Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಈ ಹೊತ್ತಿನ ಹೊತ್ತಿಗೆ
  5. ಬಯಲೆಂಬೋ ಬಯಲು: ಪ್ರೊ.ಎಚ್.ಟಿ. ಪೋತೆಯವರ...

ಬಯಲೆಂಬೋ ಬಯಲು: ಪ್ರೊ.ಎಚ್.ಟಿ. ಪೋತೆಯವರ ನೈತಿಕ ಶಕ್ತಿಯ ರೂಪಕ

ಡಾ. ಸತ್ಯಮಂಗಲ ಮಹಾದೇವಡಾ. ಸತ್ಯಮಂಗಲ ಮಹಾದೇವ8 May 2024 3:44 PM IST
share
ಬಯಲೆಂಬೋ ಬಯಲು: ಪ್ರೊ.ಎಚ್.ಟಿ. ಪೋತೆಯವರ ನೈತಿಕ ಶಕ್ತಿಯ ರೂಪಕ

ಬಯಲು ಬಯಲನೆ ಬಿತ್ತಿ ಬಯಲು ಬಯಲನೆ ಬೆಳೆದು

ಬಯಲು ಬಯಲಾಗಿ ಬಯಲಾಯಿತ್ತಯ್ಯಾ.

ಬಯಲ ಜೀವನ ಬಯಲ ಭಾವನೆ

ಬಯಲು ಬಯಲಾಗಿ ಬಯಲಾಯಿತ್ತಯ್ಯಾ.

ನಿಮ್ಮ ಪೂಜಿಸಿದವರು ಮುನ್ನವೆ ಬಯಲಾದರು

ನಾ ನಿಮ್ಮ ನಂಬಿ ಬಯಲಾದೆ ಗುಹೇಶ್ವರಾ.

ಅಲ್ಲಮಪ್ರಭುಗಳ ವಚನದ ಮೇಲ್ಕಂಡ ಸಾಲುಗಳಲ್ಲಿ ಬಯಲು ಎಂಬ ಪದವನ್ನು ಬಿಡುಗಡೆಯ ಸ್ಥಿತಿ ಅಥವಾ ಪರವಸ್ತು ಎಂದು ಆಧ್ಯಾತ್ಮಿಕ ಪರಿಭಾಷೆಯಲ್ಲಿ ಕರೆದಿದ್ದಾರೆ. ಜನಸಾಮಾನ್ಯರಾಗಿದ್ದ ವಚನಕಾರರು ಆಧ್ಯಾತ್ಮಿಕ ಅನುಸಂಧಾನದ ಮೂಲಕ ಸಾಮಾನ್ಯನೂ ಅಸಾಮಾನ್ಯನಾಗುವ ಸಹಜ ಜೀವನದ ನೈತಿಕ ಅಂಶಗಳನ್ನು ಮೈಗೂಡಿಸಿಕೊಂಡಿದ್ದರು. ಹಾಗಾಗಿ ಅವರ ಮಾತುಗಳಲ್ಲಿ ಅನುಭಾವಿಕ ಶಕ್ತಿ ತುಂಬಿರುತ್ತದೆ. ಅದರ ಅರ್ಥ ಪ್ರತಿಯೊಬ್ಬ ಪ್ರಾಮಾಣಿಕ ಬಡವನಲ್ಲಿರುವ ನೈತಿಕ ಮೌಲ್ಯಗಳು ಅನುಭಾವದ ಅಂಶಗಳನ್ನು ಪ್ರಚುರ ಪಡಿಸುತ್ತವೆ. ನೈತಿಕ ಮೌಲ್ಯಗಳು ಬಡತನದ ಮಹತ್ವವನ್ನು ಸಾಕ್ಷೀಕರಿಸುತ್ತಲೇ ಸಾಮಾನ್ಯನಲ್ಲಿ ಅಸಮಾನತೆಯನ್ನು ಪ್ರಕಟಗೊಳ್ಳುವಂತೆ ಮಾಡುತ್ತದೆ.

ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ‘‘ಮನುಷ್ಯನ ಘನತೆ ಮತ್ತು ವ್ಯಕ್ತಿತ್ವ ಹೇಳಿಕೊಡದಿದ್ದರೂ ಬಡವರಲ್ಲಿ ಸಹಜವಾಗಿಯೇ ಇರುವಂತಹ ದೊಡ್ಡ ಗುಣ’’ ಎಂದಿದ್ದಾರೆ. ಬಡತನದ ಬದುಕು ಜೀವನದ ಅನೇಕ ಪಾಠಗಳನ್ನು ಕಲಿಸುವ ವಿಶ್ವವಿದ್ಯಾನಿಲಯ ಮಾತ್ರವಲ್ಲ ನೈತಿಕತೆ, ಸತ್ಯ, ಪ್ರಾಮಾಣಿಕತೆ ಇಂತಹ ಗುಣಗಳನ್ನು ಸಹಜವಾಗಿ ಮೈಗೂಡಿಸಿಕೊಳ್ಳುವಂತೆ ಮಾಡಿರುತ್ತದೆ. ಇಂತಹ ನೈತಿಕ ಮೌಲ್ಯಗಳನ್ನು ಮತ್ತು ಸಾಮಾನ್ಯ ಬದುಕಿನ ಅಂಶಗಳನ್ನು ಒಳಗೊಂಡ ಬಡತನದ ಬದುಕಿನಲ್ಲಿ ತಾವು ಕಂಡ ಬದುಕಿನ ನೈಜ ಘಟನೆಗಳನ್ನು ಕಾದಂಬರಿ ರೂಪದಲ್ಲಿ ಹಿಡಿದಿಟ್ಟಿರುವ ಪ್ರೊ.ಎಚ್.ಟಿ ಪೋತೆ ಅವರ ‘ಬಯಲೆಂಬೋ ಬಯಲು’ ಕೃತಿಯು ಮನುಷ್ಯನ ಬದುಕಿನ ಘನತೆಯನ್ನು ಮತ್ತು ನೈತಿಕತೆಯ ಜೀವಪೋಷಕ ತತ್ವವನ್ನು ಸಾರುವಂತಹ ಕೃತಿಯಾಗಿದೆ.

ಈ ಕೃತಿಯ ಮಹತ್ವವಿರುವುದು ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನದ ಕ್ರಿಯಾ ಶಕ್ತಿಯಲ್ಲಿ. ಸಾಮಾನ್ಯನಾಗಿ ಹುಟ್ಟಿದ ಹನುಮಂತ, ತಂದೆ ತಿಪ್ಪಣ್ಣನವರ ಸಾಮಾಜಿಕ ತಿಳುವಳಿಕೆಯ ಕಾಠಿಣ್ಯವನ್ನು ಮತ್ತು ತಾಯಿ ಅಂಬವ್ವನವರ ಪ್ರೇಮದ ಹೃದಯವನ್ನು ತನ್ನದಾಗಿ ಮಾಡಿಕೊಂಡಿದ್ದರ ಫಲವಾಗಿ ಇಂದು ನಾಡಿಗೆ ಹಣದಿಂದ ಕೊಂಡು ಕೊಳ್ಳಲಾಗದ ಶ್ರೇಷ್ಠ ಅಂಬೇಡ್ಕರ್ ಅನುಯಾಯಿ, ಜಾನಪದ ವಿದ್ವಾಂಸ, ಮಾನವತಾವಾದಿ, ಕತೆಗಾರ, ಕಾದಂಬರಿಕಾರ, ಅತ್ಯುತ್ತಮ ಲೇಖಕರಾಗಿ ಪ್ರೊ.ಎಚ್.ಟಿ.ಪೋತೆ ಎಂಬ ಹೆಸರಿನಲ್ಲಿ ಕನ್ನಡಕ್ಕೆ ದಕ್ಕಿದ್ದಾರೆ.

ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜೀವನ, ಹೋರಾಟ ಮತ್ತು ತಾತ್ವಿಕ ನೆಲೆಗಳನ್ನು ಹೋರಾಟದ ಬದುಕಿನ ಮೂಲಕವೇ ತನ್ನದಾಗಿಸಿಕೊಂಡ ಪ್ರೊ.ಎಚ್.ಟಿ ಪೋತೆಯವರ ಪ್ರಾಮಾಣಿಕತೆ ಮತ್ತು ವಿನಯ ‘ಬಯಲೆಂಬೋ ಬಯಲು’ ಈ ಕಾದಂಬರಿಯಲ್ಲಿ ಅನಾವರಣಗೊಂಡಿದೆ. ತಳವರ್ಗದಲ್ಲಿ ಜನಿಸಿದ ವ್ಯಕ್ತಿಯೊಬ್ಬ ತನ್ನ ಕೌಟುಂಬಿಕ ಹಿನ್ನೆಲೆ ಸಾಮಾಜಿಕವಾಗಿ ಮುನ್ನೆಲೆಯಲ್ಲಿ ಇರದಿದ್ದರೂ, ಜಾತಿಯಿಂದ ದೂರವಿಡಲ್ಪಟ್ಟಿದ್ದರೂ ದಮನಿತ ಬದುಕಿನ ಹೋರಾಟದ ಮನೋಭಾವವನ್ನು ಮೈಗೂಡಿಸಿಕೊಂಡು ತನ್ನ ಬದುಕಿನ ಏಳು-ಬೀಳುಗಳಲ್ಲಿ ಬೆಂದು ರತ್ನಪರೀಕ್ಷಕನು ಚಿನ್ನವನ್ನು ಕಾಯಿಸಿ ಕಾಯಿಸಿ ಅದರ ಸ್ಥಿತಿಯನ್ನು ಪರೀಕ್ಷಿಸಿಕೊಳ್ಳುವಂತೆ ಪ್ರೊ.ಎಚ್.ಟಿ ಪೋತೆಯವರು ಯಾರನ್ನೂ ದೂಷಿಸದೆ ಶಿಕ್ಷಣವೆಂಬ ಅಸ್ತ್ರದ ಮೂಲಕ ಹೋರಾಡುತ್ತ ತಮ್ಮ ಬದುಕೆಂಬ ಅಗ್ನಿದಿವ್ಯದಲ್ಲಿ ಬೆಂದು ಪುಟವಿಟ್ಟ ಚಿನ್ನದಂತೆ ಆಗಿದ್ದಾರೆ. ಈ ಮಾತುಗಳನ್ನು ಅವರ ‘ಬಯಲೆಂಬೋ ಬಯಲು’ ಕಾದಂಬರಿ ಸಾಕ್ಷೀಕರಿಸುತ್ತದೆ.

ನಾಡಿನ ಬಹುಶೃತ ವಿದ್ವಾಂಸರಾದ ಪ್ರೊ.ಮಲ್ಲೇಪುರಂ ಅವರ ಮುನ್ನುಡಿಯಲ್ಲಿ ‘‘ಪ್ರೊ.ಎಚ್.ಟಿ ಪೋತೆ ಅವರ ‘ಬಯಲೆಂಬೋ ಬಯಲು’ ಕಾದಂಬರಿಯು ತಳವರ್ಗದ ದಮನಿತ ಬದುಕಿನ ಏಳು-ಬೀಳುಗಳನ್ನು, ಪತಿತಗೊಂಡ ಅವರ್ಣನೀಯ ಸ್ಥಿತಿಯನ್ನು, ಆ ಲೋಕವು ವೈಚಾರಿಕವಾಗಿ ಎದ್ದುನಿಲ್ಲುತ್ತಿರುವ ಬಗೆಯನ್ನು ಯಾವ ಎಗ್ಗೂ ಇಲ್ಲದೆ ನಿರ್ಭಿಡೆಯಿಂದ ಚಿತ್ರಿಸುತ್ತಿದೆ’’ ಎಂದು ಬರೆಯುತ್ತಾ ಬಯೋಪಿಕ್ ಎಂಬ ಜೀವನಕಥನದ ಕಾದಂಬರಿ ದಲಿತ ಲೋಕದಿಂದ ಬಂದ ಮೊತ್ತಮೊದಲ ಕಾದಂಬರಿ ಎಂದು ಹೇಳಿರುವುದು ಈ ಕೃತಿಯ ಮೆರುಗನ್ನು ಹೆಚ್ಚಿಸಿದೆ.

