Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಅನುಗಾಲ
  5. ರಾಜಕಾರಣಕ್ಕೆ ಕಾನೂನು

ರಾಜಕಾರಣಕ್ಕೆ ಕಾನೂನು

ಬಾಲಸುಬ್ರಹ್ಮಣ್ಯ ಕಂಜರ್ಪಣೆಬಾಲಸುಬ್ರಹ್ಮಣ್ಯ ಕಂಜರ್ಪಣೆ27 Aug 2026 11:16 AM IST
share
ರಾಜಕಾರಣಕ್ಕೆ ಕಾನೂನು

ಕಾನೂನಿನ ವ್ಯವಸ್ಥೆಯನ್ನು ರಾಜಕಾರಣಿಗಳಷ್ಟು ದುರುಪಯೋಗ ಮಾಡಿದವರು, ಮಾಡುವವರು ಬೇರೆ ಕ್ಷೇತ್ರದಲ್ಲಿ ಇರಲಾರರು. ಜನರು ತಮ್ಮ ಹಕ್ಕನ್ನು ಪಡೆಯಲು ನೆರವಾಗುವ ಔದಾರ್ಯದ ವೃತ್ತಿಪರರು ಇದ್ದಾರೆ. ಅವರಿಂದ ಪ್ರಾಥಮಿಕ ನೆರವನ್ನು ಪಡೆದರೆ ಆನಂತರದ ಕೆಲಸ ಸುಲಲಿತವಾದೀತು. ಉದಾಹರಣೆಗೆ ಕ್ರಿಮಿನಲ್ ದೂರೊಂದನ್ನು ಸಲ್ಲಿಸಬೇಕಾದರೆ ಏನು ಮಾಡಬೇಕೆಂಬುದನ್ನು ಉಚಿತ ಕಾನೂನು ನೆರವಿನ ಕೇಂದ್ರಗಳಲ್ಲಿ ಪಡೆಯಬಹುದು. ಇದಕ್ಕೆ ಹೆಚ್ಚಿನ ವೆಚ್ಚವೇನಿಲ್ಲ. ಜೊತೆಗೇ ಸೂಕ್ತ ಮಾರ್ಗದರ್ಶನವನ್ನೂ ಪಡೆಯಬಹುದು. ಆದರೆ ಹಲವಾರು ಕಾರಣಗಳಿಂದಾಗಿ ನಮ್ಮ ಪ್ರಜೆಗಳಿಗೆ ಪ್ರಚಾರದಲ್ಲಿರುವ ವ್ಯಕ್ತಿಗಳು ಅದರಲ್ಲೂ ರಾಜಕಾರಣಿಗಳು, ಸಾಹಿತಿಗಳು, ಬುದ್ಧಿಜೀವಿಗಳು ಸರ್ವಜ್ಞಾನಿಗಳೆಂಬ ಭ್ರಮೆಯಿದೆ. ರಾಜಕಾರಣಿಗಳನ್ನು ಹೊರತುಪಡಿಸಿ ಇತರ ವರ್ಗದಲ್ಲಿರುವವರು ಕೆಟ್ಟದ್ದನ್ನು ಮಾಡುತ್ತಾರೆಂಬ ಶಂಕೆಯಿಲ್ಲವಾದರೂ ಅವರು ಕಾನೂನನ್ನು ತಮ್ಮ ಮೂಗಿನ ನೇರಕ್ಕೆ ಅರ್ಥವಿಸಿ ಸಾಕಷ್ಟು ಹಾನಿ ಮಾಡುವ ಸಂದರ್ಭ, ಸಾಧ್ಯತೆಗಳಿವೆ.

ಕಾನೂನು ರಾಜಕಾರಣಿಗಳ ಕುರಿತು ಮೃದು ಧೋರಣೆಯನ್ನು ತೋರಿಲ್ಲ. ಆದರೆ ನ್ಯಾಯಾಂಗದ ಮೂಲಕ ಕಾನೂನನ್ನು ಬೇಕಾದ ರೀತಿಯಲ್ಲಿ ತಿರುಚಿ ಕಾಲಯಾಪನೆ ಮಾಡುವುದು ರಾಜಕಾರಣಿಗಳಿಗೆ ಒಂದು ಚಟವಾಗಿದೆ. ಈ ಕಾರ್ಯದಲ್ಲಿ ಅವರಿಗೆ ನೆರವಾಗುವವರು ಹಿರಿಯ ಹಂತದ ವಕೀಲರು. ಉಚ್ಚ ಮತ್ತು ಸರ್ವೋಚ್ಚ ನ್ಯಾಯಾಲಯಗಳಲ್ಲಿ ಬೇಕಾದಂತೆ ಅರ್ಜಿಗಳನ್ನು ಸಲ್ಲಿಸಿ ಕೆಳಹಂತದ ನ್ಯಾಯಾಲಯಗಳಲ್ಲಿ ನಡೆಯುವ ಪ್ರಕರಣಗಳನ್ನು ತಟಸ್ಥವಾಗಿಸುವ ಅಥವಾ ವಿಳಂಬಿಸುವ ಕಾರ್ಯದಲ್ಲಿ ಅತೀ ಹೆಚ್ಚು ಕಕ್ಷಿದಾರರು ರಾಜಕಾರಣಿಗಳು. ಇದಕ್ಕೆ ಹೆಚ್ಚಿನ ವೆಚ್ಚವಾಗುತ್ತದೆ. ಆದರೆ ರಾಜಕಾರಣಿಗಳು ಇದೂ ತಮ್ಮ ವೃತ್ತಿಯ ಭಾಗವೆಂದು ತಿಳಿಯುತ್ತಾರೆ.

