Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ನೆಲದನಿ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಅನುಗಾಲ
  5. ಆಧುನಿಕತೆ, ನಾಗರಿಕತೆ ಮತ್ತು ತಂತ್ರಜ್ಞಾನ

ಆಧುನಿಕತೆ, ನಾಗರಿಕತೆ ಮತ್ತು ತಂತ್ರಜ್ಞಾನ

ಬಾಲಸುಬ್ರಹ್ಮಣ್ಯ ಕಂಜರ್ಪಣೆಬಾಲಸುಬ್ರಹ್ಮಣ್ಯ ಕಂಜರ್ಪಣೆ24 Sept 2026 9:52 AM IST
share
ಆಧುನಿಕತೆ, ನಾಗರಿಕತೆ ಮತ್ತು ತಂತ್ರಜ್ಞಾನ

ಹೊಟ್ಟೆಬಟ್ಟೆಗೆ ಬೇಕಾದಷ್ಟು ಇದ್ದವರಿಗೆ ಹಸಿವಿನ, ಬಾಯಾರಿಕೆಯ ಸದ್ದು ಕೇಳುವುದು ಅಪರೂಪ; ಇಲ್ಲವೆಂದಲ್ಲ. ನಾವೆಂದೋ ಕೇಳಿದ ಉದಾಹರಣೆಯೊಂದು ನೆನಪಾಗುತ್ತದೆ: ಆಫ್ರಿಕಾದ ದೇಶವೊಂದರಲ್ಲಿ ಹಸಿವಿನಿಂದ ಪರಿತಪಿಸುವ, ಇನ್ನೇನು ಸಾಯಲಿರುವ, ನಿತ್ರಾಣದ ಅನಾಥ ಹಸುಗೂಸೊಂದನ್ನು ಹದ್ದೊಂದು ಆಸೆಕಂಗಳಿಂದ ನೋಡುವ ದೃಶ್ಯವನ್ನು ಛಾಯಾಗ್ರಾಹಕನೊಬ್ಬ ಸೆರೆಹಿಡಿದು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿಯನ್ನು ಪಡೆದು ಬಳಿಕ ಪ್ರಾಜ್ಞರ ಟೀಕೆಯನ್ನೆದುರಿಸಲಾರದೆ ಆತ್ಮಹತ್ಯೆ ಮಾಡಿಕೊಂಡನಂತೆ.

ಹೀಗೆಯೇ ಮುಂದುವರಿದರೆ ಆಧುನಿಕ, ನಾಗರಿಕ, ತಂತ್ರಜ್ಞಾನಿಗಳನೇಕರು ಈ ಗುರಿಯನ್ನು ಮುಟ್ಟಬಹುದು!

ನಾ ವಿಂದು ವಿಕಾಸದ ಕೊನೆಯ ಹಂತ ತಲುಪಿದ ಸ್ಥಿತಿಯಲ್ಲಿದ್ದೇವೆ ಅಥವಾ ಹಾಗೆ ತಿಳಿದುಕೊಂಡಿದ್ದೇವೆ. ನಾವು ಆಧುನಿಕರು: ಆದ್ದರಿಂದ ಹಳತೆಲ್ಲವೂ ಗೊಡ್ಡು ಪುರಾಣ; ನಾವು ನಾಗರಿಕರು: ಆದ್ದರಿಂದ ನಮ್ಮ ಯೋಚನೆಯ ಹಂತಕ್ಕೆ ತಲುಪದ ಅಥವಾ ನಮ್ಮನ್ನು ಒಪ್ಪದ ಎಲ್ಲರೂ ಅನಾಗರಿಕರು; ನಾವು ತಂತ್ರಜ್ಞಾನಿಗಳು: ಆದ್ದರಿಂದ ತಂತ್ರಜ್ಞಾನವನ್ನು ಬಳಸದವರು ಅಥವಾ ಅರ್ಥಮಾಡಿಕೊಳ್ಳದವರು ಮೂಢರು; ಹೀಗೆಲ್ಲ ತಿಳಿದುಕೊಳ್ಳುವವರೇ ಹೆಚ್ಚು. ಇಂತಹ ಬಿಟ್ಟಿ ಯೋಚನೆಗಳು ಸಮಾಜವನ್ನು ನಿಯಂತ್ರಿಸುವ ಹೊತ್ತಿಗೆ ಕುಗ್ರಾಮದಲ್ಲೋ ಮಹಾನಗರದ ಸ್ಲಮ್ಮಿನಲ್ಲೋ ಉಳಿದು ಹೋದ ಮನುಷ್ಯರನ್ನು ಗಮನಿಸುವ ಇರಾದೆ ನಮ್ಮ ವಿಕಾಸರಿಗಿರುವುದಿಲ್ಲ.

