Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಮನೋ ಚರಿತ್ರ
  5. ನಮಸ್ಕಾರ

ನಮಸ್ಕಾರ

ಯೋಗೇಶ್ ಮಾಸ್ಟರ್ಯೋಗೇಶ್ ಮಾಸ್ಟರ್12 Jan 2025 12:15 PM IST
share
ನಮಸ್ಕಾರ

‘ನಮಸ್ಕಾರ’ ಅಥವಾ ‘ನಮಸ್ತೆ’ ಎಂದು ಒಬ್ಬರನ್ನೊಬ್ಬರು ಕಂಡಾಗ ವಂದಿಸುತ್ತೇವೆ. ಇಡೀ ಜಗತ್ತೇ ಒಬ್ಬರನ್ನೊಬ್ಬರು ಗೌರವಿಸಲು ಒಂದಲ್ಲಾ ಒಂದು ಸಾಂಕೇತಿಕ ಗುರುತು ಅಥವಾ ಪದಗುಚ್ಛಗಳನ್ನು ಕಂಡುಕೊಂಡಿದೆ. ಒಬ್ಬರು ಮತ್ತೊಬ್ಬರಿಗೆ ಏನೇ ಸೇವೆಯನ್ನು ಸಲ್ಲಿಸಿದರೂ ಅದಕ್ಕೆ ಕೃತಜ್ಞತೆಗಳನ್ನು ಅರ್ಪಿಸಲೆಂದು ಧನ್ಯವಾದಗಳು ಅಥವಾ ಥ್ಯಾಂಕ್ಸ್ ಹೇಳುವುದು ಮತ್ತೊಂದು ಸರ್ವಕಾಲೀನ ಜಾಗತಿಕ ರೂಢಿ.

ಶೈಲಿಗಳು ಮತ್ತು ಹೇಳುವ ಪದಗಳು ಬೇರೆಯೇ ಹೊರತು, ಎಂಥಾ ಸಂಸ್ಕೃತಿ ಅಥವಾ ಪ್ರದೇಶವಾದರೂ ಮನುಷ್ಯರು ಪರಸ್ಪರ ಗೌರವಿಸುವ ಸಂಕೇತಗಳನ್ನು ಹೊಂದಿದೆ. ಅದರೊಟ್ಟಿಗೆ ಶುಭೋದಯ ಅಥವಾ ಗುಡ್ ಮಾರ್ನಿಂಗ್, ಶುಭದಿನ ಅಂತೆಲ್ಲಾ ಪರಸ್ಪರ ಆ ಹೊತ್ತಿಗೆ ತಕ್ಕಂತೆ ಒಳಿತಾಗಿರಲೆಂದು ಹಾರೈಸುವುದು ಒಂದು ಸಾಮಾಜಿಕ ವಾಡಿಕೆ.

ಪರಸ್ಪರರನ್ನು ಗೌರವಿಸುವ ಮತ್ತು ಒಳಿತನ್ನು ಹಾರೈಸುವ ಈ ಪರಿಕಲ್ಪನೆ ಯಾಕಾದರೂ, ಹೇಗಾದರೂ ಹುಟ್ಟಲಿ. ವಂದಿಸುವ ಮತ್ತು ಕೃತಜ್ಞತೆಗಳನ್ನು ಸಲ್ಲಿಸುವ ಈ ವಿಷಯ ಮಾತ್ರ ವ್ಯಕ್ತಿ ಮತ್ತು ಸಮೂಹಗಳಲ್ಲಿ ಮಾನಸಿಕ, ಭಾವನಾತ್ಮಕ ಮತ್ತು ಸಾಮಾಜಿಕ ಆಯಾಮಗಳನ್ನು ಹೊಂದಿದೆ.

