Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ನೆಲದನಿ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಮನೋ ಚರಿತ್ರ
  5. ಭಾರತದ ನರಮಂಡಲ

ಭಾರತದ ನರಮಂಡಲ

ಯೋಗೇಶ್ ಮಾಸ್ಟರ್ಯೋಗೇಶ್ ಮಾಸ್ಟರ್20 Sept 2026 10:10 AM IST
share
ಭಾರತದ ನರಮಂಡಲ

ಒಬ್ಬೊಬ್ಬ ವ್ಯಕ್ತಿಗೂ ಕೂಡಾ ಕ್ರಿಯೆ, ಪ್ರತಿಕ್ರಿಯೆ, ಸಂವೇದನೆಯ ವಿಷಯವಾಗಿ ನರಮಂಡಲ (nervous system) ಭಿನ್ನವಾಗಿ ತನ್ನ ಕಾರ್ಯ ನಿರ್ವಹಿಸುತ್ತದೆ. ಇದನ್ನೇ ರೂಪಕವಾಗಿ ಗಮನಿಸಿದರೆ ಎಲ್ಲಾ ಬಗೆಯ ಸಮಾಜಕ್ಕೂ ಒಂದೇ ಬಗೆಯ ನರಮಂಡಲ ಇರುವುದಿಲ್ಲ. ಒಂದೊಂದು ಸಮಾಜಕ್ಕೂ ಸಂವೇದನೆ, ಸ್ಮತಿ, ಅಪಾಯವನ್ನು ಗ್ರಹಿಸುವ ರೀತಿ, ಕ್ರಿಯೆ, ಪ್ರತಿಕ್ರಿಯೆ ಮತ್ತು ಚೇತರಿಕೆಯ ವ್ಯವಸ್ಥೆಯಲ್ಲಿ ಭಿನ್ನತೆಗಳಿರುತ್ತವೆ. ಒಬ್ಬ ವ್ಯಕ್ತಿಯಲ್ಲಿ ನರಮಂಡಲ ಏನು ಕೆಲಸಗಳನ್ನು ಮಾಡುವುದೋ ಅದೇ ರೀತಿಯಲ್ಲಿ ಕುಟುಂಬ, ಮಾಧ್ಯಮಗಳು, ಶಿಕ್ಷಣ ವ್ಯವಸ್ಥೆ, ರಾಜಕೀಯ, ಸಾಂಸ್ಕೃತಿಕ ಪ್ರಭಾವಗಳು ಮತ್ತು ಸಂಕಲಿತ ಸ್ಮತಿಗಳು ಸಮಾಜದಲ್ಲಿ ಕೆಲಸ ಮಾಡುತ್ತವೆ.

ಈ ದಿಕ್ಕಿನಲ್ಲಿ ನಮ್ಮ ಭಾರತೀಯ ಸಮಾಜದ ಸಂಕಲಿತ ಮನಸ್ಥಿತಿಯ ನರಮಂಡಲವನ್ನು ಗಮನಿಸೋಣ. ನಿಜ ಹೇಳಬೇಕೆಂದರೆ ನಮ್ಮ ದೇಶದ ನರಮಂಡಲ ತುಂಬಾ ದಣಿದಿದೆ. ಆದರೂ ತಿಣುಕುತ್ತಾ, ಹೆಣಗಾಡುತ್ತಾ ಕೆಲಸ ಮಾಡುತ್ತಿದೆಯೇ ಹೊರತು ವಿಶ್ರಾಂತಿ ಪಡೆಯುತ್ತಿಲ್ಲ. ಏಕೆಂದರೆ ಅದು ಸಾವಿರಾರು ವರ್ಷಗಳಿಂದಲೂ ಹುಷಾರಾಗಿ ಇರುವ (alert mode) ಮನಸ್ಥಿತಿಯಲ್ಲಿ ಬದುಕುವುದನ್ನೇ ರೂಢಿ ಮಾಡಿಕೊಂಡಿದೆ. ಐತಿಹಾಸಿಕ ಸಂಗತಿಗಳು ಮುಗಿದಿದ್ದರೂ ಅದರ ಬೇರು ಬಿಟ್ಟಿರುವ ನೆನಪುಗಳು ಭಾವಸ್ಮತಿಯಾಗಿ ಉಳಿದಿರುತ್ತದೆ. ಅದು ಅಷ್ಟು ಸುಲಭವಾಗಿ ಮರೆಯಲಾಗುವುದಿಲ್ಲ.

