Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಮನೋ ಚರಿತ್ರ
  5. ಆನ್‌ಲೈನ್ ಗೇಮಿಂಗ್

ಆನ್‌ಲೈನ್ ಗೇಮಿಂಗ್

ಯೋಗೇಶ್ ಮಾಸ್ಟರ್,ಯೋಗೇಶ್ ಮಾಸ್ಟರ್,22 Feb 2026 11:41 AM IST
share
ಆನ್‌ಲೈನ್ ಗೇಮಿಂಗ್

ಆನ್‌ಲೈನ್ ಗೇಮಿನ ವ್ಯಸನಕ್ಕೆ ಬಲಿಯಾದ ಮಕ್ಕಳ ಮತ್ತು ದೊಡ್ಡವರ ಬಗ್ಗೆ ಇತ್ತೀಚೆಗೆ ನಾವು ಕೇಳುತ್ತಿರುವ ಸುದ್ದಿಗಳು ಮನಸ್ಸನ್ನು ನಡುಗಿಸುತ್ತಿವೆ. ಅದಕ್ಕೆ ಅಡಿಕ್ಟ್ ಆಗಿ ತಮ್ಮ ಜೀವನವನ್ನೇ ಕಳೆದುಕೊಳ್ಳುತ್ತಿರುವ ಘಟನೆಗಳು ನಮ್ಮ ಸಮಾಜದ ಮತ್ತು ವ್ಯವಸ್ಥೆಯ ಕಣ್ಣು ತೆರೆಸಬೇಕು. ಇದು ಮಕ್ಕಳಾಗಿರುವ ಕಾರಣಕ್ಕೆ ಜಾಸ್ತಿ ಆಟ ಆಡ್ತಾರೆ ಅನ್ನೋ ಸಮಸ್ಯೆ ಅಲ್ಲ. ಇದು ಮಕ್ಕಳ ಮನಸ್ಸು, ಗುರುತು (ಐಡೆಂಟಿಟಿ) ಮತ್ತು ಅವರ ಭವಿಷ್ಯಕ್ಕೆ ಸಂಬಂಧಿಸಿದ ಗಂಭೀರ ವಿಷಯವಾಗಿದೆ.

ಮೊದಲಿಗೆ ಮಕ್ಕಳು ಏಕೆ ಆನ್‌ಲೈನ್ ಗೇಮಿಗೆ ಬೇಗನೆ ಆಕರ್ಷಿತರಾಗುತ್ತಾರೆ ಎಂಬುದನ್ನು ಗಮನಿಸಬೇಕು. ಮಕ್ಕಳ ಮೆದುಳು ಇನ್ನೂ ಬೆಳವಣಿಗೆಯ ಹಂತದಲ್ಲಿರುತ್ತದೆ. ಆನ್‌ಲೈನ್ ಗೇಮುಗಳು ಅವರಿಗೆ ಅದೊಂದು ಕ್ಷಣಿಕ ಸಂತೋಷ, ಜಯದ ಭ್ರಮೆ ಮತ್ತು ನಾನು ಶಕ್ತಿಶಾಲಿ ಅನ್ನೋ ಅನುಭವ ಕೊಡುತ್ತವೆ.

ಆದರೆ ನಿಜ ಜೀವನದಲ್ಲಿ ನಿರಂತರ ಪರಿಶ್ರಮದಿಂದ ಯಶಸ್ಸು ನಿಧಾನವಾಗಿ ಬರುತ್ತದೆ, ಸೋಲು ಸಹಿಸಿಕೊಳ್ಳಬೇಕು, ತಾಳ್ಮೆ ಬೇಕು, ಈ ಎಲ್ಲವೂ ಗೇಮಿನಲ್ಲಿ ಇಲ್ಲ. ಅದಕ್ಕೇ ವಾಸ್ತವ ಜೀವನ ಅವರಿಗೆ ಬೋರ್ ಆಗುತ್ತದೆ, ಗೇಮ್ ರೋಚಕವಾಗುತ್ತದೆ.

ಆನ್‌ಲೈನ್ ಗೇಮಿಗಿಂತ ಮಿಗಿಲಾಗಿ ಮಕ್ಕಳ ಮನಸ್ಸನ್ನು ಸಮೀಪಿಸುವ ಬಗ್ಗೆ ಹಿರಿಯರಿಗೆ ಅಥವಾ ಪೋಷಕರಿಗೆ ತಿಳಿಯಬೇಕು.

