Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಮನೋ ಚರಿತ್ರ
  5. ಪೌರಾಣಿಕ ಮನಸ್ಸು

ಪೌರಾಣಿಕ ಮನಸ್ಸು

ಯೋಗೇಶ್ ಮಾಸ್ಟರ್ಯೋಗೇಶ್ ಮಾಸ್ಟರ್21 Sept 2025 4:03 PM IST
share
ಪೌರಾಣಿಕ ಮನಸ್ಸು

ಪೌರಾಣಿಕ ಪ್ರಸಂಗಗಳನ್ನು, ಪಾತ್ರಗಳನ್ನು, ಅದರ ಅಂಶಗಳನ್ನು ಮತ್ತು ಅವುಗಳಲ್ಲಿನ ಕಾರಣ ಹಾಗೂ ಪರಿಣಾಮಗಳನ್ನು ಮನುಷ್ಯನ ಚಿಂತನೆ, ಸ್ಪಂದನೆ ಮತ್ತು ವರ್ತನೆಗಳ ಮೇಲೆ ಪ್ರಭಾವ ಬೀರುವ ವಿಚಾರಗಳನ್ನೂ ಮನೋವಿಜ್ಞಾನದಲ್ಲಿ ಅಧ್ಯಯನ ಮಾಡಲಾಗುತ್ತದೆ. ಪುರಾಣಗಳನ್ನು ಕಟ್ಟುಕತೆಗಳೆಂದು ತಳ್ಳಿ ಹಾಕುವವರೊಂದು ಕಡೆಯಾದರೆ, ಅವುಗಳು ಆ ಕಾಲದಲ್ಲಿ ಹಾಗಿದ್ದವು, ನಿಜವಾಗಿದ್ದವು, ಈಗ ಕೆಟ್ಟು ಹೋಗಿರುವ ಕಾಲದ ಅನುಗುಣವಾಗಿ ಹಾಗಾಗುತ್ತಿಲ್ಲ ಎಂದು ನಂಬುವವರೂ ಮತ್ತೊಂದು ಕಡೆ ಇದ್ದಾರೆ. ಇವರಿಬ್ಬರ ನಡುವೆ ಸಂಘರ್ಷವೂ ಕೂಡಾ ಗಮನಿಸಬಹುದಾಗಿದೆ. ಆದರೆ ಪುರಾಣಗಳನ್ನು ಇದು ಹೀಗೆಯೇ ಎಂದು ಏಕಪಕ್ಷೀಯವಾಗಿ ನಿರ್ಧಾರಕ್ಕೆ ಧುಮುಕುವ ಬದಲು ಅವುಗಳೂ ಕೂಡಾ ವಿವಿಧ ಕಾಲಘಟ್ಟಗಳಲ್ಲಿ ಬದುಕಿ ಬಾಳಿದ ಮನುಷ್ಯನ ಚಿಂತನೆ, ಅರಿವು, ಗ್ರಹಿಕೆ, ಅನುಭವ; ಒಟ್ಟಾರೆ ಮಾನುಷ ಮನಸ್ಸಿನ ಉತ್ಪನ್ನ ಎಂದು ನೋಡಿದರೆ ಅಧ್ಯಯನಕ್ಕೆ ಸೂಕ್ತ ಸಂಪನ್ಮೂಲ ವಿಷಯವಾಗುತ್ತದೆ.

