Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಮನೋ ಚರಿತ್ರ
  5. ಕವಚ ತಂತ್ರ

ಕವಚ ತಂತ್ರ

ಯೋಗೇಶ್ ಮಾಸ್ಟರ್ಯೋಗೇಶ್ ಮಾಸ್ಟರ್9 Aug 2026 12:48 PM IST
share
ಕವಚ ತಂತ್ರ

ವ್ಯಕ್ತಿಯ ಮನಸ್ಸು ತನ್ನ ಅಸ್ತಿತ್ವವನ್ನು ಮತ್ತು ಮಾನ್ಯತೆಯನ್ನು ಉಳಿಸಿಕೊಳ್ಳಲು ನಾನಾ ಬಗೆಯ ರಕ್ಷಣಾತಂತ್ರಗಳನ್ನು ಬಳಸಿಕೊಳ್ಳುತ್ತಿರುತ್ತದೆ. ಮಕ್ಕಳು ಬೈಗುಳ ಮತ್ತು ಹೊಡೆತಗಳಿಂದ ಅಥವಾ ಇಷ್ಟವಿಲ್ಲದ, ಕಷ್ಟವಾಗಿರುವ ಕೆಲಸಗಳಿಂದ ತಪ್ಪಿಸಿಕೊಳ್ಳಲು ಸುಳ್ಳನ್ನು ಹೇಳುತ್ತಾರೆ. ಅದು ಅವರ ರಕ್ಷಣಾ ತಂತ್ರ. ಹೀಗೆ ಮನಸ್ಸು ತನ್ನನ್ನು ತಾನು ರಕ್ಷಿಸಿಕೊಳ್ಳುತ್ತಿದ್ದೇನೆ ಎಂಬ ಭಾವದಲ್ಲಿ ನಾನಾ ಬಗೆಯ ಕವಚಗಳನ್ನು ಬಳಸಿಕೊಳ್ಳುತ್ತಿರುತ್ತದೆ. ಹಾಗೆಯೇ ಮನುಷ್ಯರೇ ನಿರ್ಮಿಸಿರುವ ಸಾಮಾಜಿಕ ಸಂಸ್ಥೆಗಳೂ ಕೂಡಾ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ನಾನಾ ರಕ್ಷಣಾ ತಂತ್ರಗಳನ್ನು ಉಪಯೋಗಿಸಿಕೊಳ್ಳುತ್ತಿರುತ್ತದೆ. ಸುಳ್ಳು ಹೇಳುವ ಮಗುವಿನದು ವ್ಯಕ್ತಿಗತವಾದ ರಕ್ಷಣಾ ತಂತ್ರವಾದರೆ, ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಸ್ಥೆಗಳದ್ದು ಸಂಕಲಿತ ಮನಸ್ಥಿತಿಯದ್ದಾಗಿರುತ್ತದೆ.

ಜಾಗತಿಕ ಇತಿಹಾಸದ ಪುರಾತನ ಮತ್ತು ಇಂದಿಗೂ ಸಜೀವವಾಗಿರುವ ಒಂದು ರಾಜಕೀಯ ತಂತ್ರವೆಂದರೆ ಅದು ಪ್ರಭುತ್ವ ಮತ್ತು ಪುರೋಹಿತಶಾಹಿಯ ಅಪವಿತ್ರ ಮೈತ್ರಿ (The Sacerdotal-Imperial Alliance). ಸಾಮಾನ್ಯವಾಗಿ ರಾಜಕೀಯ ಅಧಿಕಾರವು ಬಹುಸಂಖ್ಯಾತರ ಧರ್ಮದ ಪುರೋಹಿತಶಾಹಿ ಹಾಗೂ ಸಾಂಸ್ಥಿಕ ಶಕ್ತಿಗಳೊಂದಿಗೆ ಕೈಜೋಡಿಸಿ ಒಂದು ಪಂಥೀಯ ಸಂಸ್ಕೃತಿಯನ್ನು (Cult Culture) ಸೃಷ್ಟಿಸುತ್ತದೆ. ಇದನ್ನು ಮನೋವೈಜ್ಞಾನಿಕವಾಗಿ ಮತ್ತು ಸಮೂಹ ಮನೋವಿಜ್ಞಾನದ (Mob Psychology) ದೃಷ್ಟಿಯಿಂದ ನೋಡಿದಾಗ ಮೂರು ಆಯಾಮಗಳು ಕಾಣಿಸುತ್ತವೆ.

