Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಈ ಹೊತ್ತಿನ ಹೊತ್ತಿಗೆ
  5. ಜೀವನೋತ್ಸಾಹದ ಪ್ರತೀಕ ಗಂಧವತಿ ಪ್ರಿಯ...

ಜೀವನೋತ್ಸಾಹದ ಪ್ರತೀಕ ಗಂಧವತಿ ಪ್ರಿಯ ಕವಿತಾ

ಡಾ. ಅಮ್ಮಸಂದ್ರ ಸುರೇಶ್ಡಾ. ಅಮ್ಮಸಂದ್ರ ಸುರೇಶ್18 April 2024 4:01 PM IST
share
ಜೀವನೋತ್ಸಾಹದ ಪ್ರತೀಕ ಗಂಧವತಿ ಪ್ರಿಯ ಕವಿತಾ

ಇತ್ತೀಚೆಗೆ ಬಿಡುಗಡೆಯಾಗಿರುವ ಪ್ರೊ. ಕಾಳೇಗೌಡ ನಾಗವಾರ ಅವರ ಸಮಗ್ರ ಕಾವ್ಯ ‘ಗಂಧವತಿ ಪ್ರಿಯ ಕವಿತಾ’ದಲ್ಲಿನ ‘ಕರಾವಳಿಯ ಗಂಗಾಲಗ್ನ’ ಕವಿತೆಯ ಈ ಸಾಲುಗಳು

ಕಾಮ್ರೆಡ್, ಕ್ರಾಂತಿಯ ಗಡಿಗೆರೆಗಳು

ಸದಾ ವಿಸ್ತರಿಸುತ್ತಿರಬೇಕು. ಈ ಕಡಲಂತೆ ನೀಳಾಕಾಶದಂತೆ

ನಿತ್ಯಜೀವಂತಿಕೆಯಲ್ಲಿ:

ಇಲ್ಲಿಳಿವ ಈ ದೆವ್ವಗತ್ತಲಿನಂತೆ ಜನಸಾಗರದ ಕನಸಿನಾಳದಲ್ಲಿ

ನಿರಾಶೆಯ ಕಂದರಗಳ ಶೂನ್ಯವ ಮುಚ್ಚುತ್ತಾ

ಕುಡಿಯೊಡೆಯಬೇಕು. ಏನಂತೀಯಾ?

ವ್ಯವಸ್ಥೆಯೊಳಗಿದ್ದುಕೊಂಡೇ ಬಂಡಾಯ ಹೂಡುವವರಿಗೆ ಕಾಮ್ರೇಡನ ವರ್ಗಸಮರದ ವರ್ಗ ಪ್ರಜ್ಞೆ ಇನ್ನೂ ಹರಳುಗಟ್ಟದಿರುವ ಭಾರತದ ಸಾಮಾಜಿಕ ಸಂದರ್ಭದಲ್ಲಿ ಕ್ರಾಂತಿ ತನ್ನಿಂದ ತಾನೇ ಸಹಜವಾಗಿ ಆಗುವಂತಹದ್ದಲ್ಲ, ಆದ್ದರಿಂದ ಕ್ರಾಂತಿಯೆಡೆಗೆ ಕಾಮ್ರೇಡನ ಮಿತಿಯನ್ನು ವೇಗವರ್ಧಕಗೊಳಿಸಲು ಕವಿ ಹವಣಿಸುವುದನ್ನು ಕಾಣಬಹುದು.

ವಿಚಾರಗಳು ಬಾಹ್ಯವಾಗಿ ನಿಲ್ಲದೆ ಬದುಕಿನ ಬೇಗುದಿಯೊಳಗಿನ ಬುಡದಿಂದ ಮೊಳಕೆಯೊಡೆಯಬೇಕೆಂಬ ಆಶಯ ಕವಿತೆಯ ನಾಯಕಿಯದ್ದಾದರೂ ಅವುಗಳು ಕವಿಯ ಆಶಯವೂ ಕೂಡ ಆಗಿವೆ.

