Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಈ ಹೊತ್ತಿನ ಹೊತ್ತಿಗೆ
  5. ಸಂಶೋಧನೆಗಳ ಶೋಧನೆ: ಹುಡುಕಾಟ

ಸಂಶೋಧನೆಗಳ ಶೋಧನೆ: ಹುಡುಕಾಟ

ಡಾ. ಎಂ. ಪ್ರಭಾಕರ ಜೋಶಿಡಾ. ಎಂ. ಪ್ರಭಾಕರ ಜೋಶಿ12 March 2025 2:35 PM IST
share
ಸಂಶೋಧನೆಗಳ ಶೋಧನೆ: ಹುಡುಕಾಟ

ಕನ್ನಡ ನಾಡಿನ ಹಿರಿಯ ಸಂಸ್ಕೃತಿ ವಿದ್ವಾಂಸರಾದ ಡಾ. ಪುರುಷೋತ್ತಮ ಬಿಳಿಮಲೆಯವರಿಗೆ ಭಾರತೀಯ ಸಂಸ್ಕೃತಿಯ ವೈಶಾಲ್ಯದ ಅರಿವೂ ಇದೆ. ಈ ಕಾರಣದಿಂದ ಅವರ ಈಚಿನ ಪುಸ್ತಕ ‘ಹುಡುಕಾಟ’ ಬಹಳ ಮುಖ್ಯವಾಗಿದೆ. ಕರಾವಳಿಯ ಯಕ್ಷಗಾನ ಮತ್ತು ಭೂತಾರಾಧನೆ, ನಡುಗನ್ನಡ ಸಾಹಿತ್ಯಕ್ಕೆ ಸೇರುವ ನಳ ಚರಿತ್ರೆ ಮತ್ತು ರಾಜಸ್ಥಾನದಲ್ಲಿ ದೊರಕುವ ಧೋಲಾ ಮಾರು ಹೆಸರಿನ ನಳನ ಮಕ್ಕಳ ಕತೆ, ಕೊಪ್ಪಳ ಪರಿಸರದ ಕುಮಾರರಾಮ ಮತ್ತು ಹಡಗಲಿಯ ಮೈಲಾರ, ಎರಡು ಮೀನುಗಳ ಜೊತೆಗೆ, ಹುತ್ತಕ್ಕೆ ಹಾಲೆರೆವ ಹಸುವಿನ ಕತೆ- ಹೀಗೆ ಹತ್ತು ಹಲವು ನವೀನ ಆಕರಗಳ ಮೂಲಕ ಅವರು ತಮ್ಮ ಸಂಶೋಧನೆಯನ್ನು ಬೆಳೆಸುತ್ತಾರೆ. ಹಾಗೆ ಮಾಡುವುದರ ಮೂಲಕ ಸಂಶೋಧನೆಯ ಕೃತಕ ಗಡಿರೇಖೆಗಳನ್ನು ಅವರು ಮೀರುತ್ತಾರೆ. ಇಂಥವನ್ನು ಓದುವುದೇ ಒಂದು ರೋಚಕ ಅನುಭವ. ಲೇಖಕರಿಗೆ ಭಾರತೀಯ ಸಂಸ್ಕೃತಿಯ ಬಹುಮೂಲಗಳ ಬಗ್ಗೆ ಸಾಕಷ್ಟು ಅರಿವಿದೆ. ಇವೆಲ್ಲವುಗಳನ್ನು ಸೇರಿಸಿ ಅವರು ಸಂಶೋಧನೆಯನ್ನು ಮುಂದುವರಿಸಿದಾಗ, ಓದು ಭಾರವಾಗುವುದಿಲ್ಲ. ಸಿದ್ಧಾಂತವೇ ವಿಜೃಂಭಿಸುವುದಿಲ್ಲ. ಜಾನಪದದ ಲೋಕ ದೃಷ್ಟಿ ಲೇಖನದಲ್ಲಿ ಅವರು ಹಿಂದುತ್ವವನ್ನು ವಿಶ್ಲೇಷಣೆ ಮಾಡಿದರೆ, ರಾಮಾನುಜನ್ ಕುರಿತ ಲೇಖನದಲ್ಲಿ ಸ್ವದೇಶಿ-ವಿದೇಶಿ ದೃಷ್ಟಿಗಳ ಕಡೆ ಗಮನ ಹರಿಸುತ್ತಾರೆ. ಜಾನಪದದಲ್ಲಿ ಮಹಿಳಾ ಕೇಂದ್ರಿತವಾದ ಕತೆಯೊಂದು ಕಾರ್ನಾಡರ ಕೈಯಲ್ಲಿ ಪುರುಷ ಕೇಂದ್ರಿತವಾಗಿ ಪರಿವರ್ತನೆಯಾಗುವ ಬಗೆಯನ್ನು ಇಲ್ಲಿ ಆಳವಾಗಿ ಪರಿಶೀಲಿಸಲಾಗಿದೆ. ಈಚಿನ ದಿನಗಳಲ್ಲಿ ಕನ್ನಡ ಸಂಶೋಧನೆಯು ಹಿಂದೆ ಬಿದ್ದಿರುವುದನ್ನು ಸಾಧಾರವಾಗಿ ಮುಂದಿಡುವ ಲೇಖಕರು, ಅದಕ್ಕೆ ಉತ್ತರ ಕೊಡಲೋ ಎಂಬಂತೆ ಪ್ರಸ್ತುತ ಪುಸ್ತಕವನ್ನು ರಚಿಸಿದ್ದಾರೆ. ಸಿದ್ದವೇಶ ಲೇಖನದಲ್ಲಿ ಮಧ್ಯಕಾಲೀನ ರಹಸ್ಯ ತಾಂತ್ರಿಕ ಪಂಥಗಳ ಬಗ್ಗೆ ಮಾಹಿತಿ ನೀಡಲಾಗಿದೆ.