ಮೊದಲನೆಯದು ಧಾರ್ಮಿಕತೆಯೊಂದಿಗೆ ಪ್ರಭುತ್ವದ ವಿಲೀನ ಮತ್ತು ಧಾರ್ಮಿಕ ಕವಚ ತಂತ್ರ (The Divine Shield Trick). ರಾಜಕಾರಣಿಗಳು ಪ್ರಭುತ್ವವನ್ನು ಧರ್ಮದೊಂದಿಗೆ ವಿಲೀನಗೊಳಿಸುವುದು ಏಕೆಂದರೆ ತಾವು ಪ್ರಶ್ನಾತೀತ ಅಧಿಕಾರವನ್ನು ಪಡೆಯುವುದಕ್ಕೆ.

ಧರ್ಮ ನಿರಪೇಕ್ಷತೆಯ ಮತ್ತು ಜಾತ್ಯತೀತವಾದ ಸಾಮಾನ್ಯ ಪ್ರಜಾಪ್ರಭುತ್ವದಲ್ಲಿ ನಾವು ಮೂಲಭೂತ ಸೌಕರ್ಯಗಳು ಮತ್ತು ಹಕ್ಕುಗಳ ಬಗ್ಗೆ ಸರಕಾರವನ್ನು ಪ್ರಶ್ನಿಸಿದಾಗ ರಾಜಕಾರಣಿಗಳು ಉತ್ತರಿಸಬೇಕಾಗುತ್ತದೆ. ಆದರೆ, ಯಾವಾಗ ಪ್ರಭುತ್ವವು ತನ್ನ ಮುಖಕ್ಕೆ ಧರ್ಮದ ಮುಖವಾಡ ತೊಟ್ಟುಕೊಳ್ಳುತ್ತದೆಯೋ, ಆಗ ಸರಕಾರದ ಮೇಲಿನ ಪ್ರತಿಯೊಂದು ವಿಮರ್ಶೆಯೂ ಧರ್ಮದ ಮೇಲಿನ ದಾಳಿ ಎಂದು ರೂಪಾಂತರಗೊಳಿಸಲು ಸುಲಭವಾಗುತ್ತದೆ.

ಆಗ ಸರಕಾರವನ್ನು ವಿರೋಧಿಸುವ ನಾಗರಿಕನನ್ನು ಕೇವಲ ರಾಜಕೀಯ ವಿರೋಧಿ ಎಂದು ಕರೆಯುವುದಿಲ್ಲ. ಅವನಿಗೆ ಧರ್ಮದ್ರೋಹಿ ಅಥವಾ ದೇಶದ್ರೋಹಿ ಎಂಬ ಪಟ್ಟ ಕಟ್ಟಿ ಅವನ ಧ್ವನಿಯನ್ನು ಹತ್ತಿಕ್ಕಲು ಇಡೀ ಸಮಾಜವೇ ಎದ್ದು ನಿಲ್ಲುತ್ತದೆ. ರಾಜಕಾರಣಿಗಳು ತಮ್ಮ ಕಡೆಗೆ ಬರಬೇಕಾದ ಸಾರ್ವಜನಿಕ ಆಕ್ರೋಶವನ್ನು ಧರ್ಮದ ಕಡೆಗೆ ತಿರುಗಿಸಿ, ತಾವು ಸುರಕ್ಷಿತವಾಗಿ ಕವಚದಲ್ಲಿ ಅಡಗುತ್ತಾರೆ.

ಹಾಗೆಯೇ ಎರಡನೆಯದಾಗಿ ಸಮೂಹ ಮನೋವಿಜ್ಞಾನದ ವಿಕೃತಿಯನ್ನು (Mob Psychology and Tribal Regression) ಕೂಡಾ ಗಮನಿಸಬೇಕು. ಯಾವುದೇ ಒಬ್ಬ ವ್ಯಕ್ತಿ ಒಂಟಿಯಾಗಿದ್ದಾಗ ತಾರ್ಕಿಕವಾಗಿ ಆಲೋಚಿಸುತ್ತಾನೆ. ಆದರೆ ಅವನು ಒಂದು ಬೃಹತ್ ಗುಂಪಿನ (Mob / Cult) ಭಾಗವಾದಾಗ, ಅವನ ವೈಯಕ್ತಿಕ ಪ್ರಜ್ಞೆ ನಿಷ್ಕ್ರಿಯಗೊಳ್ಳುತ್ತದೆ. ಗುಸ್ತಾವ್ ಲೆ ಬಾನ್ ((Gustave Le Bon) ಎಂಬ ಮನೋವಿಜ್ಞಾನಿ ಹೇಳುವಂತೆ, ಸಮೂಹದಲ್ಲಿರುವ ವ್ಯಕ್ತಿಯು ಕೇವಲ ಒಬ್ಬ ಅನಾಗರಿಕ ಪ್ರಾಣಿ.

