ನಿತ್ಯ ಬದುಕಿನಲ್ಲಿ AI ಹೇಗೆ ಪರಿಣಾಮ ಬೀರಲಿದೆ? ಐದು ಟೆಕ್ ಟ್ರೆಂಡ್ ಗಳ ವಿವರ ಇಲ್ಲಿದೆ

ಸಾಂದರ್ಭಿಕ ಚಿತ್ರ | Photo Credit : freepik
ಸ್ಮಾರ್ಟ್ಫೋನ್ ಮತ್ತು ಲ್ಯಾಪ್ಟಾಪ್ ಬೆಲೆಗಳು ವರ್ಷವಿಡೀ ಏರುಹಾದಿಯಲ್ಲಿರಬಹುದು. ಸಾಮಾನ್ಯ ಖರೀದಿದಾರರು ಹೊಸ ಫೋನ್ಗಳಿಗೆ ಈಗಾಗಲೇ ತಿಂಗಳ ವೇತನವನ್ನು ನೀಡಬೇಕಾಗುತ್ತದೆ. ಬಹುತೇಕರು ಇಎಂಐನಲ್ಲಿ ಖರೀದಿಸುವ ಕಾರಣ ದೈನಂದಿನ ವೆಚ್ಚ ಏರಬಹುದು.
2026ರ ಟೆಕ್ ಟ್ರೆಂಡ್ಗಳು ಯಾವುದು ಇರಬಹುದು ಎಂದು ಊಹಿಸಬಲ್ಲಿರಾ? ಕೃತಕ ಬುದ್ಧಿಮತ್ತೆ (artificial intelligence) ಅಥವಾ ಎಐ ಖಂಡಿತಾ ತಂತ್ರಜ್ಞಾನದ ನೋಟವನ್ನು ಬದಲಿಸಲಿದೆ. 2026ರಲ್ಲಿ ಕಂಡುಬರಲಿರುವ ಎಐ ಟ್ರೆಂಡ್ಗಳು ಕಾರ್ಯಸಾಧುವಾಗದೆ ಇರಬಹುದು. ಆದರೆ ನೀವು ಮಾರುಕಟ್ಟೆಯಿಂದ ಖರೀದಿಸುವ ವಸ್ತುಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ನೋಡುವ ವಿಷಯಗಳ ಮೇಲೆ ಎಐ ಪರಿಣಾಮ ಬೀರಲಿದೆ. ಎಐ ಚಾಟ್ಬೋಟ್ಗಳು ಮತ್ತು ಸ್ಮಾರ್ಟ್ಫೋನ್ನಿಂದ ಹೊರಬಂದು ಸಂಪೂರ್ಣ ಹೊಸ ಉತ್ಪನ್ನದ ವರ್ಗವನ್ನು ಸೃಷ್ಟಿಸಬಹುದು. ಅಂತಹ ಐದು ಬದಲಾವಣೆಯನ್ನು ಇಲ್ಲಿ ವಿವರಿಸಲಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಎಐ ವೀಡಿಯೋಗಳು
