Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಈ ಹೊತ್ತಿನ ಹೊತ್ತಿಗೆ
  5. ‘ಉಮ್ಮಲ್ತಿ ಗುಡಿಯ ಸಾಕ್ಷಿ’ಯೊಳಗಿಂದ...

‘ಉಮ್ಮಲ್ತಿ ಗುಡಿಯ ಸಾಕ್ಷಿ’ಯೊಳಗಿಂದ...

ವಿಜಯೇಂದ್ರ ಪಾಟೀಲವಿಜಯೇಂದ್ರ ಪಾಟೀಲ29 Oct 2025 11:38 AM IST
share
‘ಉಮ್ಮಲ್ತಿ ಗುಡಿಯ ಸಾಕ್ಷಿ’ಯೊಳಗಿಂದ...

ಶ್ರೀಮತಿ ವಿಜಯಶ್ರೀ ಹಾಲಾಡಿಯವರ ‘ಉಮ್ಮಲ್ತಿ ಗುಡಿಯ ಸಾಕ್ಷಿ’ ಕಥಾ ಸಂಕಲನದ ಕಥೆಗಳಲ್ಲಿ ಆಧುನಿಕ-ಹಳ್ಳಿಗಾಡಿನ; ಶಿಕ್ಷಿತ-ಅಶಿಕ್ಷಿತ; ಮಕ್ಕಳ, ಹರೆಯದ ಮತ್ತು ವಯಸ್ಸಾದ ಹೆಣ್ಣು ಜೀವಗಳ ಹಲವು ಮಗ್ಗಲುಗಳ ಕಥೆಗಳಿವೆ. ಲೈಂಗಿಕ ಶೋಷಣೆಯೂ ಸೇರಿದಂತೆ ಅಂದಿನಿಂದ ಇಂದಿನವರೆಗೂ ಮಹಿಳೆಯರ ಜಗತ್ತು ಎದುರಿಸಿಕೊಂಡು ಬಂದ ಸಂಕಷ್ಟಗಳ ದಾರುಣ ಚಿತ್ರಣ ಹಾಗೂ ತಮದೇ ವಿಧದಲ್ಲಿ ಅದನ್ನು ಎದುರಿಸಿದ, ಪ್ರತಿಕ್ರಿಯಿಸಿದವರ ಚಿತ್ರಣವಿದೆ. ಹಗುರವಾಗಿ ಮಾತಾಡುವುದಾದರೆ ಇವುಗಳನ್ನು ಆರಾಮಾಗಿ ‘ಸ್ತ್ರೀವಾದ’ದ ಫಾರ್ಮುಲಾಕ್ಕೆ ನಿಲುಕಿಸಿ ಅದೇ ದಾರಿಯಲ್ಲಿ ಇದನ್ನು ವಿಶ್ಲೇಷಿಸುತ್ತ ಸಾಗಿ ಬಿಡಬಹುದು. ಆದರೆ ಹಾಗೆ ಮಾಡಲಾಗದೆಂದು ಇಲ್ಲಿಯ ಕಥೆಗಳು ಗಟ್ಟಿಯಾಗಿ ಸೂಚಿಸುತ್ತವೆ. ತನ್ನ ಬಗೆಗಿನ ಸ್ಪಷ್ಟ ಅರಿವು, ಅಸ್ಮಿತೆಗಳ ಆಧಾರದ ಮೇಲೆ ಹೋರಾಟ ಮಾಡಿಯಾದರೂ ಸಮಾನತೆ ಪಡೆಯಬೇಕೆನ್ನುವ ಸ್ತ್ರೀವಾದದಲ್ಲಿ ದೋಷವೇನೂ ಇಲ್ಲ. ಆದರೆ ಲೇಖಕಿಗೆ ಇದನ್ನು ಇಷ್ಟಕ್ಕೆ ಸೀಮಿತಗೊಳಿಸುವ ಯೋಚನೆ ಇದ್ದಂತಿಲ್ಲ. ಸಮಾನತೆಗಿಂತಲೂ ಮಿಗಿಲಾಗಿ, ಜೊತೆಗೇ ಬಾಳಬೇಕಾದಾಗ ಇರಬೇಕಾದ ನೋಟದ ಬಗೆಗೆ ಇಲ್ಲಿ ಒತ್ತು ಬಿದ್ದಂತಿದೆ. ಹೀಗಾಗಿ ಇಲ್ಲಿಯ ಕಥೆಗಳು ಈ ಹೋರಾಟದ ಮಾರ್ಗವನ್ನು ಅಷ್ಟಾಗಿ ಅನುಸರಿಸದೆ ದ್ವೇಷ ಬೆಳೆಸದ ತಾಯಿ ತೋರುವ ಮಮತೆಯ ದಾರಿಯನ್ನು ಹೆಚ್ಚಾಗಿ ಅನುಸರಿಸಿವೆ. ಸಾವು-ಬದುಕಿನ ಗಳಿಗೆಯಲ್ಲಿ ಕೂಡ ಅನಿವಾರ್ಯ ಸಂದರ್ಭಗಳನ್ನು