Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಮನೋ ಚರಿತ್ರ
  5. ಸಾಮುದಾಯಿಕ ಮನಸ್ಸು

ಸಾಮುದಾಯಿಕ ಮನಸ್ಸು

ಯೋಗೇಶ್ ಮಾಸ್ಟರ್,ಯೋಗೇಶ್ ಮಾಸ್ಟರ್,10 May 2026 1:10 PM IST
share
ಸಾಮುದಾಯಿಕ ಮನಸ್ಸು

ಯಾವುದೇ ಜನರ ಆಹಾರ, ಉಡುಗೆ ತೊಡುಗೆ, ರುಚಿ, ಅಭಿರುಚಿಗಳನ್ನೆಲ್ಲಾ ಒಳಗೊಂಡ ಜೀವನಕ್ರಮ ಮತ್ತು ಜೀವನ ಶೈಲಿ ಅವರು ಇರುವ ಭೌಗೋಳಿಕ ಪರಿಸರ, ಹವಾಮಾನ, ನೈಸರ್ಗಿಕ ಸಂಪನ್ಮೂಲಗಳನ್ನೆಲ್ಲಾ ಅವಲಂಬಿಸಿರುತ್ತವೆ. ಅವೇ ನೈಸರ್ಗಿಕ ಪರಿಸರ ಮತ್ತು ಹವಾಮಾನಗಳಲ್ಲಿ ದೀರ್ಘಕಾಲ ಬಾಳುವ ಜೀವನ ಪದ್ಧತಿಗಳೊಂದಿಗೆ ಜನರು ಎದುರಿಸುವ ಸಂಕಷ್ಟಗಳ ಮತ್ತು ಹೊಂದುವ ಸಂತೋಷಗಳ ಆಧಾರದಲ್ಲಿ ಕತೆಗಳು, ಹಾಡುಗಳು, ತತ್ವಗಳು, ಕನಸುಗಳು, ಸಿದ್ಧಾಂತಗಳು, ನಂಬಿಕೆಗಳು ಹುಟ್ಟುತ್ತವೆ, ಹಾಗೆಯೇ ಅವರ ನಡೆ ನುಡಿಗಳೂ ರೂಪುಗೊಳ್ಳುತ್ತವೆ. ಇದು ಇಷ್ಟಕ್ಕೇ ಸೀಮಿತಗೊಳ್ಳದೆ ಪರಿಸರದ ಪ್ರಭಾವವು ಗ್ರಾಮೀಣ ಮತ್ತು ನಗರ ಜೀವನಕ್ಕೂ ವಿಸ್ತಾರಗೊಳ್ಳುತ್ತದೆ.

ಒಂದು ವೇಳೆ ಜನರು ವಾಸಿಸುವ ಪರಿಸರದಲ್ಲಿ ಜನಸಂದಣಿ ದಟ್ಟವಾಗಿದ್ದರೆ, ಅಥವಾ ವಿರಳವಾಗಿದ್ದರೆ; ಅಂತಹ ವಿಷಯಗಳೂ ಕೂಡಾ ಜನರ ಜೀವನ ವಿಧಾನಗಳು ರೂಪುಗೊಳ್ಳುವುದರ ಮೇಲೆ ಪ್ರಭಾವಿಸುತ್ತವೆ. ಜೀವನ ಎಂಬುವುದನ್ನು ರೂಪಿಸುವುದೆಲ್ಲವೂ ವ್ಯಕ್ತಿಯ ಮನಸ್ಸಿನ ಮೇಲೆಯೂ ಪ್ರಭಾವಿಸುತ್ತವೆ, ಮನಸ್ಥಿತಿಗಳನ್ನು ರೂಪಿಸುವುದರಲ್ಲಿ ಪಾತ್ರವನ್ನು ವಹಿಸುತ್ತವೆ ಎಂಬುದನ್ನು ನಾವು ಗಮನಿಸಬೇಕು.

ಸಂಕಲಿತ ಮನಸ್ಥಿತಿಯ ದಿಕ್ಕಿನಿಂದ ನೋಡುವುದಾದರೆ, ವ್ಯಕ್ತಿಗಳ ಮನಸ್ಥಿತಿಗಳನ್ನು ರೂಪಿಸುತ್ತಲೇ ಸಮುದಾಯದಲ್ಲಿ ಜೀವನ ಶೈಲಿ, ಸಹನೆ, ಒತ್ತಡ, ವೇಗದ ಚಲನಶೀಲತೆ, ಸಾಮುದಾಯಿಕ ಮಾದರಿಗಳೂ ಕೂಡ ರೂಪುಗೊಳ್ಳುವವು.