ಯಾವುದೇ ದೇಶದ, ಯಾವುದೇ ಕಾಲದ ಮಹಾಕಾವ್ಯಗಳಾಗಲಿ ಅಥವಾ ಪುರಾಣದ ಕತೆಗಳಾಗಲಿ ಮನುಷ್ಯನ ಮಾನಸಿಕ ಮೂಲರೂಪಗಳನ್ನು (psychological archetypes) ಪ್ರತಿನಿಧಿಸುತ್ತವೆ. ಈ ಭೂಮಿಯ ಮೇಲೆ ಮನುಷ್ಯ ಇತರ ಜೀವಜಂತುಗಳಂತೆ ಹುಟ್ಟಿದಾಗಿನಿಂದ ಇದುವರೆಗೂ ತನ್ನ ಜೀವ ಮತ್ತು ಜೀವನವನ್ನು ಉಳಿಸಿಕೊಳ್ಳುವ ವಿಷಯದಲ್ಲಿಯೇ ಹೋರಾಟಗಳನ್ನು ಮಾಡುತ್ತಾ ಇರುವುದು. ಅವವೇ ವಿಷಯಗಳು ಮತ್ತು ಚಟುವಟಿಕೆಗಳು ಬೇರೆ ಬೇರೆ ರೂಪಗಳಲ್ಲಿ ಪ್ರಕಟಗೊಳ್ಳುತ್ತಾ ಇರುತ್ತವೆ. ನಾವು ಸಾವಿರಾರು ವರ್ಷಗಳಿಂದ ವಿವಿಧ ಬಗೆಗಳಲ್ಲಿ, ವಿವಿಧ ರೂಪಕಗಳಲ್ಲಿ ಪ್ರಕಟಗೊಂಡು ಪ್ರಚಾರ ಪಡೆಯುತ್ತಿರುವ ಇವುಗಳನ್ನು ಸಾಕ್ಷೀಕರಿಸುತ್ತಾ ಬಂದಿದ್ದೇವೆ.

ಮನುಷ್ಯನ ಮತ್ತು ಮನುಷ್ಯಕುಲದ ಹುಟ್ಟು ಪ್ರಾರಂಭವಾಗಿರುವುದೇ ಅಳಿಯುವ ಭಯದಿಂದ. ತಾನು ಉಳಿಯುವ ಮತ್ತು ತನ್ನವರನ್ನು ಉಳಿಸಿಕೊಳ್ಳುವ ಹೋರಾಟಗಳೆಲ್ಲವನ್ನೂ ಮನುಷ್ಯ ಮಹಾಕಾವ್ಯ ಮತ್ತು ಪುರಾಣಗಳ ರೂಪಗಳಲ್ಲಿ ವಿವಿಧ ಸಾಂಸ್ಕೃತಿಕ ಪ್ರಕಟಣೆಗಳಲ್ಲಿ ಪೀಳಿಗೆಯಿಂದ ಪೀಳಿಗೆಗೆ ದಾಟಿಸುತ್ತಾ ಬಂದಿದ್ದಾನೆ.

ವಿವಿಧ ದೇಶ ಕಾಲಗಳಲ್ಲಿ ಅವನ ಹೋರಾಟದ ಕತೆಗಳು ಸ್ಥಳೀಯ ಪರಿಸರ, ವಾತಾವರಣ ಮತ್ತು ಸಾಮಾಜಿಕ ರೂಢಿಗಳಿಗೆ ಅನುಸಾರವಾಗಿ ರೂಪುಗೊಂಡಿವೆ. ಆದರೂ ಪುರಾಣಗಳು ಮತ್ತು ಮಹಾಕಾವ್ಯಗಳು ಅದೆಷ್ಟೇ ಮಗ್ಗುಲುಗಳನ್ನು ಬದಲಿಸಿದರೂ, ಆಯಾಮಗಳನ್ನು ಪಡೆದುಕೊಂಡರೂ ಪದೇ ಪದೇ ಮರಳುವುದು ಅದೇ ಅಸ್ತಿತ್ವವನ್ನು ಉಳಿಸಿಕೊಳ್ಳುವ ಮತ್ತು ನಾಶವಾಗದಿರುವ ವಿಷಯಗಳಿಗೆ.