ಹೊರತುಪಡಿಸಿ ಪಾತ್ರಗಳು ತಾಳ್ಮೆ, ಬುದ್ಧಿವಂತಿಕೆಯನ್ನು ತೋರಿವೆ. ಉದಾಹರಣೆಗೆ: ದರ್ಖಾಸು ಮನೆಯ ಬೂದ ಮತ್ತು ವಾಸಯ್ಯನ ಮೇಲೆ ಮಾಣಿಕಿಬಾಯಿ ಮಾಡುವ ದೈಹಿಕ ಹಲ್ಲೆ. ಕಥೆ: ಮಾಣಿಕಿಬಾಯಿ; ಮತ್ತು ಹಡೆಗಂಡುಗಳ ಮೇಲೆ ದೇವೀಬಾಯಿಯ ಗ್ಯಾಂಗ್ ಮಾಡುವ ವ್ಯವಸ್ಥಿತ ದಾಳಿ. ಕಥೆ: ಗರಡಿ ಬೆಟ್ಟಿನ ದೊಂದಿ ಬೆಳಕಲ್ಲಿ. ಇದು ಮಾತ್ರ ಸ್ಪಷ್ಟವಾದ ಒಂದು ಅನಿವಾರ್ಯ ಸಂದರ್ಭ. ಇದನ್ನು ಬಿಟ್ಟರೆ, ಕಥೆಗಳಲ್ಲಿ ಬರುವ ಮಹಿಳೆಯರ ಹಿನ್ನೆಲೆಗಳನ್ನು ಗಮನಿಸಿದಾಗ ತಮ್ಮ ಮಿತಿಗಳ ಅರಿವಿನಿಂದಾಗಿ ಆ ಪಾತ್ರಗಳು ತಮ್ಮ ಬದುಕಿಗಾಗಿ ವೈರ, ದ್ವೇಷಗಳನ್ನು ಬಿಟ್ಟುಕೊಡುವುದನ್ನು ತಂತ್ರವಾಗಿ ಕೂಡ ಮಾಡಿಕೊಂಡಿರಲು ಸಾಧ್ಯ ಎನಿಸುತ್ತದೆ. ಇದರಲ್ಲಿ ಸಹಜ ಅಸಹಾಯಕತೆ ಕೂಡ ಸೇರಿಕೊಂಡಿರಬಹುದು. ಅಷ್ಟೊಂದು ಓದಿನ ಹಿನ್ನೆಲೆ ಇರದ ಪಾತ್ರಗಳು ದುಡಿಮೆಯ ಮೂಲಕ ಗಂಡಿನ, ಸಮಾಜದ ದಬ್ಬಾಳಿಕೆಯನ್ನು ತಡೆದುಕೊಳ್ಳಲು ನೋಡುತ್ತವೆ. ಇದರಲ್ಲಿ ಮಕ್ಕಳ ಮೇಲಿನ ಪ್ರೀತಿ, ಜವಾಬ್ದಾರಿ ಮತ್ತು ಭವಿಷ್ಯದ ಚಿಂತನೆಯ ಅರಿವು ಅಡಗಿರುವ ಸೂಚನೆಗಳಿದ್ದಂತಿವೆ. ವಿದ್ಯಾವಂತ, ಆರ್ಥಿಕ ಸ್ವಾವಲಂಬನೆ ಪಡೆದ ಆಧುನಿಕ ಹೆಣ್ಣುಮಕ್ಕಳು ಬದುಕನ್ನು ಎದುರಿಸುವಲ್ಲಿ ತೋರುವ ಸ್ಪಷ್ಟತೆ, ದೃಢತೆಗಳಿಗೆ ಸಾಧನೆಯ ಮೂಲಕ ಅವರು ತಲುಪಿದ ಸ್ಥಾನವೇ ಕಾರಣ ಎಂಬುದನ್ನು ಹಲವು ಕಥೆಗಳು ಸಾರುತ್ತವೆ. (ಉದಾ: ಹೊಳೆ, ಗೆಜ್ಜೆ ಕಥೆಗಳು). ಮೇಲ್ಜಾತಿಯಲ್ಲಿ ಹುಟ್ಟಿಯೂ ಈ ಅನುಕೂಲ ಇರದ ಕಾರಣಕ್ಕೆ ಬದುಕಿನ ದಾರುಣತೆಯಲ್ಲಿ ಸಿಲುಕುವ ಹೆಣ್ಣುಗಳನ್ನು ಗಮನಿಸಿದಾಗ ಹೆಣ್ಣು ಯಾವ ಜಾತಿಯಲ್ಲಿ ಜನ್ಮ ತಳೆದರೂ ಶೋಷಣೆಯನ್ನು ತಪ್ಪಿಸಿಕೊಳ್ಳುವುದು ಸುಲಭವಲ್ಲ ಎಂದೇ ಅನಿಸುತ್ತದೆ. ಉದಾಹರಣೆಗೆ ‘ಉಮ್ಮಲ್ತಿ ಗುಡಿಯ ಸಾಕ್ಷಿ’ ಕಥೆಯ ಭಾಗೀರಥಿ, ಅವಳ ಮಕ್ಕಳು ಮತ್ತು ‘ಪಾರ್ತಿ ಚಿಕ್ಕಿ’ ಕಥೆಯ ಪಾರ್ವತಿ.

