ಹೆಚ್ಚುತ್ತಿರುವ ಮಾಲ್ವೇರ್ ದಾಳಿ; ನಿಮ್ಮ ಸ್ಮಾರ್ಟ್ ಫೋನ್ ಸುರಕ್ಷಿತವಾಗಿರಿಸಲು ಇಲ್ಲಿದೆ ಸಲಹೆಗಳು!

ಸಾಂದರ್ಭಿಕ ಚಿತ್ರ | Photo Credit ; freepik.com
24 ಗಂಟೆಯೊಳಗೆ ನಾವು ಡಜನ್ಗಟ್ಟಲೆ ಲಿಂಕ್ಗಳನ್ನು ತೆರೆಯುತ್ತೇವೆ. ಆ್ಯಪ್ ಗಳನ್ನು ಡೌನ್ಲೋಡ್ ಮಾಡುತ್ತೇವೆ, ಇಮೇಲ್ಗಳನ್ನು ತೆರೆಯುತ್ತೇವೆ ಮತ್ತು ವಾಟ್ಸ್ಆ್ಯಪ್ ಮೇಲೆ ಫೈಲ್ಗಳನ್ನು ಸ್ವೀಕರಿಸುತ್ತೇವೆ. ದೈನಂದಿನ ಜೀವನದಲ್ಲಿ ನಾವು ಸ್ಮಾರ್ಟ್ಫೋನ್ ಬಳಸುವುದೇ ಹೀಗೆ. ಈ ಪ್ರಕ್ರಿಯೆಯಲ್ಲಿ ನಿಮ್ಮ ಫೋನ್ ಒಳಗೆ ಮಾಲ್ವೇರ್ ಗಳು ಬಂದು ಬಿದ್ದದ್ದೇ ನಿಮಗೆ ತಿಳಿಯುವುದಿಲ್ಲ. ಮಾಲ್ವೇರ್ ಹಿಂದೆ ಇರುವವರು ದುರುದ್ದೇಶಪೂರಿತ ಲಿಂಕ್ ಅನ್ನು ನಿಮ್ಮ ಫೋನ್ಗೆ ಹಾನಿ ತರಲೆಂದೇ ಸೃಷ್ಟಿಸಿರುತ್ತಾರೆ. ಆ ಮೂಲಕ ನಿಮ್ಮ ಸಾಧನದಲ್ಲಿ ಸಂಗ್ರಹಿಸಿದ ರಹಸ್ಯ ಮತ್ತು ಸೂಕ್ಷ್ಮ ಮಾಹಿತಿಯನ್ನು ಕದಿಯಲಾಗುತ್ತದೆ. ನಿಮ್ಮ ಆನ್ಲೈನ್ ಚಟುವಟಿಕೆಗಳ ಮೇಲೆ ಗೂಢಾಚಾರಿಕೆ ಮಾಡಲು ಹಾನಿಕರ ಸಾಫ್ಟ್ವೇರ್ಗಳನ್ನು ಇನ್ಸ್ಟಾಲ್ ಮಾಡಲಾಗುತ್ತದೆ. ನಿಮ್ಮ ಸಾಧನವನ್ನೇ ವಶಕ್ಕೆ ತೆಗೆದುಕೊಳ್ಳಬಹುದು. ಆದರೆ ಮಾಲ್ವರೆಯನ್ನು ಗುರುತಿಸಿ ಸುರಕ್ಷಿತವಾಗಿ ಅದನ್ನು ನಿವಾರಿಸಬಹುದು.
ಮಾಲ್ವೇರ್ (Malware) ಎಂದರೇನು ಮತ್ತು ಅದನ್ನು ಹೇಗೆ ಕಳುಹಿಸಲಾಗುತ್ತದೆ?