ಜನರೆಲ್ಲರೂ ಒಟ್ಟಾಗಿ ಸಮೂಹಿಕವಾಗಿ ಅನುಭವಿಸಿದ ವಸಾಹತುಶಾಹಿ, ದೇಶ ವಿಭಜನೆ, ಧಾರ್ಮಿಕ ಸಂಘರ್ಷಗಳು, ಜಾತಿ ಶ್ರೇಣೀಕರಣ, ಬರಗಾಲ, ಪ್ಲೇಗ್ ಮಾರಿ ಮತ್ತು ಇತ್ತೀಚೆಗೆ ಕೊರೋನ ರೋಗಗಳ ದಾಳಿ, ಬಡತನ, ಹಸಿವು, ಸ್ಥಳಾಂತರ, ಯುದ್ಧಗಳು, ಗಲಭೆಗಳು; ಇವೆಲ್ಲವೂ ಭಾರತದ ಇತಿಹಾಸದ ಪುಟಗಳು ಮಾತ್ರವಲ್ಲ, ಅವು ಕುಟುಂಬಗಳ ಕಥೆಗಳಲ್ಲಿ, ಸಮುದಾಯಗಳ ನೆನಪುಗಳಲ್ಲಿ, ಗಾದೆಗಳಲ್ಲಿ, ರಾಜಕೀಯ ನಿರೂಪಣೆಗಳಲ್ಲಿ ಮತ್ತು ಪರಸ್ಪರರ ಕುರಿತ ಅನುಮಾನಗಳಲ್ಲಿಯೂ ಉಳಿಯಬಹುದು. ಆದರೂ ಇದನ್ನೆಲ್ಲ ಸರಳವಾಗಿ ಸಾಮೂಹಿಕ ಬಾಧೆ (collective trauma) ಎಂದು ರೋಗನಿರ್ಣಯ ಮಾಡುವುದು ಕೂಡಾ ವೈಜ್ಞಾನಿಕವಾಗಿ ಸರಿಹೋಗುವುದಿಲ್ಲ. ಆದರೆ ಸಾಮೂಹಿಕ ಗಾಯಗಳ ನೆನಪುಗಳು ಪೀಳಿಗೆಯಿಂದ ಪೀಳಿಗೆಗೆ ಕಥೆ, ಮೌನ, ಭಯ, ಎಚ್ಚರಿಕೆ ಮತ್ತು ಎಷ್ಟೆಷ್ಟೋ ಸಾಮಾಜಿಕ ರೂಢಿಗಳ ಮೂಲಕ ಸಾಗಬಹುದು.

ಒಂದು ಸಮುದಾಯದವರನ್ನು ನಂಬಬೇಡ, ನಮ್ಮವರಿಗೆ ಯಾವಾಗಲೂ ಅನ್ಯಾಯ ಮತ್ತು ದೌರ್ಜನ್ಯಗಳಾಗುತ್ತವೆ, ನಮ್ಮ ಸಮುದಾಯದ ಅಸ್ತಿತ್ವವೇ ಅಪಾಯದಲ್ಲಿದೆ; ಇಂತಹ ವಾಕ್ಯಗಳು ಕೇವಲ ರಾಜಕೀಯ ಘೋಷಣೆಗಳಾಗಿರುವುದಿಲ್ಲ. ಕೆಲವೊಮ್ಮೆ ಅವು ಸಮಾಜದ ಅಪಾಯದ ಗ್ರಹಿಕೆ (threat perception) ಅನ್ನು ರೂಪಿಸುತ್ತವೆ. ಅದನ್ನು ರಾಜಕೀಯ ಪಕ್ಷಗಳು ಗಟ್ಟಿಗೊಳಿಸಬಹುದು ಮತ್ತು ತಮ್ಮ ಅಧಿಕಾರದ ಲಾಭಕ್ಕಾಗಿ ಬಳಸಿಕೊಳ್ಳಲೂಬಹುದು.