ಉಳಿವಿನ ಬಯಕೆ ಮತ್ತು ಸಾವಿನ ಭಯಗಳೆಂಬ ಪ್ರಧಾನ ಉದ್ದೇಶಗಳು ರೂಪಕಗಳಾದವು. ಸಮೂಹಗಳನ್ನು ಉಳಿಸುವ ಧೈರ್ಯಶಾಲಿ ಮತ್ತು ಶೂರ ನಾಯಕರು ಭರವಸೆಯನ್ನು ನೀಡುವರು. ಜನರನ್ನು ಹಿಂಸಿಸಿ ನಾಶ ಮಾಡುವ ದೈತ್ಯಾಕಾರದ ದುಷ್ಟರು ಭಯ ಮತ್ತು ಆತಂಕವನ್ನು ಹುಟ್ಟಿಸುವರು. ಇಂತಹ ರೂಪಕಗಳನ್ನು ಕಟ್ಟಿಕೊಡುತ್ತಲೇ ಇವತ್ತಿನವರೆಗೂ ನಾವು ನಮ್ಮ ಅರಿವಿನ ಒಲವು ಮತ್ತು ನಿಲುವುಗಳನ್ನು ವಿಕಾಸಕ್ಕೆ ಒಡ್ಡಿಕೊಂಡಿಕೊಂಡು ಬಂದಿದ್ದೇವೆ. ಒಟ್ಟಾರೆ ಹೇಳುವುದಾದರೆ, ಪುರಾಣಗಳು ಬದುಕನ್ನು ಉಳಿಸಿಕೊಳ್ಳಲು ಹೆಣಗಾಡಿರುವ ನಮ್ಮ ಪೂರ್ವಜರ ಕಥನದ ಸಂಸ್ಕೃತಿಯ ನಕಾಶೆಗಳು. ಆದರೆ ಇವು ರೂಪಕಗಳ ಮತ್ತು ಒಗಟುಗಳ ರೂಪದಲ್ಲಿರುವುದನ್ನು ನಾವು ಅಲಕ್ಷಿಸಬಾರದು.

ಆದಿಮ ಕಾಲದಲ್ಲಿ ಮನುಷ್ಯನ ಮೊದಲ ಗುಂಪುಗಳು ತಮ್ಮ ಬದುಕು ಬವಣೆಗಳನ್ನು ಚಿತ್ರಗಳ ಮೂಲಕ, ಕತೆಗಳ ಮೂಲಕ ಪ್ರಕಟಿಸಿದರು. ಚಿತ್ರ ಮಾಧ್ಯಮ ಅಕ್ಷರ ಮಾಧ್ಯಮದ ತಾಯಿ. ಮನುಷ್ಯನ ಪ್ರಕಟಣೆಯ ಮೊದಲ ಮಾಧ್ಯಮವಾದ ಚಿತ್ರಗಳ ನಂತರ ನುಡಿ ಮತ್ತು ಲಿಪಿಗಳು ಹುಟ್ಟಿದ್ದು. ಅವೆಲ್ಲದರಲ್ಲಿಯೂ ಅವರು ತಮ್ಮ ಆಹಾರಕ್ಕಾಗಿ ಪಡುವ ಬವಣೆ, ಎದುರಾಗುವ ಅಪಾಯ, ತಮ್ಮ ಮತ್ತು ತಮ್ಮವರ ರಕ್ಷಣೆಯಂತಹ ವಿಷಯಗಳೇ ಇರುತ್ತಿದ್ದದ್ದು. ಮನುಷ್ಯ ಸಾಮಾಜಿಕ ಪ್ರಾಣಿಯಾದ್ದರಿಂದ ತಂಡಗಳಲ್ಲಿ ಇರುವುದು ಅನಿವಾರ್ಯವೂ, ತಮ್ಮ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಹಾಗೂ ಅಪಾಯವನ್ನು ಎದುರಿಸಲು ಅಗತ್ಯವೂ ಆಗಿತ್ತು. ಹಾಗಾಗಿ ಯಾರು ತಂಡವನ್ನು ಮುನ್ನಡೆಸುವ, ಪಾಲಿಸುವ, ಮಾರ್ಗದರ್ಶನ ಮಾಡುವಂತಹ ಸಾಮರ್ಥ್ಯವನ್ನು ಪ್ರಕಟಿಸುತ್ತಿದ್ದರೋ ಅವರು ನಾಯಕರಾಗುತ್ತಿದ್ದರು. ಯಾರು ಅವರ ಒಟ್ಟು ಸಾಮುದಾಯಿಕ ಶಕ್ತಿಗೆ ಬೆದರಿಕೆ ಒಡ್ಡುತ್ತಿದ್ದರೋ, ಸಾಮಾಜಿಕ ಬಂಧವನ್ನು ಸಡಿಲಗೊಳಿಸುತ್ತಿದ್ದರೋ ಅವರನ್ನು ಸಮೂಹದಿಂದ ಬಹಿಷ್ಕರಿಸಲಾಗುತ್ತಿತ್ತು. ಒಳಿತಿಗೆ ಎಂದು ಒಂದು ಆಚರಣೆ, ಕೇಡನ್ನು ದೂರೀಕರಿಸಲೊಂದು ಆಚರಣೆಗಳೂ ಅವರವರ ಗ್ರಹಿಕೆಗಳ ಪ್ರಕಾರ ಪರಿಕಲ್ಪನೆಗಳು ಮೂಡಿದವು.

