Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಮನೋ ಚರಿತ್ರ
  5. ಮುದಿ ವಿವೇಕ

ಮುದಿ ವಿವೇಕ

ಯೋಗೇಶ್ ಮಾಸ್ಟರ್,ಯೋಗೇಶ್ ಮಾಸ್ಟರ್,21 Jun 2026 10:32 AM IST
share
ಮುದಿ ವಿವೇಕ

ಮುದಿಯಾಗುವುದು ಎಂದರೆ ಒಂದು ವಯಸ್ಸಾದ ಎಂಬರ್ಥದಲ್ಲಿಯೂ, ಬೆಳವಣಿಗೆ ನಿಂತ ಎಂಬ ಅರ್ಥದಲ್ಲಿಯೂ ನೋಡಬಹುದು. ಹಳತರ ಪ್ರಭಾವದ ಕುರಿತಾದ ಈ ಲೇಖನದಲ್ಲಿ ಎರಡನೆಯ ಅರ್ಥವೇ ಹೆಚ್ಚು ಸಮರ್ಪಕ.

ಹಳತಿನ ಭಾವ ಬಹಳಷ್ಟು ಬಾರಿ ಸಾಮಾಜಿಕ ಅಧಿಕಾರವನ್ನೂ ಕೂಡಾ ತನ್ನದಾಗಿಸಿಕೊಂಡಿರುತ್ತದೆ.

ಅದೆಷ್ಟು ಶತಶತಮಾನಗಳಿಂದ ಉಳಿದುಕೊಂಡು ಬಂದಿದೆ ಎಂದರೆ ಅದು ಅಷ್ಟು ಮಹತ್ವದ್ದು ಎಂದು ಬಹಳಷ್ಟು ಜನ ಆಲೋಚಿಸುತ್ತಾರೆ. ಆದರೆ ಅದೇನೂ ಯಾವಾಗಲೂ ಸತ್ಯವಾಗಿರಲಾರದು. ಎಷ್ಟೋ ಸಂಪ್ರದಾಯಗಳು ಉಳಿದುಕೊಂಡಿರುವುದರ ಕಾರಣ ಅವು ಕೆಲವು ವರ್ಗದವರಿಗೆ ಲಾಭದಾಯಕವಾಗಿರುವುದರಿಂದ. ಎಷ್ಟೋ ಪರಂಪರೆಗಳು ಮತ್ತು ಸಾಂಪ್ರದಾಯಿಕ ಧೋರಣೆಗಳು ಉಳಿದಿರುವ ಕಾರಣ ಸಮಾಜದಲ್ಲಿರುವ ಸಶಕ್ತವಾದ ಮತ್ತು ಬಲಶಾಲಿಗಳಾದ ಸಮೂಹಗಳು ಕಾಪಾಡಿಕೊಂಡು ಬಂದಿರುವುದು. ಆದರೂ ಸಾಮಾನ್ಯವಾಗಿ ಮನಸ್ಸು ವಯಸ್ಸನ್ನು ತಿಳಿವಳಿಕೆಯೊಂದಿಗೆ ಸಮೀಕರಿಸುತ್ತದೆ. ಅರಿವುಳ್ಳ ವಯಸ್ಸಾದವರನ್ನು ವಯೋವೃದ್ಧರೂ ಜ್ಞಾನವೃದ್ಧರೂ ಎಂದು ಜೊತೆಯಾಗಿ ಹೇಳುವುದನ್ನು ನೆನಪಿಸಿಕೊಳ್ಳಿ. ಕೆಲವೊಮ್ಮೆ ನಕಾರಾತ್ಮಕವಾಗಿ ಹೇಳುವಾಗ, ‘‘ಇಷ್ಟು ವಯಸ್ಸಾಗಿದೆ, ಅಷ್ಟೂ ಗೊತ್ತಾಗುವುದಿಲ್ಲವಾ?’’ ಎಂದೂ ಹೇಳುವರು. ಪ್ರಾಚೀನವಾದ ಜ್ಞಾನ ಅಥವಾ ತಿಳಿವಳಿಕೆ ಎಂದರೆ ಅದನ್ನು ತಿಳಿಯುವ ಮತ್ತು ಪ್ರಯೋಗಿಸುವ ಮುನ್ನವೇ ಅದೊಂದು ಅದ್ಭುತ ಮತ್ತು ವಿವೇಕಪೂರ್ಣವಾದದ್ದು ಎಂಬ ಧೋರಣೆಯ ಕಡೆಗೆ ವಾಲ ತೊಡಗುತ್ತದೆ.