ಮೇಲ್ನೋಟಕ್ಕೆ ಇವೆಲ್ಲ ಬಹಳ ಅಸಂಗತ ವಿಚಾರಗಳೆನಿಸುತ್ತವೆ. ಆದರೆ ಸಾಮಾಜಿಕ ಜೀವನದಲ್ಲಿ ಸಂಬಂಧಗಳ, ಭಾವನೆಗಳ ಮತ್ತು ಒಟ್ಟಾರೆ ಸಹಜ/ನೈಜ ಬದುಕಿನ ಕೊರತೆ ಎಂದಿಗಿಂತ ಹೆಚ್ಚಾದಂತೆ ಕಾಣುತ್ತದೆ. ಪ್ರತಿಯೊಬ್ಬನೂ ಈ ನೆಲದ ಮೇಲೆ ತನ್ನದೇ ಆದ, ಇಲ್ಲವೇ ತನ್ನಂತೆಯೇ ಯೋಚಿಸುವ, ರೂಢಿಮಾಡಿಕೊಳ್ಳುವ ಮತ್ತು ಬದುಕುವ ಒಂದಷ್ಟು ಜನರ ದ್ವೀಪವನ್ನು ಸೃಷ್ಟಿಸಿಕೊಂಡು ಅದರಿಂದ ಹೊರಗಿರುವ ಜಗತ್ತು ತಮಗೆ ಸಂಬಂಧಿಸಿದ್ದೇ ಅಲ್ಲವೇನೋ, ಅದರ ಪರಿಚಯ ತಮಗೆ ಅಗತ್ಯವೇ ಇಲ್ಲವೇನೋ ಎಂಬಂತೆ ಬದುಕುತ್ತಾರೆ.

ಗ್ರಾಮಗಳು ಮಾತ್ರ ಅಸ್ತಿತ್ವದಲ್ಲಿತ್ತೆಂದು ನಂಬಲು ಸಾಧ್ಯವಿಲ್ಲ. ಯುಗಯುಗಗಳ ಹಿಂದಿನದೆಂದು ಕಲ್ಪಿಸಲಾದ ರಾಮಾಯಣ, ಮಹಾಭಾರತಗಳಲ್ಲೂ ರಾಜಧಾನಿಯೆಂಬ ಕೇಂದ್ರನಗರವೊಂದಿತ್ತು. ಅದರಿಂದಾಚೆಗೆ ಎಲ್ಲವೂ ಹಳ್ಳಿ, ಗ್ರಾಮಗಳ ಪರಿಸರ. ಅಯೋಧ್ಯೆ, ಹಸ್ತಿನಾವತಿ, ದ್ವಾರಕೆ, ಹೀಗೆ. ಇಂದ್ರಪ್ರಸ್ಥವೆಂಬೊಂದು ಜಾಗದಲ್ಲಿ ಅರಮನೆಯನ್ನು ಸೃಷ್ಟಿಸಿದರೂ ಅದು ನಗರವೊಂದನ್ನು ಸೃಷ್ಟಿಸಿದ ವಿವರಗಳಿಲ್ಲ. ಇವೆಲ್ಲವೂ ಸಂಕೇತಿಸುವುದು ಆಡಳಿತಕೇಂದ್ರದ ಪ್ರಭಾವವನ್ನು. ಆ ಕಾಲದಲ್ಲೂ ಜನರು ಈ ಪ್ರಭಾವಳಿಯೊಂದಿಗೆ ಸಹಯೋಗ ಸ್ಥಾಪಿಸಬೇಕಾದರೆ ಈ ಕೇಂದ್ರಕ್ಕೇ ಹೋಗಬೇಕಿತ್ತು. ರಾಜಮಹಾರಾಜರ ಆಸ್ಥಾನಗಳಲ್ಲಿ ಶೋಭಿಸುವ ಋಷಿಮುನಿಗಳ, ಪುರೋಹಿತರ ಹಾಜರಾತಿಯನ್ನು ಗಮನಿಸಿದರೆ ಅವರೂ ಅನುಕೂಲ, ಅಗತ್ಯಗಳಿಗಾಗಿ ತಮ್ಮ ಪರ್ಣಕುಟೀರಗಳನ್ನು ತೆರವುಮಾಡಿ ಈ ಕೇಂದ್ರಕ್ಕೇ ನಡೆದುಹೋಗಿರಬೇಕೆನ್ನಿಸುತ್ತದೆ. ಇತರರೂ ಸೇನೆಯಲ್ಲಿ ಆಡಳಿತದ ಇತರ ರೆಕ್ಕೆಪುಕ್ಕಗಳಲ್ಲಿದ್ದು ಹಸನುಬದುಕನ್ನು ಕಾಣುವುದಕ್ಕಾಗಿ ಕೇಂದ್ರಗಳನ್ನು ತಲುಪುವುದು ಆಗಲೂ ಇತ್ತೆಂದು ಕಾಣುತ್ತದೆ. ಇತರರು ಬಡವರಾಗಿಯೇ ಇದ್ದರು ಮತ್ತು ಈ ರಾಜಧಾನಿಗಳಲ್ಲಿ ಸಿಗುತ್ತಿದ್ದ ಸೌಕರ್ಯ, ಸವಲತ್ತುಗಳಿಂದ ವಂಚಿತರಾಗಿದ್ದರು, ಬವಣೆ ಪಡುತ್ತಿದ್ದರು ಎಂಬುದನ್ನು ಆ ಕಾಲದ ಪ್ರತಿಬಿಂಬ-ಗತಿಬಿಂಬಗಳನ್ನು ಸೃಷ್ಟಿಸಿದ ಸಾಹಿತ್ಯದಿಂದ ಗೊತ್ತಾಗುತ್ತದೆ. ಅರಣ್ಯಪ್ರದೇಶಗಳಲ್ಲಿರುತ್ತಿದ್ದ ಸಾಧು, ಋಷಿಮುನಿಗಳು (ಅಥವಾ ಅರಣ್ಯಪ್ರದೇಶಗಳಲ್ಲಿ, ನಾಗರಿಕತೆಯ ಸೋಂಕಿಲ್ಲದಿರುತ್ತಿದ್ದ ಪ್ರದೇಶಗಳಲ್ಲಿರುತ್ತಿದ್ದವರನ್ನೇ ಋಷಿಮುನಿಗಳೆಂದು ಕರೆಯುತ್ತಿರಬಹುದು!) ಸದಾ ರಾಕ್ಷಸರ ಹಾವಳಿಗೆ ತುತ್ತಾಗುತ್ತಿದ್ದರೆಂದು ಬಣ್ಣಿಸುವುದು ಅಲ್ಲೂ ಹಸಿವು ಬಾಯಾರಿಕೆಗಳಿರುವ ಮಂದಿ ಇದ್ದರೆಂಬುದನ್ನು ತೋರಿಸಿ ಅದಕ್ಕಾಗಿ ಕಲಹಗಳಾಗುತ್ತಿದ್ದವೆಂಬುದಕ್ಕೆ ಅದನ್ನು ದಾಳಿಯೆಂಬ ಸ್ವರೂಪದಲ್ಲಿ ಹೇಳಿರಬಹುದು! ಅಲ್ಲಿ ಎಲ್ಲರೂ ಬಡವರೇ. ಅವರ ಜೀವನ ಈ ಕೇಂದ್ರಗಳಲ್ಲಿರುವವರಿಗೆ ಮೋಜಿನ ವಿಚಾರ. ಶ್ರೀರಾಮನನ್ನು, ಪಾಂಡವರನ್ನು ಅರಣ್ಯದಲ್ಲಿ ಸತ್ಕರಿಸಿದವರಿಗೆ ಆದಾಯಮೂಲವೇನಿದ್ದಿರಬಹುದು!

