡಾ ಕಲಿಸುತ್ತದೆ. ಮಾನವ ಶಿಶು ಒಂಟಿಯಾಗಿ ಬದುಕಲಾರದು. ಹಾಗಾಗಿ ಮಾನವನ ಜೀವನ ವಿಕಾಸವು ಅನುಕರಣೆ, ಅನುಸರಣೆ, ಭಾಷೆಯ ಕಲಿಕೆ, ಸಾಮಾಜಿಕ ಅನುವರ್ತನೆ, ಸಮುದಾಯಕ್ಕೆ ನಿಯತ್ತು ಎಲ್ಲವನ್ನೂ ಒಳಗೊಂಡಿದ್ದು ಸಂಕಲಿತ ಪ್ರಭಾವ ಎನ್ನುವುದು ಬಹಳ ಶಕ್ತಿಶಾಲಿಯಾಗಿರುತ್ತದೆ.

ಒಬ್ಬ ಸ್ವತಂತ್ರ ಚಿಂತಕ ಕೂಡಾ ಮಗುವಾಗಿರು ವಾಗ ತನ್ನ ಚಿಂತನೆಗಳನ್ನು ಸಂಪೂರ್ಣವಾಗಿ ತಾನೇ ಸಂಶೋಧಿಸಲಾರ. ಪ್ರಾಥಮಿಕವಾಗಿ ತಾವು ಬದುಕು ತ್ತಿರುವ ಸಮೂಹದ ಮಾದರಿಗಳನ್ನೇ ವೈಯಕ್ತಿಕಗೊಳಿಸಿ ಕೊಳ್ಳುವುದು.

ವಸ್ತು, ಭಾವನೆ, ವಿಷಯಗಳಿಗೆ ಹೆಸರಿಸು ವುದನ್ನು, ಸಾಮಾನ್ಯ ವಿವರಣೆಗಳನ್ನು, ಒಳಿತು ಕೆಡುಕುಗಳನ್ನು, ಸಾಂಕೇತಿಕ ವ್ಯವಸ್ಥೆಗಳನ್ನು, ಗುರುತುಗಳ ಹಣೆಪಟ್ಟಿಗಳನ್ನು, ಭಾವನೆಗಳನ್ನು ಅರ್ಥೈಸುವುದನ್ನು ಸಮಾಜದಿಂದ ಕಲಿಯುತ್ತಾರೆ. ನಂತರವೇ ಅವರು ವಿಮರ್ಶಾತ್ಮಕವಾಗಿ ಪ್ರತಿಫಲಿಸುವುದನ್ನು ಪ್ರಾರಂಭಿಸು ತ್ತಾರೆ. ಹಾಗಾಗಿ ವ್ಯಕ್ತಿಯೊಬ್ಬನ ಸ್ವತಂತ್ರ ಮತ್ತು ಖಾಸಗಿ ಆಲೋಚನೆಯೂ ಕೂಡಾ ಸಾಮಾಜಿಕ ಸಂವಾದ ವಾಗಿಯೋ, ಸಂಘರ್ಷವಾಗಿಯೋ ಪ್ರಾರಂಭವಾಗುತ್ತದೆ.