ಈ ಪ್ರಾಚೀನ ತಿಳಿವಳಿಕೆ ಎಂಬುದರಲ್ಲಿ ಬರಿಯ ವೈದ್ಯಕೀಯ, ತಾತ್ವಿಕ, ಜೀವನಕ್ರಮಗಳು ಮಾತ್ರವಲ್ಲದೆ ಜಾತಿ ವ್ಯವಸ್ಥೆಗಳನ್ನು, ಮೌಢ್ಯಗಳನ್ನು, ತಾರತಮ್ಯದ ಕಟ್ಟುಪಾಡುಗಳನ್ನು; ಅವುಗಳು ಹಾಗೆ ಬಹುಕಾಲದಿಂದ ಚಾಲ್ತಿಯಲ್ಲಿ ಇದ್ದವು ಎಂಬ ಒಂದು ಕಾರಣದಿಂದಲೇ ಅದನ್ನು ಯಶಸ್ವೀ ಪ್ರಯೋಗದ ಸಿದ್ಧ ಪುರಾವೆಯನ್ನಾಗಿ ನೋಡಲು ಇಚ್ಛಿಸುತ್ತಾರೆ. ‘‘ಅಷ್ಟಿಲ್ಲದೇ ನಮ್ಮ ಪೂರ್ವಿಕರು ಹಾಗೆ ಹೇಳ್ತಿದ್ರಾ?’’ ಎನ್ನುವ ಜನ ಹಳತನ್ನು ಸಮರ್ಥ ಸಾಕ್ಷಿಯನ್ನಾಗಿ ಮುಂದಿಡಲು ಯತ್ನಿಸುತ್ತಾರೆ. ಆದರೆ ಹಳತಾಗಿರುವುದೇ ಅದರ ಸತ್ಯತೆಗೆ ಅಥವಾ ಉಪಯುಕ್ತತೆಗೆ ಸಾಕ್ಷಿಯಾಗುವುದಿಲ್ಲ. ಹಾಗೆಯೇ ಶ್ರದ್ಧಾ ನಂಬಿಕೆಗಳು ಶತಶತಮಾನಗಳಿಂದ ಪೀಳಿಗೆಯಿಂದ ಪೀಳಿಗೆಗಳಿಗೆ ತಲೆಮಾರುಗಳು ಸಾಗಿಸಿದ್ದರೂ ಅವು ಪ್ರಸ್ತುತ ಕಾಲಮಾನದ ಬದುಕಿಗೆ ಅಪ್ರಸ್ತುತವೂ ಮತ್ತು ಹಾನಿಕಾರಕವೂ ಆಗಿರಬಹುದು.

ಹಾಗೆಯೇ ಹಳತರಲ್ಲಿ ನಿಜವಾದ ಮೌಲ್ಯಗಳು ಇರಲೂ ಕೂಡಾ ಸಾಧ್ಯ. ಹಳತೆಲ್ಲಾ ಹೊನ್ನಲ್ಲ ಎಂದು ಎಲ್ಲವನ್ನೂ ಒಟ್ಟಿಗೇ ಗುಡಿಸಿ ಹಾಕಲು ಆಗದು.

ಪುರಾತನವಾದ ವಿಷಯಗಳಲ್ಲಿ ಸಂಕಲಿತವಾದ ಹಿರಿಯರ ಅನುಭವಗಳಿರುತ್ತವೆ, ಸಾಂಸ್ಕೃತಿಕ ನೆನಪುಗಳು, ಅರಿವು ಮತ್ತು ಕುರುಹುಗಳಿರುತ್ತವೆ, ಕಲಾತ್ಮಕವಾದ ಸೌಂದರ್ಯವಿರುತ್ತದೆ, ಐತಿಹಾಸಿಕ ಪಾಠಗಳಿರುತ್ತವೆ. ಎಲ್ಲವೂ ಸರಿ. ಆದರೆ ಅವು ವ್ಯಕ್ತಿಗಳನ್ನು ಬಂಧಿಸಿದಾಗಲೇ ಸಮಸ್ಯೆಗಳು ಆರಂಭವಾಗುವುದು.