ನಾಗವಾರರ ಕಾವ್ಯದಲ್ಲಿ ಹುಟ್ಟುವ ಇಂತಹ ಸಂವಾದದ ಭಾವತರಂಗಗಳು ಮಾನವ ಪ್ರೇಮದ ಹೊಳೆಯನ್ನು ಗತಿಶೀಲವಾಗಿಸಿ, ಸುಂದರಗೊಳಿಸಿವೆ. ಬಂಡಾಯದ ಬಹುಮುಖಿ ಸಾಧ್ಯತೆಗಳ ಕುರಿತು ನಾಗವಾರರು ನಡೆಸಿದ ಪ್ರಯೋಗಶೀಲತೆಯ ಅಧಿಕೃತ ದಾಖಲೆಯಾಗುವುದರಿಂದ ಅವರ ಕಾವ್ಯಗಳು ಬಹು ಮುಖ್ಯವಾಗುತ್ತವೆ.

ಪ್ರೊ. ಕಾಳೇಗೌಡ ನಾಗವಾರ ಅವರು ತಮ್ಮ ಕಾವ್ಯದ ಕನಸಿನ ನಾಯಕನನ್ನಾಗಿ ಕುಮೀಬಾ (ಕುಡಿ ಮೀಸೆ ಬಾಲಕ)ನನ್ನು ಆಯ್ದುಕೊಂಡಿದ್ದಾರೆ. ಕುಮೀಬಾನನ್ನು ಕೆಲವೊಮ್ಮೆ ಕೈ ಹಿಡಿದುಕೊಂಡು ನಡೆಸಿದರೆ, ಇನ್ನೂ ಕೆಲವೊಮ್ಮೆ ಅವನನ್ನು ಸ್ವತಂತ್ರವಾಗಿ ಮುಂದೆ ಬಿಟ್ಟು ಅವನ ಮೂಲಕ ಪ್ರೀತಿಯ ಸೋಪಾನಗಳನ್ನು ಅರಿಯುವ, ಬೆರೆಯುವ ತವಕವನ್ನು ತೋರಿಸುತ್ತಾರೆ. ಕೆಲವೊಮ್ಮೆ ಈ ಕುಮೀಬಾ ಕವಿಯನ್ನೇ ಮೀರಿ ನಡೆದುಬಿಡುತ್ತಾನೆ. ಇದು ಅವರ ಕಾವ್ಯಗಳಿಗಿರುವ ಮಜಲು ಹಾಗೂ ಸ್ವಾತಂತ್ರ್ಯಗಳೆರಡನ್ನೂ ಪ್ರತಿನಿಧಿಸುತ್ತದೆ. ಈ ಕುಮೀಬಾ ಒಮ್ಮೆ ರಾಮೂ ಆಗಿ, ಇನ್ನೊಮ್ಮೆ ಕಾಮೂ ಆಗಿ, ಮಗದೊಮ್ಮೆ ಜಾನಪದ ಕಲಾವಿದನಾಗಿ ವಿಭಿನ್ನ ರೂಪಗಳಲ್ಲಿ ಅವತರಿಸಿದ್ದಾನೆ.

ಈ ಕುಮೀಬಾ ಕೂಡ ಅಮೀಬಾದಂತೆ

ಬಾಳಲ್ಲಿ ಬಹಳೇ ತಾಳಿ

ಕೊಳ್ಳಬೇಕು: ಕಾಲ ಕಾಲಕ್ಕೆ ಕಾಯ ತೇಯುತ್ತ

ಕಾಯಬೇಕು, ಎಡೆ ಸಿಕ್ಕಲ್ಲಿ ಕಾಲೂರಬೇಕು

ನೊರೆ ನುರುಪು ಉರಿಯೊಡನೆ ಸೋಸುತ್ತ

ಏಕಾಂಗಿ ಮೂಕನಡೆ ನೂಕುತ್ತ, ತೆವಳುತ್ತ

ನರುಳುನಿಟ್ಟುಸಿರೊಡನೆ, ಇಲ್ಲೂ

ಬೆದೆಯ ಹದದಲ್ಲೆ ಇವನ

ಹಂಬಲಿಕೆ ಹಣ್ಣಾಗಬೇಕು.

