Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಮನೋ ಚರಿತ್ರ
  5. ಪ್ರವೃತ್ತಿ ಮತ್ತು ಮನಸ್ಥಿತಿ

ಪ್ರವೃತ್ತಿ ಮತ್ತು ಮನಸ್ಥಿತಿ

ಯೋಗೇಶ್ ಮಾಸ್ಟರ್,ಯೋಗೇಶ್ ಮಾಸ್ಟರ್,11 May 2025 10:04 AM IST
share
ಪ್ರವೃತ್ತಿ ಮತ್ತು ಮನಸ್ಥಿತಿ

ಮನಸ್ಸಿನ ಚಟುವಟಿಕೆಗಳ ವಿಷಯದಲ್ಲಿ ಪ್ರವೃತ್ತಿ ಮತ್ತು ಮನಸ್ಥಿತಿಗಳೆರಡೂ ಪ್ರಭಾವಶಾಲಿಯಾಗಿರುವ ವಿಷಯಗಳು.

ಪ್ರವೃತ್ತಿ ಎಂದರೆ ಅದು ಹುಟ್ಟಿನಿಂದಲೇ ಬಂದಿರುವಂತಹದ್ದು ಮತ್ತು ಸ್ವಯಂ ಪ್ರೇರಿತವಾಗು ವಂತಹದ್ದು. ಅವುಗಳು ಕಲಿಕೆಯಿಂದ ಬಂದಿರುವುದಲ್ಲ. ಅದು ನೈಸರ್ಗಿಕವಾದ ಒಲವು ಮತ್ತು ಸೆಳೆತಗಳು ಅಥವಾ ಪರಾವರ್ತನ ಪ್ರತಿಕ್ರಿಯೆಗಳು. ಹಸಿವಾದಾಗ ಮಗುವು ಅಳುವಂತೆ, ಬಿಸಿಯಾದ ವಸ್ತುವನ್ನು ಮುಟ್ಟಿದಾಗ ತಟ್ಟನೆ ಕೈಯನ್ನು ಎಳೆದುಕೊಳ್ಳುವುದು ಪ್ರವೃತ್ತಿ. ಜಾಗೃತಿ ಚೈತನ್ಯ, ಸುಪ್ತ ಚೈತನ್ಯಕ್ಕೂ ಮಿಗಿಲಾದ ಆಳದಲ್ಲಿರುವ ನಮ್ಮ ಅಪ್ರಜ್ಞಾ ಮನಸ್ಸಿನ ವರ್ತನೆ ಮತ್ತು ಪ್ರತಿಕ್ರಿಯೆಗಳು ಪ್ರವೃತ್ತಿಯದ್ದಾಗಿರುತ್ತದೆ. ಒಬ್ಬ ವ್ಯಕ್ತಿ ತನ್ನನ್ನು ತಾನು ಉಳಿಸಿಕೊಳ್ಳಲು ಮಾಡುವ ಪ್ರಯತ್ನ, ಲೈಂಗಿಕತೆ, ಸಂತಾನೋತ್ಪತ್ತಿ ಮಾಡುವುದೇ ಮೊದಲಾದುವುದೆಲ್ಲವೂ ಪ್ರವೃತ್ತಿಗಳೇ ಆಗಿರುತ್ತದೆ. ಆಯಾ ಸಂದರ್ಭದಲ್ಲಿ ಸಿಗುವ ಪ್ರಚೋದನೆಯಿಂದ ಪ್ರೇರಿತವಾಗಿ ಕೆಲಸ ಮಾಡುತ್ತವೆ. ಬಹಳ ತೀವ್ರವಾಗಿಯೂ ಮತ್ತು ವೇಗವಾಗಿಯೂ ಕೆಲಸ ಮಾಡುವ ಪ್ರವೃತ್ತಿಯು ಉದ್ದೇಶಪೂರ್ವಕವಾಗಿ ಪ್ರಜ್ಞಾವಂತಿಕೆಯಿಂದ ವರ್ತಿಸುವುದಲ್ಲ.

