ಫೀಚರ್ ಸಂದೇಶಗಳನ್ನು ಒಮ್ಮೆ ಓದಿದ ನಂತರ ಸ್ವಯಂಪ್ರೇರಿತವಾಗಿ ಅಳಿಸುವ ಹೊಸ ಫೀಚರ್ ಪರಿಚಯಿಸಲಿರುವ WhatsApp

Photo Credit : WhatsApp
ಸಂದೇಶ ನೋಡಿದ ನಂತರ ಎಷ್ಟು ಬೇಗನೇ ಕಣ್ಮರೆಯಾಗುತ್ತದೆ ಎಂಬುದನ್ನು ಬಳಕೆದಾರರು ಆಯ್ಕೆ ಮಾಡಿಕೊಳ್ಳಬಹುದು.
ವರದಿಗಳ ಪ್ರಕಾರ ವಾಟ್ಸ್ಆ್ಯಪ್ ಹೊಸ ಗೌಪ್ಯತೆಗೆ ಸಂಬಂಧಿಸಿದ ಫೀಚರ್ ತರುವತ್ತ ಗಮನ ಕೇಂದ್ರೀಕರಿಸಿದೆ. ಈ ಫೀಚರ್ನಲ್ಲಿ ಕಣ್ಮರೆಯಾಗುವ ಸಂದೇಶಗಳ ಮೇಲೆ ಬಳಕೆದಾರರಿಗೆ ಹೆಚ್ಚು ನಿಯಂತ್ರಣ ಸಿಗಲಿದೆ. ಈ ಫೀಚರ್ನಲ್ಲಿ ಸಂದೇಶಗಳನ್ನು ಓದಿದ ನಂತರ ಸ್ವಯಂಚಾಲಿತವಾಗಿ ಕಣ್ಮರೆಯಾಗುವ ಅವಕಾಶವಿರುತ್ತದೆ. ವಾಟ್ಸ್ಆ್ಯಪ್ ನಲ್ಲಿ ತಾತ್ಕಾಲಿಕವಾಗಿ ಮಾತ್ರ ಸಂದೇಶ ಕಳುಹಿಸಲು ಬಯಸುವ ಬಳಕೆದಾರರಿಗೆ ಈ ಗೌಪ್ಯತೆ ಫೀಚರ್ ನೆರವಾಗಲಿದೆ.
WABetaInfo ವರದಿಯ ಪ್ರಕಾರ, ವಾಟ್ಸ್ಆ್ಯಪ್ iOS ನಲ್ಲಿ ಈ ಹೊಸ ಫೀಚರ್ ಅನ್ನು ತರಲು ಪರಿಶೀಲಿಸುತ್ತಿದೆ. iOS ಆವೃತ್ತಿ 26.19.10.72 ಗಾಗಿ ವಾಟ್ಸ್ಆ್ಯಪ್ ಬೀಟಾದಲ್ಲಿ ಆ್ಯಪಲ್ನ TestFlight ಬೀಟಾ ಪ್ರೋಗ್ರಾಂ ಮೂಲಕ ಲಭ್ಯವಿರುತ್ತದೆ. ಪ್ರಸ್ತುತ ಆಯ್ದ ಬೀಟಾ ಟೆಸ್ಟರ್ಸ್ಗಳಿಗೆ ಹೊರತರಲಾಗುತ್ತಿದೆ ಮತ್ತು ಮುಂಬರುವ ವಾರಗಳಲ್ಲಿ ಹೆಚ್ಚಿನ ಬಳಕೆದಾರರಿಗೆ ವಿಸ್ತರಿಸುವ ನಿರೀಕ್ಷೆಯಿದೆ.
ವಾಟ್ಸ್ಆ್ಯಪ್ ಈಗಾಗಲೇ ತನ್ನ ವೇದಿಕೆಯಲ್ಲಿ ಕಣ್ಮರೆಯಾಗುವ ಸಂದೇಶಗಳ ಫೀಚರ್ ಅನ್ನು ಹೊಂದಿದ್ದು, ಬಳಕೆದಾರರಿಗೆ 24 ಗಂಟೆಗಳು, 7 ದಿನಗಳು ಅಥವಾ 90 ದಿನಗಳಂತಹ ಆಯ್ದ ಅವಧಿಯ ನಂತರ ಚಾಟ್ಗಳನ್ನು ಸ್ವಯಂಚಾಲಿತವಾಗಿ ಅಳಿಸಲು ಅನುಮತಿಸುತ್ತದೆ. ಹೊಸ ಫೀಚರ್ನಲ್ಲಿ ಇನ್ನಷ್ಟು ನಿಯಂತ್ರಣ ಸಿಗುವ ಸಾಧ್ಯತೆಯಿದೆ.