ಹೀಗೆ ಬಗೆ ಬಗೆಯ ಲೇಖನಗಳಿರುವ ‘ಹುಡುಕಾಟ’ ಪುಸ್ತಕವು ಕೇವಲ ಶಾಬ್ದಿಕ ವರ್ಣನೆಗೆ ಸೀಮಿತವಾಗಿಲ್ಲ, ಅನಗತ್ಯವಾದ ಗಂಭೀರ ಚಿಂತನೆಗಳೂ ಇಲ್ಲಿಲ್ಲ. ಬದಲು, ಪುಸ್ತಕದುದ್ದಕ್ಕೂ ಹೃದ್ಯವಾದ ನೋಟಗಳಿವೆ. ಬಿಳಿಮಲೆಯವರದ್ದು ಸುಂದರ ಮೋಹಕ ವಾಸ್ತವ ಬೆರೆತ ಅಪೂರ್ವ ಶೈಲಿ. ಇವೆಲ್ಲವುಗಳಿಂದ ಈ ಪುಸ್ತಕವು ಸಂಶೋಧನ ಕ್ಷೇತ್ರಕ್ಕೆ ನೀಡಿದ ಮಹತ್ವದ ಕೊಡುಗೆ ಎನ್ನಬಹುದು.

ಖಂಡಿತವಾಗಿಯೂ ಕನ್ನಡ-ಸಂಶೋಧನೆಯ ಗುಣ ಸ್ವಭಾವಗಳು ಇವತ್ತು ಇಳಿಮುಖವಾಗಿದೆ. ಅನೇಕರಿಗೆ ಸಂಶೋಧನೆಯು ಒಂದು ಫ್ಯಾಶನ್ ಆಗಿದೆ. ಕೆಲವರು ಏನನ್ನೋ ಒತ್ತಾಯದಿಂದ ನಮ್ಮ ತಲೆಗೆ ತುರುಕಲು ಸಂಶೋಧನೆಯನ್ನು ಬಳಸಿಕೊಳ್ಳುತ್ತಿದ್ದಾರೆ. ಅನೇಕರ ಬರವಣಿಗೆಯಲ್ಲಿರುವ ಅಜ್ಞಾನಕ್ಕೆ ಕೊನೆಯೇ ಇಲ್ಲ. ಇಂಥ ವಿಲಕ್ಷಣ ಸಂದರ್ಭದಲ್ಲಿ ಬಿಳಿಮಲೆಯವರ ಈ ಪುಸ್ತಕವು ವೈಚಾರಿಕತೆ ಹೇಗಿರಬೇಕೆಂಬುದನ್ನು ನಮ್ಮ ಮುಂದಿಡುತ್ತದೆ. ಈ ಅರ್ಥದಲ್ಲಿ ಇದೊಂದು ಮಾರ್ಗದರ್ಶಕ ಕೃತಿ.