ಪೋತೆಯವರ ತಾತ ಭೂಮಿ ತೂಕದ ಮನುಷ್ಯ ರಾಮಪ್ಪ, ಸೌಮ್ಯವಾದದ ಮನುಷ್ಯ ತಮ್ಮ ಅರಿವಿನ ಅಂತಃಕರಣದ ಮೂಲಕ ತಳಸಮುದಾಯದ ಹಿರಿಮೆಯನ್ನು ಹೆಚ್ಚಿಸಿದವರು, ಮೇಲ್ವರ್ಗದ ಜನರು ಸಹ ತಮ್ಮನ್ನು ಒಪ್ಪಿಕೊಳ್ಳುವಂತೆ ತಮ್ಮ ವರ್ತನೆಯಲ್ಲಿ ಬದುಕಿ ತೋರಿಸಿದವರು. ಅವಿಭಕ್ತ ಕುಟುಂಬದಲ್ಲಿಯೂ ಊಟಕ್ಕೆ ತತ್ವಾರ, ಬಡತನ ಜೊತೆಗೆ ಸುಡುವ ಸೂರ್ಯನಿಂದ ಬೆಂದು ಮಣ್ಣಿಗೆ ಬಿದ್ದರೂ ಕಾದು ಕೆಂಡವಾದ ಮಣ್ಣಿನಲ್ಲಿ ಅಂಬೇಡ್ಕರ್ ಎಂಬ ಮಳೆಬಂದಾಗ ಆದ ಬದಲಾವಣೆಯನ್ನು ತಂದೆ ತಿಪ್ಪಣ್ಣ ಅರಿತು, ಕಾನೂನಿನ ಅರಿವು, ವಿಜ್ಞಾನ ಮತ್ತು ತಂತ್ರಜ್ಞಾನದಿಂದ ಆದ ಸಾಮಾಜಿಕ ಬದಲಾವಣೆಗಳನ್ನು ಅರ್ಥಮಾಡಿಕೊಂಡು ತನ್ನ ಮಕ್ಕಳಿಗೆ ಶಿಕ್ಷಣ ಕೊಡಿಸುವ ಮೂಲಕ ದಮನಿತವಾದ ದನಿಯನ್ನು ಉಚ್ಚಕಂಠದ ಗಾಯನಕ್ಕೆ ಅಣಿಗೊಳಿಸಿದವರು.

ಬಯಲು ಬಯಲನೇ ಬಿತ್ತಿ ಬಯಲಿನಲ್ಲಿ ಆಲಯವನ್ನು ನಿರ್ಮಿಸಿದ ಪೋತೆಯವರ ಸಾಂಘಿಕ ಹೋರಾಟದ ಮನೋಧರ್ಮ ದಲಿತ ಸಮುದಾಯದ ಪ್ರತಿಯೊಬ್ಬ ವ್ಯಕ್ತಿಗೆ ಸದಾ ಆದರ್ಶ ಎಂಬುದನ್ನು ಈ ಕೃತಿಯು ಕಟ್ಟಿ ಕೊಡುತ್ತದೆ.

share
ಡಾ. ಸತ್ಯಮಂಗಲ ಮಹಾದೇವ
ಡಾ. ಸತ್ಯಮಂಗಲ ಮಹಾದೇವ
Next Story
X