ಒಬ್ಬೊಬ್ಬರೇ ವ್ಯಕ್ತಿಗಳು ಮಾತ್ರವಲ್ಲ, ಒಟ್ಟೊಟ್ಟಾಗಿ ಜನರ ಸಮೂಹಗಳು ನಷ್ಟ, ತಿರಸ್ಕಾರ, ಹಿಂಸೆ, ಅವಮಾನ ಮತ್ತು ವೈಫಲ್ಯಗಳನ್ನು ಅನುಭವಿಸಿದರೆ, ಅನುಭವಿಸುತ್ತಿದ್ದರೆ, ಸಂಕಲಿತವಾದ ಮನಸ್ಥಿತಿಗಳೇ ನಿರ್ದಿಷ್ಟ ಮಾದರಿಯಲ್ಲಿ ರೂಪುಗೊಳ್ಳುತ್ತವೆ. ತಮ್ಮನ್ನು ತಾವು ರಕ್ಷಿಸಿಕೊಳ್ಳುವ ತಂತ್ರಗಳನ್ನು, ಭಯಗಳನ್ನು, ಬಲಗಳನ್ನು, ಸಹಾನುಭೂತಿಗಳನ್ನು ಮತ್ತು ನಡೆ ನುಡಿಯಲ್ಲಿ ಕಾಣುವ ನಿಷ್ಠುರತೆಗಳನ್ನೂ ಕೂಡಾ ಸಾಮುದಾಯಿಕ ಗುಣಲಕ್ಷಣಗಳಾಗಿ ಕಾಣಬಹುದು. ಕೀಳರಿಮೆ, ಅಭದ್ರತೆಗಳನ್ನು ಮೀರಲು ಅನೈಚ್ಛಿಕವಾಗಿ ವರ್ತಿಸುವ ಮಾದರಿಗಳನ್ನೂ ಕೂಡಾ ಕಾಣುತ್ತೇವೆ.

ವಿಶ್ವದ ಎಲ್ಲೆಡೆಯೂ ಈ ಉದಾಹರಣೆಗಳನ್ನು ಕಾಣಬಹುದು. ಹಾಗೆಯೇ ಭಾರತದಲ್ಲಿಯೂ ಕೂಡಾ ಅಲಕ್ಷಿತ, ಅಸ್ಪಶ್ಯ ಸಮುದಾಯಗಳನ್ನು ನಡೆಸಿಕೊಂಡಿರುವ ರೀತಿಗಳನ್ನೂ ಮತ್ತು ಅಂತಹ ಸಮುದಾಯಗಳ ಸಂಕಲಿತ ಮನಸ್ಥಿತಿಗಳು ರೂಪುಗೊಂಡಿರುವ ವಿಧಾನಗಳನ್ನೂ ಕೂಡಾ ಗಮನಿಸಬಹುದು.

