Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಈ ಹೊತ್ತಿನ ಹೊತ್ತಿಗೆ
  5. ಜೀವಪ್ರೀತಿ ಧ್ಯಾನಿಸುವ ಕವಿತೆಗಳು

ಜೀವಪ್ರೀತಿ ಧ್ಯಾನಿಸುವ ಕವಿತೆಗಳು

ರಜನಿ ಎಸ್.ಎಂ. ಬೆಂಗಳೂರುರಜನಿ ಎಸ್.ಎಂ. ಬೆಂಗಳೂರು15 Jan 2026 12:17 PM IST
share
ಜೀವಪ್ರೀತಿ ಧ್ಯಾನಿಸುವ ಕವಿತೆಗಳು

ಸಮಾಜದಲ್ಲಿನ ಆತಂಕ, ಒತ್ತಿಟ್ಟ ನೋವು, ವ್ಯವಸ್ಥೆಯ ಕ್ರೌರ್ಯ, ಜಾತಿ ಮತ ಪಂಥಗಳ ಮೇಲಾಟ, ಹೆಣ್ಣಿನ ಅಸಹಾಯಕತೆ, ಆತಂಕಗಳನ್ನು ಮಹಾದೇವ ಬಸರಕೋಡ ಗಂಭೀರವಾಗಿ ಅರ್ಥೈಸಿಕೊಳ್ಳಲು ಪ್ರಯತ್ನಿಸುತ್ತ ಅದಕ್ಕೆ ತಕ್ಕುದಾದ ಅಭಿವ್ಯಕ್ತಿಯನ್ನು ತಮ್ಮ ಕಾವ್ಯದಲ್ಲಿ ಹೊಸ ರೀತಿಯಲ್ಲಿ ಕಂಡುಕೊಳ್ಳುವುದನ್ನು ಅವರ ‘ಬತ್ತುವುದಿಲ್ಲ ಜೀವದೊಲವು’ ಸಾಕ್ಷೀಕರಿಸುತ್ತದೆ. ಜೀವನ ಪ್ರೀತಿ ಮತ್ತು ತಾತ್ವಿಕ ನೆಲೆಗಳನ್ನು ಅತ್ಯಂತ ನಿಖರವಾಗಿ ನಿರೂಪಿಸುವ ಕೃತಿ ಇದಾಗಿದೆ ಎನ್ನುವುದು ಅತಿಶಯೋಕ್ತಿಯೇನಲ್ಲ. ಎಲ್ಲ ಅಡೆತಡೆಗಳನ್ನು ದಾಟಿ ಮನಸ್ಸನ್ನು ಚಲನಶೀಲವಾಗಿರಿಸಲು ಕನಸುಗಳ ಆಸರೆ ಬೇಕು, ಸಾಮಾಜಿಕವಾಗಿ ಎದುರಾಗುವ ಅಮಾನವೀಯ ಸವಾಲುಗಳ ನಡುವೆಯೂ ಜೀವ ಪ್ರೀತಿಯನ್ನು ಉಳಿಸಿಕೊಳ್ಳುವ ಉಮೇದು ಇರಬೇಕು ಎನ್ನುವ ಆಶಾವಾದದ ಹಿನ್ನೆಲೆಯಲ್ಲಿ ಇಲ್ಲಿನ ‘ಮುಸುಕು ಸರಿಸೋಣ’, ‘ಕಾಯುತ್ತಲಿರುವೆ’, ‘ಬದುಕನರಳಿಸು ಬೆಂಕಿಯೇ’ ಎನ್ನುವ ಹಲವು ಕವನಗಳು ಅಂತರಂಗದ ಜೀವತಂತುಗಳನ್ನು ಮೀಟುತ್ತವೆ. ಸಿದ್ಧ ಮಾದರಿಯ ಪಡಿಯಚ್ಚಿಗೆ ಹೊರತಾಗಿ ಪ್ರಯೋಗಶೀಲವಾಗಿ ‘ಅಶ್ವಮೇಧದ ಕುದುರೆಗೆ ಲಗಾಮು’, ‘ಸಣ್ಣತನ’, ‘ಕ್ಷಮೆ ಇರಲಿ’ ಕವನಗಳು ನಾವಿನ್ಯತೆಗಾಗಿ ತುಡಿಯುವಿಕೆಗೆ ಉತ್ತಮ ನಿದರ್ಶನವಾಗಿವೆ. ಬೆಳಕು ನೀಡುವ ಸೂರ್ಯ, ಬೆಳದಿಂಗಳ ಕಾಂತಿ ಕೊಡುವ ಚಂದ್ರ, ಮುಳ್ಳಿನ ನಡುವೆಯೇ ಅರಳುವ ಗುಲಾಬಿ ಚಿತ್ರಗಳನ್ನು ಕಟ್ಟಿಕೊಡುತ್ತ ಸವಾಲುಗಳ ನಡುವೆಯೂ ಬದುಕು ನೀಡಿದ್ದನ್ನು ಬಾಚಿಕೊಳ್ಳುವ ಛಲಗಾರಿಕೆ ರೂಢಿಸಿಕೊಳ್ಳುವಂತೆ ಒತ್ತಾಯಿಸುತ್ತವೆ. ಯಾವುದೇ ಬಗೆಯ ಅತಿರೇಕವಿಲ್ಲದೆ ಸಂಯಮದಿಂದ ವಾಸ್ತವತೆಯನ್ನು ಮನಗಾಣಿಸಿಕೊಡಲು ಇಲ್ಲಿಯ ಕವನಗಳು ಸಮರ್ಥವಾಗಿವೆ.

