Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಮನೋ ಚರಿತ್ರ
  5. ಸತ್ಯದ ಭ್ರಮೆ

ಸತ್ಯದ ಭ್ರಮೆ

ಯೋಗೇಶ್ ಮಾಸ್ಟರ್ಯೋಗೇಶ್ ಮಾಸ್ಟರ್5 July 2026 12:44 PM IST
share
ಸತ್ಯದ ಭ್ರಮೆ

ಅವರವರ ಅಭಿಪ್ರಾಯ, ಅನುಭವ ಮತ್ತು ಅರಿವುಗಳಿಂದ ರೂಪುಗೊಂಡಿರುವ ಸತ್ಯಗಳು ಮತ್ತು ವಸ್ತುನಿಷ್ಠವಾಗಿರುವ ವಾಸ್ತವ ಎಂಬುದು ಬೇರೆ ಬೇರೆ ಇವೆ ಎಂಬ ತಿಳಿವಳಿಕೆ ಮನುಷ್ಯನನ್ನು ಶಾಸ್ತ್ರಾಧಾರಿತ ಸಿದ್ಧಾಂತಗಳಿಂದ ಮತ್ತು ಏಕಪಕ್ಷೀಯವಾದ ಚೌಕಟ್ಟಿನ ತತ್ವಗಳಿಂದ ರಕ್ಷಿಸುತ್ತದೆ. ಇಂತಹ ಆಲೋಚನೆಗಳು ಮತ್ತು ಅನ್ವೇಷಣೆಗಳು ನಮ್ಮನ್ನು ಜ್ಞಾನ ಮೀಮಾಂಸೆಗೆ (epistemology) ಒಯ್ಯುತ್ತವೆ. ಅಂದರೆ ಶಾಸ್ತ್ರ ಮತ್ತು ಸಂಪ್ರದಾಯಗಳನ್ನು ಸೂಕ್ಷ್ಮವಾಗಿ ಗಮನಿಸಿ ನೋಡದೇ ಕುರುಡಾಗಿ ಅವನ್ನು ಅನುಸರಿಸುವುದನ್ನು ತಪ್ಪಿಸುತ್ತದೆ. ಹಾಗಾಗಿ ಸತ್ಯವೆಂಬುದು ಸುಳ್ಳು ಎಂದಾಕ್ಷಣ ಅದನ್ನು ಒಪ್ಪಿಬಿಡುವುದೂ ಕೂಡಾ ಅಂಧಾನುಕರಣೆಯೇ ಆಗುತ್ತದೆ. ಅದೂ ಕೂಡಾ ಒಂದು ತಾತ್ವಿಕ ಆಗ್ರಹಕ್ಕೆ ಒಳಗಾದ ನಿರ್ಣಯದಂತೆ ತೋರುತ್ತದೆ. ಹಾಗಾಗಿ ಅದನ್ನು ಗಮನಿಸಿ ಮತ್ತು ವಿಶ್ಲೇಷಿಸಿ ನೋಡಿದಾಗ, ಸತ್ಯ ಎಂಬುದೆಲ್ಲಾ ಸುಳ್ಳಲ್ಲ. ಆದರೆ ನಾವು ಸತ್ಯ ಎಂದು ಭಾವಿಸುವ ಬಹಳಷ್ಟು ಸಂಗತಿಗಳು ವಾಸ್ತವದ ಮೇಲೆ ಹೇರಿರುವ ನಮ್ಮದೇ ವಿವರಣೆಗಳು ಅಥವಾ ವ್ಯಾಖ್ಯಾನಗಳಾಗಿರುತ್ತವೆ ಎಂದು ಸಡಿಲಗೊಳಿಸುವ ಮೂಲಕ ಸರಳಗೊಳಿಸಬಹುದು.