ಮನುಷ್ಯನ ಮೆದುಳು ಸತ್ಯಕ್ಕಿಂತ ಮೊದಲು ಸುರಕ್ಷತೆಯನ್ನು ಆದ್ಯತೆಯನ್ನಾಗಿ ನೋಡುತ್ತದೆ. ಮಾನವ ಮೆದುಳು ಮೊದಲು ವೈಚಾರಿಕವಾಗಿ ಚಿಂತನೆ ಮಾಡುವುದಿಲ್ಲ, ಪ್ರಾಥಮಿಕವಾಗಿ ಗ್ರಹಿಸುವಿಕೆಯಲ್ಲಿ ಅದಕ್ಕೆ ತತ್ವಜ್ಞಾನ ಎಟುಕದು. ಅದು ಭಾವನಾತ್ಮಕವಾಗಿ ಉಂಟಾಗುವ ಅಪಾಯವನ್ನೇ ಮೊದಲು ಗಮನಿಸುತ್ತದೆ.

ವ್ಯಕ್ತಿಯ ಮನಸ್ಸು ಅಪಾಯವೆಂದು ಗ್ರಹಿಸಿದಾಗ ದೇಹದ ನರಮಂಡಲದ ಒತ್ತಡದ ವ್ಯವಸ್ಥೆಗಳು (stress systems) ಚುರುಕಾಗುತ್ತವೆ. ಗಮನವು ಅಪಾಯದ ಕಡೆಗೆ ಕೇಂದ್ರೀಕರಿಸುತ್ತದೆ. ಸಮಗ್ರವಾಗಿ ಯೋಚಿಸುವುದಕ್ಕಿಂತ ತಕ್ಷಣ ಪ್ರತಿಕ್ರಿಯಿಸುವ ಪ್ರವೃತ್ತಿಯೇ ಸಾಧಾರಣವಾಗಿ ಹೆಚ್ಚಿರುತ್ತದೆ. ಇದನ್ನೇ ನಮ್ಮ ಸಮಾಜಕ್ಕೆ ರೂಪಕವಾಗಿ ಅನ್ವಯಿಸಿ ನೋಡಿ. ಪ್ರತಿದಿನ ನಮಗೆ, ಅವರು ನಿಮ್ಮನ್ನು ನಾಶಮಾಡುತ್ತಾರೆ, ನಿಮ್ಮ ಧರ್ಮ ಅಪಾಯದಲ್ಲಿದೆ, ನಮ್ಮ ಜಾತಿ ಅಪಾಯದಲ್ಲಿದೆ, ನಿಮ್ಮ ಭಾಷೆ ನಶಿಸಿಹೋಗುತ್ತಿದೆ, ದೇಶವೇ ಅಪಾಯದಲ್ಲಿದೆ; ಎಂಬಂತಹ ಸಂದೇಶಗಳೇ ನಿರಂತರವಾಗಿ ಬಂದರೆ, ನಾಗರಿಕನ ಮನಸ್ಸು ಚಿಂತಿಸುವ ಮನಸ್ಸಿಗಿಂತ ರಕ್ಷಿಸಿಕೊಳ್ಳುವ ಮನಸ್ಸಾಗಿ ಬದಲಾಗುವ ಅಪಾಯವಿದೆ.