ನಾವು ದಿನಕ್ಕೆ ಎಷ್ಟು ಸಮಯ ಮಗುವಿನ ಜೊತೆ ಗಮನಕೊಟ್ಟು ಮಾತಾಡುತ್ತೇವೆ? ಇದು ಮಾಡು, ಅದನ್ನು ಮಾಡಬೇಡ ಎನ್ನುವುದರ ಜೊತೆಗೆ ಅಂಕ, ಓದು, ಶಿಸ್ತು ಇವಿಷ್ಟೇ ಮಾತಲ್ಲ. ಗುಣಮಟ್ಟದ ಸಮಯ ಕೊಡಬೇಕು ಎಂದರೆ ನಾವು ಕೊಡುವ ಸಮಯವು ಸಂತೋಷವನ್ನು ಉಂಟು ಮಾಡಬೇಕು, ಸಮಾಧಾನವನ್ನು ಹೊಂದಿರಬೇಕು ಮತ್ತು ನಮ್ಮ ಸಂಬಂಧಗಳ ಬಗ್ಗೆ ಭರವಸೆ ಮತ್ತು ವಿಶ್ವಾಸವನ್ನು ಹುಟ್ಟಿಸುವಂತಹ ರೀತಿಯಲ್ಲಿ ಇದ್ದರೆ ಅದು ಗುಣಮಟ್ಟದ ಸಮಯವಾಗುತ್ತದೆ. ನಾವು ಅವರೊಂದಿಗೆ ಕಳೆಯುವ ಸಮಯದಲ್ಲಿ ಖಂಡನೆ, ನಿಂದನೆ, ಅಪಮಾನ ಮತ್ತು ಅನುಮಾನಗಳನ್ನು ಹೊಂದಿದ್ದರೆ ಅದು ಗುಣಮಟ್ಟದ ಸಮಯ ಆಗುವುದಿಲ್ಲ. ಮಕ್ಕಳಿಗೆ ಯಾವಾಗ ಗುಣಮಟ್ಟದ ಸಮಯ ಕೊಡಲು ಸಾಧ್ಯವಾಗುವುದಿಲ್ಲವೋ ತಮಗೆ ಬೇಕಾದ ಸಂತೋಷ, ಸಮಾಧಾನ ಮತ್ತು ಆಪ್ತತೆಯನ್ನು ಆನ್‌ಲೈನ್‌ನಲ್ಲಿ ಪಡೆದುಕೊಳ್ಳಲು ಯತ್ನಿಸುತ್ತಾರೆ.

ಮಗುವಿನೊಂದಿಗೆ ಮಾತಾಡಬೇಕು. ‘‘ನಿನ್ನ ದಿನ ಹೇಗಿತ್ತು?’’, ‘‘ನಿನ್ನ ಮನಸ್ಸು ಹೇಗಿದೆ?’’ ಇಂತಹ ಸಮಾಧಾನದ ಮಾತುಗಳನ್ನು ಮಗು ಕೇಳಿಸಿಕೊಳ್ಳದಾಗ ಅದು ಗೇಮಿನಲ್ಲಿ ಕೇಳಿಸಿಕೊಳ್ಳುತ್ತದೆ. ಮಗು ಮುದ್ದು ಬೇಕಾದಾಗ ಆನ್‌ಲೈನ್ ಗೇಮ್ ಅದಕ್ಕೆ ಪ್ರಶಸ್ತಿ ಕೊಡುತ್ತದೆ. ಇದು ಮಕ್ಕಳ ತಪ್ಪಲ್ಲ. ಇದು ಪೋಷಕರಾದ ನಮ್ಮ ಗುಣಮಟ್ಟದ ಸಮಯದ ಕೊರತೆ.

ಆನ್‌ಲೈನ್ ಗೇಮಿನ ಚಟದಿಂದ ಹೊರಗೆ ತರುವಲ್ಲಿ ಪೋಷಕರ ಪಾತ್ರ ಅತಿ ಮಹತ್ವದ್ದು. ಮೊಬೈಲ್ ಒಂದು ವಿಶ್ರಾಂತಿ ಪಡೆಯುವ ಸಾಧನ ಅಲ್ಲ. ಹಾಗೆಯೇ ಗೇಮ್ ಒಂದು ಬೇಬಿ ಸಿಟ್ಟರ್ ಅಲ್ಲ. ಮಗುವನ್ನು ಎಂಗೇಜ್ ಮಾಡಲು ಅದೆಷ್ಟು ಜನ ಮಗುವಿನ ಕೈಗೆ ಫೋನ್ ಕೊಡುವುದಿಲ್ಲ!