ಒಬ್ಬ ಸಾಮಾನ್ಯ ವ್ಯಕ್ತಿಯನ್ನು ಗಮನಿಸಿ. ಅಧೀನ ನ್ಯಾಯಾಲಯಗಳಲ್ಲಿ ಅಂದರೆ ತಾಲೂಕು, ಜಿಲ್ಲಾ ಹಂತದ ನ್ಯಾಯಾಲಯಗಳಲ್ಲಿ ವ್ಯವಹರಿಸುವುದೇ ಆತನಿಗೆ ಒಂದು ದೊಡ್ಡ ಸವಾಲು. ಅದನ್ನು ಮೀರಿ ಉಚ್ಚ ನ್ಯಾಯಾಲಯದಲ್ಲಿ ವ್ಯವಹರಿಸುವುದು ಕೆಲವರಿಗೆ ಮಾತ್ರ ಸಾಧ್ಯ. ಇನ್ನು ಸರ್ವೋಚ್ಚ ನ್ಯಾಯಾಲಯವೆಂದರೆ ಬಹುಪಾಲು ಪ್ರಜೆಗಳಿಗೆ ಗಗನಕುಸುಮ. ದೇಶದೆಲ್ಲೆಡೆ ಉಚಿತ ಕಾನೂನು ಅರಿವು-ನೆರವು ವ್ಯವಸ್ಥೆಯಿದೆ. ಇದೊಂದು ಸ್ತುತ್ಯರ್ಹ ವ್ಯವಸ್ಥೆಯಾದರೂ ಇದರ ಸರಿಯಾದ ಫಲ ಜನರಿಗೆ ಸಿಕ್ಕಲು ಸಾಧ್ಯವಿಲ್ಲ.

ಇದಕ್ಕೆ ಹೋಲಿಕೆಯಾಗಿ ಒಂದೆರಡು ವಿಚಾರಗಳನ್ನು ಗಮನಿಸಬಹುದು: ಶಿಕ್ಷಣ ಸಂಸ್ಥೆಗಳು ಇಂದು ಸರಸ್ವತಿಯ ಸಿರಿಮನೆಯಾಗಿ ಉಳಿದಿಲ್ಲ. ಅವು ಕಾಂಚಾಣಲಕ್ಷ್ಮಿಯ ಭಂಡಾರವಾಗಿವೆ. ಸರಕಾರಿ ಶಿಕ್ಷಣ ಸಂಸ್ಥೆಗಳಿದ್ದರೂ ಜನರು ಖಾಸಗಿ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ವಿದ್ಯೆಗೆ ಹಾತೊರೆಯುವುದು ಈಗ ರೂಢಿಯಲ್ಲಿದೆ. ಶಿಕ್ಷಣ, ಕಾನೂನು ಮತ್ತು ವೈದ್ಯಕೀಯವು ಸಾಮಾನ್ಯವಾಗಿ ವಿದ್ಯಾರ್ಥಿ, ಕಕ್ಷಿದಾರರು ಮತ್ತು ರೋಗಿಗಳ ಅಜ್ಞಾನವನ್ನೇ ಬಂಡವಾಳವಾಗಿ ನಡೆಯುವ ಕೈಗಾರಿಕೆಗಳು. ಉಸಿರುಗಟ್ಟುವ ವಾತಾವರಣದಲ್ಲಿ ಗೌರವದ ಬದಲು ಭಯ ಇವನ್ನು ಆವರಿಸಿದೆ. ಉದಾಹರಣೆಗೆ ಸರಕಾರವು ಉಚಿತ ವೈದ್ಯಕೀಯ ನೆರವನ್ನು ನಡೆಸುತ್ತದಾದರೂ ಬಹುತೇಕ ಉಳ್ಳವರು ಖಾಸಗಿ ಆಸ್ಪತ್ರೆಗಳಿಗೇ ಜೋತುಬಿದ್ದಿದ್ದಾರೆ. ಕಾರ್ಪೊರೇಟುಗಳ ದೊಡ್ಡ ಆಸ್ಪತ್ರೆಗಳಿಗೆ ಹೋಗಲು ಭಾರೀ ಸಿರಿವಂತರೆಂದಲ್ಲ, ಮಧ್ಯಮ ವರ್ಗದವರೂ ಹಣಸುರಿಯುತ್ತಾರೆ. ಇದರಿಂದಾಗಿ ಉದ್ಯಮಿಗಳು ಶಿಕ್ಷಣ ಸಂಸ್ಥೆಗಳನ್ನು, ಆಸ್ಪತ್ರೆಗಳನ್ನು ಕಟ್ಟುತ್ತಾರೆ. ಅದು ಒಂದಕ್ಕೆ ಹತ್ತು ಪ್ರಮಾಣದ ಲಾಭ ತರುತ್ತದೆ. ಹೀಗೆ ಹಣದ ಮೂಲಕವೇ ಒಳ್ಳೆಯ ಸೌಲಭ್ಯವೆಂಬ ವಾಸ್ತವ ನಮ್ಮ ಕಣ್ಣೆದುರಿದೆ.

