Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಮನೋ ಚರಿತ್ರ
  5. ಮನಸ್ಸಿನಂತೆ ಮಹಾದೇವ

ಮನಸ್ಸಿನಂತೆ ಮಹಾದೇವ

ವಾರ್ತಾಭಾರತಿವಾರ್ತಾಭಾರತಿ16 March 2025 9:49 AM IST
share
ಮನಸ್ಸಿನಂತೆ ಮಹಾದೇವ

ಈ ಪ್ರಕೃತಿಯಲ್ಲಿ ಯಾವುದು ಜೀವಂತವಾಗಿರುವುದೋ ಮತ್ತು ಅದಕ್ಕೊಂದು ತಡೆ ಇರುವುದಿಲ್ಲವೋ ಅದಕ್ಕೆ ತನ್ನನ್ನು ತಾನು ಗುಣಪಡಿಸಿಕೊಳ್ಳುವ ಸಾಮರ್ಥ್ಯವಿರುತ್ತದೆ.

ಪ್ರಾಣಿ, ಪಕ್ಷಿ ಮತ್ತು ಸಸ್ಯಗಳು ತಮ್ಮ ಉಳಿಯುವಿಕೆಗೆ ತಮ್ಮ ಮಟ್ಟಿಗೆ ಹೋರಾಟವನ್ನು ಮಾಡುವ ಸಾಮರ್ಥ್ಯವನ್ನು ಹೊಂದಿರುತ್ತವೆ. ಅವುಗಳ ಸಾಮರ್ಥ್ಯವನ್ನು ತಡೆಯುವಂತಹ ಪ್ರತಿಬಂಧಕಗಳಿದ್ದು ಮತ್ತು ಅವುಗಳ ಶಕ್ತಿಗೆ ಮೀರಿರುವ ಶಕ್ತಿಯೇ ಅವುಗಳೊಂದಿಗೆ ಸೆಣಸಾಟಕ್ಕಿಳಿದರೆ ಸೋಲೊಪ್ಪುತ್ತವೆ. ಆದರೆ ಕಡೆಯ ಜೀವ ಇರುವವರೆಗೂ ಅದು ಹೋರಾಡಿಯೇ ತೀರುತ್ತದೆ. ಇದು ಅವುಗಳಿಗೆ ಎದುರಾಗುವ ರೋಗ, ಪ್ರಕೃತಿಯ ವಿಕೋಪ ಹಾಗೂ ಹವಾಮಾನ ವ್ಯತ್ಯಯ ಮತ್ತು ಇತರ ಜೀವಿಗಳಿಂದ ದಾಳಿ; ಯಾವುದೇ ಆಗಿರಬಹುದು.

ಹಾಗೆಯೇ ಪ್ರಾಣಿ ಪಕ್ಷಿ ಮತ್ತು ಸಸ್ಯಗಳಂತೆಯೇ ಪ್ರಕೃತಿಯ ಭಾಗವಾಗಿರುವ ಮನುಷ್ಯನಿಗೂ ಆ ಸಾಮರ್ಥ್ಯ ಇದೆ. ಮನಸ್ಸಿಗೂ ಕೂಡಾ ಈ ಶಕ್ತಿ ಇದೆ. ಮನುಷ್ಯನ ಮೆದುಳೂ ಕೂಡಾ ಸರಿಯಾದ ನಿರ್ದೇಶನ ದೊರಕಿದ ಪಕ್ಷದಲ್ಲಿ ತನ್ನನ್ನು ತಾನು ಸರಿಹೊಂದಿಸಿಕೊಳ್ಳುವ ಮತ್ತು ಅಗತ್ಯವಾಗಿರುವ ಬದಲಾವಣೆಗೆ ಒಗ್ಗಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ. ಮನುಷ್ಯನ ಇಡೀ ಜೈವಿಕ ಅಸ್ತಿತ್ವವೇ ತನ್ನ ಉಳಿವಿಗೆ ಹೋರಾಡುವ ಮತ್ತು ತೊಂದರೆಯನ್ನು ನಿರೋಧಿಸುವ ಅಥವಾ ತಡೆಯುವ ಶಕ್ತಿಯನ್ನು ಹೊಂದಿದೆ. ಆದರೆ ಆ ಬಲದ ಬಳಕೆಗೆ ಅಥವಾ ವಿಸ್ತರಣೆಗೆ ಅವಕಾಶವಾಗದಂತೆ ಅನೇಕ ತಡೆಗಳನ್ನು ಕೂಡಾ ತಾನೇ ಸೃಷ್ಟಿಸಿಕೊಂಡಿದ್ದಾನೆ.