ಆಗ ಪ್ರಶ್ನಿಸುವವನೂ ಶತ್ರುವಾಗುತ್ತಾನೆ. ವ್ಯಗ್ರವಾಗುವುದೇ ಒಂದು ಅಭ್ಯಾಸವಾಗಬಹುದು. ಕೋಪ ಸಹಜ ಭಾವನೆ. ಅನ್ಯಾಯದ ವಿರುದ್ಧ ಕೋಪ ಬೇಕು ಕೂಡ. ಆದರೆ ಪ್ರತಿದಿನ ಕೋಪಗೊಳ್ಳುವುದನ್ನೇ ಸಾಮಾಜಿಕ ಭಾಗವಹಿಸುವಿಕೆ ಎಂದು ಭಾವಿಸಿದಾಗ ಇಡೀ ಸಮಾಜದ ಸಂಕಲಿತ ಮನಸ್ಥಿತಿಯಲ್ಲಿ ಸಮಸ್ಯೆ ಶುರುವಾಗುತ್ತದೆ. ಸಾಮಾಜಿಕ ಜಾಲತಾಣಗಳು ಇದರ ಒಂದು ಅದ್ಭುತವಾದ ಪ್ರಯೋಗಾಲಯವಾಗಿರುತ್ತದೆ.

ಒಂದು ಸುದ್ದಿ, ವೈರಲ್ ಆಗಿರುವ ಒಂದು ವೀಡಿಯೊ ಕ್ಲಿಪ್, ಒಂದು ಪ್ರಚೋದನಕಾರಿಯಾಗಿರುವ ವಾಕ್ಯ; ಭಾವೋದ್ರೇಕಕ್ಕೆ ಒಳಗಾಗುವ ಜನ ಕ್ಷಣದಲ್ಲೇ ತೀರ್ಪು ಕೊಡುತ್ತಾರೆ. ಪೂರ್ಣ ಸಂದರ್ಭ ತಿಳಿಯುವ ಮೊದಲೇ ಶೇರ್ ಮಾಡುವರು, ನಂತರ ಆಕ್ರೋಶ. ಬಳಿಕ ನಮ್ಮಂತೆಯೇ ಆಕ್ರೋಶಿಸುವವರ ಗುಂಪಿನೊಳಗೆ ಸೇರಿ ಪರಸ್ಪರ ತಮ್ಮ ತಮ್ಮ ನಿಲುವನ್ನು ದೃಢಪಡಿಸಿಕೊಳ್ಳುವುದು.

ಹೀಗೆ ವ್ಯಗ್ರವಾಗುವ ವಿಷಯಕ್ಕೆ ಪೂರಕವಾದ ಪ್ರತಿಕ್ರಿಯೆ ಸಿಗುವುದು, ಅದು ಮತ್ತೆ ಮತ್ತೆ ಮರುಕಳಿಸುವ ಒಂದು ಮನೋವೈಜ್ಞಾನಿಕ ಅಭ್ಯಾಸಚಕ್ರ ರೂಪುಗೊಳ್ಳಬಹುದು. ಇದನ್ನೇ ರಿಕರಿಂಗ್ ಪ್ಯಾಟ್ರನ್ ಅಥವಾ ಒಳಚಾಳಿ ಎನ್ನುವುದು. ಆಗ ನಾವು ಕೋಪವನ್ನು ಬಳಸುವುದಕ್ಕಿಂತ ಕೋಪವೇ ನಮ್ಮನ್ನು ಬಳಸತೊಡಗುತ್ತದೆ. ನಮ್ಮ ನಮ್ಮ ಗುರುತುಗಳು ಸುರಕ್ಷತೆಯಾಗಬಹುದು; ಬಹಳಷ್ಟು ಬಾರಿ ಅದೇ ಗುರುತೇ ಸೆರೆಮನೆಯೂ ಆಗಬಹುದು

ಮನುಷ್ಯನಿಗೆ ತಾನು ಯಾವುದಕ್ಕೋ ಅಥವಾ ಯಾರಿಗೋ ಸೇರಿದವನಾಗಿರಬೇಕು. ನಾನು ಯಾರು? ಎಂಬ ಪ್ರಶ್ನೆಗೆ ಕುಟುಂಬ, ಭಾಷೆ, ಜಾತಿ, ಧರ್ಮ, ದೇಶ ಮತ್ತು ಸಿದ್ಧಾಂತಗಳು ಒಂದು ಸಿದ್ಧ ಉತ್ತರ ಕೊಡುತ್ತವೆ. ಇದರಲ್ಲಿ ತಪ್ಪೇನಿಲ್ಲ. ಆದರೆ ತಮ್ಮ ಗುರುತಿಗೆ (identity) ಅಪಾಯವಿದೆ ಎಂದು ಮನಸ್ಸು ನಿರಂತರವಾಗಿ ಭಾವಿಸಿದಾಗ, ತನ್ನ ಗುಂಪಿನ ಮೇಲಿನ ಪ್ರೀತಿ ನಿಧಾನವಾಗಿ ಇನ್ನೊಂದು ಗುಂಪಿನ ಮೇಲಿನ ಅನುಮಾನವಾಗಿ ಬದಲಾಗಬಹುದು.