ಅತ್ಯಂತ ಸುಂದರವಾಗಿ ಮುದ್ರಣಗೊಂಡ ಈ ಕೃತಿಯು ತನ್ನ ವಸ್ತು, ಸಂಕಲನದ ರೀತಿ, ಭಾಷೆ, ಸಂಯೋಜನಾ ವಿಧಾನ ಮತ್ತಿತರ ಕಾರಣಗಳಿಂದಲೂ ಮುಖ್ಯವಾಗಿದೆ. ವಿಷಯ ಮಂಡನೆ ವ್ಯವಸ್ಥಿತವಾಗಿದೆ. ವಾದ ಮಂಡನೆಗಳು ತಾರ್ಕಿಕವಾಗಿದ್ದು ಅಸಂದಿಗ್ಧವಾಗಿದೆ. ಬೇರೆ ಬೇರೆ ಕಡೆ ಬರೆದ ಲೇಖನಗಳಿದ್ದರೂ, ಒಂದೇ ಯೋಜನೆಯ ಗ್ರಂಥವಾಗಿ ಇರುವುದು ಪುಸ್ತಕದ ಹೆಚ್ಚುಗಾರಿಕೆ. ಕ್ಷೇತ್ರಕಾರ್ಯದ ಕಷ್ಟ- ಸುಖಗಳನ್ನು, ಅಲ್ಲಿ ವಹಿಸಬೇಕಾದ ಎಚ್ಚರ ಮತ್ತು ಅಪೇಕ್ಷೆಗಳನ್ನೂ ಇಲ್ಲಿ ಸುಂದರವಾಗಿ ಮಂಡಿಸಲಾಗಿದೆ. ಕುಮಾರರಾಮನ ಕುರಿತಾದ ಕಥಾ ವಿವರಗಳ ಸೂಕ್ಷ್ಮಗಳು ಚೊಕ್ಕದಾಗಿ ಮೂಡಿ ಬಂದಿದೆ. ಹಾಗೆ ನೋಡಿದರೆ, ಈ ಪುಸ್ತಕವೇ ಒಂದು ಪ್ರಯೋಗ. ಇಲ್ಲಿನ ವಿವರಗಳು ಖಚಿತ. ಪುಸ್ತಕದುದ್ದಕ್ಕೂ ಅನೇಕ ವಿದೇಶಿ ವಿದ್ವಾಂಸರನ್ನು ಗೌರವದಿಂದ ಉಲ್ಲೇಖಿಸಿದರೂ, ವಿನಾ ಕಾರಣ ಅವರನ್ನು ಅತಿಕರಿಸಿಲ್ಲ, ಸ್ವದೇಶೀಯರನ್ನು ಕಡೆಗಣಿಸಿಲ್ಲ. ಕನ್ನಡ ಸಂಶೋಧನೆಯು ಹಿಡಿಯಬೇಕಾದ ದಿಕ್ಕು ದಾರಿಗಳಿಗೆ ಈ ಪುಸ್ತಕವು ಒಂದು ಉತ್ತಮವಾದ ಕೈಪಿಡಿ.