ಅದರಲ್ಲಿ ಬಹಳ ಮುಖ್ಯವಾದ ತಡೆಯೆಂದರೆ ಮನಸ್ಸಿನ ಸಂಕೀರ್ಣಮಯ ಸ್ವಭಾವ.

ಅದರಲ್ಲಿಯೂ ಮನಸ್ಸು ಖಂಡಿತವಾಗಿಯೂ ತನ್ನ ಸಮಸ್ಯೆಗಳನ್ನು ತಾನೇ ಸೃಷ್ಟಿಸಿಕೊಳ್ಳುವುದು, ತಾನೇ ಬಳಲುವುದು, ತಾನೇ ಸಹಾಯಕ್ಕಾಗಿ ಅಂಗಲಾಚುವುದು, ಸಹಾಯ ದೊರಕುವಾಗ ತಾನೇ ಅದರಿಂದ ತಪ್ಪಿಸಿಕೊಳ್ಳುವುದು ಅಥವಾ ನಿರಾಕರಿಸುವುದು.

ಮೆದುಳು ತನ್ನನ್ನು ತಾನು ಸರಿಹೊಂದಿಸಿಕೊಳ್ಳುವುದಕ್ಕೆ ಅದಕ್ಕೆ ಬೇಕಾಗಿರುವ ಮಾರ್ಗವೆಂದರೆ ಸರಿಯಾದ ಆಲೋಚನೆಗಳು ಮತ್ತು ಅನುಭವಗಳು. ಇದನ್ನು ನ್ಯೂರೋಪ್ಲ್ಯಾಸ್ಟಿಸಿಟಿ ಎಂದು ಕರೆಯುತ್ತಾರೆ. ಸೂಕ್ತ ತರಬೇತಿಗಳ ಮೂಲಕ ನಮ್ಮ ಮನೋವಿನ್ಯಾಸಗಳು ಮತ್ತು ಭಾವಗ್ರಹಿಕೆಗಳನ್ನು ಸರಿಯಾಗಿ ರೂಪುಗೊಳಿಸಬಹುದು.

ಬೇಡದ ಆಲೋಚನೆಗಳ ಬದಲಾಗಿ ಸೂಕ್ತ ಆಲೋಚನೆಗಳನ್ನು ಪ್ರಜ್ಞಾಪೂರ್ವಕವಾಗಿ ಮಾಡುವುದು ಮತ್ತು ನಕಾರಾತ್ಮಕ ಭಾವನೆಗಳ ಬಗ್ಗೆ ಎಚ್ಚೆತ್ತುಕೊಂಡು ಉದ್ದೇಶಿತ ಸಕಾರಾತ್ಮಕ ವಿಷಯಗಳನ್ನು ಗ್ರಹಿಸುತ್ತಾ ಪರಿಭಾವಿಸುವುದರಿಂದ ನ್ಯೂರಾನ್ ಸಂಪರ್ಕಗಳು ಸಮರ್ಪಕವಾಗಿ ಮನುಷ್ಯನ ಮನಸ್ಸು ಮತ್ತು ಜೈವಿಕ ಅಸ್ತಿತ್ವ ಗುಣಮುಖವಾಗಲು ಸಹಕರಿಸುತ್ತವೆ.