‘ನಾನು ನನ್ನವರನ್ನು ಪ್ರೀತಿಸುತ್ತೇನೆ’ ಎಂಬುದಕ್ಕೂ, ಯಾವುದೋ ಒಂದು ಕಲ್ಪಿತ ಅಥವಾ ಐತಿಹಾಸಿಕ ಸ್ಮತಿಯಿಂದ ಯಾವುದೋ ಒಂದು ಪ್ರಸಂಗವನ್ನು ಮುಂದಿಟ್ಟು, ‘ಆದ್ದರಿಂದ ಇನ್ನೊಬ್ಬರನ್ನು ದ್ವೇಷಿಸಬೇಕು’ ಎಂಬುದಕ್ಕೂ ಯಾವ ಸಹಜ ಸಂಬಂಧವೂ ಇಲ್ಲ. ಆ ಮಧ್ಯದ ಅಂತರವನ್ನು ಕಾಪಾಡುವುದೇ ಮಾನಸಿಕ ಪ್ರಬುದ್ಧತೆ. ಭಾರತದ ಮನಸ್ಸಿನ ನರಮಂಡಲಕ್ಕೆ ನಿಯಂತ್ರಣವೆಂಬುದು ಬೇಕಿದೆ. ಅಂತೆಯೇ ನಿಯಂತ್ರಣವೆಂದರೆ ಎಲ್ಲದಕ್ಕೂ, ಎಲ್ಲರೂ ಮೌನವಾಗಿರುವುದೂ ಅಲ್ಲ ಅಥವಾ ಅನ್ಯಾಯ ಕಂಡರೂ ಕೋಪಗೊಳ್ಳಬಾರದು ಎಂದಲ್ಲ.

ಬದಲಾಗಿ ಕೋಪ ಬಂದಾಗಲೂ ವಿವೇಕವನ್ನು ಕಳೆದುಕೊಳ್ಳದಿರುವುದು, ಭಯ ಬಂದಾಗಲೂ ಸತ್ಯ ಪರಿಶೀಲಿಸುವುದು, ಭಿನ್ನಾಭಿಪ್ರಾಯ ಬಂದಾಗಲೂ ಸಂಬಂಧವನ್ನು ನಾಶಮಾಡಿಕೊಳ್ಳದಿರುವುದು. ಇದು ವ್ಯಕ್ತಿಯ ಭಾವ ನಿಯಂತ್ರಣ (emotional regulation) ಹೇಗೆ ಅಗತ್ಯವೋ, ಪ್ರಜಾಪ್ರಭುತ್ವಕ್ಕೂ ಹಾಗೆಯೇ ಅದು ಅಗತ್ಯ. ಇದನ್ನು ನಮ್ಮ ಸಂವಿಧಾನವೋ, ಶಾಸಕಾಂಗವೋ ಅಥವಾ ಸರಕಾರಿ ಅಧಿಸೂಚನೆಗಳೋ ಕಲಿಸಲಾರದು. ಮನೆಯಲ್ಲೇ ಆರಂಭವಾಗಬೇಕು.

(ಅಂಕಣಗಾರರು: ಹಿರಿಯ ಬರಹಗಾರರು,

ಚಿಂತಕರು)

Tags

Indianervous system
share
ಯೋಗೇಶ್ ಮಾಸ್ಟರ್
ಯೋಗೇಶ್ ಮಾಸ್ಟರ್
Next Story
X