ಎಐ-ಉತ್ಪಾದಿತ ವೀಡಿಯೋಗಳು ನಮ್ಮ ಸಾಮಾಜಿಕ ಜಾಲತಾಣಗಳ ಫೀಡ್ನಲ್ಲಿ ಈಗಾಗಲೇ ಸೇರಿಕೊಂಡಿವೆ. ಮುಖ್ಯವಾಗಿ ಕಾರ್ಟೂನ್ ಪಾತ್ರಗಳು ‘ಧುರಂಧರ್’ ಸಿನಿಮಾದ ಹಾಡಿಗೆ ಕುಣಿಯುವುದು! ಬಹುತೇಕ ಎಐ ಉತ್ಪಾದಿತ ವೀಡಿಯೋಗಳು ಹಾಸ್ಯಮಯವಾಗಿ ಮನೋರಂಜನೆ ನೀಡುತ್ತವೆ. ಅವುಗಳನ್ನು ನೋಡುವುದರಿಂದ ಯಾವುದೇ ಸಮಸ್ಯೆಯಾಗುವುದಿಲ್ಲ. ಇದೀಗ ವೇದಿಕೆಗಳು ಸ್ವತಃ ಎಐ ವೀಡಿಯೋಗಳನ್ನು ಪ್ರೋತ್ಸಾಹಿಸುತ್ತಿವೆ. ಓಪನ್ ಎಐನ ಸೋರಾ ಕೆಲವೇ ನಿಮಿಷಗಳಲ್ಲಿ ವರ್ಚುವಲ್ ಆಗಿ ಯಾವುದೇ ವಿಷಯಗಳನ್ನು ಬೇಕಾದರೂ ವೀಡಿಯೋಗಳಾಗಿ ಪರಿವರ್ತಿಸಬಲ್ಲದು. ನೀವು ಸರಿಯಾದ ಪ್ರಾಂಪ್ಟ್ ನೀಡಬೇಕಿದೆ. ಭಾರತದಲ್ಲಿ ಅಂತಹ ಯಾವುದೇ ವೀಡಿಯೋದಲ್ಲಿ ‘ಎಐ’ ವೀಡಿಯೋ ಎನ್ನುವ ಎಚ್ಚರಿಕೆ ಇರುವುದಿಲ್ಲ. ನಿಜವಾದ ವೀಡಿಯೋ ಯಾವುದು ಮತ್ತು ಎಐ ವೀಡಿಯೋ ಯಾವುದು ಎಂದು ನಿಖರವಾಗಿ ಗುರುತಿಸುವುದು ಸಾಧ್ಯವೇ ಇಲ್ಲ. ಹೀಗಾಗಿ ಜನರು ಯಾವುದನ್ನು ನಂಬಬೇಕು ಎನ್ನುವ ಗೊಂದಲಕ್ಕೆ ಬೀಳಲಿದ್ದಾರೆ. ಮುಖ್ಯವಾದ ಪ್ರಶ್ನೆಯೆಂದರೆ ನೀವು ನಿಜವಾದುದನ್ನು ಗುರುತಿಸಲು ಸಾಧ್ಯವೆ ಎನ್ನುವುದಲ್ಲ. ಬದಲಾಗಿ ಎಐ ವೀಡಿಯೊಗಳು ಇತರ ಮಾನವರ ಜೊತೆಗಿನ ನಮ್ಮ ಸಂಬಂಧವನ್ನು ಬದಲಿಸಬಹುದೆ ಎನ್ನುವುದು. ನಾವು ನಮ್ಮ ಸುತ್ತಲಿನ ಜಗತ್ತನ್ನು ನೋಡುವ ರೀತಿಯ ಮೇಲೆ ಪರಿಣಾಮ ಬೀರಬಹುದು.
ಸ್ಮಾರ್ಟ್ಫೋನ್ ಮತ್ತು ಲ್ಯಾಪ್ಟಾಪ್ ದುಬಾರಿ
ಎರಡನೇ ಟ್ರೆಂಡ್ ಎಂದರೆ ಸ್ಮಾರ್ಟ್ಫೋನ್ ಮತ್ತು ಲ್ಯಾಪ್ಟಾಪ್ ಬೆಲೆಗಳು ಏರಲಿವೆ. ಅದು ವರ್ಷವಿಡೀ ಏರುಹಾದಿಯಲ್ಲಿರಬಹುದು. ಸಾಮಾನ್ಯ ಖರೀದಿದಾರರು ಹೊಸ ಫೋನ್ಗಳಿಗೆ ಈಗಾಗಲೇ ತಿಂಗಳ ವೇತನವನ್ನು ನೀಡಬೇಕಾಗುತ್ತದೆ. ಬಹುತೇಕರು ಇಎಂಐನಲ್ಲಿ ಖರೀದಿಸುವ ಕಾರಣ ದೈನಂದಿನ ವೆಚ್ಚ ಏರಬಹುದು.