ನ್ಯಾಯಾಂಗದ ಒಂದು ಭಾಗವಾದ ನ್ಯಾಯಾಧೀಶರು, ಸಿಬ್ಬಂದಿವರ್ಗ ಸಂಬಳ ಸ್ವೀಕರಿಸಿ ದುಡಿಯುವವರು. ನ್ಯಾಯಾಲಯಗಳಲ್ಲಿ ಕ್ರಿಮಿನಲ್ ಪರಿಹಾರದ ಹೊರತಾಗಿ ಇನ್ನೆಲ್ಲದಕ್ಕೂ ಶುಲ್ಕವಿದೆ. ಇದನ್ನು ಪಾವತಿಸಲು ಶಕ್ತಿಯಿಲ್ಲದವರಿಗೆ ಉಚಿತ ಕಾನೂನು ನೆರವಿದೆ. ಆದರೆ ಅಲ್ಲಿ ಕಕ್ಷಿದಾರರನ್ನು ಪ್ರತಿನಿಧಿಸುವ ನ್ಯಾಯವಾದಿಗಳು ಸರಕಾರ ವಿಧಿಸುವ ಶುಲ್ಕಕ್ಕೆ ದುಡಿಯುವವರಾದ್ದರಿಂದ ವೃತ್ತಿಯ ನೈಪುಣ್ಯವನ್ನು ಹೊಂದಿದವರ ಮಟ್ಟಕ್ಕೆ ಏರದವರೇ ಆಗಿರುತ್ತಾರೆನ್ನಬಹುದು. ಹೀಗಾಗಿ ಅವರೂ ಈ ವ್ಯವಸ್ಥೆಯ ಭಾಗವೇ ಆಗಿಹೋಗಿದ್ದಾರೆ. ಇನ್ನೊಂದು ಭಾಗವಾದ ವಕೀಲರು ತಮ್ಮ ಸಾಮರ್ಥ್ಯಕ್ಕನುಗುಣವಾಗಿ ಶುಲ್ಕಪಡೆದು ದುಡಿಯುವವರು. ಈ ವ್ಯತ್ಯಾಸದಿಂದಾಗಿ ಉಚಿತ ನೆರವಿನ ಅಗತ್ಯವುಳ್ಳವರಿಗೆ ಮೇಲ್ಮಟ್ಟದ ವಕೀಲರ ಪ್ರಾತಿನಿಧ್ಯ ದಕ್ಕುವುದಿಲ್ಲ. ಇದು ಒಟ್ಟಾರೆ ನ್ಯಾಯದಾನದ ವ್ಯವಸ್ಥೆಗೆ ಅಪಚಾರವನ್ನುಂಟುಮಾಡುತ್ತದೆ.

ಸ್ವಂತವಾಗಿ ದುಡಿಯುವ ವಕೀಲರ ಶುಲ್ಕವನ್ನು ತಾಳಿಕೊಳ್ಳುವುದು ಸಾಮಾನ್ಯರಿಗೆ ಸಾಧ್ಯವಿಲ್ಲ. ಹಾಗೆಂದು ಕಡಿಮೆ ಶುಲ್ಕಕ್ಕೆ ದುಡಿಯಲು ಬೇಡಿಕೆಯಲ್ಲಿರುವ ವಕೀಲರಿಗೆ ಸಾಧ್ಯವಿಲ್ಲ. ಏಕೆಂದರೆ ವಕೀಲವೃತ್ತಿಗೆ ಹಣದ ಭದ್ರತೆಯಿಲ್ಲ; ಪಿಂಚಣಿಯಿಲ್ಲ. ಆದ್ದರಿಂದ ‘Make Hay while the Sun Shines’ ಎಂಬ ಆಂಗ್ಲ ಸೂಕ್ತಿಗನುಗುಣವಾಗಿ ಅನೇಕ ವಕೀಲರು ತಾವು ಬೇಡಿಕೆಯಲ್ಲಿರುವಾಗಲೇ ಸಾಕಷ್ಟು ಹಣ ಸಂಗ್ರಹಮಾಡುತ್ತಾರೆ. ಇದನ್ನು ಸಮಾಜ, ನಮ್ಮ ವ್ಯವಸ್ಥೆ ನಿರಾಕರಿಸುವಂತಿಲ್ಲ; ಸ್ವೀಕರಿಸುವಂತಿಲ್ಲ. ಇದರಿಂದಾಗಿ ಸಾಮಾನ್ಯರಿಗೆ ಒಳ್ಳೆಯ ವಕೀಲರ ಸೇವೆ ಕೈಗೆಟಕುವುದಿಲ್ಲ. ಇಲ್ಲೇ ಹೀಗಾದ ಮೇಲೆ ಉಚ್ಚ, ಸರ್ವೋಚ್ಚ ನ್ಯಾಯಾಲಯಗಳಲ್ಲಿ ಸಾಮಾನ್ಯ ಪ್ರಜೆಯೊಬ್ಬ ನ್ಯಾಯವನ್ನು ಬೇಡುವುದಾದರೂ ಹೇಗೆ?