ಇದನ್ನು ಮುದ್ದಣ ಕವಿ ತನ್ನ ಶ್ರೀರಾಮಾಶ್ವಮೇಧದಲ್ಲಿ ಕಾವ್ಯದ ಹೊರಗೂ ಒಳಗೂ, ಭೂತಕಾಲದಲ್ಲೂ ವರ್ತಮಾನಕಾಲದಲ್ಲೂ ನಿಂತು ಮಾರ್ಮಿಕವಾಗಿ ಹೇಳಿದ್ದಾನೆ: ಉತ್ತರಕಾಂಡದಲ್ಲಿ ಶ್ರೀರಾಮನು ತನ್ನ ಅಕ್ಷೋಹಿಣಿ ಸೇನೆಯೊಂದಿಗೆ ಅರಣ್ಯದಲ್ಲಿ ಬೀಡುಬಿಟ್ಟಾಗ ವಾಲ್ಮೀಕಿ ಮುನಿ ಅವರೆಲ್ಲರಿಗೆ ಆಹಾರ ನೀಡಿ ಸತ್ಕರಿಸಿದನಂತೆ. ಈ ವಿವರಣೆಯ ಹಂತದಲ್ಲಿ ಮುದ್ದಣನ ಪತ್ನಿ ಮನೋರಮೆ ಅವರೆಲ್ಲರನ್ನು ಸತ್ಕರಿಸಲು ವಾಲ್ಮೀಕಿಯಲ್ಲಿ ಏನು ಸಂಗ್ರಹವಿತ್ತು ಎಂಬ ಸಂಶಯವನ್ನು ವ್ಯಕ್ತಪಡಿಸಿದಾಗ ಮುದ್ದಣನು ಸಪ್ತಾಕ್ಷರೀ ಮಂತ್ರವೆಂಬ ಸೂತ್ರವಿದೆಯಲ್ಲ ಎನ್ನುತ್ತಾನೆ. ಅದನ್ನು ಆಕೆ ಮತ್ತಷ್ಟು ಕೆದಕಿದಾಗ ಮುದ್ದಣನು ಆ ಮಂತ್ರವೆಂದರೆ ‘ಭವತಿ ಭಿಕ್ಷಾಂದೇಹಿ’ ಎನ್ನುತ್ತಾನೆ. ಇದು ವಿದ್ವಾಂಸರ ಪಾಲಿಗೆ ಏನು ಅರ್ಥ ನೀಡುತ್ತದೆಯೋ ಗೊತ್ತಿಲ್ಲ, ಪಾಮರರ ಪಾಲಿಗೆ ಭಿಕ್ಷೆಬೇಡುವುದೆಂದೇ ಅರ್ಥ. ಇದನ್ನು ಮೂರ್ತೀಕರಿಸುವುದಾದರೆ ಆಗ ಹಳ್ಳಿಯಲ್ಲಿರುವವರು ಸ್ವಂತ ಆದಾಯವಿಲ್ಲದೆ ತಮ್ಮ ಜೀವನೋಪಾಯಕ್ಕೆ ನಗರಗಳಲ್ಲೋ ಇತರೆಡೆಯಲ್ಲೋ ಭಿಕ್ಷೆಬೇಡುತ್ತಿದ್ದರೇನೋ ಎಂದು ಅನ್ನಿಸುತ್ತದೆ. ಪುರಾಣ ಸಮಕಾಲೀನವಾಗುವುದು ಇಂತಹ ಕಲ್ಪನೆಗಳಿಂದ. ಯಾವುದು ಭೂತಕಾಲವನ್ನು ಕಲ್ಪಿಸಿ ಅವುಗಳಿಗೆ ವರ್ತಮಾನದ ಸ್ಪಂದನೆಯನ್ನು ನೀಡಿ ಚಿತ್ರಿಸುತ್ತದೆಯೋ ಅದು ಭವಿಷ್ಯಕ್ಕೂ ಕನ್ನಡಿ ಹಿಡಿಯುತ್ತದೆ.