ಅದೇ ರೀತಿ ಮೇಲರಿಮೆಯನ್ನು ಅನುಭವಿಸುವ ಸಾಮುದಾಯಿಕ ಮನಸ್ಥಿತಿಗಳೂ ಕೂಡಾ ಕಾಣುತ್ತವೆ. ಯಾವ ಜನರು ನಿರಂತರವಾಗಿ ತಮ್ಮ ಯೋಚನೆ, ಯೋಜನೆ ಮತ್ತು ಪರಿಶ್ರಮಕ್ಕೆ ತಕ್ಕ ಪ್ರತಿಫಲ, ಯಶಸ್ಸುಗಳನ್ನು ಅನುಭವಿಸಿಕೊಂಡು ಬರುತ್ತಿರುತ್ತಾರೋ ಅವರಲ್ಲಿ ರೂಪುಗೊಳ್ಳುವ ಅರಿಮೆಗಳೂ ಕೂಡ ಭಿನ್ನವಾಗಿರುತ್ತದೆ. ತಮಗೆ ಸಿಗುವಂತಹ ಪ್ರಶಂಸೆಗಳನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುವ, ತಮ್ಮ ಗುರುತನ್ನು ಮತ್ತಷ್ಟು ಮಾನ್ಯ ಮಾಡಿಸಿಕೊಳ್ಳುವ, ಇರುವ ಯಶಸ್ಸನ್ನು ಬೇರೆ ಕ್ಷೇತ್ರಗಳಿಗೂ ವಿಸ್ತರಿಸಿಕೊಳ್ಳುವ, ಅಧಿಕಾರ ಮತ್ತು ಒಡೆತನಗಳನ್ನು ಹೊಂದುವ ಹಾಗೂ ಭದ್ರಪಡಿಸಿಕೊಳ್ಳುವ, ಅವುಗಳನ್ನು ತಾವು ಅನುಭವಿಸಿದಂತೆ ತಮ್ಮ ಮುಂದಿನ ಪೀಳಿಗೆಗಳಿಗೂ ಮುಂದುವರಿಸುವ ಮನಸ್ಥಿತಿಗಳು ರೂಪುಗೊಳ್ಳುವುದು ಸಾಮಾನ್ಯವಾಗುತ್ತದೆ. ಈಗಾಗಲೇ ಇರುವ ಸ್ಥಾನಮಾನದ ಮಾನ್ಯತೆ ಮತ್ತು ಯಶಸ್ಸುಗಳು ಆತ್ಮವಿಶ್ವಾಸವನ್ನೂ, ಅಹಮನ್ನೂ, ಮಾನ್ಯತೆಯ ವ್ಯಸನವನ್ನೂ ಮತ್ತು ಪ್ರೇರಣೆಗಳನ್ನೂ ಕೂಡಾ ಒದಗಿಸುತ್ತವೆ. ಇವುಗಳ ಪ್ರೇರಣೆಗಳು ಮನಸ್ಥಿತಿಯನ್ನು ರೂಪಿಸುವ ಪ್ರಭಾವವಾಗಿಯೇ ನೋಡಬೇಕೇ ಹೊರತು ಸಂಸ್ಕಾರ ಎಂದು ತಪ್ಪಾಗಿ ತಿಳಿದುಕೊಳ್ಳಬಾರದು. ಮನಸ್ಥಿತಿಯನ್ನು ರೂಪಿಸುವಲ್ಲಿ ನಿರ್ದಿಷ್ಟ ಸಂಸ್ಕಾರಗಳೂ ಕೂಡಾ ಪಾತ್ರ ವಹಿಸುವುದೇನೋ ನಿಜ, ಆದರೆ ಇಲ್ಲಿ ಪರಿಗಣಿಸುತ್ತಿರುವ ವಿಚಾರ ಮನೋವೈಜ್ಞಾನಿಕ ನೆಲೆಗಟ್ಟಿನಿಂದ ರೂಪುಗೊಳ್ಳುವ ಮನಸ್ಥಿತಿಗಳು ಮಾತ್ರವಾಗಿದೆ.

ಯಾವುದೇ ಬಗೆಯ ಪ್ರಭಾವಗಳು ನಿರಂತರವಾಗಿ ಸಮುದಾಯಗಳ ಮೇಲೆ ಆಗುತ್ತಾ ಸಂಕಲಿತ ಮನಸ್ಥಿತಿಯನ್ನು ರೂಪಿಸುತ್ತವೆಯೋ, ಅವುಗಳಿಂದ ವ್ಯಕ್ತಿಗತವಾದ ಮನಸ್ಥಿತಿಗಳೂ ಕೂಡಾ ರೂಪುಗೊಳ್ಳುತ್ತಾ ಹೋಗುವುದು ಆಶ್ಚರ್ಯವೇನಲ್ಲ. ಆದರೆ ವ್ಯಕ್ತಿಯೊಬ್ಬನು ತನ್ನಲ್ಲಿ ತಾನು ಗುರುತಿಸಿಕೊಂಡು, ಅದು ತನ್ನ ವ್ಯಕ್ತಿಗತವಾದ ಜೀವನಕ್ಕೆ ಮತ್ತು ಸಮಾಜದಲ್ಲಿ ಮಾಡುವ ಕೂಡುಬಾಳ್ವೆಗೆ ಪೂರಕವಾಗಿದ್ದರೆ ಅದನ್ನು ಪೋಷಿಸಿಕೊಂಡು ಹೋಗುವ ಅಥವಾ ಮಾರಕವಾಗಿದ್ದರೆ ಆ ಮಾದರಿಗಳಿಂದ ಹೊರಗೆ ಬರುವ ಪ್ರಯತ್ನ ಮಾಡಲು ಸಾಧ್ಯ. ಆದರೆ ಅದು ಅಷ್ಟೇನೂ ಸುಲಭವಲ್ಲ. ಸಮೂಹದ ಮನಸ್ಥಿತಿಯಲ್ಲಿ ಒಂದಾಗಿ ಹೋಗುವುದರಲ್ಲಿ ವ್ಯಕ್ತಿಗತ ಪ್ರಯತ್ನವು ಹೆಚ್ಚು ಅಗತ್ಯವಿರುವುದಿಲ್ಲ. ಒಪ್ಪಿಕೊಂಡು, ಒಪ್ಪಿಸಿಕೊಂಡು ಬಿಟ್ಟರೆ ಸಾಕಾತುತ್ತದೆ. ಆದರೆ ಅದರಿಂದ ಹೊರಗೆ ಬರಬೇಕೆಂದರೆ ಅಪಾರ ಪರಿಶ್ರಮ ಬೇಕು ಮತ್ತು ದೀರ್ಘಕಾಲದ ಅಭ್ಯಾಸವನ್ನೂ ಮತ್ತು ಪ್ರಕ್ರಿಯೆಯನ್ನೂ ತನ್ನದಾಗಿಸಿಕೊಳ್ಳಬೇಕು.