ಆದ್ದರಿಂದ ನ್ಯಾಯವೆಂಬುದು ಸಿರಿವಂತರಿಗೂ ಸಮಾಜದ ಉಚ್ಚ ವರ್ಗದವರಿಗೂ ಮಾತ್ರ ಸಲ್ಲುವ ಸ್ವರ್ಗ.

ಆದರೆ ಕಾನೂನಿನ ಅರಿವನ್ನು ಪಡೆದ, ಪಡೆಯುವ ಪ್ರಜೆಗಳು ಒಂದು ಸೈದ್ಧಾಂತಿಕ, ತಾತ್ವಿಕ ನೆಲೆಗಟ್ಟಿನಲ್ಲಿ ವ್ಯವಸ್ಥೆಯನ್ನು ಅರ್ಥಮಾಡಿಕೊಂಡರೆ ನ್ಯಾಯದ ಹಕ್ಕು ಮೊಟಕಾಗದು.

ಕಾನೂನಿನ ವ್ಯವಸ್ಥೆಯನ್ನು ರಾಜಕಾರಣಿಗಳಷ್ಟು ದುರುಪಯೋಗ ಮಾಡಿದವರು, ಮಾಡುವವರು ಬೇರೆ ಕ್ಷೇತ್ರದಲ್ಲಿ ಇರಲಾರರು. ಜನರು ತಮ್ಮ ಹಕ್ಕನ್ನು ಪಡೆಯಲು ನೆರವಾಗುವ ಔದಾರ್ಯದ ವೃತ್ತಿಪರರು ಇದ್ದಾರೆ. ಅವರಿಂದ ಪ್ರಾಥಮಿಕ ನೆರವನ್ನು ಪಡೆದರೆ ಆನಂತರದ ಕೆಲಸ ಸುಲಲಿತವಾದೀತು. ಉದಾಹರಣೆಗೆ ಕ್ರಿಮಿನಲ್ ದೂರೊಂದನ್ನು ಸಲ್ಲಿಸಬೇಕಾದರೆ ಏನು ಮಾಡಬೇಕೆಂಬುದನ್ನು ಉಚಿತ ಕಾನೂನು ನೆರವಿನ ಕೇಂದ್ರಗಳಲ್ಲಿ ಪಡೆಯಬಹುದು. ಇದಕ್ಕೆ ಹೆಚ್ಚಿನ ವೆಚ್ಚವೇನಿಲ್ಲ. ಜೊತೆಗೇ ಸೂಕ್ತ ಮಾರ್ಗದರ್ಶನವನ್ನೂ ಪಡೆಯಬಹುದು. ಆದರೆ ಹಲವಾರು ಕಾರಣಗಳಿಂದಾಗಿ ನಮ್ಮ ಪ್ರಜೆಗಳಿಗೆ ಪ್ರಚಾರದಲ್ಲಿರುವ ವ್ಯಕ್ತಿಗಳು ಅದರಲ್ಲೂ ರಾಜಕಾರಣಿಗಳು, ಸಾಹಿತಿಗಳು, ಬುದ್ಧಿಜೀವಿಗಳು ಸರ್ವಜ್ಞಾನಿಗಳೆಂಬ ಭ್ರಮೆಯಿದೆ. ರಾಜಕಾರಣಿಗಳನ್ನು ಹೊರತುಪಡಿಸಿ ಇತರ ವರ್ಗದಲ್ಲಿರುವವರು ಕೆಟ್ಟದ್ದನ್ನು ಮಾಡುತ್ತಾರೆಂಬ ಶಂಕೆಯಿಲ್ಲವಾದರೂ ಅವರು ಕಾನೂನನ್ನು ತಮ್ಮ ಮೂಗಿನ ನೇರಕ್ಕೆ ಅರ್ಥವಿಸಿ ಸಾಕಷ್ಟು ಹಾನಿ ಮಾಡುವ ಸಂದರ್ಭ, ಸಾಧ್ಯತೆಗಳಿವೆ.

ಸಾಮಾಜಿಕ ವಲಯದಲ್ಲಿ, ಜಾಲತಾಣಗಳಲ್ಲಿ ಸಂವಿಧಾನವನ್ನು ಅರ್ಥವಿಸುವ ಕ್ರಮವನ್ನು ಗಮನಿಸಿದರೆ ಇದು ಅರ್ಥವಾಗುತ್ತದೆ. ಸಂವಿಧಾನವೆಂಬುದು ಒಂದು ಅಗತ್ಯ ಉದಾತ್ತ ಮಾದರಿಯೇ ಹೊರತು ನಿತ್ಯದ ಅನ್ನವಲ್ಲ. ಹೀಗಾಗಿ ಸಾಮಾನ್ಯ ನೊಬ್ಬನಿಗೆ ಸಂವಿಧಾನದ ಪಾಠಕ್ಕಿಂತಲೂ ನಿತ್ಯಜೀವನಕ್ಕೆ ಬೇಕಾದ ಕಾನೂನಿನ ಅರಿವನ್ನು ಮತ್ತು ಅದನ್ನು ಅನುಸರಿಸುವ ಅಗತ್ಯವನ್ನು ಬೋಧಿಸಬೇಕು. ಇದನ್ನು ಪ್ರಾಥಮಿಕ ಹಂತದಲ್ಲಿರುವ ವಕೀಲರ ನೆರವನ್ನು ಪಡೆದು ನಡೆಸಬಹುದು.

ಪ್ರತಿಯೊಂದಕ್ಕೂ ಒಂದು ಅರ್ಹತೆ ಬೇಕು. ಕಾನೂನನ್ನು ಬೋಧಿಸುವುದಕ್ಕೂ ಅರ್ಹತೆ ಬೇಕು. ಕಾನೂನು ಕಾಲೇಜುಗಳಲ್ಲಿ ಬೋಧಿಸುವ ಕಾನೂನಿಗೂ ಜನರು ವಾಸ್ತವದಲ್ಲಿ ಅನುಸರಿಸಬೇಕಾದ ಕಾನೂನಿಗೂ ಬಹಳ ವ್ಯತ್ಯಾಸವಿದೆ. ಕಾಲೇಜು, ವಿಶ್ವವಿದ್ಯಾನಿಲಯಗಳಲ್ಲಿ ನಡೆಯುವ ವಿಚಾರ ಸಂಕಿರಣಗಳು ಜನಸಾಮಾನ್ಯರ ಅರಿವನ್ನು ವಿಸ್ತರಿಸುವುದಿಲ್ಲ. (ತಲುಪುವುದಿಲ್ಲ- ಆ ಮಾತು ಬೇರೆ!) ನೀರಿಗಿಳಿಯದೆ ಈಜು ಕಲಿತಂತೆ. ಅಧ್ಯಯನ, ಚರ್ಚೆ ಇವುಗಳು ಬಿಳಿಮೋಡಗಳಲ್ಲೇ ವಾಯುವಿಹರಿಸುತ್ತವೆ. (ಹಳೆಯ ಸಿನೆಮಾಗಳಲ್ಲಿ ನಾರದ ಮತ್ತಿತರ ದೇವ-ದೇವತೆಗಳು ಆಕಾಶದಲ್ಲಿ ನಡೆಯುವುದನ್ನು ತೋರಿಸುತ್ತಾರಲ್ಲ, ಹಾಗೆ!)

ಕಾನೂನನ್ನು ಮಾಧ್ಯಮಗಳಲ್ಲಿ ವರದಿ ಮಾಡುವ ವೈಪರೀತ್ಯ ಗಮನಿಸಬೇಕಾದ ಇನ್ನೊಂದು ವಿಚಾರ. ಇವರಲ್ಲಿ ಬಹಳಷ್ಟು ವರದಿಗಳು ಖಾಲಿಚೊಂಬುಗಳು. ಅರ್ಥವಾಗದೆಯೇ ಇತರರಿಗೆ ಕುತೂಹಲದ ಬದಲು ಭಯ, ಆತಂಕವನ್ನು ಸೃಷ್ಟಿಸುವುದರಲ್ಲಿ ಮಾಧ್ಯಮಗಳಲ್ಲಿನ ಕಾನೂನಿನ ವರದಿಗಳು ಮುಂಚೂಣಿಯಲ್ಲಿವೆ. ಅನೇಕ ಬಾರಿ ಟಿಆರ್‌ಪಿ ಮೌಲ್ಯಕ್ಕಾಗಿ ತಿರುಚಿ ಬರೆಯುವುದೂ ಉಂಟು. ನ್ಯಾಯಾಲಯಗಳು ಯಾವುದೇ ಪ್ರಕರಣದ ವಾಸ್ತವಾಂಶಗಳನ್ನು ಪರಿಗಣಿಸುವ ಮೊದಲೇ ಮಾಧ್ಯಮಗಳಲ್ಲಿ ಅವು ರೋಚಕ ಸೃಷ್ಟಿಯ ಖನಿಯಾಗಿರುತ್ತವೆ. ಮಾಧ್ಯಮಗಳು ಕಾನೂನಿನ ಪ್ರಕರಣಗಳಲ್ಲಿ, ವಿವಾದಗಳಲ್ಲಿ, ತಮ್ಮ ಪರಿಚಯದ ಸಾಮಾಜಿಕ ವ್ಯಕ್ತಿಗಳನ್ನು ವಿಚಾರಿಸಿ ಅವರ ದೃಷ್ಟಿಕೋನಗಳನ್ನು ಮಂಡಿಸುವುದೂ ಉಂಟು. ಅವು ಕಾನೂನಿನನ್ವಯ ಇರುವುದಿಲ್ಲ. ಬದಲಿಗೆ ಅರಳಿಕಟ್ಟೆ ನ್ಯಾಯದ ಅಂದಾಜಿನ ವ್ಯಾಖ್ಯಾನಗಳಾಗಿರುತ್ತವೆ. (ಹೆಚ್ಚಿನ ಮಾಹಿತಿಗೆ ಕಾನೂನು ತಜ್ಞರನ್ನು ವಿಚಾರಿಸಿ ಎಂಬ ಮುಂಜಾಗ್ರತಾ ಎಚ್ಚರಿಕೆಯನ್ನೂ ಅವರು ನೀಡುವುದಿಲ್ಲ!) ಇವನ್ನು ಗಮನಿಸಿಯೇ ಈಚೆಗೆ ಸರ್ವೋಚ್ಚ ನ್ಯಾಯಾಲಯವು ಪ್ರಕರಣಗಳ ನೇರ ವರದಿಗಳನ್ನು ನಿಯಂತ್ರಿಸಿತು.