ಪುರಾಣಗಳಿಂದ ಇತಿಹಾಸದ ಪ್ರಪಂಚಕ್ಕೆ ಬಂದರೂ ಅಷ್ಟೇ: ನಾಗರಿಕತೆಯಿತ್ತೆಂದು ನಾವು ಸಾಬೀತು ಪಡಿಸುವ ಹರಪ್ಪ ಮೊಹೆಂಜೋದಾರೋ, ಮೆಸಪಟೋಮಿಯಾ, ಟೈಗ್ರಿಸ್ ನದೀತಟದ ನಾಗರಿಕತೆ ಇವೆಲ್ಲ ಒಂದು ಗೊತ್ತಾದ, ನಿಗದಿತ, ವರ್ತುಲದಲ್ಲಿ ಜನರು ಒಟ್ಟಾಗಿ ಬದುಕಿದರೆಂದು ಹೇಳುತ್ತದೆಯೇ ಹೊರತು ಇತರೆಡೆ ಮನುಷ್ಯರಿದ್ದರಲ್ಲ, ಅವರ ಕತೆಯನ್ನು ವಿವರಿಸುವುದಿಲ್ಲ. ಹರಪ್ಪ ಮೊಹೆಂಜೋದಾರೋಗಳಲ್ಲಿ ಮಾತ್ರ ಜನರು ವಾಸವಿದ್ದದ್ದಲ್ಲ. ಆದರೆ ಚರಿತ್ರಕಾರರ, ಚಿಂತನಕಾರರ, ಸಾಹಿತಿಗಳ ಚಿತ್ತ ಇತರೆಡೆಗೆ ವಿಸ್ತರಿಸಲಿಲ್ಲ. ಇಂದು ನಮ್ಮ ಮಾಧ್ಯಮಗಳು ಪ್ರಸಿದ್ಧ ರಾಜಕಾರಣಿಗಳ, ಚಲನಚಿತ್ರ ತಾರೆಯರ, ಕ್ರೀಡಾಪಟುಗಳ, ಕಲಾವಿದರ ದಿನಚರಿಗಳ ಚಿಕ್ಕಪುಟ್ಟ ಮತ್ತು ಅನಗತ್ಯ ಅಂಶಗಳನ್ನೂ ಸುದ್ದಿಮಾಡುವಂತೆ ಆಗಲೂ ಮುಖ್ಯಾತಿಮುಖ್ಯರ ಜೀವನ, ವ್ಯವಹಾರವಷ್ಟೇ ಚರಿತ್ರೆಯೆಂದು ಚಿತ್ರಿಸಲಾಗಿತ್ತು. ರಾಜಕುಟುಂಬದ ವಿರಸ, ಜಗಳ, ಆ ಕಾಲದ (ಯುಗದ?) ಮತ್ತು ಆ ಭೂಪ್ರದೇಶದ ಸಂಘರ್ಷವೆಂಬಂತೆ ಹೇಳಲಾಗುತ್ತಿತ್ತು. ಕನ್ನಡದ ಸಂದರ್ಭದಲ್ಲಿ ಅಲಕ್ಷಿತ ಸಮುದಾಯದ ಸ್ಥೂಲ ಚಿತ್ರಣ ಕುಮಾರವ್ಯಾಸ ಭಾರತದಲ್ಲಿ ಒಂದಷ್ಟಿದೆಯಾದರೂ ಮುದ್ದಣನಿಂದ ಇದು ಹೆಚ್ಚು ಬೆಳೆಯಿತೆಂದುಕೊಳ್ಳಬಹುದು. ಮುಖ್ಯವಾಗುತ್ತಿರುವುದು ಇತ್ತೀಚೆಗಿನ ಬೆಳವಣಿಗೆ.