ಕುಟುಂಬವೇ ಆಗಲಿ, ಸಮುದಾಯಗಳೇ ಆಗಲಿ ದೀರ್ಘಕಾಲದಿಂದ ಮಾಡಿಕೊಂಡು ಬರುವ ರೂಢಿಗಳು, ನಡಾವಳಿಗಳು ಮತ್ತು ರೂಪಿಸಿಕೊಂಡಿರುವ ಸಂಕಲಿತ ಮನಸ್ಥಿತಿಗಳು ತಾಳಿಕೆಯನ್ನು, ಅನುಸರಿಸಿಕೊಳ್ಳುವಿಕೆಯನ್ನು ಸೇರಿದಂತ ಅನೇಕ ಗುಣಗಳ ಸಮಗ್ರ ರೂಪದಲ್ಲಿರುವ ಮನೋಧರ್ಮವನ್ನು, ಅನುವಂಶೀಯ ಗುಣಗಳನ್ನು, ಹಾರ್ಮೋನುಗಳನ್ನು, ನರಮಂಡಲ ಸೂಕ್ಷ್ಮತೆಯನ್ನು ಪ್ರಭಾವಿಸುವಂತಹ ಜೈವಿಕ ಅಂಶಗಳನ್ನು ಒಳಗೊಂಡಿರುತ್ತವೆ. ಈ ಅಂಶಗಳೆಲ್ಲಾ ವ್ಯಕ್ತಿಗಳ ಸಮೂಹಗಳ ಭಾವಸೂಕ್ಷ್ಮತೆಗಳನ್ನು, ಪ್ರತಿಕ್ರಿಯೆಗಳ ಮಾದರಿಗಳನ್ನು, ಮನೋಬಲವನ್ನು, ಉದ್ವೇಗ, ಆವೇಗಗಳನ್ನು, ಶಾಂತತೆಯನ್ನು ನಿರ್ಧರಿಸುವಂತಹ ವಿಷಯಗಳಾಗಿರುತ್ತವೆ.

ಒಟ್ಟಾರೆ ವ್ಯಕ್ತಿಯೇ ಆಗಲಿ, ಸಮುದಾಯವೇ ಆಗಲಿ ತಮ್ಮ ಪಾಡಿಗೆ ತಾವಿರುವ ಮನಸ್ಥಿತಿಯನ್ನು ಹೊಂದಿರಲು ಆಗುವುದಿಲ್ಲ. ಅವರ ಬೆಳವಣಿಗೆ, ಹಳೆಯ ಗಾಯಗಳು, ನಿರ್ಣಾಯಕ ಅಂತ್ಯ ಕಂಡಿರದ ಅವಮಾನಗಳು ಮತ್ತು ತಿರಸ್ಕಾರಗಳು, ಸಂಸ್ಕೃತಿ, ಕಾಲಘಟ್ಟ, ಭಯಗಳು, ತಮ್ಮದೂ ಮತ್ತು ಎರವಲು ಪಡೆದಿರುವ ಕನಸುಗಳು; ಇವೆಲ್ಲದರ ಒಟ್ಟು ಸಂಗ್ರಹವು ಮನಸ್ಸಿನ ಪದರಗಳಲ್ಲಿ ಬೆಸೆದುಕೊಂಡಿರುತ್ತವೆ ಮತ್ತು ಹರವಿಕೊಂಡಿರುತ್ತವೆ.

Tags

saamudaayika manassu
share
ಯೋಗೇಶ್ ಮಾಸ್ಟರ್,
ಯೋಗೇಶ್ ಮಾಸ್ಟರ್,
Next Story
X