ದೊಡ್ಡದಾದ ಶಬ್ದವಾದಾಗ ತಟ್ಟನೆ ಬೆದರುವುದು, ಕಿವಿ ಮುಚ್ಚಿಕೊಳ್ಳುವುದು, ಅಥವಾ ಕತ್ತಲಲ್ಲಿ ಏನಾದರೂ ಸದ್ದಾದರೆ, ಹಾವಿನ ಭಯದಲ್ಲಿ ಮೆತ್ತಗಿರುವುದರ ಮೇಲೆ ಕಾಲಿಟ್ಟು ಹೆದರುವುದು ಪ್ರವೃತ್ತಿಯೇ.

ಆದರೆ ಮನಸ್ಥಿತಿ ಎನ್ನುವುದು ನಮ್ಮ ಅನುಭವದಿಂದ, ಕಲಿಕೆಯಿಂದ ಮತ್ತು ಪರಿಸರದ ಪ್ರಭಾವದಿಂದ ರೂಪುಗೊಳ್ಳುವುದು. ಶ್ರದ್ಧಾನಂಬುಗೆಗಳು, ಧೋರಣೆಗಳು, ಆದ್ಯತೆಗಳು, ಆಹಾರಾಭ್ಯಾಸಗಳು, ಜೀವನಶೈಲಿಗಳು, ನಿರ್ಧಾರ ತೆಗೆದುಕೊಳ್ಳುವುದು, ಪ್ರಪಂಚವನ್ನು ನಾವು ಕಾಣುವ, ಗ್ರಹಿಸುವ ಮತ್ತು ವಿವರಿಸುವ ರೀತಿಗಳೆಲ್ಲವೂ ಮನಸ್ಥಿತಿಯದ್ದೇ ಆಗಿವೆ. ಇದರಲ್ಲಿ ಬೆಳವಣಿಗೆಯುಳ್ಳ ಚರ ಮನಸ್ಥಿತಿ ಮತ್ತು ಬದಲಾವಣೆಗೊಳಗಾಗದ ಸ್ಥಿರ ಮನಸ್ಥಿತಿ ಎಂಬವೂ ಇದೆ.

ವಿವೇಕ, ವೈಚಾರಿಕತೆ, ವೈಜ್ಞಾನಿಕ ಮನೋಭಾವ, ಕಲಿಕೆಯ ಸಾಮರ್ಥ್ಯ, ರಚನಾತ್ಮಕ ಮನಸ್ಥಿತಿ ಎಲ್ಲವೂ ಚರ ಮನಸ್ಥಿತಿಯದ್ದು.

ಪ್ರವೃತ್ತಿ ನೈಸರ್ಗಿಕ ಅಥವಾ ಸ್ವಾಭಾವಿಕವಾದರೆ, ಮನಸ್ಥಿತಿ ಎನ್ನುವುದು ಪರಿಸರದ ಪೋಷಣೆ ಮತ್ತು ಪ್ರಭಾವಗಳಿಂದ ರೂಪುಗೊಳ್ಳುವುದಾಗಿರುತ್ತದೆ.

ಈ ಪ್ರವೃತ್ತಿ ಮತ್ತು ಮನಸ್ಥಿತಿಗಳೆರಡೂ ಒಂದಕ್ಕೊಂದು ಸಹಕಾರ ನೀಡುತ್ತಾ ಕೆಲಸ ಮಾಡುತ್ತವೆ. ಪ್ರವೃತ್ತಿಯ ಪ್ರಕಾರ ಕತ್ತಲಿನಲ್ಲಿ ಸರಸರ ಸದ್ದು ಬರುವ ಕಾರಣದಿಂದ ಹೆದರುತ್ತದೆ, ಮನಸ್ಥಿತಿಯು ಸೂಕ್ತವಾದ ಮತ್ತು ಸುರಕ್ಷಿತವಾದ ದಾರಿಯನ್ನು ಹುಡುಕುವುದಕ್ಕೆ ಪ್ರಯತ್ನ ಮಾಡುತ್ತದೆ.