ಸಮಾಜದ ಯಾವುದೋ ಒಂದನ್ನು ಒಪ್ಪುವ ಅಥವಾ ತಿರಸ್ಕರಿಸುವ ಅಥವಾ ಪರಿವರ್ತಿಸುವ ಆಲೋಚನೆಗಳನ್ನು ಮಾಡಿದರೂ ಅದು ಸಮಾಜ ಕಲಿಸಿರುವ ವಿಷಯದ ಕುರಿತೇ ಆಗಿರುತ್ತದೆ. ಮಗುವಿಗೆ ಆಲೋಚನೆಯ ಸಾಮರ್ಥ್ಯವು ಮೂಡುವ ಮತ್ತು ಬಲಿಯುವ ಮೊದಲೇ ಅದರ ಮನಸ್ಥಿತಿಯನ್ನು ಸಮೂಹವು ಸಾಮಾಜಿಕ ಸ್ಥಾನಮಾನ, ಧಾರ್ಮಿಕ, ಕಾನೂನು ಬದ್ಧ ಗುರುತುಗಳನ್ನೆಲ್ಲಾ ರೂಪುಗೊಳಿಸುತ್ತದೆ. ಈ ಒಟ್ಟು ಪ್ರತಿಷ್ಠಾಪನೆ ವ್ಯಕ್ತಿಯು ತಾನು ಯಾವುದಕ್ಕೆ ಸೇರಿದವನೆಂದು ಒಂದು ಚೌಕಟ್ಟನ್ನು ಕಟ್ಟಿಡುತ್ತದೆ. ಈ ಅನೈಸರ್ಗಿಕವಾದ ಚೌಕಟ್ಟಿನ ಆಧಾರದಲ್ಲಿ ವ್ಯಕ್ತಿ ತಾನು ಶ್ರೇಷ್ಠ ಸಮುದಾಯದವನೆಂದು ಮೇಲರಿಮೆಯಿಂದಲೂ ಅಥವಾ ಕನಿಷ್ಠವಾದ ಸಮುದಾಯದವನೆಂದು ಕೀಳರಿಮೆಯಿಂದಲೂ ತನ್ನ ಮೌಲ್ಯವನ್ನು ಭಾವಿಸುವ ರೀತಿಯಲ್ಲಿ ಮಾಡುತ್ತದೆ. ಇದೇ ರೀತಿ ಹಲವು ಚೌಕಟ್ಟುಗಳನ್ನು ಒದಗಿಸುವ ಸಾಮಾಜಿಕ ವ್ಯವಸ್ಥೆಯು ಒಮ್ಮಿಂದೊಮ್ಮೆಲೆ ಆಗದೇ ಹಲವು ಕಾಲದ ಬೆಳವಣಿಗೆಯ ಪ್ರತಿಫಲವಾಗಿರುತ್ತದೆ. ಇದನ್ನು ಸಮಾಜೋ-ಮನೋವೈಜ್ಞಾನಿಕ ಪ್ರಕ್ರಿಯೆ ಎಂದು ಕರೆಯಲಾಗುವುದು.

ಮಗುವಿನ ಮನೋಭಾವವನ್ನು ಒಂದು ನಿರ್ದಿಷ್ಟ ಚೌಕಟ್ಟಿಗೆ ಅಳವಡಿಸಿ ಮುದ್ರೆಯೊತ್ತುವ ಪ್ರಕ್ರಿಯೆಯನ್ನು ಹಲವು ವ್ಯವಸ್ಥೆಗಳ ಮೂಲಕ ಮಾಡಲಾಗುತ್ತದೆ. ಅವುಗಳಲ್ಲಿ ಪ್ರಭಾವಶಾಲಿಯೂ ಮತ್ತು ಪರಿಣಾಮಕಾರಿಯೂ ಆಗಿರುವವು ಕೆಲವಿವೆ. ಅದರಲ್ಲಿ ಹುಟ್ಟಿನಿಂದಲೇ ಆರೋಪಿಸಿರುವ ಜಾತಿ, ಜನಾಂಗ, ಧರ್ಮ, ಲಿಂಗ ಮತ್ತು ಕುಟುಂಬವೇ ಮೊದಲಾದ ಗುರುತುಗಳು (Ascriptive Identity). ಇದು ವ್ಯಕ್ತಿಯ ಪ್ರಯತ್ನ ಇಲ್ಲದೇ ಅಯಾಚಿತವಾಗಿ ಬಂದಿರುವಂತಹ ಸಮಾಜದ ನ್ಯಾಯಿಕ ವ್ಯವಸ್ಥೆಯ ಗುರುತುಗಳಾಗಿರುತ್ತವೆ. ಇದು ವ್ಯಕ್ತಿಯ ಆಯ್ಕೆಯೂ ಆಗಿರುವುದಿಲ್ಲ, ಅದನ್ನು ಪಡೆಯಲು ವ್ಯಕ್ತಿಗೆ ಯಾವ ಪ್ರತಿಭೆಯೂ ಬೇಕಿರುವುದಿಲ್ಲ.

ಈ ಅಯಾಚಿತ ಗುರುತುಗಳು ಪ್ರಾಕೃತಿಕವಾಗಿ ಅನೈಸರ್ಗಿಕ ಮತ್ತು ಸಾಂಪ್ರದಾಯಿಕವಾಗಿ ಸಾಮಾಜಿಕ. ಸಾಂಪ್ರದಾಯಿಕವಾಗಿ ಸಮಾಜದಲ್ಲಿ ತೋರುವ ಧೋರಣೆಯ ಮತ್ತು ಉಪಚರಿಸುವ ರೀತಿಯಲ್ಲಿ ತಾರತಮ್ಯ ಮಾಡುವ ರೂಢಿ ಇರುವ ಕಾರಣದಿಂದ ಇದನ್ನು ಶಾಲೆಯ ಪ್ರವೇಶಾತಿಯ ಅರ್ಜಿಯಲ್ಲಿಯೂ ಕೂಡಾ ನಮೂದಿಸುವುದುಂಟು.