ಪ್ರಸ್ತುತ ಮೆಮೊರಿ ಚಿಪ್ಗಳ ಕೊರತೆ ಎದುರಿಸುತ್ತಿರುವ ಕಾರಣದಿಂದ ಮೆಮೊರಿಗೆ ಏರಿದ ಬೆಲೆಯನ್ನು ಕಂಪನಿಗಳು ಗ್ರಾಹಕರ ಮೇಲೆ ತಳ್ಳುವ ಸಾಧ್ಯತೆಯಿದೆ. ಹೀಗಾಗಿ ಸ್ಮಾರ್ಟ್ಫೋನ್ಗಳ ಸರಾಸರಿ ಮಾರಾಟದ ಬೆಲೆ ಏರಬಹುದು. ಸ್ಮಾರ್ಟ್ಫೋನ್ಗಳಿಗೆ ಅತಿ ಅಗತ್ಯವಾಗಿರುವ ಎಐ ಡಾಟಾ ಕೇಂದ್ರಗಳು ಬಳಸುವ ಡೈನಾಮಿಕ್ ರ್ಯಾಂಡಮ್ ಆಕ್ಸೆಸ್ ಮೆಮೊರಿ (ಡಿಆರ್ಎಎಂ)ಯ ಕಾರಣದಿಂದ ಬೆಲೆ ಏರಲಿದೆ. ಇತ್ತೀಚೆಗೆ ಡಿಆರ್ಎಎಂ ಅನ್ನು ಸರಬರಾಜಿಗಿಂತ ಹೆಚ್ಚು ಬೇಡಿಕೆ ಇರುವ ಕಾರಣ ಘಟಕಗಳ ಬೆಲೆ ಏರಿದೆ. ಬೃಹತ್ ಮೆಮೊರಿ ಚಿಪ್ ಸರಬರಾಜುದಾರರು ಹೆಚ್ಚು ಲಾಭವಿರುವ ಡಾಟಾ ಕೇಂದ್ರಗಳು ಮತ್ತು ಎಐ ಕಂಪನಿಗಳಿಗೆ ಹೆಚ್ಚು ಪ್ರಾಶಸ್ತ್ಯ ನೀಡುತ್ತಿರುವ ಕಾರಣದಿಂದ ಈ ಬೆಲೆ ಕೊರತೆಯು 2027ರವರೆಗೆ ಸಾಗುವ ಸಾಧ್ಯತೆಯಿದೆ. ಕಂಪನಿಗಳ ಈಗಿನ ಸರಕು ಮುಗಿದ ತಕ್ಷಣ ಹೊಸ ಸರಕು ಮಾರುಕಟ್ಟೆಗೆ ಬರುವಾಗ ಕಡಿಮೆಯಿಂದ ಮಧ್ಯಮ-ರೇಂಜ್ನ ವಿಭಾಗದಲ್ಲಿ ಬೆಲೆ ಏರಿಕೆಯಾಗಲಿದೆ. ಅಥವಾ ಕಡಿಮೆ ವ್ಯಾಪ್ತಿಯ RAM ಗಳನ್ನು ಮಾರಬಹುದು. ಮುಖ್ಯವಾಗಿ ಮೆಮೊರಿ ಹೆಚ್ಚು ಅಗತ್ಯವಿರುವ ಗೇಮಿಂಗ್ ಗುರಿ ಇಡುವ ಮಾಡೆಲ್ಗಳಲ್ಲಿ ಬೆಲೆ ಏರಿಕೆಯಾಗಲಿದೆ.