ಸತತವಾಗಿ ಮಾಡುವ ವಿಚಾರಗಳು ಮತ್ತು ಮೂಡುವ ಭಾವನೆಗಳು ನೇರವಾಗಿ ದೇಹದ ಆರೋಗ್ಯದ ಮೇಲೆ ಪ್ರಭಾವ ಬೀರುತ್ತವೆ. ಒತ್ತಡ ಮತ್ತು ಆತಂಕ ಅಥವಾ ಭಯ ನಮ್ಮಲ್ಲಿರುವ ರೋಗನಿರೋಧಕ ಶಕ್ತಿಯನ್ನು ದುರ್ಬಲಗೊಳಿಸುತ್ತವೆ. ಅದೇ ರೀತಿ ಶಾಂತ ಚಿತ್ತತೆ ಮತ್ತು ಸಕಾರಾತ್ಮಕವಾದ ಭಾವನೆಗಳು ಮನೋದೈಹಿಕ ಪ್ರಭಾವದಿಂದ ಅಥವಾ ಸೈಕೋಸೊಮ್ಯಾಟಿಕ್ ಕನೆಕ್ಷನ್ ಮೂಲಕ ಇಮ್ಯುನಿಟಿಯನ್ನು ಬಲಗೊಳಿಸುತ್ತದೆ.

ಯಾವಾಗ ವ್ಯಕ್ತಿಗಳು ತಾವು ಗುಣಮುಖರಾಗುತ್ತೇವೆ ಎಂದು ವಿಶ್ವಾಸಿಸುತ್ತಾರೋ ಅವರ ದೇಹ ಗುಣಮುಖವಾಗಲು ಪ್ರಾರಂಭಿಸುತ್ತದೆ. ಕೆಲವು ಸಲ ಸರಿಯಾದ ಚಿಕಿತ್ಸೆ ದೊರಕದೆ ಸುಳ್ಳಿನ ಚಿಕಿತ್ಸೆ ನೀಡಿದರೂ ಕೂಡಾ. ಇದಕ್ಕೆ ಪ್ಲಸೀಬೋ ಪರಿಣಾಮ ಎನ್ನುವರು. ಮನಸ್ಸಿನ ವಿಶ್ವಾಸದ ಗಾಢತೆಯನ್ನು ಇದು ಅವಲಂಬಿಸಿದೆ.

ಈ ಜಗತ್ತಿನಲ್ಲಿ ಚೈತನ್ಯ ತನ್ನ ಬೇಕು ಬೇಡಗಳನ್ನು ಮತ್ತು ಆಗುಹೋಗುಗಳನ್ನು ನೋಡಿಕೊಳ್ಳುವಂತೆ ನಮ್ಮ ಮನಸ್ಸಿನ ಮತ್ತು ದೇಹದ ಚೈತನ್ಯವೂ ಕೂಡಾ ಸಚೇತನವಾಗಲು ಹಲವಾರು ತಂತ್ರಗಳನ್ನು ಭಾರತವೂ ಸೇರಿದಂತೆ ಚೀನಾ, ಜಪಾನ್, ಈಜಿಪ್ಟ್, ಗ್ರೀಸ್ ಅಲ್ಲದೆ ಎಷ್ಟೋ ಬುಡಕಟ್ಟುಗಳು ಕಂಡುಕೊಂಡಿವೆ. ಇವುಗಳ ವಿಶ್ವಾಸವೇ ವಿಚಾರಗಳು, ಭಾವನೆಗಳು ಮತ್ತು ದೇಹದ ಸಾವಯವ ಅಂಶಗಳೆಲ್ಲವೂ ಕೂಡಾ ಸರಿಯಾಗಿ ಪ್ರೇರೇಪಿತಗೊಂಡು ತಮಗಿರುವ ಅಡೆತಡೆಗಳನ್ನು ನಿವಾರಿಸಿಕೊಂಡರೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಆರೋಗ್ಯವಾಗಿರಬಹುದು ಎಂಬುದು. ಪ್ರಾಣ ಅಥವಾ ಜೀವ ಅಥವಾ ಕೀ ಎಂಬ ಚೈತನ್ಯವು ನಿರಂತರವಾಗಿ ಹರಿಯುತ್ತಿದ್ದು, ಅದರ ಪ್ರವಹನೆಗೆ ತಡೆಯುಂಟಾದಾಗ ರೋಗವುಂಟಾಗುತ್ತದೆ. ನಿರಾತಂಕವಾಗಿ ಮತ್ತು ಮುಕ್ತವಾಗಿ ಈ ಚೈತನ್ಯವು ಹರಿಯುವುದೇ ಆದಲ್ಲಿ ಮನುಷ್ಯನ ಸಾವಯವ ಅಸ್ತಿತ್ವವು ಸಮತೋಲನವನ್ನು ಸಾಧಿಸಿಕೊಂಡು ಹದದಲ್ಲಿ ಇರುವುದು ಎಂದು ಅನುಭವಿಗಳು ಹೇಳುತ್ತಾರೆ.