ನ್ಯಾಯಾಲಯದ ಯಾವುದೇ ಪ್ರಕರಣಗಳ ಬಗ್ಗೆ, ತೀರ್ಪುಗಳ ಬಗ್ಗೆ ಕಾನೂನಿನ ಮೂಲಭೂತ ತಿಳಿವಳಿಕೆಯೂ ಇಲ್ಲದ, ಆದರೆ ಸಾಮಾಜಿಕ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ದುಡಿದು ಪ್ರಚಾರ, ಛಾಪು, ಮೂಡಿಸಿದ ಅನೇಕರು ಕಾನೂನಿನ ವ್ಯಾಖ್ಯೆಯನ್ನು ಮಾಡುವುದೂ ಇಂತಹದ್ದೇ ಒಂದು ತಂತ್ರ. ಅವು ಅನಾಹುತಗಳನ್ನು ಸೃಷ್ಟಿಸುವುದೂ ಉಂಟು. ಹಾಗೆಂದು ಇಂತಹ ಅಭಿಪ್ರಾಯ ಸಂಗ್ರಹಕ್ಕೆ ಇವರ್ಯಾರೂ ವಕೀಲರ ಆಶ್ರಯ, ನೆರವನ್ನು ಪಡೆಯುವುದಿಲ್ಲ. ಹೆಚ್ಚೆಂದರೆ ತಮ್ಮ ಅಭಿಮಾನಿ ಬಳಗದಲ್ಲಿರುವ ಕೆಲವು ವಕೀಲರನ್ನು ವಿಚಾರಿಸುವುದುಂಟು. ಆ ವಕೀಲರು ಪ್ರಚಾರಕ್ಕಾಗಿ ಮತ್ತು ತಮ್ಮ ಇಷ್ಟದೇವತೆಗಳನ್ನು ಸಂಪ್ರೀತಿಗೊಳಿಸಲೋಸುಗ ಮುಖಕ್ಕೆ ತಕ್ಕಂತೆ ಸುಳ್ಳು ಹೇಳುವುದೂ ಉಂಟು.

ಸದ್ದಿಲ್ಲದೆ ದುಡಿಯುವ ಯಶಸ್ವಿ ವಕೀಲರು ಬಹುತೇಕ ಕಾನೂನಿನ ಸಮಸ್ಯೆಗಳಿಗೆ ಸರಿಯಾಗಿ ಉತ್ತರಿಸುತ್ತಾರೆ. ಅವರು ಲೋಕಪರಿಚಿತರಾಗಿರುವುದಿಲ್ಲ. ಪ್ರಚಾರದಿಂದ ದೂರವಿರುತ್ತಾರೆ. ಆದರೆ ಅವರನ್ನು ಮಾಧ್ಯಮ ಗಳಾಗಲೀ ಬೌದ್ಧಿಕ ವರ್ಗವಾಗಲೀ ವಿಚಾರಿಸುವುದೇ ಇಲ್ಲ.

ಕಾನೂನನ್ನು ದುರುಪಯೋಗಪಡಿಸುವವರಲ್ಲಿ ಮುಂಚೂಣಿಯಲ್ಲಿ ರುವವರು ರಾಜಕಾರಣಿಗಳು ಎಂಬ ನನ್ನ ಪದಗಳಿಗೆ ಸ್ಪಷ್ಟನೆ ನೀಡಬೇಕಾಗಿದೆ. ರಾಜಕಾರಣಿಗಳು ಎಲ್ಲೆಡೆ ಪ್ರಚಾರವನ್ನು ಬಯಸುವವರು. ಆದ್ದರಿಂದ ಅವರ ಮನಸ್ಸಿನಲ್ಲಿ ಈ ಪ್ರಕರಣವು ತಮಗೆಷ್ಟು ಲಾಭ ಮತ್ತು ಮತಗಳನ್ನು ತರಬಹುದು ಮತ್ತು ಇದನ್ನು ಬಳಸಿ, ಪ್ರಯೋಗಿಸಿ ಎಷ್ಟು ಜನರನ್ನು ಪ್ರಭಾವಿಸಬಹುದು ಎಂಬುದನ್ನೇ ಗುರಿಯಾಗಿಟ್ಟುಕೊಳ್ಳುತ್ತಾರೆ. ಇದಕ್ಕೆ ಪಕ್ಷ ಭೇದವಿಲ್ಲ.