ಸ್ಮಾರ್ಟ್ ಗ್ಲಾಸ್ಗಳು ಭವಿಷ್ಯದ ಉತ್ಪನ್ನಗಳು
2026ರಲ್ಲಿ ಟೆಕ್ ಕಂಪನಿಗಳು ಹೊಸ ರೀತಿಯ ಸ್ಮಾರ್ಟ್ಗ್ಲಾಸ್ಗಳನ್ನು ನಿಮ್ಮ ಮುಖಕ್ಕೆ ತರುವ ಸಾಧ್ಯತೆಯಿದೆ. ಮಿಕ್ಸ್ಡ್ ರಿಯಾಲಿಟಿ ಹೆಡ್ಸೆಟ್ಗಳು ಅಷ್ಟು ಪ್ರಚಾರ ಪಡೆದಿಲ್ಲ, ಹಾಗೆಯೇ ಆಗ್ಯುಮೆಂಟೆಡ್ ರಿಯಾಲಿಟಿ ಗ್ಲಾಸ್ಗಳು ಮುಖ್ಯವಾಹಿನಿಗೆ ಬರಲು ಇನ್ನೂ ಸಮಯವಿದೆ. ಆದರೆ ಪ್ರಸ್ತುತ ಸ್ಮಾರ್ಟ್ಗ್ಲಾಸ್ಗಳು ತಂತ್ರಜ್ಞಾನ ಕಂಪನಿಗಳು ಗಮನ ಹರಿಸಬಹುದಾದ ಕ್ಷೇತ್ರವಾಗಿದೆ. ಎಐ ಫೀಚರ್, ಬಿಲ್ಟಿನ್ ಕ್ಯಾಮರಾ ಇರುವ, ಆಡಿಯೊ ಮಾತ್ರವಿರುವ ಮತ್ತು ವೈರ್ ಸಹಿತ ಮತ್ತು ವೈರ್ ರಹಿತ ವಿನ್ಯಾಸಗಳಲ್ಲಿ ಬರಬಹುದು. ಇದು ಜನರು ಖರೀದಿಸಬಹುದಾದ ಆಡಂಬರವಾಗಲಿದೆ.
ಮೆಟಾ ತಂತ್ರಜ್ಞಾನ ಸಂಸ್ಥೆ ಈಗಾಗಲೇ ತನ್ನ ರೇಬಾನ್ ಮತ್ತು ಓಕ್ಲೇ ಮಾಡೆಲ್ಗಳ ಮೂಲಕ ಮಾರುಕಟ್ಟೆ ಪ್ರವೇಶಿಸಿದೆ. ಇತರರು ಶೀಘ್ರವೇ ಹೊಸ ಸ್ಮಾರ್ಟ್ ಗ್ಲಾಸ್ಗಳನ್ನು ಮಾರುಕಟ್ಟೆಗೆ ಪರಿಚಯಿಸುವ ಸಾಧ್ಯತೆಯಿದೆ. ಹಾಗೆಂದು ಸ್ಮಾರ್ಟ್ಗ್ಲಾಸ್ಗಳು ಈಗಲೇ ಸ್ಮಾರ್ಟ್ಫೋನ್ ಬದಲಾಗಿ ಬರುವ ಸಾಧ್ಯತೆಯಿಲ್ಲ. ಆದರೆ ಸ್ಮಾರ್ಟ್ಗ್ಲಾಸ್ಗಳನ್ನು ಇಯರ್ಬಡ್, ಸ್ಮಾರ್ಟ್ ವಾಚ್ ಅಥವಾ ಸ್ಮಾರ್ಟ್ ರಿಂಗ್ಗಳ ಜೊತೆಗೆ ಮಾರಾಟ ಮಾಡುವ ಯೋಜನೆ ಹೂಡಿದ್ದಾರೆ. ಪ್ರಸ್ತುತ ಸ್ಮಾರ್ಟ್ ಗ್ಲಾಸ್ಗಳು ಒಂದು ಕಾಲದಲ್ಲಿ ಫೀಚರ್ ಫೋನ್ಗಳು ಇದ್ದ ಸ್ಥಿತಿಯಲ್ಲಿವೆ ಎನ್ನಬಹುದು.