ಹಾಗೆಯೇ ಕೆಲವು ಸಲ ಪರಸ್ಪರ ವಿರೋಧಕ್ಕೂ ಒಳಗಾಗುತ್ತವೆ. ಕೆಲವೊಮ್ಮೆ ಪ್ರವೃತ್ತಿಯ ಅನುಸಾರವಾಗಿ ನಕಾರಾತ್ಮಕ ಅನುಭವಕ್ಕೆ ನಕಾರಾತ್ಮಕವಾಗಿ ಪ್ರತಿಕ್ರಿಯಿಸಲು ಹೋಗುತ್ತೇವೆ. ಯಾರಾದರೂ ನಮ್ಮನ್ನು ಕೆರಳಿಸುವಂತೆ ಮಾತಾಡಿದರೆ ಕೋಪಗೊಂಡು ಅವರ ಮೇಲೆ ಏರಿ ಹೋಗುವುದು ಪ್ರವೃತ್ತಿಯ ಅನುಸಾರವಾಗಿಯೇ. ಆದರೆ, ಹಾಗೆ ಹೋಗುವುದರಿಂದ ಮುಂದಿನ ಪರಿಣಾಮ ಏನಾಗುತ್ತದೆ ಎಂಬುದನ್ನು ಯೋಚಿಸುತ್ತಾ ಸಮಯೋಚಿತವಾಗಿ, ಸಂಯೋಜಿತವಾಗಿ ವರ್ತಿಸುವುದು ಮನಸ್ಥಿತಿಯ ಕೆಲಸವಾಗುತ್ತದೆ. ಪ್ರವೃತ್ತಿಯು ತಾನಾಗಿ ತಾನೇ ವರ್ತಿಸಿದರೆ ಮನಸ್ಥಿತಿಯು ಅದಕ್ಕೆ ಕಡಿವಾಣ ಹಾಕುತ್ತದೆ.

ಹಾಗೆಯೇ ನಾವೆಲ್ಲೋ ಪ್ರಕೃತಿಯಲ್ಲಿ ನಡಿಗೆ ಅಂತ ಕಾಡಿನಲ್ಲಿ ಬೆಟ್ಟ ಗುಡ್ಡಗಳ ಕಣಿವೆಯಲ್ಲಿ ಹೋಗುತ್ತಿರುತ್ತೇವೆ. ಎದುರಿಗೆ ಒಂದು ಚಿರತೆ ಬಂತೆಂದಿಟ್ಟುಕೊಳ್ಳಿ. ಎದೆಯ ಬಡಿತ ಹೆಚ್ಚಾಗಿ ಭಯವಾಗುತ್ತದೆ. ಅಲ್ಲಿಂದ ಓಡಬೇಕು ಅಥವಾ ಏನಾದರೂ ಆಯುಧ ದೊರಕೀತಾ ಹೋರಾಡಲು ಎಂದು ಅನ್ನಿಸುತ್ತದೆ. ಅಪಾಯದ ಸಮಯದಲ್ಲಿ ಪಲಾಯನ ಮಾಡುವುದಾಗಲಿ ಅಥವಾ ಭಯದಿಂದ ಹೋರಾಡುವುದಾಗಲಿ ಪಶು ಸಹಜ ಪ್ರವೃತ್ತಿ. ಅದು ನಮ್ಮದೂ ಕೂಡಾ ಹೌದು. ಆದರೆ ಅರಿವು ಮತ್ತು ತರಬೇತಿ ಹೊಂದಿರುವ ಮನಸ್ಥಿತಿ ಬೇರೆಯೇ ಹೇಳುತ್ತದೆ. ಓಡುವುದು ಸಾಧ್ಯವಿಲ್ಲ. ಅದು ಚಿರತೆ ಆಮೆಯಲ್ಲ. ಹಾಗೆಯೇ ಹೋರಾಡಲೂ ಆಗದು. ಸಲಕರಣೆಗಳೂ ಇಲ್ಲ. ಹಾಗೆ ಹೋರಾಡಿರುವ ಅನುಭವವೂ ಜೀವನದಲ್ಲಿ ಇಲ್ಲ. ಆದರೆ ಅರಿವಿದೆ. ಸಮಾಧಾನವಾಗಿ ನಿಲ್ಲುವುದು. ಅದರ ಕಣ್ಣಿನ ನೋಟಕ್ಕೆ ನಮ್ಮ ಕಣ್ಣೋಟವನ್ನು ಬೆರೆಸದೇ ಇರುವುದು. ಅದರ ಕಡೆಗೆ ಗಮನವೇ ಇರದಂತೆ ಮೆಲ್ಲನೆ ಹಿಂದಕ್ಕೆ ಸರಿಯುತ್ತಾ ಅದರ ಕಣ್ಣೋಟದಿಂದ ಮರೆಯಾಗಿ ಹೋಗಿಬಿಡುವುದು.