ಈ ಸಂಕಲನದ ಕಥೆಗಳಲ್ಲಿನ ಸ್ಥಾಯೀ ಭಾವವೆಂದರೆ ‘ಆತಂಕ’ ಮತ್ತು ಅದು ಹರಡುವ ದಟ್ಟ ವಿಷಾದ. ಪ್ರತೀ ಆತಂಕಕ್ಕೂ ಭಿನ್ನ ಸ್ವರೂಪವಿರುವುದರಿಂದ ಪ್ರತೀ ಕಥೆಯೂ ವಿಭಿನ್ನತೆಯನ್ನು ಹೇಳುತ್ತದೆ. ‘ಉಮ್ಮಲ್ತಿ..’ ಹಾಗೂ ‘ಪಾರ್ತಿ ಚಿಕ್ಕಿ’ಗಳ ನಾಯಕಿಯರಿಗೆ ಮತ್ತು ‘ಕೆಮ್ಮಣ್ಣು’ವಿನ ಸಂಜೀವಣ್ಣನಿಗೆ ಎದುರಾಗುವ ಆತಂಕ ಅವರನ್ನು ಒತ್ತಡಕ್ಕೆ, ಮಾನಸಿಕ ಕಾಯಿಲೆಗೆ, ಕಡೆಗೆ ಸಾವಿಗೆ ದೂಡಿದರೆ(ಒಂದು ಕಡೆ ಇದನ್ನು ಚಿಕಿತ್ಸೆಯಾಗಿ ಕಂಡುಕೊಳ್ಳುವ ದುರಂತ ಕೂಡ ಇದೆ), ‘ಬುತ್ಯನ ಬೆಂಗಳೂರು ಪ್ರಯಾಣ’ ಮತ್ತು ‘ಮಹಾ ಪ್ರಸ್ಥಾನ’ಗಳು ಆಧುನಿಕ ಬದುಕು ಧುತ್ತನೆ ನಿರ್ಮಿಸುವ ಆತಂಕವನ್ನು, ಕುಟುಂಬಗಳು ಎದುರಿಸುವ ಸಂಕಟವನ್ನು ಪ್ರಸ್ತಾಪಿಸುತ್ತದೆ. ಆಧುನಿಕ ಕಾಲದಲ್ಲೂ ಕಾರ್ಯ ಕಾರಣ ಸಂಬಂಧದ ಮೂಲಕ ಅಪ್ಪಳಿಸುವ ಆತಂಕ ‘ಏಕತಂತು’ವಿನಲ್ಲಿದೆ. ದುರಂತವೆಂದರೆ ಲೈಂಗಿಕತೆಯನ್ನು ಕೂಡ ಆಧುನಿಕ ಜಗತ್ತಿನ ಸರಕಾಗಿಸಲು ನೋಡುವ ‘ಗರಡಿ ಬೆಟ್ಟಿನ...’ ಹಾಗು ‘ಚನ್ನೆಮಣೆ’ ಕಥೆಗಳು ಹುಟ್ಟಿಸುವ ಆತಂಕ ಒಂದೇ ಆದರೂ ಸಂಘಟಿತ ಹಾಗೂ ಜಾಣತನದಿಂದ ಅದನ್ನು ನಿಭಾಯಿಸಿದ ರೀತಿ ಹೆಣ್ಣುಮಕ್ಕಳಿಗೊಂದು ಭರವಸೆಯನ್ನು ನೀಡುತ್ತದೆ. ಬಾಲ್ಯಕಾಲದ ಲೈಂಗಿಕ ಆಘಾತ ತರುವ ಆತಂಕ ಬದುಕಿನುದ್ದಕ್ಕೂ ಕಾಡುವುದನ್ನು ‘ವಕ್ರ ಕೋಡಿನ ಬಸವ’ ಕಥೆ, ಇಂಥವುಗಳಿಗೆ ಪರಿಹಾರವೇ ಇಲ್ಲವೇನೊ ಎಂಬ ಸಂದೇಹದಲ್ಲಿ ಮುಗಿಸುತ್ತದೆ. ಈ ಹಲವು ಕಥೆಗಳು ಅನೂಚಾನವಾಗಿ ಹೆಣ್ಣಿನ ಮೇಲಾಗುತ್ತ ಬಂದ ದೈಹಿಕ, ಮಾನಸಿಕ ಅತ್ಯಾಚಾರಗಳನ್ನು ಮನನೀಯವಾಗಿ ಚಿತ್ರಿಸುತ್ತವೆ.