ಮೊತ್ತ ಮೊದಲನೆಯದಾಗಿ ಸಮಾಜಜೀವಿಯಾದ ಮನುಷ್ಯನ ಸಂಬಂಧ ಮತ್ತು ಭಾವನಾತ್ಮಕ ತರಂಗಗಳನ್ನು ಪರಸ್ಪರ ಹಂಚಿಕೊಳ್ಳುವ ಬಂಧವಾಗಿದೆ. ಇದು ಸಂಪರ್ಕದ ಕೊಂಡಿ. ನಾನು ನಿನ್ನನ್ನು ಸ್ವಾಗತಿಸುತ್ತೇನೆ, ಗೌರವಿಸುತ್ತೇನೆ ಮತ್ತು ನಿನ್ನೊಂದಿಗೆ ಬಂಧವನ್ನು ಹೊಂದುತ್ತೇನೆ ಎಂದು ಧ್ವನಿಸುವುದೇ ಆಗಿರುತ್ತದೆ. ಮೊದಲು ಪರಸ್ಪರರಲ್ಲಿ ಸದ್ಭಾವನೆಗಳನ್ನು ಉಂಟು ಮಾಡುವುದರ ದ್ಯೋತಕವದು. ಪರಸ್ಪರರು ಸ್ವೀಕರಿಸುವ ಮತ್ತು ಒಳಗೊಳ್ಳುವ ಎಂಬ ಧ್ವನಿಯದು.

ಈ ಒಬ್ಬರಿಗೊಬ್ಬರು ವಂದಿಸುವ ಮತ್ತು ಸೇವೆಗೆ ಕೃತಜ್ಞತೆಯನ್ನು ಸಲ್ಲಿಸುವ ಈ ಹಾರೈಕೆ ಹಾಗೂ ವಂದನೆಗಳು ಪರಸ್ಪರರ ಮೆದುಳಿನಲ್ಲಿ ಡೊಪೊಮೈನ್ ಉತ್ಪತ್ತಿಯಾಗಿ ಮುದವಾದ ಮತ್ತು ಮಧುರವಾದ ಭಾವನೆಯನ್ನು ಉಂಟುಮಾಡುವುದರಲ್ಲಿ ಪರಿಣಾಮಕಾರಿಯಾಗಿಯೂ ಇರುತ್ತದೆ.

ಅದೆಷ್ಟು ರೂಢಿಯಾಗಿರುವುದೆಂದರೆ ಬಹಳಷ್ಟು ಜನರಲ್ಲಿ ಯಾವ ಭಾವನೆಯೂ ಇಲ್ಲದೆ ಯಾಂತ್ರಿಕವಾಗಿ ಮಾಡುವಷ್ಟರ ಮಟ್ಟಿಗೆ ಅಭ್ಯಾಸವಾಗಿರುವುದು. ಅದೊಂದು ಸಾಮಾಜಿಕ ನಡಾವಳಿಯಾದ್ದರಿಂದ ನಮಸ್ಕಾರ ಮಾಡಲೇ ಬೇಕು ಎಂದೂ ಮಾಡುತ್ತಾರೆ. ಅದು ಇನ್ನೊಂದು ಯಾಂತ್ರಿಕತೆಯ ತಾಂತ್ರಿಕ ಮಗ್ಗುಲು.

ಭಾವನಾತ್ಮಕವಾಗಿ ಒಳಗೊಳ್ಳುವಿಕೆಯ ಮತ್ತು ಸಾಮಾಜಿಕ ರೀತಿಯಲ್ಲಿ ರೂಢಿಯಾಗುವ ಈ ಬಗೆಯು ಆಯಾ ವ್ಯಕ್ತಿಗಳ ಮನಸ್ಥಿತಿ, ಧೋರಣೆ ಮತ್ತು ಸಮಸ್ಯೆಗಳನ್ನು ಸೂಚಿಸುವುದರಲ್ಲಿ ಒಂದು ಹಂತಕ್ಕೆ ತನ್ನ ಪಾತ್ರವನ್ನು ವಹಿಸುತ್ತದೆ.