ರೋಬೋಟ್ಗಳು ಮನೆಮನೆಗೆ ಬರಲಿವೆ
ಸದ್ಯದ ಭವಿಷ್ಯವಲ್ಲದೆ ಇದ್ದರೂ ಮುಂದೆ ಹ್ಯುಮನಾಯ್ಡ್ ರೋಬೋಟ್ಗಳು ಮನೆಮನೆಗೆ ಬರುವ ಸಾಧ್ಯತೆಯೇ ಹೆಚ್ಚಿದೆ. ಸಿಲಿಕಾನ್ ವ್ಯಾಲಿ ಕಂಪನಿಗಳು ಮತ್ತು ಯುರೋಪಿಯನ್ ಸ್ಟಾರ್ಟಪ್ಗಳು ಗಂಭೀರವಾಗಿ ಹ್ಯೂಮನಾಯ್ಡ್ಗಳನ್ನು ದೊಡ್ಡ ಪ್ರಮಾಣದಲ್ಲಿ ತಯಾರಿಸುವ ಉದ್ದೇಶ ಹೊಂದಿವೆ. ಚೀನಾ ಹ್ಯೂಮನಾಯ್ಡ್ ರೋಬೋಟ್ ಕ್ಷೇತ್ರವನ್ನು ತಂತ್ರಜ್ಞಾನದ ಆದ್ಯತೆ ಎಂದು ಪರಿಗಣಿಸಿದ್ದು, ಅಮೆರಿಕಕ್ಕೆ ಸ್ಪರ್ಧೆ ನೀಡಲು ಸಜ್ಜಾಗುತ್ತಿದೆ. ಆ್ಯಪಲ್ ಕಂಪನಿಯೂ ವ್ಯಕ್ತಿಗತ ಬಳಕೆಯ ರೋಬೋಟಿಕ್ಸ್ ಮೇಲೆ ಆಸಕ್ತಿ ವಹಿಸಿದೆ.
ಮಡಚಬಹುದಾದ ಮೊಬೈಲ್ಗಳು
ಸ್ಮಾರ್ಟ್ಫೋನ್ಗಳ ಕ್ಷೇತ್ರದಲ್ಲಿ ಮಡಚಬಹುದಾದ ಮೊಬೈಲ್ಗಳಿಗೆ ದೊಡ್ಡ ಕ್ರೇಜ್ ಇದೆ. ಅನೇಕ ಬಳಕೆದಾರರು ಇದನ್ನು ಬಯಸಬಹುದು. ಈಗಾಗಲೇ ಹಲವು ಸಂಸ್ಥೆಗಳು ಅತಿಯಾದ ಬೆಲೆಯನ್ನು ಇಟ್ಟಿರುವುದು ಖರೀದಿಗೆ ಸಮಸ್ಯೆಯಾಗುತ್ತಿದೆ. ಬೆಲೆಯ ವಿಚಾರದಲ್ಲಿ ಸ್ಯಾಮ್ಸಂಗ್ ಮತ್ತು ಮೊಟೊರೊಲ ನಡುವೆ ತೀವ್ರ ಸ್ಪರ್ಧೆಯಿದೆ. ಆ್ಯಪಲ್ ಕೂಡ ಮಡಚಬಹುದಾದ ಐಫೋನ್ ತರುವ ಹಾದಿಯಲ್ಲಿದೆ. ಆದರೆ ಸಾಫ್ಟ್ವೇರ್ ಸಮಸ್ಯೆಯೇ ಮಡಚಬಹುದಾದ ಫೋನ್ಗಳು ಜನಪ್ರಿಯತೆ ಪಡೆಯದೆ ಇರಲು ಮುಖ್ಯ ಕಾರಣ.
ಕೃಪೆ: indianexpress.com