ಇರುವ ಇರುಳ ಕೇಡನು ಕಳೆದು

ಅರಿವಿನ ದೀಪ ಮುಡಿಸುತ

ಒಳಬೆಳಕು ತೋರಿದವರು

ನಮ್ಮ ನೆಲದ ಶರಣರು..

ಶರಣ ಸಂಸ್ಕೃತಿಯಲ್ಲಿನ ವೈಯಕ್ತಿಕ ಮತ್ತು ಸಾಮಾಜಿಕ ಮೌಲ್ಯಗಳ ಸಹಚರ್ಯವನ್ನು ಎತ್ತಿ ತೋರಿಸುವಲ್ಲಿ ಈ ರೀತಿಯ ಇನ್ನು ಕೆಲವು ಕವಿತೆಗಳು ಈ ಕಾಲಘಟ್ಟಕ್ಕೆ ಹೆಚ್ಚು ಪ್ರಸ್ತುತವೆನಿಸುತ್ತದೆ. ಬಂಡಾಯಕ್ಕೆ ಸೀಮಿತವೆನಿಸದ, ಆದರೂ ಅದರ ತಿರುಳುಗಳನ್ನು ಸೌಮ್ಯವಾಗಿ ಪ್ರತಿಧ್ವನಿಸುತ್ತವೆ. ವಸ್ತು ಸತ್ಯವನ್ನು ಮೀರಿದ ಕಾವ್ಯ ಸತ್ಯವನ್ನು ಕಾಣಿಸುವಲ್ಲಿ ಕೆಲವು ಕವಿತೆಗಳು ಯಶಸ್ವಿಯಾಗಿವೆ. ಕವಿ ಮಹಾದೇವ ಬಸರಕೋಡರ ಪ್ರೌಢವಾದ ಚಿಂತನೆ ಹಾಗೂ ತಾತ್ವಿಕ ಜಿಜ್ಞಾಸೆ ಓದುಗರ ಮಾತ್ರವಲ್ಲದೆ ವಿಮರ್ಶಕರ ಮನಸ್ಸನ್ನು ಸೆಳೆದುಕೊಳ್ಳುವಲ್ಲಿ, ಬದುಕಿನ ಭರವಸೆಯನ್ನು ಕಳೆದುಕೊಳ್ಳದೆ ಮಾನವೀಯತೆಯನ್ನು ಧ್ಯಾನಿಸುವಲ್ಲಿ ‘ಬತ್ತುವುದಿಲ್ಲ ಜೀವದೊಲವು’ ಸಫಲವಾಗಿದೆ ಎನ್ನಬಹುದು.

Tags

poems
share
ರಜನಿ ಎಸ್.ಎಂ. ಬೆಂಗಳೂರು
ರಜನಿ ಎಸ್.ಎಂ. ಬೆಂಗಳೂರು
Next Story
X