ರಾಜಕೀಯ ಪಕ್ಷಗಳು ತಮ್ಮ ಹಿತಕ್ಕಾಗಿ ಬಳಸಿಕೊಳ್ಳುವ ಪಂಥೀಯ ಸಂಸ್ಕೃತಿಯ ತಂತ್ರಗಾರಿಕೆ (Cult Mechanism) ಏನೆಂದರೆ, ರಾಜಕೀಯ ಪಕ್ಷ ಮತ್ತು ಅದರ ಆವೃತ್ತಿಗಳು ಸೃಷ್ಟಿಸುವ ಈ ಒಂದು ಕಲ್ಟ್ ಜನರ ಆಳದಲ್ಲಿ ತಾವು ಗುರುತಿಸಿಕೊಂಡಿರುವ ನಿರ್ದಿಷ್ಟ ಸಮೂಹದ ಕೀಳರಿಮೆ ಮತ್ತು ಭಯವನ್ನು (Tribal Insecurity) ತಮ್ಮ ಬಂಡವಾಳ ಮಾಡಿಕೊಳ್ಳುತ್ತದೆ. ನಮ್ಮ ಧರ್ಮ ಅಪಾಯದಲ್ಲಿದೆ, ಈ ನಾಯಕ ಮಾತ್ರ ನಮ್ಮನ್ನು ರಕ್ಷಿಸಬಲ್ಲ ಎಂಬ ಭ್ರಾಮಕ ಮತ್ತು ಕೃತಕ ಭಯವನ್ನು ದಿನರಾತ್ರಿ ಬಿತ್ತಲಾಗುತ್ತದೆ. ಇದರಿಂದ ಉಂಟಾಗುವ ಪ್ರಮಾದವೆಂದರೆ ವ್ಯಕ್ತಿತ್ವದ ನಾಶ (De-individuation). ಈ ಕಲ್ಟ್ ಸಂಸ್ಕೃತಿಯೊಳಗೆ ಸಿಲುಕುವ ಸಾಮಾನ್ಯ ನಾಗರಿಕ ತಾನೊಬ್ಬ ಜಾಗೃತ ಮತದಾರ ಎಂಬುದನ್ನು ಮರೆತುಬಿಡುತ್ತಾನೆ. ಗುಂಪಿನ ಆವೇಶದಲ್ಲಿ ಅವನು ತನ್ನ ಹಸಿವು, ತನ್ನ ಮಕ್ಕಳ ಶಿಕ್ಷಣ, ಬದುಕಿನ ನೈಜ ಸಮಸ್ಯೆಗಳನ್ನೆಲ್ಲ ಮರೆತು, ಮತ್ತೊಂದು ಗುಂಪಿನ ವಿರುದ್ಧ ದ್ವೇಷ ಸಾಧಿಸಲು ಬೀದಿಗೆ ಇಳಿಯುತ್ತಾನೆ. ಪ್ರಭುತ್ವಕ್ಕೆ ಇಂತಹ ಬ್ರೈನ್-ವಾಶ್ ಆದ, ಪ್ರಶ್ನಿಸದ, ಕೇವಲ ಆವೇಶಭರಿತವಾದ ಸಮೂಹವೇ (Controlled Mob) ಬೇಕಾಗಿರುವುದು.