ಕಾಯ ತೇಯುವುದನ್ನು ಗಮನಿಸುವ ಕವಿ ಎಡೆ ಸಿಕ್ಕಲ್ಲಿ ಕಾಲೂರುವ ಯತ್ನವನ್ನೂ ಮಾಡಬೇಕೆಂಬ ಆಶಯವನ್ನು ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ವ್ಯವಸ್ಥೆಯಲ್ಲಿ ದುಡಿಯುವ ವರ್ಗ ಅಥವಾ ಕಾಯ ತೇಯುವ ವರ್ಗವೊಂದು ಕಾಲೂರಲು ಹೇಗೆ ಹವಣಿಸುತ್ತದೆ. ಇದು ಬೆಂಕಿಯೊಡನೆ ಸೆಣಸಾಡುವ ಪ್ರಕ್ರಿಯೆ ಆದ್ದರಿಂದಲೇ

‘---ಇಲ್ಲೂ

ಬೆದೆಯ ಹದದಲ್ಲೇ ಇವನ

ಹಂಬಲಿಕೆ ಹಣ್ಣಾಗಬೇಕು’

ಎಂಬ ತೀರ್ಮಾನವನ್ನು ಕವಿತೆ ನೀಡುತ್ತದೆ.

ಏರು ದನಿಯ ಖಚಿತತೆ ತೂರಿ

ಆಲಯವು ಬಯಲಾಗಿ

ಕಲ್ಯಾಣದಣ್ಣಯ್ಯ ಕರೆದ ವೈಶಾಲ್ಯ!

ಎಂಬ ಪದ್ಯದಲ್ಲಿ ಪ್ರೀತಿ-ಪ್ರೇಮದ ನಡುವೆ ಕಾವ್ಯ ತಂಪಾಗಿ ಬೆಳೆದರೂ ಅದರ ಒಡಲಲ್ಲಿ ಬಂಡಾಯದ ಬಿಸಿಯುಸಿರು ಇಣುಕಿ ನೋಡುತ್ತದೆ. ಇಲ್ಲಿಯ ಬಿಸಿಯುಸಿರು ಕೂಡ ಅಷ್ಟೇ ಸಹಜವಾಗಿ ಕಾವ್ಯದಲ್ಲಿ ಮೂಡಿ ಬಂದಿದೆ. ಕಾಮ-ಪ್ರೇಮಗಳಿಗೆ ಸಂಬಂಧಿಸಿದ ಕಾಳೇಗೌಡರ ಕವಿತೆಗಳನ್ನು ಓದುತ್ತಾ ಹೋದಂತೆ ಪ್ರೀತಿ-ಪ್ರೇಮದಿಂದಲೂ ಸಮಾಜವನ್ನು ಪರಿವರ್ತಿಸಬಹುದು ಎನ್ನುವುದನ್ನು ಗುರುತಿಸಬಹುದು.

ನಾಗವಾರರ ಕಾವ್ಯಗಳ ವಿಶೇಷ ಲಕ್ಷಣವೆಂದರೆ, ಕವಿತೆ ಗಂಭೀರತೆ ಯೊಂದಿಗೆ ಸಾಗಿದರೂ ಮುಖ್ಯವಾದ ವಿಷಯಗಳನ್ನು ಅಡಕಗೊಳಿಸುವ ಬಗೆ ಮಾದರಿಯಾದದ್ದು ಮತ್ತು ಅದರಲ್ಲಿಯೇ ಕತೆ ಅಥವಾ ಕವಿತೆಯಾದುದನ್ನು ತನ್ನ ಒಡಲಲ್ಲಿ ಇಟ್ಟುಕೊಂಡು ಸಾಗುತ್ತದೆ. ಹೀಗಾಗಿ ಕಾವ್ಯಕ್ಕೆ ವಿಶೇಷ ಮೆರಗು ದಕ್ಕುತ್ತದೆ. ಹೆಣ್ಣಿಲ್ಲದೆ ಬದುಕಿಲ್ಲ ಎಂಬಂತೆ ಹೆಣ್ಣಿಲ್ಲದ ಕಾವ್ಯವಿಲ್ಲ ಎನ್ನವಷ್ಟರ ಮಟ್ಟಿಗೆ ದಟ್ಟವಾಗಿ ಅವರ ಕವನಗಳಲ್ಲಿ ಮಹಿಳಾ ಜಗತ್ತು ತೆರೆದುಕೊಳ್ಳುತ್ತದೆ.