ಪ್ರಾಯಃ ನಮ್ಮ ಬೌದ್ಧಿಕ ವರ್ಗವು ಬೇಸರಪಡಬಹುದಾದ ಒಂದು ಉದಾಹರಣೆಯೊಂದಿಗೆ ಕಾನೂನಿನ ಅಜ್ಞಾನ ಮತ್ತು ದುರುಪಯೋಗವನ್ನು ವಿವರಿಸಬಯಸುತ್ತೇನೆ:

ಈಚೆಗೆ ಜಂತರ್‌ಮಂತರ್ ಚಳವಳಿಯ ಬಳಿಕ ಅಲ್ಲಿ ಪೆಲೆಟ್ ಗನ್‌ಗಳ ಪ್ರಯೋಗವಾದ ಬಗ್ಗೆ ಭಾರೀ ಗೊಂದಲವುಂಟಾಗಿದೆ. ದಿಲ್ಲಿಯ ಪೊಲೀಸರು ದೂರುಗಳ್ನು ಸ್ವೀಕರಿಸದೆ ಸರಕಾರದ ಕೈಗೊಂಬೆಗಳಂತೆ ನಡೆದುಕೊಂಡರೆಂಬ ಆಪಾದನೆಯನ್ನು ಬಹುತೇಕ ಎಲ್ಲ ಪ್ರತಿಪಕ್ಷಗಳು ಮಾಡಿದವು. ಈ ಪೈಕಿ ಕಾಂಗ್ರೆಸ್ ಅದರಲ್ಲೂ ಸಂಸತ್ತಿನ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ವಿಶೇಷವಾಗಿ ಸಕ್ರಿಯರಾದರು. ಒಬ್ಬಾತ ಗಲಭೆಯ ಬಲಿಪಶುವಿನ ದೂರನ್ನು ಪೊಲೀಸ್ ಇಲಾಖೆ ಸ್ವೀಕರಿಸಲಿಲ್ಲವೆಂದು ಧರಣಿ ಕುಳಿತರು. ಪೊಲೀಸ್ ಠಾಣೆಗೆ ಧಾವಿಸಿ ಬಲವಂತದಿಂದ ದೂರನ್ನು ಸ್ವೀಕರಿಸುವಂತೆ ಮಾಡಿದರು.

ಇಲ್ಲಿನ ವರೆಗೆ ಸರಿ. ಆದರೆ ರಾಹುಲ್ ಗಾಂಧಿ ಒಂದು ಪ್ಲಾಸ್ಟಿಕ್ ಕವರಿನಲ್ಲಿ ಪೆಲೆಟ್‌ಗಳನ್ನು ತುಂಬಿ ಪ್ರದರ್ಶಿಸಿದರು. ಅದು ಮಾಧ್ಯಮಗಳಲ್ಲಿ ಭಾರೀ ಪ್ರಚಾರ ಪಡೆಯಿತು. ಇದನ್ನು ದೇಶದ ಬೌದ್ಧಿಕ ಜಗತ್ತು ಭಾರೀ ಬೆಂಬಲ ಮತ್ತು ಪ್ರಚಾರದೊಂದಿಗೆ ಸ್ವಾಗತಿಸಿತು. ಜನನಾಯಕನೊಬ್ಬ ಹೇಗಿರಬೇಕು ಎಂಬ ಬಗ್ಗೆ ಈತ ಮಾದರಿಯೆಂದು ಹರ್ಷೋದ್ಗಾರ ಮಾಡಿದರು. ಕ್ರಾಂತಿ ನಡೆದೇ ಹೋಯಿತು ಎಂಬ ವಾತಾವರಣವನ್ನು ಸೃಷ್ಟಿಸಿದರು.

ಈಗ ಗಮನಿಸಿ: ಇದನ್ನು ಯಾವ ನ್ಯಾಯಾಲಯವೂ ಸಾಕ್ಷಿಯಾಗಿ ಸ್ವೀಕರಿಸಲಾರದು. ಪ್ರತಿಯೊಂದು ಸ್ವತ್ತಿನ ಅಮಾನತಿಗೆ, ಅವನ್ನು ಸಾಕ್ಷ್ಯವಾಗಿ ತುಂಬಿಕೊಳ್ಳಬೇಕಾದರೆ ಅದಕ್ಕೊಂದು ರೀತಿ, ನೀತಿ, ನಿಯಮಾವಳಿಗಳಿವೆ. ಅವನ್ನು ದೇಹದಿಂದ ತೆಗೆಯುವ ಕಾಲಕ್ಕೆ ಅದಕ್ಕೊಂದು ಅಮಾನತು ಅಥವಾ ಸ್ವಾಧೀನ ಮಹಜರ್ ನಡೆಸಬೇಕು. ಅಲ್ಲಿ ಸ್ವತಂತ್ರ ಸಾಕ್ಷಿಗಳಿರಬೇಕು. ವೈದ್ಯಕೀಯ ಅಥವಾ ತನಿಖಾ ಅಧಿಕಾರಿ/ತಂಡವು ಇರಬೇಕು. ಈ ವಿವರಗಳನ್ನು ತನಿಖಾ ವರದಿಯ ಭಾಗವಾಗಿಸಬೇಕು.