ಸತ್ಯಕ್ಕಾಗಿ ಮನುಷ್ಯನು ಸಾವಿರಾರು ವರ್ಷಗಳಿಂದ ಅನ್ವೇಷಣೆ ಮಾಡುತ್ತಿದ್ದಾನೆ ಮತ್ತು ಹೋರಾಡುತ್ತಿದ್ದಾನೆ. ಇಲ್ಲಿ ಏಳುವ ಪ್ರಶ್ನೆ ಏನೆಂದರೆ, ಅವನು ಹುಡುಕಾಟ ಮಾಡುತ್ತಿರುವುದು ಸತ್ಯಕ್ಕಾಗಿಯೋ ಅಥವಾ ತಾನು ಹೊಂದಿರುವ ನಂಬಿಕೆಗಳ ದೃಢೀಕರಣಕ್ಕಾಗಿಯೋ. ಇದನ್ನು ಎಚ್ಚರಿಕೆಯಿಂದ ಗಮನಿಸಬೇಕು. ಏಕೆಂದರೆ ನಂಬುಗೆಗಳು (beliefs) ಎಂಬುದು ವಾಸ್ತವದ ಆಧಾರಿತವಾಗಿರುವುದಿಲ್ಲ. ಮನಸ್ಸಿಗೆ ಯಾವ ವಿಷಯವನ್ನು ಪುನರಾವರ್ತಿತವಾಗಿ ಹೇಳಲ್ಪಟ್ಟಿರುತ್ತದೆಯೋ ಅಥವಾ ಹೇರಲ್ಪಟ್ಟಿರುತ್ತದೆಯೋ ಅದನ್ನೇ ಅವನು ನಂಬುತ್ತಾನೆ. ಪುನರಾವರ್ತನೆಯ ಫಲವೇ ನಂಬುಗೆ.

ತನ್ನ ನಂಬುಗೆಯನ್ನೇ ಮನುಷ್ಯ ಸತ್ಯವೆನ್ನುತ್ತಾನೆ. ಮನುಷ್ಯನ ಅತ್ಯಂತ ಹಳೆಯ ಭ್ರಮೆಯೆಂದರೆ, ನನಗೆ ಗೊತ್ತಿರುವುದೇ ಸತ್ಯ ಎನ್ನುವುದು.

ಸತ್ಯ ಎಂದು ಯಾವುದನ್ನು ಮನುಷ್ಯ ನಂಬಿರುತ್ತಾನೋ ಅದು ಕಾಲದಿಂದ ಕಾಲಕ್ಕೆ, ದೇಶದಿಂದ ದೇಶಕ್ಕೆ ಬದಲಾಗುತ್ತಿರುತ್ತದೆ.

ಭೂಮಿ ಸಮತಟ್ಟಾಗಿದೆ, ಸೂರ್ಯ ಭೂಮಿಯ ಸುತ್ತ ತಿರುಗುತ್ತಾನೆ ಎಂಬುದು ಒಂದು ಕಾಲದಲ್ಲಿ ಎಲ್ಲರೂ ನಂಬಿದ್ದ ಸತ್ಯವಾಗಿತ್ತು. ಕೆಲವು ಜನರು ಜನ್ಮತಃ ಶ್ರೇಷ್ಠರು, ಕೆಲವರು ಕನಿಷ್ಠರು ಎಂಬುದು ಕೂಡಾ ಒಂದು ಕಾಲದಲ್ಲಿ ನಂಬಿದ್ದರು. ಆದರೆ ಅವೆಲ್ಲವೂ ಈಗ ಆಧಾರರಹಿತವಾದದ್ದು ಎಂದು ನಮಗೆ ತಿಳಿದಿದೆ. ಆದರೆ ಆ ನಂಬುಗೆಗಳು ಆಗ ಸುಳ್ಳಾಗಿರಲಿಲ್ಲ. ಸತ್ಯವೇ ಆಗಿದ್ದವು. ಆದರೆ ವಾಸ್ತವ ಆಗಿರಲಿಲ್ಲ. ಇಲ್ಲಿ ನಮಗೆ ಅರ್ಥವಾಗುವುದು ಸತ್ಯ ಮತ್ತು ವಾಸ್ತವಗಳ ನಡುವಿನ ವ್ಯತ್ಯಾಸ. ವಾಸ್ತವವು ನಮ್ಮ ನಂಬಿಕೆಯನ್ನು ಅವಲಂಬಿಸಿರುವುದಿಲ್ಲ. ನಾವು ಯಾವುದನ್ನು ನಂಬಿದರೂ, ನಂಬದಿದ್ದರೂ, ಒಪ್ಪಿದರೂ ಅಥವಾ ತಿರಸ್ಕರಿಸಿದರೂ ವಾಸ್ತವವು ತನ್ನಂತೆಯೇ ಇರುತ್ತದೆ.