ಮಗುವಿಗೆ ಸಮಯ ಕೊಡದೆ ಸ್ಕ್ರೀನ್ ಕೊಟ್ಟರೆ ನಾವು ನಮ್ಮ ಜವಾಬ್ದಾರಿಯನ್ನು ಒಂದು ಯಂತ್ರಕ್ಕೆ ಒಪ್ಪಿಸುತ್ತಿದ್ದೇವೆ ಎಂದರ್ಥ. ಬದುಕು ಮತ್ತು ಸಂಬಂಧಗಳು ಯಾಂತ್ರಿಕವಾಗುತ್ತದೆ. ಮಗು ನಮ್ಮ ಜೊತೆ ಮುಕ್ತವಾಗಿ ಮಾತನಾಡುವಷ್ಟು ನಮ್ಮ ಇರುವಿಕೆ ಆಕರ್ಷಕವೂ ಮತ್ತು ಸುರಕ್ಷಿತವಾಗಿದ್ದರೆ ಅದು ಗೇಮಿನೊಳಗೆ ಕಳೆದುಹೋಗುವುದಿಲ್ಲ.

ಗೇಮಿನ ಪರಿಣಾಮಗಳನ್ನು ಲಘುವಾಗಿ ನೋಡಲು ಸಾಧ್ಯವಿಲ್ಲ. ಆನ್‌ಲೈನ್ ಗೇಮಿಂಗ್ ಖಂಡಿತ ಒಂದು ಅಡಿಕ್ಷನ್, ಮಕ್ಕಳ ಗಮನಶಕ್ತಿ ಕಡಿಮೆ ಮಾಡುತ್ತದೆ, ಅವರಲ್ಲಿ ಕೋಪ, ಆತಂಕ ಹೆಚ್ಚಿಸುತ್ತದೆ, ಅವರ ನಿದ್ರೆ ಹಾಳುಮಾಡುತ್ತದೆ, ಮಕ್ಕಳ ಮೆದುಳಿನ ನಿರ್ಧಾರ ಶಕ್ತಿಯನ್ನು ದುರ್ಬಲಗೊಳಿಸುತ್ತದೆ.

ಭಾವನಾತ್ಮಕ ನೆಲೆಗಟ್ಟಿನಿಂದ ನೋಡುವುದಾದರೆ ಮಗು ಒಂಟಿಯಾಗುತ್ತದೆ. ಸಂಬಂಧಗಳಿಂದ ದೂರವಾಗುತ್ತದೆ. ಸಹಾನುಭೂತಿ ಕಳೆದುಕೊಳ್ಳುತ್ತದೆ.

ಇನ್ನು ಶೈಕ್ಷಣಿಕವಾಗಿ ಓದಿನ ಆಸಕ್ತಿ ಕುಗ್ಗುತ್ತದೆ, ವಿಫಲತೆ ಹೆಚ್ಚುತ್ತದೆ, ಆತ್ಮವಿಶ್ವಾಸ ಕುಸಿಯುತ್ತದೆ. ಇದು ಒಂದು ನಿಧಾನ ವಿಷ. ಏಕೆಂದರೆ, ಇದು ಪ್ರಕ್ರಿಯೆಗೆ ಒಳಗಾಗುವುದನ್ನು ತಪ್ಪಿಸಿ ಕ್ರಿಯೆ ಮತ್ತು ಪ್ರತಿಕ್ರಿಯೆಗೆ ರೂಢಿಗೊಳಿಸುತ್ತದೆ. ಶಿಕ್ಷಣ, ಕಲೆ, ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳ ಅಭ್ಯಾಸಗಳೆಲ್ಲವೂ ನಿರಂತರವಾದ ಕಲಿಕೆಯ ಪ್ರಕ್ರಿಯೆಯ ಭಾಗವಾಗಿರುತ್ತದೆ.