Malware ಎನ್ನುವ ಹೆಸರು ಕೇಳಿರಬಹುದು, ಆದರೆ ಅದು ಏನೆಂದು ತಿಳಿಯದೆ ಇರಬಹುದು. Malware ಅನ್ನು ಸ್ಮಾರ್ಟ್ಫೋನ್ಗಳಿಗೆ ಮಾತ್ರವಲ್ಲ, ಎಲ್ಲಾ ವಿಧದ ಸಾಧನಗಳಿಗೂ ಹರಿಸಬಹುದು. ಅದು ಸ್ವತಃ ನಕಲು ಮಾಡಿಕೊಂಡು ಫೋನ್ನ ಡೇಟಾ ಫೈಲ್ಗಳಲ್ಲಿ ಅಡಗಿಕೊಳ್ಳುವ ಮೂಲಕ ಹರಡುತ್ತದೆ. ಅಂದರೆ ಮಾಲ್ವೇರ್ ಕಾರ್ಯನಿರ್ವಹಿಸಲು ಸಾಧನವು ಆ ಫೈಲ್ ಅನ್ನು ಚಲಾಯಿಸಬೇಕಾಗುತ್ತದೆ. ನೆನಪಿಡಿ, ಸೋಂಕಿತ ಫೈಲ್ ಅನ್ನು ನೀವು ಪ್ರವೇಶಿಸುವವರೆಗೂ ಮಾಲ್ವೇರ್ ನಿಷ್ಕ್ರಿಯವಾಗಿರುತ್ತದೆ. ಒಮ್ಮೆ ಸಕ್ರಿಯಗೊಂಡರೆ ನಿಮ್ಮ ಸಾಧನದಾದ್ಯಂತ ಇತರ ಫೈಲ್ಗಳು ಮತ್ತು ಪ್ರೋಗ್ರಾಂಗಳಿಗೆ ಹರಡುತ್ತದೆ.
ಯಾವುದೇ ರೀತಿಯ ದುರುದ್ದೇಶಿತಪೂರಿತ ಸಾಫ್ಟ್ವೇರ್ಗಳನ್ನು (ಮೆಲಿಸಿಯಸ್ ಸಾಫ್ಟ್ವೇರ್) ಮಾಲ್ವೇರ್ ಎಂದು ಹೇಳಲಾಗುತ್ತದೆ. ವೆಬ್ಸೈಟ್ಗಳು, ಇಮೇಲ್ಗಳು, ಫೋನ್ ಕರೆಗಳು ಮತ್ತು ಆ್ಯಪ್ ಅಥವಾ ಸಾಫ್ಟ್ವೇರ್ ಡೌನ್ಲೋಡ್ಗಳ ಮೂಲಕ ಮಾಲ್ವೇರ್ ಪ್ರವೇಶಿಸಬಹುದು. ನೀವು ನಕಲಿ ವೆಬ್ತಾಣಗಳಿಗೆ ಭೇಟಿ ನೀಡಿದಾಗಲೂ ಮಾಲ್ವೇರ್ ಪ್ರವೇಶಿಸಬಹುದು. ಪೈರೇಟ್ ಸಿನಿಮಾಗಳು ಅಥವಾ ಹಾಡುಗಳನ್ನು ಡೌನ್ಲೋಡ್ ಮಾಡಿದಾಗ ಅಥವಾ ಪಾಪಪ್ ಜಾಹೀರಾತುಗಳನ್ನು ಕ್ಲಿಕ್ ಮಾಡಿದಾಗ ಮಾಲ್ವೇರ್ ಪ್ರವೇಶಿಸಬಹುದು. ವಿಭಿನ್ನ ರೀತಿಯ ಮಾಲ್ವೇರ್ ಗಳಿರುತ್ತವೆ. ಎಲ್ಲವೂ ಒಂದೇ ರೀತಿ ಇರುವುದಿಲ್ಲ. ರಾನ್ಸಮ್ವೇರ್ ಬಹಳ ಕುಖ್ಯಾತಿಗಳಿಸಿದ ಮಾಲ್ವೇರ್ ಯಾಗಿದೆ. ಅದು ಸಾಧನವನ್ನು ಮತ್ತು ಅದರ ಡಾಟಾವನ್ನು ಲಾಕ್ ಮಾಡುತ್ತದೆ. ಬ್ಲಾಕ್ ಆಗಿರುವುದನ್ನು ತೆರೆಯಲು ಆ್ಯಕ್ಸೆಸ್ ಕೊಡಲು ಹಣ ಪಾವತಿಸುವಂತೆ ಕೇಳಲಾಗುತ್ತದೆ. ಟ್ರಾಜನ್ ಹಾರ್ಸಸ್ ಎನ್ನುವ ಮಾಲ್ವೇರ್ ಗಳು ಇರುತ್ತವೆ. ಅವು ಮಾನ್ಯ ವೆಬ್ತಾಣಗಳಂತೆಯೇ ಇರುತ್ತವೆ. ಆದರೆ ಸಾಧನಗಳನ್ನು ಕ್ರ್ಯಾಶ್ ಮಾಡಬಹುದು, ಫೈಲ್ಗಳನ್ನು ಡಿಲೀಟ್ ಮಾಡಬಹುದು ಅಥವಾ ರಹಸ್ಯ ಮಾಹಿತಿಯನ್ನು ಕದಿಯಬಹುದು. ಮತ್ತೊಂದು ಆಡ್ವರೆ ಅನಗತ್ಯ ಜಾಹೀರಾತುಗಳನ್ನು ಪ್ರದರ್ಶಿಸುತ್ತದೆ. ನಿಮ್ಮ ಬ್ರೌಸಿಂಗ್ ಚಟುವಟಿಕೆಯನ್ನು ಪತ್ತೆ ಮಾಡುತ್ತದೆ. ಸ್ಕೇರ್ವರೆ ಎನ್ನುವುದು ನಕಲಿ ಎಚ್ಚರಿಕೆ ಮತ್ತು ಅಲರ್ಟ್ಗಳನ್ನು ನೀಡಿ ಮಾಲ್ವೇರ್ ಇನ್ಸ್ಟಾಲ್ ಮಾಡುವಂತೆ ಬಳಕೆದಾರರನ್ನು ಬೆದರಿಸುತ್ತದೆ.
ಮಾಲ್ವೇರ್ ತಡೆಯಲು ಯಾವ ಫೋನ್ ಸುರಕ್ಷಿತ?
ಗೂಗಲ್ನ ಆ್ಯಂಡ್ರಾಯ್ಡ್ ವೇದಿಕೆ ಮುಕ್ತ ಪರಿಸರವ್ಯವಸ್ಥೆಯಾಗಿದೆ. ಹೀಗಾಗಿ ಮಾಲ್ವೇರ್ ಬೇಗನೇ ಬಂದು ಬೀಳಬಹುದು. ಹಾಗಿದ್ದರೂ ವರ್ಷಗಳಿಂದ ಗೂಗಲ್ ತನ್ನ ಪ್ಲೇಸ್ಟೋರ್ ಭದ್ರತೆಯನ್ನು ಬಹಳ ಸುಧಾರಿಸಿದೆ. ಆ್ಯಪಲ್ನ ಆ್ಯಪ್ಸ್ಟೋರ್ ಮುಚ್ಚಿದ ಪರಿಸರವ್ಯವಸ್ಥೆಯಾಗಿರುವುದರಿಂದ ಸುರಕ್ಷಿತ ಎಂದು ಪರಿಗಣಿಸಲಾಗಿದೆ. ಆದರೆ ಮಾಲ್ವೇರ್ ಗೆ ಯಾವುದೇ ವೇದಿಕೆಯೂ ನಿರೋಧಕವಾಗಿಲ್ಲ. ಇತ್ತೀಚೆಗೆ ಸೈಬರ್ ಅಪರಾಧಿಗಳು ಐಫೋನ್ಗಳನ್ನೂ ಹೆಚ್ಚು ಗುರಿಮಾಡಿವೆ. ಅಂತಿಮವಾಗಿ ಜಾಗೃತವಾಗಿರುವುದು ಮತ್ತು ಮಾಹಿತಿ ಹೊಂದಿರುವುದರಿಂದ ಜವಾಬ್ದಾರಿಯುತವಾಗಿ ನಡೆದುಕೊಳ್ಳಬಹುದು.