ವಾಸ್ತವದ ಮುಂದೆ ವ್ಯಕ್ತಿಗಳ ಹಾಗೂ ಸಮೂಹಗಳ ನಂಬಿಕೆ ಮತ್ತು ಸತ್ಯಗಳು ಕನಲುತ್ತವೆ. ವಾಸ್ತವ ಮನುಷ್ಯನ ಪ್ರಶಂಸೆಯನ್ನು ಬಯಸುವುದಿಲ್ಲ ಮತ್ತು ನಿಂದನೆಗಳನ್ನು ಪರಿಗಣಿಸುವುದಿಲ್ಲ. ವಾಸ್ತವ ಎಂಬುದು ಅಗಾಧವಾಗಿದ್ದು ಮನುಷ್ಯನ ಬದಲಾಗುವ ಗ್ರಹಿಕೆಯ ಸಾಮರ್ಥ್ಯಕ್ಕೆ ಸುಲಭವಾಗಿ ದಕ್ಕಿಬಿಡುವುದಿಲ್ಲ. ಪ್ರಯತ್ನಪೂರ್ವಕವಾಗಿ, ಎಚ್ಚರಿಕೆಯಿಂದ ಕಂಡುಕೊಳ್ಳಬೇಕು.

ಮನುಷ್ಯ ಬೆಂಕಿಯನ್ನು ಸೃಷ್ಟಿಸಲಿಲ್ಲ, ಗುರುತ್ವಾಕರ್ಷಣೆಯನ್ನು ರೂಪಿಸಲಿಲ್ಲ. ಈ ಜಗತ್ತಿನಲ್ಲಿ ಬೆಂಕಿ ಇತ್ತು, ಗುರುತ್ವಾಕರ್ಷಣೆ ಇರುವುದು ವಾಸ್ತವ. ಮನುಷ್ಯ ಅವನ್ನು ಇವೆ ಎಂದು ಕಂಡುಕೊಂಡ, ಅರ್ಥ ಮಾಡಿಕೊಂಡ ಮತ್ತು ತನ್ನ ಅಗತ್ಯಗಳಿಗೆ ಬಳಸಿಕೊಂಡ.

ನಂಬಿಕೆ ಆಧಾರಿತ ಸತ್ಯವು ನಮ್ಮ ಅನುಭವ, ಸಂಸ್ಕೃತಿ, ಶಿಕ್ಷಣ, ಭಯ, ಆಸೆ ಮತ್ತು ಪೂರ್ವಾಗ್ರಹಗಳ ಸಂಯೋಜನೆಯಾಗಿರುತ್ತದೆ. ರಾಜಕಾರಣಿ ತನ್ನ ಸಿದ್ಧಾಂತವನ್ನು ಸತ್ಯ ಎನ್ನುತ್ತಾನೆ, ಧರ್ಮಗುರು ತನ್ನ ನಂಬಿಕೆಯನ್ನು ಸತ್ಯ ಎನ್ನುತ್ತಾನೆ, ಪ್ರೇಮಿಯು ತನ್ನ ಭಾವನೆಯನ್ನು ಸತ್ಯ ಎನ್ನುತ್ತಾನೆ. ಆದರೆ ಅವುಗಳೆಲ್ಲಾ ವಾಸ್ತವಾಗಿರಬೇಕೆಂದಿಲ್ಲ.

ಮನೋವಿಜ್ಞಾನದ ಪ್ರಕಾರ ಇದನ್ನು ಗಮನಿಸುವುದಾದರೆ, ಮನುಷ್ಯನು ವಾಸ್ತವವನ್ನು ನೇರವಾಗಿ ಮತ್ತು ಪಾರದರ್ಶಕವಾಗಿ ನೋಡುವುದಿಲ್ಲ. ತನ್ನ ಮನಸ್ಸಿನ ಕಿಟಕಿಯ ಗಾಜುಗಳ ಮೂಲಕ ಅದನ್ನು ನೋಡುತ್ತಾನೆ. ಆ ಕಿಟಕಿಯ ಗಾಜುಗಳಿಗೆ ಭಾವನೆಗಳ ಬಣ್ಣವಿರುತ್ತದೆ, ಅನುಭವಗಳ ಧೂಳಿರುತ್ತದೆ, ಸಿದ್ಧಾಂತಗಳ ಪರದೆಗಳಿರುತ್ತದೆ.