ಪೌರಾಣಿಕ, ಐತಿಹಾಸಿಕ, ನಾಗರಿಕತೆಯು ಬೆಳಕೋ ಬೆಂಕಿಯೋ ಎಂಬ ಜಿಜ್ಞಾಸೆ ನಡೆಯಲೇ ಇಲ್ಲ. ಅದರ ಪ್ರಭೆಯು, ಶಾಖವು ಎಲ್ಲರನ್ನೂ ಒಂದಲ್ಲ ಒಂದು ಕಾರಣಕ್ಕೆ ಆಹ್ವಾನಿಸಿರಬೇಕು ಅಥವಾ ಆಕರ್ಷಿಸಿರಬೇಕು. ನಾಗರಿಕರೆಂದರೆ ಈ ಕೇಂದ್ರಗಳಲ್ಲಿರುವವರು ಮಾತ್ರವೇ ಎಂಬ ಪ್ರಮೇಯದ ಪ್ರವಾಹವೊಂದು ವಿಕಾಸದ ಹಾದಿಯೆಂಬ ಭ್ರಮೆಯನ್ನು ಹೊತ್ತು ಸಾಗಿದಂತೆ ಕಾಣುತ್ತದೆ. ಆ ಕಾಲದಲ್ಲೂ ಗೊಡ್ಡುಹಳತು ಮತ್ತು ಆ ಕಾಲದ ಆಧುನಿಕತೆಯ ನಡುವೆ ಒಂದಷ್ಟು- ಘರ್ಷಣೆಯಲ್ಲದಿದ್ದರೂ-ತಿಕ್ಕಾಟ, ಚರ್ಚೆ ನಡೆಯುತ್ತಲೇ ಇತ್ತೆಂದು ಅಷ್ಟಾವಕ್ರನ ಪ್ರಸಂಗದಿಂದ ಅನ್ನಿಸಬಹುದು. ಆದರೆ ವ್ಯವಸ್ಥೆಯನ್ನು ವೈಭವೀಕರಿಸಿ ಅದರೊಂದಿಗೇ ನಡೆಯಬಯಸುವವರು ಅದರ ಪರವಾಗಿ ಹೂಡಿದ ವಾದಗಳು ಹೆಚ್ಚು ಜನರಿಗೆ ಅನುಕೂಲಕರವಾದ್ದರಿಂದ ಅದೇ ಪ್ರಧಾನವಾಯಿತು. ಉಳಿದವರ ಬದುಕು, ಆತಂಕಗಳು ಅರಣ್ಯರೋದನವಾದವು.

ಇತ್ತೀಚೆಗಿನ ವರ್ಷಗಳಲ್ಲಿ ಎಲ್ಲವೂ ಆಧುನಿಕವಾಗತೊಡಗಿವೆ. ನಗರಗಳ ವಿಕಾಸ ಇವುಗಳಿಗೆ ಕಾರಣವಿರಬಹುದೆಂಬುದು ನನ್ನ ತರ್ಕ. ಇದರ ಇನ್ನಷ್ಟು ವಿವರಗಳನ್ನು ಪರಿಣತ ಸಮಾಜಶಾಸ್ತ್ರೀಯ ವಿಜ್ಞಾನಿಗಳು ಹೇಳಬಹುದು. ಆದರೆ ನಾಗರಿಕತೆಯೆಂದರೆ ನಗರ-ಪಟ್ಟಣಗಳ ಬದುಕಷ್ಟೇ ಎಂಬ ಹಾಗೆ ನಮ್ಮ ಚಿಂತನೆಯಲ್ಲದಿದ್ದರೂ ಯೋಚನೆಯಿದೆ. ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಹೆಸರು ಗಳಿಸಬೇಕೆಂದರೆ ವಿಜಯನಗರಕ್ಕೆ ಹೋಗಬೇಕೆಂದು ಬಹಳಷ್ಟು ಜನರು ನಿರ್ಧರಿಸಿದಂತಿತ್ತು. ಇದಕ್ಕೆ ಸರಿಯಾಗಿ ನಮಗೆ ತಿಳಿದಿರುವ ಆ ಕಾಲದಲ್ಲಿ ಹೆಸರು ಮಾಡಿದ ಕಲಾವಿದರೆಲ್ಲ-ದಾಸರೂ ಸೇರಿ-ವಿಜಯನಗರದಲ್ಲಿದ್ದವರೇ. ಈ ಆಸ್ಥಾನಕೃಪೆ ಮತ್ತು ಆಸ್ಥಾನಪೋಷಣೆ ಸಂದವರೇ ನಾಗರಿಕರು ಎಂಬ ಧೋರಣೆ ಇಂದಿಗೂ ಮುಂದುವರಿದಿದೆ. ಈಗಲೂ ಪ್ರಸಿದ್ಧಿ ಎಲ್ಲ ಕಡೆಗೂ ವಿಸ್ತರಿಸಿದ ಉದಾಹರಣೆಗಳಿವೆಯಾದರೂ ಬಹುಪಾಲನ್ನು ಆಕ್ರಮಿಸುವುದು ಬೆಂಗಳೂರೋ ದಿಲ್ಲಿಯೋ ಆಗಿದೆ.