ಯಾವುದೇ ಧರ್ಮಕ್ಕೆ ಅದರ ತತ್ವ ಮತ್ತು ಆಧ್ಯಾತ್ಮಿಕತೆಯೇ ಆತ್ಮವಾಗಿರುತ್ತದೆ. ಇನ್ನು ಆಚರಣೆಗಳೆಂಬುದು ಅವುಗಳನ್ನು ಸಾಧಿಸುವ ಮಾಧ್ಯಮವಾಗಿರುತ್ತದೆ. ಆದರೆ ಧಾರ್ಮಿಕತೆಯ ರಾಜಕೀಯಕರಣಗೊಂಡಾಗ ಆ ಧರ್ಮದ ಆಧ್ಯಾತ್ಮಿಕತೆಯ ಸಾವು (The Execution of Spirituality) ಉಂಟಾಗುತ್ತದೆ. ಇದು ಜನರ ಧಾರ್ಮಿಕ ಭಾವನೆಯ ಸೂಕ್ಷ್ಮ ಮನಸ್ಥಿತಿಯನ್ನು ನಾಶ ಮಾಡುವುದಲ್ಲದೆ ಆಧ್ಯಾತ್ಮಿಕತೆಯ ಸಂವೇದನೆಯನ್ನು ಇಲ್ಲವಾಗಿಸುವುದು. ನಿಜವಾದ ಧಾರ್ಮಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವುದು ಮನುಷ್ಯನನ್ನು ಒಳಗಿನಿಂದ ಮೃದುಗೊಳಿಸುತ್ತದೆ. ಅದು ಕರುಣೆ, ಅಹಿಂಸೆ, ಕ್ಷಮೆಯಂತಹ ಗುಣಗಳನ್ನು ಸ್ವಭಾವಗೊಳಿಸುವ ಮತ್ತು ಅಹಂಕಾರವನ್ನು ಅಳಿಸುವ ಕಡೆಗೆ ಕರೆದೊಯ್ಯುತ್ತದೆ. ಆದರೆ, ರಾಜಕೀಯ ಮಾರುಕಟ್ಟೆಯಲ್ಲಿ ಬಳಕೆಯಾಗುತ್ತಿರುವ ಈ ಧಾರ್ಮಿಕ ಕಲ್ಟನ್ನು ಧರ್ಮದ ಒಳಗಣ್ಣಿನಿಂದ ಕಿತ್ತು ಸಂಪೂರ್ಣವಾಗಿ ಬಾಹ್ಯಪ್ರದರ್ಶನದ ವಸ್ತುವನ್ನಾಗಿ (Performative / Weaponized Religion) ಮಾಡುತ್ತದೆ.

ಆಗ ಅಲ್ಲಿ ಭಕ್ತಿ ಎಂದರೆ ಶಾಂತಿ ಅಲ್ಲ; ಅದು ಮತ್ತೊಂದು ಧರ್ಮದವರ ವಿರುದ್ಧ ಕೂಗುವ ಘೋಷಣೆಯಾಗುತ್ತದೆ. ಆರಾಧನಾ ಸ್ವಾತಂತ್ರ್ಯ ಎಂದರೆ ಒಳಗಿನ ಜ್ಞಾನೋದಯವಲ್ಲ; ಅದು ಬೀದಿಯಲ್ಲಿ ತೋರುವ ತೋಳ್ಬಲ ಮತ್ತು ಆಕ್ರಮಣಶೀಲತೆಯಾಗುತ್ತದೆ. ಇದರ ಪರಿಣಾಮವಾಗಿ, ಧರ್ಮದ ಪಾವಿತ್ರ್ಯತೆ ಸಂಪೂರ್ಣವಾಗಿ ಕಲುಷಿತಗೊಂಡು, ಜನರ ಮನಸ್ಸುಗಳು ಕಲ್ಲಾಗುತ್ತವೆ. ನಾಗರಿಕ ಸಮಾಜದಲ್ಲಿ ಹೆಣ್ಣುಮಕ್ಕಳನ್ನು ಬೆತ್ತಲೆಗೊಳಿಸಿ ನಡೆಸುವ ದೌರ್ಜನ್ಯವನ್ನು ಕಂಡು ಅಥವಾ ಸಂಘರ್ಷಗಳಲ್ಲಿ ನೆನೆದ ಸಮಾಜದ ರಕ್ತವನ್ನು ಕಂಡು ಕಣ್ಣೀರು ಹಾಕಬೇಕಾಗಿದ್ದ ಮನುಷ್ಯನ ಆಧ್ಯಾತ್ಮಿಕ ಸಂವೇದನೆಯನ್ನು ಈ ರಾಜಕೀಯದ ಧಾರ್ಮಿಕ ಕಲ್ಟ್ ಸಂಪೂರ್ಣವಾಗಿ ಕಟುಗೊಳಿಸಿ, ಸಾಯಿಸಿಬಿಡುತ್ತದೆ.

share
ಯೋಗೇಶ್ ಮಾಸ್ಟರ್
ಯೋಗೇಶ್ ಮಾಸ್ಟರ್
Next Story
X