ಇಡೀ ಪುಸ್ತಕದ ಹಿಂದೆ ದೊಡ್ಡ ಪಾಂಡಿತ್ಯ ಕೆಲಸ ಮಾಡಿದೆ. ಪುಸ್ತಕದ ಹಿಂದಿನ ಕೆಲಸ, ಶ್ರಮ-ಪರಿಶ್ರಮ, ಗಂಭೀರವಾದ ಆಸಕ್ತಿ ವಿಶೇಷವಾದುದು. ಬಿಳಿಮಲೆ ನಮ್ಮ ನಾಡಿನ, ದೇಶದ ಮುಖ್ಯ ಸಾಂಸ್ಕೃತಿಕ ವಿಚಾರಕರಲ್ಲಿ ಒಬ್ಬರು ಎಂಬುದು ಇಲ್ಲಿಯೂ ನಿಜವಾಗಿದೆ. ಹಿರಿಯರಾದ ಪ್ರೊ. ವಿವೇಕ ರೈ ಅವರ ‘ತಾಯಿ ಬೇರಿನ ಸಮಗ್ರ ದರ್ಶನ’ ಎಂಬ ಮಾತು, ಹಾಮಾನಾ, ಕೆ.ವಿ. ಸುಬ್ಬಣ್ಣ, ಅನಂತಮೂರ್ತಿ, ತೇಜಸ್ವಿ ಹಂಪನಾ ಮೊದಲಾದವರ ಪ್ರಶಂಸೆ, ಕೇವಲ ಔಪಚಾರಿಕವಲ್ಲ ಬದಲು ವಾಸ್ತವ ಎಂಬುದನ್ನು ಇಲ್ಲಿನ ಲೇಖನಗಳು ವಿಷದಪಡಿಸುತ್ತವೆ.

ಇಲ್ಲಿನ ಹಲವು ವಿಷಯಗಳಲ್ಲಿ ಭಿನ್ನಮತವೂ ಸಾಧ್ಯ ಉದಾ: ವಾಲ್ಮೀಕಿಯ ಅಪಾಣಿನೀಯ ಪ್ರಯೋಗ, ಸಿದ್ಧವೇಷವೆಂಬುದು ಪ್ರತಿಭಟನೆ ಮೊದಲಾದ ನಿರ್ಣಯಗಳು ಇನ್ನಷ್ಟು ಚರ್ಚೆಗಳನ್ನು ಬೇಡುತ್ತವೆ. ಎಂತಿದ್ದರೂ ಇಷ್ಟು ಬರೆಯಲೂ ಲೇಖಕನಿಗೆ ಪಾಂಡಿತ್ಯಬೇಕು ಎಂಬುದರಲ್ಲಿ ಯಾವ ಸಂಶಯವೂ ಬೇಕಾಗಿಲ್ಲ.

ಬಿಳಿಮಲೆಯವರ ಈ ಗ್ರಂಥವು ಕನ್ನಡ ಸಂಶೋಧನಾ ಲೋಕಕ್ಕೆ ಕೊಟ್ಟ ದೊಡ್ಡ ಕೊಡುಗೆ. ಹುಡುಕುವ ದಾರಿಗೆ ಇವು ಬೆಳಕು ಚೆಲ್ಲುತ್ತವೆ. ಲೇಖಕ, ಪ್ರಕಾಶಕರಿಗೆ ಶೋಧ ಲೋಕದ ಕೃತಜ್ಞತೆ ಸಲ್ಲುತ್ತದೆ.

ಚಿರಂತ್ ಪ್ರಕಾಶನ, ಬೆಂಗಳೂರು,

ಪುಟ 340, ರೂ.350/-

share
ಡಾ. ಎಂ. ಪ್ರಭಾಕರ ಜೋಶಿ
ಡಾ. ಎಂ. ಪ್ರಭಾಕರ ಜೋಶಿ
Next Story
X