ನಮಗಿರುವ ಪ್ರವೃತ್ತಿಯಂತೆ ಓಡುವ ಅಥವಾ ಹೋರಾಡುವ ಯಾವುದೇ ಸೂಚನೆಗಳನ್ನು ತೋರುವಂತಹ ಚಟುವಟಿಕೆಗಳನ್ನು ಮಾಡಿದರೂ ಆ ಪಶುವಿನಲ್ಲಿ ಕೂಡಾ ಅದೇ ಪ್ರವೃತ್ತಿ ಜಾಗೃತವಾಗುತ್ತದೆ. ಅದಕ್ಕೆ ಹೋರಾಡಿ ಅನುಭವವೂ ಇರುತ್ತದೆ. ಅಲ್ಲಿ ಅನುಭವಿ ಹೋರಾಟಗಾರನ ಜೊತೆ ಅನನುಭವಿ ಹೋರಾಟಗಾರನ ನಡುವೆ ಸಂಘರ್ಷ ಆಗುತ್ತದೆ. ಆಗ ಗೆಲ್ಲುವವರು ಯಾರೆಂದು ಊಹಿಸಿ.

ಹಾಗಾಗಿ ಪ್ರವೃತ್ತಿ ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರವೇ ಮೊದಲಾದ ಗುಣಗಳನ್ನು ಸಹಜವಾಗಿ ಹೊಂದಿದ್ದು ಅದಕ್ಕೆ ತಕ್ಕಂತೆ ವರ್ತಿಸಲು ಪ್ರೇರಣೆ ನೀಡುತ್ತದೆ. ಆದರೆ ಮನಸ್ಥಿತಿ ಅಥವಾ ಜಾಗೃತಿಯ ಮನಸ್ಸು ಎಂಬುದು ಅರಿವು, ಅಧ್ಯಯನ, ಅನುಭವ ಮತ್ತು ಅವನ್ನು ಅಳವಡಿಸಿಕೊಳ್ಳುವ ತಂತ್ರವನ್ನು ಪ್ರಯೋಗಿಸುತ್ತಾ ಪ್ರವೃತ್ತಿ ಮತ್ತು ಮನಸ್ಥಿತಿಯ ನಡುವೆ ಸ್ಪಷ್ಟವಾದ ಗೆರೆಯನ್ನು ಎಳೆದುಕೊಳ್ಳಲೇ ಬೇಕು.

ಆದ್ದರಿಂದಲೇ ಮನಸ್ಸಿಗೆ ಹೊರಗಿನಿಂದ ಸಂದೇಶವನ್ನು ಪಡೆಯುವುದಾಗಲಿ ಅಥವಾ ತಾವೇ ಸಂದೇಶವನ್ನು ಕೊಟ್ಟುಕೊಳ್ಳುವುದಕ್ಕಾಗಲಿ ಮುಂದಾದಾಗ ಅದರಲ್ಲಿ ಸ್ಪಷ್ಟತೆಯೂ ಇರಬೇಕು ಮತ್ತು ಅಧಿಕಾರಯುತವಾಗಿಯೂ ಇರಬೇಕು. ಪ್ರವೃತ್ತಿಯ ಗುಣಗಳನ್ನು ನಿಯಂತ್ರಣಕ್ಕೆ ತರುವುದು ಸುಲಭವೇನಲ್ಲ. ಆದರೆ ಅಸಾಧ್ಯವೂ ಏನಲ್ಲ.