ಮಾಲ್ವೇರ್ ದಾಳಿ ತಿಳಿಯುವುದು ಹೇಗೆ?
ಮಾಲ್ವೇರ್ ತಗಲಿದ ಫೋನ್ ನಿಧಾನಗತಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಏಕೆಂದರೆ ಮಾಲ್ವೇರ್ ರ್ಯಾಮ್ನ ಬಹಳಷ್ಟು ಜಾಗವನ್ನು ಕಸಿದಿರುತ್ತದೆ.
ಆಗಾಗ್ಗೆ ಜಾಹೀರಾತು ಬರುತ್ತಿದ್ದಲ್ಲಿ ಆಡ್ವರೆ ದಾಳಿಯಾಗಿದೆ ಎಂದು ಅರ್ಥಮಾಡಿಕೊಳ್ಳಬೇಕು. ಈ ಆಡ್ವರೆ ನಿಮಮ ಬ್ರೌಸರ್ ಅಥವಾ ಆ್ಯಪ್ನಲ್ಲಿ ಅಡಗಿರುತ್ತದೆ. ಆಡ್ ಬ್ಲಾಕರ್ ಡೌನ್ಲೋಡ್ ಮಾಡಿದರೆ ಈ ಸಮಸ್ಯೆಗೆ ತಕ್ಷಣ ಪರಿಹಾರ ತರಬಹುದು.
ಬ್ಯಾಟರಿ ವೇಗವಾಗಿ ಖಾಲಿಯಾಗುವುದು: ಸ್ಮಾರ್ಟ್ಫೋನ್ ಬ್ಯಾಟರಿ ಕಾಲಾನುಸಾರ ಹಳತಾಗುತ್ತದೆ. ಆದರೆ ನೀವು ನಿರೀಕ್ಷಿಸಿರುವುದಕ್ಕಿಂತ ಹೆಚ್ಚು ವೇಗದಲ್ಲಿ ಬ್ಯಾಟರಿ ಖಾಲಿಯಾದರೆ ಮಾಲ್ವೇರ್ ಸೂಚನೆಯಾಗಿರುತ್ತದೆ. ಹಿನ್ನೆಲೆಯಲ್ಲಿ ಮಾಲ್ವೇರ್ ಚಲಾವಣೆಯಲ್ಲಿದ್ದರೆ ಬೇಗನೇ ಬ್ಯಾಟರಿ ನುಂಗುತ್ತದೆ.
ಅನಗತ್ಯ ಆ್ಯಪ್ ಗಳು: ನೀವು ಒಂದು ಆ್ಯಪ್ ಡೌನ್ಲೋಡ್ ಮಾಡಿರುತ್ತೀರು ಕೆಲ ಕ್ಷಣದಲ್ಲಿ ಹೆಚ್ಚುವರಿ ಆ್ಯಪ್ಗಳು ಸ್ವಯಂಚಾಲಿತವಾಗಿ ಹೋಮ್ ಸ್ಕ್ರೀನ್ನಲ್ಲಿ ಕಾಣಬರುತ್ತವೆ. ಹಾಗಿದ್ದರೆ ಹ್ಯಾಕರ್ಗಳು ಮಾಲ್ವರೆ ಹಾಕಿದ್ದಾರೆ ಎಂದು ಅರ್ಥ. ಈ ಆ್ಯಪ್ಗಳು ಮಾಲ್ವೇರ್ ನಂತೆ ಕಾಣದೆ ಇರಬಹುದು. ಆದರೆ ಅವುಗಳನ್ನು ಕ್ಲಿಕ್ ಮಾಡಬೇಡಿ.