ಮೂಲತಃ ಕತೆಗಾರರಾಗಿರುವ ಕಾಳೇಗೌಡ ನಾಗವಾರ ಅವರು ತಮ್ಮ ಮೊದಲ ಕವನ ಸಂಕಲನ ‘ಕರಾವಳಿಯಲ್ಲಿ ಗಂಗಾಲಗ್ನ’ದಲ್ಲೇ ಅಭಿವ್ಯಕ್ತಿಯ ಶಿಸ್ತನ್ನೂ, ಪ್ರಯೋಗನಿಷ್ಠತೆಯನ್ನೂ ಮೆರೆದಿರುವುದನ್ನು ಕಾಣಬಹುದು.

‘ಅಂಚು ಸುಟ್ಟ ಆಲ್ಬಂ’ನಂತಹ ಭಗ್ನ ಪ್ರೇಮ ಕವನ ತೋರುವ ಆಶಾವಾದದ ಸೆಲೆ ನಾಗವಾರರ ಜೀವನ ಪ್ರೀತಿಯ ದ್ಯೋತಕವಾಗಿದೆ ಎಂದರೆ ತಪ್ಪಾಗಲಾರದು. ಈ ಕವನದ ಮೊದಲ ಭಾಗದಲ್ಲಿ

ಹೇಗೆ ಕಣ್ಣಾಡಿಸಲಿ?

ಯಾವ ಪುಟ ತೆರೆಯಲಿ?

ಎಂಬ ನಿರಾಶವಾದದ ಧ್ವನಿಯಲ್ಲಿ ಅಂತ್ಯಗೊಂಡರೆ, ಎರಡನೇ ಭಾಗ,

ಹಗಲ ದಿಕ್ಕಿಗೆ ಕೂಗಿ

ನುಗ್ಗಾಗಿ

ಈ ಗಾಯ ನೆತ್ತರು ಸುರಿದು

ಈಗಿಂದೀಗ ಇಂದ್ರಿಯ ಚೆಲ್ಲಿ

ನಿಲ್ಲುತ್ತೇನೆ-ಬರುವಿರಿ ತಾನೆ

ತಪ್ಪದೆ, ಸರಸರ?

ಎಂಬ ಸಾಲುಗಳಿಂದ ಮುಕ್ತಾಯವಾಗುತ್ತದೆ.

172 ಪುಟಗಳಲ್ಲಿ 56 ಕವಿತೆಗಳು ತೆರೆದುಕೊಂಡಿರುವ ‘ಗಂಧವತಿ ಪ್ರಿಯ ಕವಿತಾ’ ಸಮಗ್ರ ಕಾವ್ಯ ಗ್ರಂಥವನ್ನು ಬೆಂಗಳೂರಿನ ಕಿರಂ ಪ್ರಕಾಶನ ಹೊರತಂದಿದೆ. ಇದರ ಮುಖಬೆಲೆ 200 ರೂ. ವಿವರಗಳಿಗಾಗಿ ಮೊಬೈಲ್ ಸಂಖ್ಯೆ 7090180999ನ್ನು ಸಂಪರ್ಕಿಸಬಹುದು.

share
ಡಾ. ಅಮ್ಮಸಂದ್ರ ಸುರೇಶ್
ಡಾ. ಅಮ್ಮಸಂದ್ರ ಸುರೇಶ್
Next Story
X