ಮನುಷ್ಯನಲ್ಲಿರುವ ಭಯ, ಅಪರಾಧ ಪ್ರಜ್ಞೆಗಳು ಕೂಡಾ ಗುಣಮುಖವಾಗುವುದರಲ್ಲಿ ಇರುವಂತಹ ಹಿನ್ನಡೆಯೇ. ಕೃತಜ್ಞತಾಭಾವ, ಶಾಂತಚಿತ್ತತೆಯಿಂದ ಇರುವುದು, ಕ್ಷಮಾಗುಣ ಮತ್ತು ಕರುಣೆಯಿಂದ ಇರುವುದು ಗುಣಪಡಿಸುವ ಗುಣಗಳನ್ನು ಹೊಂದಿರುತ್ತದೆ.

ಒಟ್ಟಾರೆ ಮನಸ್ಸಿನಂತೆ ಮಹಾದೇವ ಎಂಬುವುದನ್ನು ವಿಶ್ವಾಸದ ಮತ್ತು ಸಕಾರಾತ್ಮಕ ನಡೆಗಳ ಅನೇಕ ಪ್ರಕರಣಗಳು ದೃಢೀಕರಿಸುತ್ತವೆ.

ತನ್ನ ತಾನು ಮಾನಸಿಕವಾಗಿ ಗುಣಪಡಿಸಿಕೊಳ್ಳಲು ಅನೇಕ ಮಾರ್ಗಗಳು, ತಂತ್ರಗಳು ಮನೋವೈಜ್ಞಾನಿಕ ನೆಲೆಗಳಲ್ಲಿಯೂ ಕೂಡಾ ಗಮನಿಸಲಾಗಿದೆ. ಆದರೆ ಅದರ ಬಗ್ಗೆ ಅರಿವೇ ಇಲ್ಲದೆ ನರಳುವಿಕೆಯನ್ನು ಪೂರ್ವ ಜನ್ಮದ ಕರ್ಮ ಎಂದೋ, ಹಣೆಬರಹ ಎಂದೋ, ಶಾಪವೆಂದೋ ಸಮ್ಮತಿಸಿಬಿಡುವಂತಹ ವಿಷಯಗಳೂ ಉಂಟು. ಇದರಿಂದಾಗಿ ತಾವು ತಮ್ಮ ಮನಸ್ಸಿಗೆ ತರಬೇತಿ ನೀಡುವ ಮೂಲಕ ತಮ್ಮ ಸಾವಯವ ಅಸ್ತಿತ್ವವನ್ನು ಉನ್ನತಿಗೇರಿಸಿಕೊಳ್ಳುವುದರ ಬದಲು ಎದುರಾಗುವ ಸಮಸ್ಯೆಯನ್ನು ಒಪ್ಪಿಕೊಂಡು ಶರಣಾಗಿಬಿಡುವರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X