ಶಾಲೆಗಳಲ್ಲಿ ತರಗತಿಯಲ್ಲಿ ಅಲ್ಲದೆ ಹೊರಗೆ ಶಿಕ್ಷಕರು ಹಾದು ಹೋಗುವಾಗ ವಿದ್ಯಾರ್ಥಿಗಳು ‘ಗುಡ್ ಮಾರ್ನಿಂಗ್’ ಎಂದೋ ಮತ್ತೇನೋ ಆ ಹೊತ್ತಿಗೆ ತಕ್ಕಂತೆ ವಂದಿಸುತ್ತಾರೆ. ಆದರೆ ಬಹಳಷ್ಟು ಶಿಕ್ಷಕರು ಪ್ರತಿಯಾಗಿ ವಂದಿಸುವುದಿಲ್ಲ. ಹಾಗೆಯೇ ನಡೆದು ಹೋಗುತ್ತಾರೆ. ಅಧಿಕಾರಿಗಳು ತಮ್ಮ ಕಚೇರಿಗೆ ಬಂದಾಗ ಅವರ ಕೆಳಗಿನವರು ವಂದಿಸುತ್ತಾರೆ. ಆದರೆ ಇವರು ಪ್ರತಿಯಾಗಿ ವಂದಿಸುವುದೇ ಇಲ್ಲ. ಇದು ಅಧಿಕಾರದ ಅಹಂಕಾರ. ತಾವು ವಂದನೆಗೆ ಯೋಗ್ಯರು. ತಮಗಿಂತ ಕೆಳಗಿನವರಿಗೆ ತಾವೇಕೆ ವಂದಿಸಬೇಕು ಎಂಬ ಧೋರಣೆ. ಅದೇ ಅವರು ತಮಗಿಂತ ಹಿರಿಯ ಅಧಿಕಾರಿಗಳು ಬಂದಾಗ ಎದ್ದು ನಿಂತು ಗೌರವ ಸಲ್ಲಿಸುತ್ತಾರೆ. ಹಾಗೆಯೇ ಭಯ ಭಕ್ತಿ ತೋರುತ್ತಾರೆ. ಎಷ್ಟೋ ಅಧಿಕಾರಿಗಳು, ಸಚಿವರು, ಶಿಕ್ಷಕರು, ಯಜಮಾನರುಗಳು ಪ್ರತಿಯಾಗಿ ವಂದಿಸುವುದೇ ಇಲ್ಲ. ಅದೇ ಅವರು ತಮಗೆ ವಂದಿಸದಿದ್ದರೆ, ಅವರು ಅವರ ಪಾಡಿಗೆ ಕೆಲಸದಲ್ಲಿ ತೊಡಗಿದ್ದರೆ ಇವರ ಗಮನಕ್ಕೆ ಬರುತ್ತದೆ. ತಮಗೆ ನಮಸ್ಕಾರ ಹೇಳದೇ ಇರುವಷ್ಟು ಸೊಕ್ಕು ಬಂದಿದೆ ಎಂದೇ ತರಾಟೆಗೆ ತೆಗೆದುಕೊಳ್ಳುತ್ತಾರೆ. ಇವರಿಗೆ ಗೌರವವೆಂದರೆ ಶ್ರೇಣಿಯನುಸಾರವಾಗಿ ಅಧೀನದಲ್ಲಿದ್ದು ಮಾಡುವಂತಹ ಕಡ್ಡಾಯ ಮರ್ಯಾದೆ ಅಥವಾ ಪ್ರೋಟೋಕಾಲ್ ಎನ್ನುವಂತಹ ನಡಾವಳಿ.