ತನ್ನ ತಾನು ಗಮನಿಸಿಕೊಳ್ಳುವುದು ಬಹಳ ಮುಖ್ಯವಾದ ಮಾನಸಿಕ ತರಬೇತಿ. ಮೈ ಮೇಲೆ ಒಂದು ಇರುವೆ ಹೋಗುತ್ತಿದೆ ಎಂದರೆ ತಕ್ಷಣವೇ ಹೊಸಕಿ ಹಾಕಿಬಿಡುವೆನೋ ಅಥವಾ ಅದನ್ನು ಮೆಲ್ಲನೆ ಉರುಬಿ ಅತ್ತ ಉದುರಿಸುತ್ತೇನೋ! ನೋಡಿಕೊಳ್ಳಬೇಕು.

ವ್ಯಕ್ತಿಗಳೊಂದಿಗೆ ವಿರೋಧದ ಭಾವನೆ ಅಥವಾ ಅಭಿಪ್ರಾಯ ಉಂಟಾಗಿರುತ್ತದೆ. ಆ ವ್ಯಕ್ತಿಯನ್ನು ಅವಾಯ್ಡ್ ಮಾಡಲು ಪ್ರಾರಂಭಿಸುತ್ತೇನೆಂದರೆ ಪಲಾಯನ ಮಾಡುತ್ತಿದ್ದೇನೆ. ಆ ವ್ಯಕ್ತಿಗೆ ಎದುರಾಗಿ ನನ್ನ ಎಲ್ಲಾ ವಿಷಯಗಳನ್ನೂ ಆಕ್ರೋಶದಿಂದ, ಆವೇಶದಿಂದ ಹೇಳಿ ಕೋಪ ತೋರಿಸಿಕೊಳ್ಳುತ್ತೇನೆ. ಹೀಗಾದರೆ ನಾನು ಹೋರಾಡುತ್ತಿದ್ದೇನೆ. ಎರಡೂ ಪ್ರವೃತ್ತಿಯ ಫಲಗಳೇ. ಸಮಾಧಾನದಿಂದ ವಿಷಯವನ್ನು ವಿಶ್ಲೇಷಣೆ ಮಾಡಿ, ವಿಚಾರವನ್ನು ವಿನಿಮಯ ಮಾಡಿಕೊಳ್ಳುತ್ತಾ ತಾರ್ಕಿಕವಾದ ಒಂದು ಅಂತ್ಯಕ್ಕೆ ಬರುವುದಕ್ಕೆ ಮನಸ್ಸಿಗೆ ಅರಿವು ಮತ್ತು ಅನುಧಾನ ಅಂದರೆ ಪ್ರಜ್ಞಾಪೂರ್ವಕವಾದ ಎಚ್ಚರಿಕೆ ಇರಬೇಕು. ಅದು ಯಾರೋ ಮಹಾತ್ಮರಂತಹ ದೈವಾಂಶ ಸಂಭೂತರಿಗೆ ಮಾತ್ರ ಬರುವುದಲ್ಲ. ತನ್ನನ್ನು ತಾನು ತಿಳಿಯುತ್ತಾ, ಮನಸ್ಸನ್ನು ತಿಳಿಗೊಳಿಸಿಕೊಳ್ಳುತ್ತಾ ರೂಢಿ ಮಾಡಿಕೊಂಡರೆ ಖಂಡಿತ ಸಾಧ್ಯ.

share
ಯೋಗೇಶ್ ಮಾಸ್ಟರ್,
ಯೋಗೇಶ್ ಮಾಸ್ಟರ್,
Next Story
X