“ಓದಿದ ನಂತರ” (“After reading”) ಎನ್ನುವ ಹೊಸ ಆಯ್ಕೆಯು ಸಂದೇಶಗಳು ಇತರ ವ್ಯಕ್ತಿ ಓದಿದ ನಂತರ ಕಣ್ಮರೆಯಾಗುವ ರೀತಿಯಲ್ಲಿ ಇರುತ್ತದೆ. ಸಂದೇಶ ನೋಡಿದ ನಂತರ ಎಷ್ಟು ಬೇಗನೇ ಕಣ್ಮರೆಯಾಗುತ್ತದೆ ಎಂಬುದನ್ನು ಬಳಕೆದಾರರು ಆಯ್ಕೆ ಮಾಡಿಕೊಳ್ಳಬಹುದು. ಉದಾಹರಣೆಗೆ 5 ನಿಮಿಷಗಳು, 1 ಗಂಟೆ ಅಥವಾ 12 ಗಂಟೆಗಳ ನಂತರ ಮೊದಲಾಗಿ ಆಯ್ಕೆಗಳಿರುತ್ತವೆ.
ಫೀಚರ್ ಹೇಗೆ ಕಾರ್ಯನಿರ್ವಹಿಸಲಿದೆ?
ವರದಿಯ ಪ್ರಕಾರ ಈ ವೈಶಿಷ್ಟ್ಯವು ಕಳುಹಿಸುವವರಿಗೆ ಮತ್ತು ಸ್ವೀಕರಿಸುವವರಿಗೆ ಸ್ವಲ್ಪ ಭಿನ್ನವಾಗಿ ಕಾರ್ಯನಿರ್ವಹಿಸುತ್ತದೆ. ಹೊಸ ಟೈಮರ್ ಅನ್ನು ಸಕ್ರಿಯಗೊಳಿಸಿ ಸಂದೇಶ ಕಳುಹಿಸಿದ ನಂತರ ಆಯ್ಕೆ ಮಾಡಿಕೊಂಡ ಟೈಮರ್ ಆದರಿಸಿ ಸಂದೇಶ ಕಣ್ಮರೆಯಾಗುತ್ತದೆ. ಆದರೆ ಸ್ವೀಕರಿಸುವವರ ಬದಿಯಲ್ಲಿ ಅವರು ನಿಜವಾಗಿ ತೆರೆದು ಓದುವವರೆಗೂ ಸಂದೇಶ ಗೋಚರಿಸುತ್ತದೆ.
ಅಂದರೆ ನೀವು 5 ನಿಮಿಷಗಳ ಆಯ್ಕೆ ಆರಿಸಿದರೆ ಕಳುಹಿಸಿದ ಐದು ನಿಮಿಷಗಳ ನಂತರ ಫೋನ್ನಿಂದ ಸಂದೇಶ ಕಣ್ಮರೆಯಾಗುತ್ತದೆ. ಆದರೆ ಇತರ ವ್ಯಕ್ತಿಗೆ ಸಂದೇಶ ಓದಿದ ನಂತರವೇ ಐದು ನಿಮಷಗಳ ಲೆಕ್ಕ ಆರಂಭವಾಗುತ್ತದೆ. ಈ 5 ನಿಮಿಷ ಮುಗಿದ ತಕ್ಷಣ ವಾಟ್ಸ್ಆ್ಯಪ್ ಚಾಟ್ ತೆಗೆದು ಹಾಕುತ್ತದೆ. ಸ್ವೀಕರಿಸಿದವರು ಸಂದೇಶ ತೆರೆಯದೇ ಇದ್ದರೆ 24 ಗಂಟೆಗಳಲ್ಲಿ ಕಣ್ಮರೆಯಾಗುತ್ತದೆ.
ಈ ಫೀಚರ್ ಐಚ್ಛಿಕವಾಗಿರುತ್ತದೆ. ಬಳಕೆದಾರರ ಸೂಕ್ಷ್ಮ ಮತ್ತು ಖಾಸಗಿ ಚಾಟ್ಗಳಿಗೆ ಮಾತ್ರ ಈ ಫೀಚರ್ ಅನ್ವಯಿಸಬಹುದಾಗಿದೆ. ಈ ನವೀಕರಣವು ಬಳಕೆದಾರರಿಗೆ ತಮ್ಮ ಸಂಭಾಷಣೆಗಳು ಎಷ್ಟು ಸಮಯ ವೇದಿಕೆಯಲ್ಲಿ ಲಭ್ಯವಿರುತ್ತವೆ ಎಂಬುದರ ಕುರಿತು ಹೆಚ್ಚಿನ ನಿಯಂತ್ರಣ ನೀಡಲಿದೆ.
ಮಾಹಿತಿ ಕೃಪೆ: India Today