ಆನ್‌ಲೈನ್ ಗೇಮಿನ ವಿರುದ್ಧವಾಗಿ ಬರೀ ಪೋಷಕರು ಹೋರಾಡಿದರೆ ಸಾಲದು. ಶಾಲೆಗಳು ಮಕ್ಕಳಿಗೆ ಅನೌಪಚಾರಿಕವಾಗಿ ಡಿಜಿಟಲ್ ಅರಿವು ಕಲಿಸಬೇಕು. ಸಮಾಜ ಮಕ್ಕಳಿಗೆ ಆಟದ ಮೈದಾನ, ಸಂಬಂಧವನ್ನು ಕಲ್ಪಿಸಿ ಕೊಡಬೇಕು. ಸರಕಾರ ಮಕ್ಕಳನ್ನು ಲಾಭದ ಯಂತ್ರಗಳ ಕೈಗೆ ಬಿಡಬಾರದು. ಒಟ್ಟಾರೆ ಇದು ಸಾಮೂಹಿಕ ಜವಾಬ್ದಾರಿ.

ಆನ್‌ಲೈನ್ ಗೇಮಿಗೆ ಪರಿಹಾರ ಖಂಡಿತ ಇದೆ. ಗೇಮನ್ನು ಸಂಪೂರ್ಣ ನಿಷೇಧಿಸಲೂಬಾರದು. ಆಡುವುದರಲ್ಲಿ ಮಿತಿ ಕಲಿಸಬೇಕು. ಆಯ್ಕೆ ಮಾಡುವ ಶಕ್ತಿ ಕಲಿಸಬೇಕು. ಜೀವನದ ಬೇರೆ ಬೇರೆ ಚಟುವಟಿಕೆಗಳಲ್ಲೂ ಸಂತೋಷ ಇದೆ ಅನ್ನುವುದನ್ನು ತೋರಿಸಬೇಕು. ಮಕ್ಕಳಿಗೆ ನಾವು ಹೇಳಬೇಕಾಗಿರುವುದು, ‘‘ನೀನು ಕೇವಲ ಆಟಗಾರನಲ್ಲ. ನೀನು ನಮ್ಮ ಜೀವ. ನಿನ್ನ ಜೀವನ ನಮ್ಮ ಜೊತೆ ಇದೆ’’ ಎಂಬುದನ್ನು ಬರಿಯ ಬಾಯಿಯ ಮಾತಿನಲ್ಲಿ ಮಾತ್ರವಲ್ಲ ಬದಲಿಗೆ ನಮ್ಮ ನಡೆಯಲ್ಲಿಯೂ, ಅವರನ್ನು ಕಾಣುವ ರೀತಿಯಲ್ಲಿಯೂ ತೋರಬೇಕು. ಅದರ ಬದಲು ಫೋನ್ ಕಿತ್ತುಕೊಳ್ಳುವುದು, ಕೊಡುವುದಿಲ್ಲ ಎಂದು ಬೈಯುವುದು ಅಥವಾ ಹೊಡೆಯುವುದು ಮಾಡಿದರೆ ಅವರು ಹಟಮಾರಿಗಳಾಗುವರೇ ಹೊರತು ಒಳ್ಳೆಯದೇನೂ ಆಗುವುದಿಲ್ಲ.

ಮುಖ್ಯವಾಗಿ ನಮ್ಮ ಮಕ್ಕಳು ಕೆಟ್ಟವರು ಅಲ್ಲ. ನೈತಿಕವಾಗಿ ಅವರನ್ನು ಅಪರಾಧಿಗಳನ್ನಾಗಿ ನೋಡಬಾರದು. ಒಂದು ವೇಳೆ ಆನ್‌ಲೈನ್ ವ್ಯಸನದಲ್ಲಿ ಅವರು ದಾರಿ ತಪ್ಪಿದ್ದರೂ ನಾವು ಕೈ ಹಿಡಿದರೆ ಅವರು ಮರಳಿ ಬರುತ್ತಾರೆ. ನಾವು ಮಕ್ಕಳಿಗೆ ಹತ್ತಿರವಾಗೋಣ. ಇದೇ ನಮ್ಮ ಜವಾಬ್ದಾರಿ. ನಾವು ಪರಸ್ಪರ ದೋಷಾರೋಪಣೆಗಳನ್ನು ಮಾಡುವ ಬದಲು ವಿಶ್ವಾಸ, ಆನಂದ, ಸಮಾಧಾನ ಮತ್ತು ಸಾಂತ್ವಾನಗಳನ್ನು ಹಂಚಿಕೊಳ್ಳೋಣ.

Tags

Online gaming
share
ಯೋಗೇಶ್ ಮಾಸ್ಟರ್,
ಯೋಗೇಶ್ ಮಾಸ್ಟರ್,
Next Story
X