ಈ ಜಗತ್ತಿನಲ್ಲಿ ಎಷ್ಟು ಜನರಿದ್ದಾರೋ ಅಷ್ಟೇ ಸಂಖ್ಯೆಯ ಸತ್ಯಗಳಿರಬಹುದು. ಆದರೆ ವಾಸ್ತವ ಒಂದೇ ಆಗಿರುತ್ತದೆ. ಸತ್ಯ ಎಂಬುದು ಮಾನವನ ಅರಿವಿಗೆ ಸೀಮಿತವಾಗಿರುವುದು. ಆದರೆ ವಾಸ್ತವ ಮನುಷ್ಯನಿಗೆ ಗೋಚರಿಸಲಾಗದಷ್ಟು ವಿಶಾಲವಾಗಿದೆ. ಸತ್ಯ ಕಾಲದಿಂದ ಕಾಲಕ್ಕೆ ತಿದ್ದುಪಡಿಗೆ ಒಳಗಾಗುತ್ತಿರುತ್ತದೆ. ಆದರೆ ವಾಸ್ತವ ಹಾಗಲ್ಲ. ಮನೋವಿಜ್ಞಾನವಾಗಲಿ, ಭೌತವಿಜ್ಞಾನವಾಗಲಿ ವಾಸ್ತವವನ್ನು ಸೃಷ್ಟಿಸುವುದಿಲ್ಲ. ಬದಲಾಗಿ ವಾಸ್ತವದ ಬಗ್ಗೆ ಇರುವ ನಮ್ಮ ತಪ್ಪು ಕಲ್ಪನೆಗಳನ್ನು ತೊಡೆದುಹಾಕುತ್ತಾ ಬರುತ್ತದೆ.

ಸತ್ಯದ ಭ್ರಮೆ ಎಂದರೆ ಸುಳ್ಳನ್ನು ನಂಬುವುದು ಅಲ್ಲ. ತನ್ನ ದೃಷ್ಟಿಕೋನವೇ ಅಂತಿಮ ಸತ್ಯ ಅಥವಾ ಪರಮ ಸತ್ಯ ಎಂದು ನಂಬುವುದು. ನಾವು ನಿಜವಾದ ಸತ್ಯಾನ್ವೇಷಿಗಳಾಗಬೇಕಿದ್ದರೆ ಅಹಂಕಾರವನ್ನು ತೊಡೆಯಬೇಕು. ಏಕೆಂದರೆ ಸತ್ಯವೆಂದರೆ ವಾಸ್ತವದ ಬಗ್ಗೆ ನಮ್ಮ ಪ್ರಸ್ತುತ ಅರಿವು ಎಂಬುದನ್ನು ವಿನಯದಿಂದ ಒಪ್ಪಿಕೊಳ್ಳಬೇಕು. ವಾಸ್ತವವು ನಮ್ಮ ಅರಿವಿಗಿಂತ ಹಿರಿದು. ನನಗೆ ಏನು ತಿಳಿದಿದೆಯೋ ಅದೇ ಸಂಪೂರ್ಣ ಸತ್ಯವೋ, ಅಂತಿಮ ಸತ್ಯವೋ ಅಥವಾ ಪರಮ ಸತ್ಯವೋ ಅಲ್ಲ ಎಂದು ಒಪ್ಪಿಕೊಳ್ಳುವ ಗಳಿಗೆಯಿಂದಲೇ ವಿವೇಕ ತನ್ನ ಗ್ರಹಿಕೆಯನ್ನು ಚುರುಕುಗೊಳಿಸುತ್ತದೆ.

Tags

illusiontruth
share
ಯೋಗೇಶ್ ಮಾಸ್ಟರ್
ಯೋಗೇಶ್ ಮಾಸ್ಟರ್
Next Story
X