ಇದಕ್ಕೆ ಇನ್ನೊಂದು ಕಾರಣ ತಂತ್ರಜ್ಞಾನ. ಇದು ಯಂತ್ರಜ್ಞಾನವಾದರೂ ಫಲಿತಾಂಶ ಒಂದೇ. ಇಂದು ಯಾವುದೇ ಸೌಕರ್ಯವೂ ಈ ನಾಗರಿಕತೆಯ ಕೇಂದ್ರಗಳಿಗೇ ಸಲ್ಲುತ್ತವೆ. ಆಡಳಿತ ಮತ್ತು ಅಧಿಕಾರಶಾಹಿ ಇದನ್ನು ಇತರೆಡೆ ವಿಸ್ತರಿಸುವ ಧೋರಣೆಯನ್ನು ಹೊಂದಿದ್ದಾರಾದರೂ, ಇದರ ಸರ್ವಾನುಕೂಲಗಳೂ ಸಿಗುತ್ತಿರುವುದು ನಾಗರಿಕತೆಯ ಕೇಂದ್ರಗಳಿಗೇ. ಸುಲಭವಾಗಿ ಸಿಕ್ಕುವುದು ಶಾಶ್ವತವಲ್ಲವೆಂಬ ಸಿದ್ಧಾಂತದ ಸತ್ಯ ಬದಲಾಗದಿದ್ದರೂ ಶಾಶ್ವತವೇ ಬೇಡವೆಂದಾಗ, ತತ್ಕಾಲದ, ಲಾಭಗಳೇ ಮೌಲ್ಯರೂಪ ತಾಳಿದಾಗ, ಸುಲಭ ಸಂಪರ್ಕದ ಹಾದಿಯೇ ಅನುಕೂಲವಾಗುತ್ತದೆ. ಉದಾಹರಣೆಗೆ ಬೆಂಗಳೂರಿನಲ್ಲಿ ರಾಜ್ಯದ ಸುಮಾರು ಶೇ. ೨೦ ಜನರು ವಾಸಮಾಡುತ್ತಿದ್ದಾರೆಂದು ಈಚಿನ ಅಂಕಿ-ಅಂಶಗಳು ಹೇಳುತ್ತವೆ. (ಇದು ದಿನೇದಿನೇ ಹೆಚ್ಚಾಗುತ್ತಿದೆ!) ಆಡಳಿತ ಕೇಂದ್ರವಾಗಿರುವುದು, ಮೊದಲನೆಯ ಕಾರಣವಾದರೆ, ಊದ್ಯೋಗ ಮತ್ತು ಬದುಕಿಗೆ ಲಭ್ಯವಿರುವ ನೂರೊಂದು ದಾರಿಗಳು, ರಹದಾರಿಗಳು ಇನ್ನೊಂದು ಕಾರಣವೂ ಹೌದು. ಆದರೆ ರಾಜಧಾನಿಯಿಂದ ಈ ಕಾರಣಗಳನ್ನೇ ರಾಜ್ಯದ ಇತರೆಡೆಗಳಿಗೆ ವಿಸ್ತರಿಸಲು ಏನು ಪ್ರಯತ್ನಗಳು ಸಾಗಿವೆ? ಅರಣ್ಯ, ಬಂದರು, ಮಾತ್ರವಲ್ಲ, ಭಾಷೆ, ಸಾಹಿತ್ಯ, ಶಿಕ್ಷಣ ಹೀಗೆ ಎಲ್ಲವೂ ಮಹಾನಗರದಲ್ಲಿರುವುದು ಅನಿವಾರ್ಯವೇ? ಶಿಕ್ಷಣಸಂಸ್ಥೆಗಳನ್ನು ಇತರೆಡೆಯೂ ತೆರೆಯಬಹುದಲ್ಲವೇ? ಜನರನ್ನು ಆಕರ್ಷಿಸುವುದೇ ಮಹಾನಗರಗಳ ಸೌಕರ್ಯಗಳು ಮತ್ತು ಮೋಜಿನ ಅವಕಾಶಗಳು. ಅವು ನಮ್ಮನ್ನು ಹೆಚ್ಚು ಆಧುನಿಕರಾಗಿ, ಹೆಚ್ಚು ನಾಗರಿಕರಾಗಿ, ಹೆಚ್ಚು ತಂತ್ರಜ್ಞಾನಿಗಳಾಗಿ ಬೆಳೆಸುತ್ತಿದೆಯೇ? ಸಂಶಯವಿದೆ. ಏಕೆಂದರೆ ಒಂದು ಸುಶಿಕ್ಷಿತ, ಸಭ್ಯ, ಸಜ್ಜನ ಸಮಾಜವನ್ನು ಇವು ಯಾವುವೂ ತನ್ನಿಂದತಾನೇ ಸೃಷ್ಟಿಸಲು ಸಾಧ್ಯವಿಲ್ಲ. ವೈದ್ಯಕೀಯ, ನ್ಯಾಯಾಂಗದ ಅಥವಾ ಐಐಎಂ, ಐಐಟಿ ಮುಂತಾದ ಭಾರೀ ಹೆಸರು ಮಾಡಿದ, ಬುದ್ಧಿವಂತರ ಸಂಸ್ಥೆಗಳೆಂದು ಬಣ್ಣಿಸಲಾದ ಸಂಸ್ಥೆಗಳಲ್ಲಿರುವವರೂ ಅವಿವೇಕಿಗಳಂತೆ, ಸ್ವಾರ್ಥಿಗಳಂತೆ, ವರ್ತಿಸುವುದನ್ನು ಕಾಣುತ್ತೇವೆ. ಔಷಧಿ ತಯಾರಿಕಾ ಸಂಸ್ಥೆಗಳು ಹೇಗೆ ಅಕ್ರಮವನ್ನೆಸಗುತ್ತಾರೆಂದು ಸಾಕಷ್ಟು ಸುದ್ದಿಯಾಗಿದೆ ಮಾತ್ರವಲ್ಲ, ಕ್ಯಾನ್ಸರ್‌ನಂತಹ ಮಾರಕ ರೋಗದ ಹೆಸರಿನಲ್ಲಿ ವೃತ್ತಿಪರರೂ ಅಕ್ರಮವನ್ನೆಸಗುತ್ತಿರುವುದನ್ನು ಸರ್ವೋಚ್ಚ ನ್ಯಾಯಾಲಯವೇ ಮನಗಂಡಿದೆ. ನಮ್ಮ ಭಾರತೀಯ (ಅಥವಾ ಆಯಾಯ ರಾಜ್ಯದ) ಸೇವೆಗಳನ್ನೇ ಗಮನಿಸಿ. ಪ್ರತೀ ಜಿಲ್ಲೆಯಲ್ಲಿ, ಇಲಾಖೆಯಲ್ಲಿ ವಿವಿಧ ಹೊಣೆಯನ್ನು ಹೊತ್ತ ಈ ಸಾಂದರ್ಭಿಕ ಪ್ರತಿಭಾವಂತರಿದ್ದಾರೆ. ಇವರೆಲ್ಲ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ಆಯ್ಕೆಯಾಗಿ ಉತ್ತೀರ್ಣರಾಗಿ ತಮ್ಮ ಕನಸುಗಳನ್ನು, ಆಸೆ-ಆಕಾಂಕ್ಷೆಗಳನ್ನು ಹೇಳುವಾಗ ಭಾರತವು ಕವಿ ರವೀಂದ್ರರು ಕನಸು ಕಂಡ ಹೊಸ ಯುಗಕ್ಕೆ, ಸ್ವರ್ಗಕ್ಕೆ, ಕಾಲಿಟ್ಟಿತೆಂದು ನಂಬಬೇಕು. ಆದರೆ ತರಬೇತಿ ಪಡೆದು ಉದ್ಯೋಗ ಖಾತರಿಯಾದ ಮೇಲೆ ಇವರಲ್ಲಿ ಬಹುಪಾಲು ಬುದ್ಧಿವಂತರು ತಮ್ಮ ತಮ್ಮ ಇಲಾಖೆಯ ಅಥವಾ ಪ್ರಾದೇಶಿಕ ವರ್ತುಲದ ಭ್ರಷ್ಟಾಚಾರವನ್ನು ಹೋಗಲಾಡಿಸಿದ ಉದಾಹರಣೆ ಸಿಗದು. ಬದಲಿಗೆ ಇವೆಲ್ಲವೂ ಸೋಗಲಾಡಿತನದ ಮತ್ತು ಅವಿವೇಕತನದ ವಿದ್ಯೆ ಮತ್ತು ಬುದ್ಧಿಯೆಂಬುದು ಸ್ಪಷ್ಟವಾಗುತ್ತದೆ. ಇಷ್ಟೇ ಅಲ್ಲ, ಸದ್ಯ ಬಹುತೇಕ ಸರಕಾರಗಳು ತರುವ ಮಾರಕ ಮತ್ತು ಜನವಿರೋಧಿ ಶಾಸನಗಳೆಲ್ಲವೂ ಇಂಥವರ ವರದಿಗಳ, ಕೌಶಲದ ಮತ್ತು ಕಾರ್ಖಾನೆಗಳಲ್ಲೇ ತಯಾರಾಗುತ್ತವೆ. ತಾವೂ ಲಾಭ ಮಾಡಿಕೊಂಡು, ಹುಟ್ಟಾ ಭ್ರಷ್ಟರಾಗಿರುವ ರಾಜಕಾರಣಿಗಳಿಗೂ ಹಣಮಾಡುವ ತಂತ್ರಜ್ಞಾನವನ್ನು ಧಾರೆಯೆರೆಯುವ ಈ ಸೇವಾಧಾರಿಗಳು ಎಂದೂ ಜನರ ಹಿತ ಅಥವಾ ಸಾಮರಸ್ಯವನ್ನು ಕನಸುಕಂಡವರಲ್ಲವೆಂದೇ ನಂಬಬೇಕಾಗುತ್ತದೆ.