ತನ್ನ ಅಪರ ವಯಸ್ಸಿನಲ್ಲೂ ಆರೈಕೆಯ ಅಗತ್ಯ ಇರುವ ಅಂತಹದೇ ಗಂಡಿಗೆ ಪ್ರೀತಿ ಎರೆಯುವ ‘ದೇವಮ್ಮಕ್ಕ’ ಈ ಸಂಕಲನದ ಸ್ವಭಾವದಿಂದ ಬೇರೆಯಾಗಿ ನಿಲ್ಲುವ ಒಳ್ಳೆಯ ಕಥೆ. ಹೆಣ್ಣಿನ ಪ್ರೀತಿಯಲ್ಲಿ ಅಡಗಿರುವ ತಾಯ್ತನವನ್ನು ಇದು ಪ್ರಧಾನವಾಗಿ ಕಾಣಲು ನೋಡುತ್ತದೆ.

ಲೇಖಕಿ ಇಲ್ಲಿಯ ಕಥೆಗಳನ್ನು ಬಹುತೇಕ ತಾಳ್ಮೆಯಿಂದ ನಿರ್ವಹಿಸಿದ್ದಾರೆ. ದುರಂತಗಳಿಗೆ ಹೊಣೆಗಾರರನ್ನಾಗಿ ಮಾಡಲೆಂದೇ ಯಾರನ್ನೂ ಹುಡುಕುವುದಿಲ್ಲ. ಕುತೂಹಲ ಹುಟ್ಟಿಸಲೆಂದೇ ಯಾವ ತಂತ್ರವನ್ನೂ ಮಾಡುವುದಿಲ್ಲ. ಆದರೆ ನಿಲ್ಲದ ಸಹಜ ಓಟವೇ ಕಥೆಗಳಲ್ಲಿ ಕುತೂಹಲ ಹುಟ್ಟಿಸುತ್ತದೆ. ಕುಂದಾಪ್ರ ಕನ್ನಡದ ಬಳಕೆ ಕಥೆಗಳಿಗೆ ಅಗತ್ಯದ ವಾತಾವರಣ ಒದಗಿಸಿ ಅವುಗಳನ್ನು ಮತ್ತಷ್ಟು ಸುಂದರಗೊಳಿಸಿದೆ. ಮೂಲತಃ ಕವಯತ್ರಿಯಾದ ಇವರು ತಮ್ಮ ಕವಿತೆಗಳಲ್ಲಿಯೇ ಅಡಗಿ ಹೋಗಿರಬಹುದಾದ ಭಾವಗಳನ್ನು ಕಥೆಗಳಲ್ಲಿ ಗಟ್ಟಿಗೊಳಿಸಲು ನೋಡಿದಂತೆ ಅನಿಸುವ ‘ಉಮ್ಮಲ್ತಿ..’ ಯಂತಹ ಕಥೆಗಳೂ ಇಲ್ಲಿವೆ.

share
ವಿಜಯೇಂದ್ರ ಪಾಟೀಲ
ವಿಜಯೇಂದ್ರ ಪಾಟೀಲ
Next Story
X