ಯಾವುದೇ ಪ್ರಕರಣದಲ್ಲಿ ಪೊಲೀಸರು ದೂರನ್ನು ಸ್ವೀಕರಿಸದೆ ಹೋದ ಪಕ್ಷದಲ್ಲಿ ದೂರನ್ನು ನೋಂದಾಯಿತ ಅಂಚೆಯಲ್ಲಿ ಅಥವಾ ಇಮೇಲ್ ಮೂಲಕ, ಕನಿಷ್ಠ ವಿದ್ಯುನ್ಮಾನ ವಿಧಾನದಲ್ಲ್‌ದರೂ ಪೊಲೀಸ್ ಠಾಣೆಗೆ ಕಳುಹಿಸಬೇಕು. ಅವರು ದೂರು ಸ್ವೀಕರಿಸದಿದ್ದರೆ, ಕ್ರಮ ಕೈಗೊಳ್ಳದಿದ್ದರೆ ಮೇಲಧಿಕಾರಿಗಳಿಗೆ ಆ ದೂರನ್ನು ಸಲ್ಲಿಸಬೇಕು. ಅದೂ ವ್ಯರ್ಥವಾದರೆ ಪ್ರಥಮ ದರ್ಜೆ ದಂಡಾಧಿಕಾರಿಗಳ ನ್ಯಾಯಾಲಯದಲ್ಲಿ ಖಾಸಗಿ ದೂರನ್ನು ಸಲ್ಲಿಸಬೇಕು; ದೂರಿನ ಸತ್ಯಮಾಪನಕ್ಕಾಗಿ ಒಂದು ಪ್ರಮಾಣಪತ್ರವನ್ನು ಸಲ್ಲಿಸಬೇಕು. ಅದರೊಂದಿಗೆ ಪ್ರಕರಣಕ್ಕೆ ಸಂಬಂಧಿಸಿದ ವಸ್ತುಗಳನ್ನು ಸಲ್ಲಿಸಿ ಅದರ ಪುರಾವೆಗೆ ಬೇಕಾದ ಮೇಲ್ನೋಟದ ಸಾಕ್ಷ್ಯವನ್ನು ನೀಡಬೇಕು. ಆಗ ನ್ಯಾಯಾಲಯವು ಆತನನ್ನು ಮತ್ತು ಆತನ ಪರ ಸಾಕ್ಷಿಗಳನ್ನು ವಿಚಾರಿಸಿ ಪೊಲೀಸ್ ತನಿಖೆಗೆ ಆದೇಶಿಸಬಹುದು ಅಥವಾ ನ್ಯಾಯಾಲಯದಲ್ಲೇ ಆ ಪ್ರಕರಣವನ್ನು ವಿಚಾರಿಸಬಹುದು. ಇಂತಹ ಅಧಿಕೃತ ಕ್ರಮಗಳನ್ನು ಕೈಗೊಳ್ಳದೆ ಪೆಲೆಟ್‌ಗಳನ್ನು ಬಹಿರಂಗವಾಗಿ ಮಾಧ್ಯಮಗಳೆದುರು ಪ್ರದರ್ಶಿಸಿ ರಾಹುಲ್‌ಗಾಂಧಿ (ಅಥವಾ ಅಂತಹ ಯಾವನೇ ರಾಜಕಾರಣಿ!) ಪ್ರಚಾರಪಡೆದರೂ ಪ್ರಕರಣವನ್ನು ಸಾಕಷ್ಟು ನಿತ್ರಾಣಗೊಳಿಸಿದ್ದಂತೂ ವಾಸ್ತವ. ಪೆಲೆಟ್ ಏಟು ತಿಂದವನಿಗೆ ನ್ಯಾಯ ಹೇಗೆ ಯಾವಾಗ ಸಿಕ್ಕುತ್ತದೆಯೋ ದೇವರೇ ಬಲ್ಲ. (ಹೆಚ್ಚಿನ ವಿವರಗಳಿಗೆ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ-2023, ಮತ್ತು ಪ್ರಿಯಾಂಕ ಶ್ರೀವಾಸ್ತವ ವರ್ಸಸ್ ಉತ್ತರಪ್ರದೇಶ ಸರಕಾರ (2015), ಶ್ರೀ ಸತ್ಯಸಾಯಿ ಸೆಂಟ್ರಲ್ ಟ್ರಸ್ಟ್ ವರ್ಸಸ್ ಕರ್ನಾಟಕ ಸರಕಾರ (2021), ಅನುರಾಗ ಭಟ್ನಾಗರ್ ವರ್ಸಸ್ ದಿಲ್ಲಿ ಸರಕಾರ (2025) ಮುಂತಾದ ಪ್ರಕರಣಗಳ ಮಾಹಿತಿಯನ್ನು ಪಡೆಯಬಹುದು.)

ತೊಟ್ಟಿಲಂಗಡಿಯಲ್ಲಿ ಬೊಂಬು ತುಂಬಾ ಅಗ್ಗ, ಅದು ಅಪರಕರ್ಮಕ್ಕೂ ಬೇಕು. ರಾಜಕಾರಣಿಗಳು ಇದನ್ನು ಎಲ್ಲಿ ಬೇಕೆಂದರೆ ಅಲ್ಲಿ ಬಳಸಲು ಸಿದ್ಧ! ‘Operation Success, Patient Died’ ಎಂಬ ಗಾದೆ ಇಂತಹ ಸಂದರ್ಭಗಳಿಗೇ ಹೇಳಿರಬಹುದು!

Tags

politics
share
ಬಾಲಸುಬ್ರಹ್ಮಣ್ಯ ಕಂಜರ್ಪಣೆ
ಬಾಲಸುಬ್ರಹ್ಮಣ್ಯ ಕಂಜರ್ಪಣೆ
Next Story
X