ಅಂದರೆ ಆಧುನಿಕತೆ, ನಾಗರಿಕತೆ, ತಂತ್ರಜ್ಞಾನ ಇವೆಲ್ಲವೂ ನಾವಿಂದು ಕಾಣುವ ಕೃತಕ ಬುದ್ಧಿಮತ್ತೆಗಿಂತ ಭಿನ್ನವಲ್ಲ. ಅವು ನಮ್ಮ ಸಹಜ ಬೆಳವಣಿಗೆಗಳಿಗಿಂತ ಸ್ವಲ್ಪ ಹೆಚ್ಚಿನದ್ದೆಂದು ಅನ್ನಿಸಬಹುದು. ಆದರೆ ತಳದಲ್ಲಿರುವುದು ಸ್ವಾರ್ಥ ಮತ್ತು ಲಾಭ. ಈ ಯಾವುದೇ ಅಂಗವನ್ನೂ ವಿಶ್ಲೇಷಿಸಿದರೆ ಕೊನೆಗೂ ಯಾರು ಮತ್ತು ಯಾವ ಮೂಲಕ ಹೆಚ್ಚು ಸಂಪಾದನೆ ಅಥವಾ ಹಣಸಂಗ್ರಹವಾಗುತ್ತದೆಂಬುದೇ ಬದುಕಿನ ಹಿರಿಮೆ ಮತ್ತು ಸುಖವೆಂಬ ಕಲ್ಪನೆಗೆ ಬಂದು ತಲುಪುತ್ತೇವೆ. ಹಾಗಿರುವವರನ್ನು ಯಶಸ್ವೀ ವೃತ್ತಿಪರರೆಂದೋ, ಉದ್ಯೋಗಿಗಳೆಂದೋ ತಿಳಿಯುತ್ತೇವೆ. ಬಿಳಿ ಕಾಲರಿನ ಬಹಳಷ್ಟು ಉದ್ಯೋಗಿಗಳು ಇತರರಂತೆ ಪಗಾರದ ಗುಲಾಮರು. ಅವರ ನಿಲುವು ನಿಜಕ್ಕೂ ನಿಷ್ಠೆಯದ್ದೋ ಗುಲಾಮಗಿರಿಯದ್ದೋ ಎಂದು ನಿರ್ದುಷ್ಟವಾಗಿ ಹೇಳಲಾಗದು.