ವಿವಿಧ ಮತ್ತು ನಿರ್ದಿಷ್ಟ ಆಚರಣೆಗಳು ಆಯಾ ಭೌಗೋಳಿಕ ಪ್ರದೇಶದ ಹವಾಗುಣ, ಪ್ರಾಕೃತಿಕ ಪರಿಸರ, ಆಹಾರ ಮತ್ತು ಆಶ್ರಯ, ಅನುಕೂಲಗಳು ಮತ್ತು ಅಪಾಯಗಳು; ಇವೆಲ್ಲವೂ ಸಮಯ ಸರಿದಂತೆ ಪದೇ ಪದೇ ಮರುಕಳಿಸುತ್ತಾ ಮನುಷ್ಯನ ಮನಸ್ಥಿತಿಯ ಭಾಗಗಳಾಗಿಬಿಟ್ಟವು. ಅವು ಚಿಂತನಾ ಕ್ರಮಗಳಲ್ಲಿಯೂ ಮತ್ತು ಪರಿಭಾವಿಸುವ ರೀತಿಯಲ್ಲಿಯೂ ಪೌರಾಣಿಕ ಮತ್ತು ಮಹಾಕಾವ್ಯದ ವಿಷಯಗಳನ್ನು ತಮ್ಮದಾಗಿಸಿಕೊಳ್ಳುತ್ತಿದ್ದರು. ಹೀಗೆ ಪುರಾಣಗಳು ಮತ್ತು ಮಹಾಕಾವ್ಯಗಳು ಮನುಷ್ಯನ ಸಂಕಲಿತ ಮನಸ್ಥಿತಿಯ ಅರಿವು ಮತ್ತು ಗ್ರಹಿಕೆಯ ಅಭಿವ್ಯಕ್ತಿಗಳಾದವು. ಅವು ಪೀಳಿಗೆಯಿಂದ ಪೀಳಿಗೆಗಳಿಗೆ ಮುಂದುವರಿಯುತ್ತಾ, ಅದೇ ಉಳಿಯುವ ಬಯಕೆ ಮತ್ತು ನಾಶವಾಗುವ ಭಯಗಳು ಹಾಡುಗಳಾಗಿ, ಕತೆಗಳಾಗಿ ಮತ್ತು ಬೇರೆ ಬೇರೆ ಕಲಾಮಾಧ್ಯಮಗಳಾಗಿ ರೂಪುಗೊಳ್ಳುತ್ತಾ ಬಂದವು. ಒಟ್ಟಾರೆ ಮನೋಪುರಾಣವೆಂಬುದು ಮನುಷ್ಯನ ಒಲವು ಮತ್ತು ನಿಲುವುಗಳನ್ನು ಸಂಸ್ಕೃತಿಗಳ ಮೂಲಕ ಜೀವಂತವಾಗಿಡುವ ಅಭಿವ್ಯಕ್ತಿಯೇ ಆಯಿತು.

share
ಯೋಗೇಶ್ ಮಾಸ್ಟರ್
ಯೋಗೇಶ್ ಮಾಸ್ಟರ್
Next Story
X