ಭಾರತದ ಆಡಳಿತ ವ್ಯವಸ್ಥೆ ಮತ್ತು ಶಿಕ್ಷಣ ವ್ಯವಸ್ಥೆ ಮಗುವಿನ ಅನೈಚ್ಛಿಕ ಅಥವಾ ಅಯಾಚಿತವಾದ ಹುಟ್ಟಾ ಗುರುತುಗಳನ್ನು ಬಹುಬೇಗನೆ ವ್ಯವಸ್ಥಿತ ಗೊಳಿಸಿಬಿಡುತ್ತದೆ. ಮಗುವು ತಾನು ಈ ಗುರುತುಗಳಿಲ್ಲದೆ ಸಾಮಾನ್ಯ ವ್ಯವಸ್ಥೆಯಲ್ಲಿ ಇರಲು ಸಾಧ್ಯವೇ ಇಲ್ಲವೆಂಬಂತೆ ಕಲಿಸಲಾಗುತ್ತದೆ. ಜನಗಣತಿ ಮಾಡಲು ಬರುವ ಪ್ರತಿನಿಧಿಗಳು ಯಾವುದಾದರೂ ಒಂದು ಕುಟುಂಬ ತಾವು ಯಾವುದೇ ಜಾತಿ, ಧರ್ಮ, ಮತಕ್ಕೆ ಸೇರಿರುವುದಿಲ್ಲ ಎಂದರೆ ಹೌಹಾರುತ್ತಾರೆ. ಅದನ್ನು ಅಸಹಜ ಎಂದು ನೋಡುವುದಲ್ಲದೇ ಯಾವುದಾದರೊಂದು ಹೇಳಲೇಬೇಕು ಎಂದು ಒತ್ತಾಯಿಸುತ್ತಾರೆ. ಭಿನ್ನ ಜಾತಿಯವರ ದಾಂಪತ್ಯದ ಕುಟುಂಬವಾದರೆ ಗಂಡನ ಜಾತಿಯ ಗುರುತಿಗೆ ಹೆಂಡತಿ ಮತ್ತು ಮಕ್ಕಳು ಸೇರುವರೆಂದು ಸುಲಭವಾಗಿ ಪುರುಷ ಪ್ರಧಾನ ಮತ್ತು ಅಧೀನದ ವ್ಯವಸ್ಥೆಯನ್ನು ಒಪ್ಪಿಕೊಳ್ಳುತ್ತಾರೆ. ಒಂದು ವೇಳೆ ಸಾಂವಿಧಾನಿಕ ಪ್ರಾತಿನಿಧ್ಯ ಅಥವಾ ಸರಕಾರಿ ಸವಲತ್ತುಗಳನ್ನು ಪಡೆಯುವ ಜಾತಿಯನ್ನೋ ಅಥವಾ ಮತವನ್ನೋ ಆಯ್ಕೆ ಮಾಡುತ್ತೇವೆ ಎಂದರೆ ಅದು ಕಾನೂನಾತ್ಮಕವಾಗಿಯೂ ಸಾಧ್ಯ ಆಗುವುದಿಲ್ಲ. ಏಕೆಂದರೆ ವ್ಯಕ್ತಿ ಅಥವಾ ಕುಟುಂಬ ಆ ಸಮುದಾಯದ ಮೇಲಿನ ಗೌರವಕ್ಕೆ ಅದಕ್ಕೆ ಸೇರಿದವನೆಂದು ತನ್ನನ್ನು ಅದರಲ್ಲಿ ಗುರುತಿಸಿಕೊಳ್ಳುತ್ತೇನೆಂದರೆ ಒಪ್ಪಿಕೊಳ್ಳುವುದಿಲ್ಲ. ಮೀಸಲಾತಿಯೇ ಮೊದಲಾದ ವಿಶೇಷ ಸವಲತ್ತುಗಳ ಆಸೆಗೆ ಮಾಡುತ್ತಿರುವರೆಂದು ಸಂದೇಹಿಸುತ್ತದೆ ಮತ್ತು ನಿರಾಕರಿಸುತ್ತದೆ. ಅಲ್ಲಿ ಹುಟ್ಟಾ ಗುರುತನ್ನೇ ಎತ್ತಿ ಹಿಡಿಯುತ್ತದೆ.