ಮಹಾನಗರಗಳಲ್ಲಿ ದೊಡ್ಡದೊಡ್ಡ ಬಂಗಲೆಗಳು, ಅಪಾರ್ಟ್‌ಮೆಂಟುಗಳು ಸಾಮರಸ್ಯದ ಸಮಾಜವನ್ನು ಕಟ್ಟಬೇಕಿತ್ತು. ಆದರೆ ಅವೆಲ್ಲವೂ ಪರಸ್ಪರ ಸಂಪರ್ಕವಿಲ್ಲದ ಸೆರೆಮನೆಗಳಂತೆ ಇರುತ್ತವೆ. ಅವರು ಜೊತೆಯಾಗುವುದು ಮೋಜಿಗೆ ಅಥವಾ ನೇತ್ಯಾತ್ಮಕತಗೇ ಹೊರತು ನಮ್ಮ ಅಗತ್ಯ ಸಮಸ್ಯೆಗಳ ಪರಿಹಾರಕ್ಕಲ್ಲ. ಅದಲ್ಲವಾದರೆ ಈ ೮ ದಶಕಗಳ ಸ್ವತಂತ್ರ ಭಾರತ ಹೀಗಿರುತ್ತಿರಲಿಲ್ಲ. ಹೊಟ್ಟೆಬಟ್ಟೆಗೆ ಬೇಕಾದಷ್ಟು ಇದ್ದವರಿಗೆ ಹಸಿವಿನ, ಬಾಯಾರಿಕೆಯ ಸದ್ದು ಕೇಳುವುದು ಅಪರೂಪ; ಇಲ್ಲವೆಂದಲ್ಲ. ನಾವೆಂದೋ ಕೇಳಿದ ಉದಾಹರಣೆಯೊಂದು ನೆನಪಾಗುತ್ತದೆ: ಆಫ್ರಿಕಾದ ದೇಶವೊಂದರಲ್ಲಿ ಹಸಿವಿನಿಂದ ಪರಿತಪಿಸುವ, ಇನ್ನೇನು ಸಾಯಲಿರುವ, ನಿತ್ರಾಣದ ಅನಾಥ ಹಸುಗೂಸೊಂದನ್ನು ಹದ್ದೊಂದು ಆಸೆಕಂಗಳಿಂದ ನೋಡುವ ದೃಶ್ಯವನ್ನು ಛಾಯಾಗ್ರಾಹಕನೊಬ್ಬ ಸೆರೆಹಿಡಿದು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿಯನ್ನು ಪಡೆದು ಬಳಿಕ ಪ್ರಾಜ್ಞರ ಟೀಕೆಯನ್ನೆದುರಿಸಲಾರದೆ ಆತ್ಮಹತ್ಯೆ ಮಾಡಿಕೊಂಡನಂತೆ.

ಹೀಗೆಯೇ ಮುಂದುವರಿದರೆ ಆಧುನಿಕ, ನಾಗರಿಕ, ತಂತ್ರಜ್ಞಾನಿಗಳನೇಕರು ಈ ಗುರಿಯನ್ನು ಮುಟ್ಟಬಹುದು!

(ಅಂಕಣಕಾರರು ಸಾಹಿತಿ, ಹಿರಿಯ ವಕೀಲರು)

Tags

ModernityCivilizationTechnology
share
ಬಾಲಸುಬ್ರಹ್ಮಣ್ಯ ಕಂಜರ್ಪಣೆ
ಬಾಲಸುಬ್ರಹ್ಮಣ್ಯ ಕಂಜರ್ಪಣೆ
Next Story
X