ಮಾಲ್ವೇರ್ ಅನ್ನು ತೆಗೆದು ಹಾಕುವುದು ಹೇಗೆ?
ವೈರಸ್ ಇದೆ ಎಂದು ಅನಿಸಿದಲ್ಲಿ ಇದನ್ನು ಮಾಡಿ:
- ಮೊದಲನೆಯದಾಗಿ ಮಾಲ್ವೇರ್ ತಗಲಿದ ಸಾಧನಕ್ಕೆ ಬೇರೆ ಸಾಧನಗಳನ್ನು ಸಂಪರ್ಕಿಸಬೇಡಿ.
- ಆಂಡ್ರಾಯ್ಡ್ ಫೋನ್ಗಳಾಗಿದ್ದಲ್ಲಿ ಸೇಫ್ ಮೋಡ್ ಬಳಸಿ ಮಾಲ್ವರೆ ದೋಷಪರಿಹಾರ ಮಾಡಿ. ತೃತೀಯ ಪಕ್ಷದ ಆ್ಯಪ್ಗಳನ್ನು ನಿಷ್ಕ್ರಿಯಗೊಳಿಸಿ. ಅನುಮಾನಾಸ್ಪದ ಆ್ಯಪ್ಗಳನ್ನು ತಪಾಸಣೆ ಮಾಡಿ ತೆಗೆದು ಹಾಕಿ. ಒಮ್ಮೆ ಇಷ್ಟು ಮಾಡಿದ ನಂತರ ಸಾಮಾನ್ಯ ಮೋಡ್ಗೆ ತರಬಹುದು. ಐಫೋನ್ಗಳಾದಲ್ಲಿ ಲಾಕ್ಡೌನ್ ಮೋಡ್ ಬಳಸಬಹುದು. ಅದರಿಂದ ಸಾಧನೆಯ ಕ್ರಿಯೆಗಳನ್ನು ಮಿತಿಗೊಳಿಸುತ್ತದೆ.
- ನಂತರ ನಾರ್ಟನ್ ಅಥವಾ ಅವಸ್ತ್ ಆಂಟಿವೈರಸ್ ಪ್ರೋಗ್ರಾಂ ಇನ್ಸ್ಟಾಲ್ ಮಾಡಿ ಪೂರ್ಣ ಸ್ಕ್ಯಾನ್ ಮಾಡಿ.
- ಇದು ಯಾವುದೂ ಕೆಲಸ ಮಾಡದೆ ಇದ್ದಲ್ಲಿ ಫ್ಯಾಕ್ಟರಿ ರಿಸೆಟ್ ಮಾಡಿ ಫೋನ್ ಅನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ. ಇದರಿಂದ ಮಾಲ್ವರೆ ಹೊರಟು ಹೋಗುತ್ತದೆ.
- ಒಮ್ಮೆ ನಿಮ್ಮ ಫೋನ್ ಸ್ವಚ್ಛವಾದ ನಂತರ ಎಲ್ಲಾ ಪಾಸ್ವರ್ಡ್ಗಳನ್ನು ಬದಲಿಸಿ. ಸಾಧನಕ್ಕೆ ಮಾತ್ರವಲ್ಲ, ಇಮೇಲ್, ಸಾಮಾಜಿಕ ಜಾಲದ ಖಾತೆಗಳು, ಶಾಪಿಂಗ್ ಸೈಟ್ಗಳು, ಬ್ಯಾಂಕಿಂಗ್ ಆ್ಯಪ್ಗಳ ಪಾಸ್ವರ್ಡ್ಗಳನ್ನು ಬದಲಿಸಿ.
ಕೃಪೆ: indianexpress.com