ಹಳತರ ಜೊತೆಗೆ ಆರೋಗ್ಯಕರವಾದ ಸಂಬಂಧವನ್ನು ಇರಿಸಿಕೊಳ್ಳಬೇಕಾದರೆ, ಗತಕಾಲವನ್ನು ಗೌರವಿಸಬೇಕು, ಅದರಿಂದ ಕಲಿಯಬೇಕು ಮತ್ತು ಅದನ್ನು ನಿಷ್ಪಕ್ಷಪಾತವಾಗಿ ಪರಿಶೀಲಿಸಬೇಕು. ಆದರೆ, ಅದೇ ಹಳತರ ಸೊಬಗಿನ ಕುರುಹುಗಳನ್ನು ಭಾವನಾತ್ಮಕವಾಗಿ ಆರಾಧಿಸತೊಡಗಿದರೆ, ಅವು ಹಳತು ಮತ್ತು ನಮ್ಮ ಪೂರ್ವಜರು ಪಾಲಿಸಿದ್ದಾರೆ ಎಂದು ಕಣ್ಮುಚ್ಚಿಕೊಂಡು ವಿಧೇಯತೆ ತೋರತೊಡಗಿದರೆ ಅದು ಹಳತರೊಂದಿಗೆ ಅನಾರೋಗ್ಯಕರ ಸಂಬಂಧವಾಗುತ್ತದೆ. ಹಳೆಯ ಬೇರಿನೊಂದಿಗೆ ಸಂಬಂಧ ಆರೋಗ್ಯಕರವಾಗಿದ್ದರೆ ಅದು ವ್ಯಕ್ತಿಯ ಬೆಳವಣಿಗೆಗೆ ಕಾರಣವಾಗುತ್ತದೆ. ಅದೇ ಸಂಬಂಧವು ಅನಾರೋಗ್ಯಕರವಾಗಿದ್ದರೆ ಕಳೇಬರವೊಂದನ್ನು ಕೊಳೆಯದಿರುವ ಹಾಗೆ ಸಂರಕ್ಷಿಸಿಕೊಂಡು ವೃಥಾ ಹೆಣಭಾರ ಹೊತ್ತುಕೊಂಡು ತಮ್ಮ ನಡೆಯನ್ನು ತಾವೇ ಕುಗ್ಗಿಸಿಕೊಂಡು ಹೆಣಗಾಡುವಂತಾಗುತ್ತದೆ.

ಜೀವಂತಿಕೆಯಿಂದ ಇರುವ ಹಳತನ್ನೂ, ಶವದಂತಿರುವಂತಹ ಹಳತನ್ನೂ ಗುರುತಿಸುವುದು ಮಾನಸಿಕ ಜಾಗೃತಿಯುಳ್ಳ ವಿವೇಕದ ಲಕ್ಷಣ.

ಮನುಷ್ಯ ಸಾಗಿ ಬಂದ ಬದುಕಿನ ಕಾಲದ ಪರೀಕ್ಷೆಯನ್ನು ಎದುರಿಸಿ ಇಂದಿಗೂ ಮಾನವ ಜೀವನವನ್ನು ಪೋಷಿಸುವ, ಅರ್ಥವಂತಗೊಳಿಸುವ, ಬೆಳವಣಿಗೆಗೆ ನೆರವಾಗುವ ಹಳೆಯ ಮೌಲ್ಯಗಳು, ಜ್ಞಾನ ಮತ್ತು ಪರಂಪರೆಗಳು ಜೀವಂತ ಹಳತು ಎಂದು ಅನಿಸಿಕೊಳ್ಳುತ್ತದೆ.

ಕಾಲ ಬದಲಾಗಿದ್ದರೂ, ಮಾಹಿತಿ, ತಂತ್ರಜ್ಞಾನ ಮತ್ತು ವೈಜ್ಞಾನಿಕ ಸಂಶೋಧನೆಗಳು ಪುರಾವೆ ಬದ್ಧವಾಗಿ ನಮ್ಮ ಜೀವನದ ವಿವಿಧ ಕ್ಷೇತ್ರಗಳಲ್ಲಿ ನೆರವಾಗುತ್ತಿದ್ದರೂ ಕೂಡಾ ಬದುಕನ್ನು ಸಂಕುಚಿತಗೊಳಿಸುವ, ಬೆಳವಣಿಗೆಯನ್ನು ತಡೆಯುವ, ಮಾನವೀಯ ಸಹಬಾಳ್ವೆಗೆ ವಿರುದ್ಧವಾಗಿರುವ ಹಳೆಯ ನಂಬಿಕೆಗಳು ಮತ್ತು ಆಚರಣೆಗಳು ಹಳತರ ಶವದಂತೆ.