ಮಗುವೊಂದು ತನಗೆ ಕೊಟ್ಟಿರುವ ಗುರುತು ಏನೆಂದು ತಿಳಿಯುವ ಮುನ್ನವೇ ಅನೈಸರ್ಗಿಕ ಹಣೆಪಟ್ಟಿಗಳನ್ನು ಪ್ರಾಥಮಿಕವಾಗಿ ತನ್ನ ನೆಲದ ನಾಗರಿಕ ಗುರುತನ್ನಾಗಿಸಿಕೊಂಡಿರುತ್ತದೆ. ವೈಜ್ಞಾನಿಕವಾಗಿ ಯಾವುದೇ ವಿಷಯವನ್ನು ನೋಡುವಾಗ ಅದು ಪ್ರತಿಫಲನಕ್ಕೆ ಒಳಗಾಗುತ್ತದೆ. ಅದರ ಬಗ್ಗೆ ಪ್ರಶ್ನೆಗಳು, ವಿಸ್ತರಣೆಗಳು, ಸಂಶೋಧನೆಗಳು, ಮಾರ್ಪಾಡುಗಳು, ರೂಪಾಂತರಗಳೇ ಮೊದಲಾದ ಎಲ್ಲಾ ಬಗೆಯ ಪ್ರಯೋಗಗಳಿಗೂ ಅವಕಾಶವಿರುತ್ತದೆ.

ಆದರೆ ಹುಟ್ಟಾಗುರುತುಗಳನ್ನು ವೈಜ್ಞಾನಿಕವಾಗಿ ನೋಡದೆಯೇ ಭಾವನಾತ್ಮಕವಾಗಿ ವ್ಯವಸ್ಥೆಯ ಭಾಗವಾಗಿ ಪರಿಗಣಿಸುವುದರಿಂದ ಪ್ರತಿಫಲನಕ್ಕೆ ಅವಕಾಶವಿರದೆ, ಹಳತರ ಧೋರಣೆ ಮತ್ತು ನಡೆದುಕೊಳ್ಳುವುದರ ರೀತಿಯನ್ನು ಪ್ರತಿಧ್ವನಿಸುತ್ತಾ ಉಳಿಸಿಕೊಳ್ಳುತ್ತಾರೆ. ಇದರಿಂದ ವಿಕಾಸವಾಗುತ್ತಿರುವ ವಿಜ್ಞಾನ ಮತ್ತು ತಂತ್ರಜ್ಞಾನಗಳನ್ನೂ ಹೊಂದುತ್ತಾ, ವಿಕಾಸವೇ ಆಗದಿರುವ ಹುಟ್ಟಾಗುರುತುಗಳನ್ನೂ ಹೊತ್ತು ಸಾಗಿಸುತ್ತಾ ವ್ಯಕ್ತಿಗಳು ಇಬ್ಭಾಗವಾಗಿರುವ ಸ್ಥಿತಿಯಲ್ಲಿಯೇ ಮನಸ್ಥಿತಿಗಳನ್ನು ಹೊಂದಿರುತ್ತಾರೆ. ತಮ್ಮಲ್ಲಿ ತಾವೇ ದ್ವಂದ್ವ ರೂಪಗಳೊಂದಿಗೆ ಆಂತರಿಕ ಸಂಘರ್ಷದ ಬಲಿಪಶುಗಳಾಗಿರುತ್ತಾರೆ. ಭಾರತದ ವ್ಯಕ್ತಿ ಮತ್ತು ಸಾಮಾಜಿಕ ಮನಸ್ಥಿತಿಯ ಸಮಸ್ಯೆಯ ಮೂಲ ಕಾರಣಗಳಲ್ಲಿ ಹುಟ್ಟಾಗುರುತುಗಳು ಪ್ರಮುಖ ಪಾತ್ರವನ್ನು ವಹಿಸುವುದರಲ್ಲಿ ಸಂದೇಹವಿಲ್ಲ.

Tags

huttaaguruthugalu
share
ಯೋಗೇಶ್ ಮಾಸ್ಟರ್,
ಯೋಗೇಶ್ ಮಾಸ್ಟರ್,
Next Story
X