ಮನಶಾಸ್ತ್ರೀಯವಾಗಿ ಇದನ್ನು ಗಮನಿಸುವುದಾದರೆ ವಂದನೆಗಳಿಗೆ ಪ್ರತಿವಂದನೆಯನ್ನು ಸಲ್ಲಿಸದಿರುವ ಧೋರಣೆಯು ವ್ಯಕ್ತಿಯಲ್ಲಿ ಮೇಲರಿಮೆಯು (ಸುಪಿರಿಯಾರಿಟಿ ಕಾಂಪ್ಲೆಕ್ಸ್) ಇರುವುದಲ್ಲದೆ, ಅತ್ಯಾತ್ಮರತಿಯ (ಸೂಪರ್ ನಾರ್ಸಿಸಿಸ್ಟ್) ಸಮಸ್ಯೆಯಾಗಿರುತ್ತದೆ. ಮನೋಭಾವವನ್ನು ಆರ್ದ್ರವಾಗಿರಿಸುವಂತಹ ಸಹಾನುಭೂತಿಯ ಕೊರತೆಯೂ ಕಾಣುತ್ತದೆ. ಕೆಲವೊಂದು ಸಲ ವ್ಯಕ್ತಿಗಳಿಂದ ಭಾವಾಂತರ (ಎಮೋಶನಲ್ ಡಿಸ್ಟೆನ್ಸ್) ಇಟ್ಟುಕೊಳ್ಳಬೇಕೆನ್ನುವ ಅವರ ಅಹಂಕಾರದ (ಇಗೋ) ರಕ್ಷಣಾ ತಂತ್ರವೂ ಆಗಿರಬಹುದು. ಮತ್ತೆ ಕೆಲವರಿಗೆ ವಂದಿಸುವ ಮೂಲಕ ತಾನು ಆತನಿಗೆ ಬಾಗುವುದಿಲ್ಲ ಎಂಬ ಕಾಠಿಣ್ಯದ ಸಂದೇಶವನ್ನು ಕೂಡಾ ರವಾನೆ ಮಾಡುತ್ತಿರಬಹುದು.

ದೋಷಪೂರಿತ ವ್ಯಕ್ತಿತ್ವದ ಸಮಸ್ಯೆಗಳಿರುವವರಿಗೆ ಅಥವಾ ಪೂರಕ ನರವಿಕಾಸ (ನ್ಯೂರೋಡೆವಲಪ್ಮೆಂಟಲ್) ಸಮಸ್ಯೆ ಇರುವವರಿಗೆ ಕೂಡಾ ಒಬ್ಬರಲ್ಲೊಬ್ಬರು ಒಳಗೊಳ್ಳುವುದರ ಕೌಶಲ್ಯದ ಕೊರತೆ (ಇಂಟರ್ ಪರ್ಸನಲ್ ಸ್ಕಿಲ್ ಡಿಫಿಸಿಟ್) ಕೂಡಾ ಇರುತ್ತದೆ.

ಒಟ್ಟಾರೆ ವಂದಿಸದವರಿಗೆ ಪ್ರತಿವಂದಿಸದಿರುವುದು ಒಂದು ಭಾವಸೂಕ್ಷ್ಮತೆಯುಳ್ಳ ಮಾನಸಿಕ ಸಮಸ್ಯೆ. ಇದನ್ನು ಸರಿಪಡಿಸಿಕೊಳ್ಳಲು ಸಾಧ್ಯ.

ಎಲ್ಲೆಲ್ಲಿ ತಮ್ಮತನವು ವಂದಿಸಲು, ಪ್ರತಿವಂದಿಸಲು, ಧನ್ಯವಾದಗಳು, ಕ್ಷಮಿಸಿ ಎಂದೆಲ್ಲಾ ಹೇಳಲು ನಾಚಿಕೊಳ್ಳುತ್ತದೆಯೋ ಅಥವಾ ಹೇಳಲು ಮನಸ್ಸೇ ಬರುವುದಿಲ್ಲವೋ ಅಲ್ಲೆಲ್ಲಾ ನಿಧಾನವಾಗಿ ಭಾರವಾಗಿರುವ ಉಸಿರೆಳೆದು ಬಿಟ್ಟು, ಹಗುರವಾಗಿ ನಸುನಕ್ಕು ಹೇಳುವುದನ್ನು ರೂಢಿಸಿಕೊಳ್ಳಬೇಕು. ಹೊರಗೆ ಮಾಡುವ ಈ ಅಭ್ಯಾಸದಿಂದ ವ್ಯಕ್ತಿಯ ಒಳಗೂ ಮಾನಸಿಕವಾಗಿ, ಭಾವನಾತ್ಮಕವಾಗಿ ಮತ್ತು ಮೆದುಳಿನಲ್ಲಿ ಜೈವಿಕವಾಗಿ ಉತ್ತಮವಾದ ಬದಲಾವಣೆಗಳು ಉಂಟಾಗುತ್ತವೆ.

share
ಯೋಗೇಶ್ ಮಾಸ್ಟರ್
ಯೋಗೇಶ್ ಮಾಸ್ಟರ್
Next Story
X