ಒಟ್ಟಾರೆ, ಇಂದಿನ ಬದುಕಿನೊಂದಿಗೆ ಸಂವಾದ ನಡೆಸುತ್ತಾ, ಸಹಜೀವಿಗಳ ಒಡನಾಟದೊಂದಿಗೆ ತಮ್ಮ ಜೀವನದ ಮೂಲಕ ಸ್ಪಂದಿಸುತ್ತಾ ಜೀವಂತಿಕೆಯನ್ನು ಉಳಿಸಿಕೊಂಡಿರುವ ಹಳತನ್ನು ಮತ್ತು ಕೇವಲ ಭೂತಕಾಲದ ಭಾರವಾಗಿ ಉಳಿದಿರುವ ಹಳತನ್ನು ಪ್ರತ್ಯೇಕಿಸಿ ಗುರುತಿಸುವುದು ಜಾಗೃತ ಮನಸ್ಸಿನ ವಿವೇಕ.

ಹಳೆಯ ಬೇರು ಯಾವಾಗಲೂ ಹೊಸ ಚಿಗುರನ್ನು ಸೃಷ್ಟಿಸಲು ಸಮರ್ಥವಾಗಿರಬೇಕು. ಬೆಳೆಯದಿರುವ, ಹೊಸ ಚಿಗುರುಗಳನ್ನು, ಹೂಗಳನ್ನು, ಬೀಜಗಳನ್ನು ನೀಡದಿರುವ ಬೇರು ಅದೆಷ್ಟು ಅಗಾಧವಾಗಿದ್ದರೂ ಅದು ಕೊರಡಿಗೇ ಸಮವಾಗಿರುತ್ತದೆ. ಅಂತೆಯೇ ಹಳತೂ ಕೂಡಾ.

ಮೂಲವೆಷ್ಟೇ ಹಳತಾಗಿದ್ದರೂ ಅದರ ಸಾಮಿಪ್ಯ ಮತ್ತು ಅನುಸಂಧಾನ ಹೊಸತನ್ನು ಅನುಭವಕ್ಕೆ ತರುವಂತಹದ್ದಾದರೆ ಹಳೆ ಬೇರಿನಲ್ಲಿ ಹೊಸ ಚಿಗುರುಗಳು ಮೂಡುತ್ತಿವೆ ಎಂದರೆ, ಪ್ರಾಚೀನ ಅರಿವಿನಲ್ಲಿ ನವೀನ ವಿವೇಕ ಮೂಡುತ್ತಿವೆ, ಜೀವನದ ವಿವಿಧ ಆಯಾಮಗಳನ್ನು ನೋಡುತ್ತಿವೆ ಎಂದರ್ಥ.

ಹಳೆಯ ಬೇರು ಹೊಸ ಚಿಗುರುಗಳನ್ನು ನೀಡುವುದನ್ನು ನಿಲ್ಲಿಸಿದಾಗ ಅದು ತನ್ನ ಜೀವಂತಿಕೆಯನ್ನು ಕಳೆದುಕೊಳ್ಳುತ್ತದೆ. ಅದೇ ರೀತಿ ಪರಂಪರೆ ಮತ್ತು ಸಂಪ್ರದಾಯಗಳು ಹೊಸ ಅರಿವು, ಹೊಸ ಪ್ರಶ್ನೆಗಳು ಮತ್ತು ಹೊಸ ಸಾಧ್ಯತೆಗಳನ್ನು ಹುಟ್ಟಿಸುವುದನ್ನು ನಿಲ್ಲಿಸಿದಾಗ ಅವು ವಿವೇಕವನ್ನು ಪೋಷಿಸುವುದಿಲ್ಲ. ಅದನ್ನು ಮುದಿಗೊಳಿಸುತ್ತದೆ.

ಹೀಗಾಗಿ, ಹಳತನ್ನು ಕಾಪಾಡಿಕೊಳ್ಳುವುದು ಮುಖ್ಯವಲ್ಲ; ಹಳತಿನ ಜೀವಂತಿಕೆಯನ್ನು ಕಾಪಾಡಿಕೊಳ್ಳುವುದು ಮುಖ್ಯ. ಪಳೆಯುಳಿಕೆಗಳು ಅಧ್ಯಯನಕ್ಕೆ ಯೋಗ್ಯವೇ ಹೊರತು ದೈನಂದಿನ ಬಳಕೆಗೆ ಅಲ್ಲ.

Tags

OldwisdomSociety
share
ಯೋಗೇಶ್ ಮಾಸ್ಟರ್,
ಯೋಗೇಶ್ ಮಾಸ್ಟರ್,
Next Story
X