Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಮಳೆಗಾಲದಲ್ಲಿ ಶಾಪಗ್ರಸ್ತವಾಗುತ್ತಿರುವ...

ಮಳೆಗಾಲದಲ್ಲಿ ಶಾಪಗ್ರಸ್ತವಾಗುತ್ತಿರುವ ಮಲೆನಾಡಿನ ರಸ್ತೆಗಳು

ಎಂ.ಯೂಸುಫ್ ಪಟೇಲ್ಎಂ.ಯೂಸುಫ್ ಪಟೇಲ್10 July 2025 12:53 PM IST
share
ಮಳೆಗಾಲದಲ್ಲಿ ಶಾಪಗ್ರಸ್ತವಾಗುತ್ತಿರುವ ಮಲೆನಾಡಿನ ರಸ್ತೆಗಳು

ಕಳೆದ ಎರಡು ದಶಕಗಳಿಂದ ಮಲೆನಾಡಿನ ಶೃಂಗೇರಿ, ಮೂಡಿಗೆರೆ,ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಬಿಜೆಪಿಯ ಸಿ.ಟಿ.ರವಿ.ಐದು ಬಾರಿ,ಜೀವರಾಜ್ ಮತ್ತು ಕುಮಾರಸ್ವಾಮಿ ಮೂರು ಬಾರಿ. ಎಂ.ಕೆ.ಪ್ರಾಣೇಶ್ ಮತ್ತು ಎಸ್.ಎಲ್.ಬೋಜೇಗೌಡ ವಿಧಾನ ಪರಿಷತ್ ಸದಸ್ಯರಾಗಿ ಎರಡು ಬಾರಿ.ಕಾಂಗ್ರೆಸ್ ಪಕ್ಷದ ಟಿ.ಡಿ.ರಾಜೇಗೌಡರು ಎರಡು ಬಾರಿ,ಹೆಚ್.ಡಿ.ತಮ್ಮಯ್ಯ, ನಯನಾ ಮೋಟಮ್ಮ ಮೊದಲ ಬಾರಿ ಮಲೆನಾಡಿನ ನಾಗರೀಕರನ್ನು ರಾಜ್ಯದ ಜನಪ್ರತಿನಿಧಿಗಳ ಸಭೆಯಲ್ಲಿ ಪ್ರತಿನಿಧಿಸಿದ್ದಾರೆ. ಶೋಭ ಕರಂದ್ಲಾಜೆ, ಸದಾನಂದ ಗೌಡ, ಜಯಪ್ರಕಾಶ್ ಹೆಗ್ಡೆ ಮಲೆನಾಡಿನ ಜನರನ್ನು ಲೋಕಸಭೆಯಲ್ಲಿ ಪ್ರತಿನಿಧಿಸಿದ್ದಾರೆ. ಈಗ ಕೋಟ ಶ್ರೀನಿವಾಸ ಪೂಜಾರಿ ನಮ್ಮನ್ನು ಪ್ರತಿನಿಧಿಸುತ್ತಿದ್ದಾರೆ. ಈ ಎಲ್ಲಾ ಜನಪ್ರತಿನಿಧಿಗಳು ಸರ್ಕಾರದಲ್ಲಿ ಪ್ರಭಾವಿಗಳು ಮತ್ತು ನೀತಿ ರೂಪಿಸುವಂತಹ ಸಾಮರ್ಥ್ಯ ಹೊಂದಿರುವವರು. ಇಂತಹ ಸಮರ್ಥ ಜನಪ್ರತಿನಿಧಿಗಳನ್ನು ಹೊಂದಿರುವ ಮಲೆನಾಡಿನ ಜನ ನತದೃಷ್ಟರು ಎನ್ನದೆ ವಿಧಿಯಿಲ್ಲ.

ಹಲವು ದಶಕಗಳಿಂದ ಕೊಪ್ಪ ಚಿಕ್ಕಮಗಳೂರು, ಶೃಂಗೇರಿ ಜಯಪುರ,ಚಿಕ್ಕಮಗಳೂರು ಮೂಡಿಗೆರೆ ಕೊಟ್ಟಿಗೆಹಾರ ಚಿಕ್ಕಮಗಳೂರು ಕಳಸ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ, ಜಿಲ್ಲಾ ಮುಖ್ಯ ರಸ್ತೆಗಳು ಮಳೆಗಾಲದಲ್ಲಿ ಹೊಂಡ ಗುಂಡಿಗಳಿಂದ ತುಂಬಿರುತ್ತದೆ. ಅದರಲ್ಲೂ ಚಿಕ್ಕಮಗಳೂರಿನಿಂದ ಶೃಂಗೇರಿ ಸಂಪರ್ಕಿಸುವ ರಸ್ತೆಯಲ್ಲಿ ವಾಹನ ಚಲಿಸುವಾಗ ರಸ್ತೆಯಲ್ಲಿ ಗುಂಡಿ ಇದಿಯೋ ಗುಂಡಿಯಲ್ಲಿ ರಸ್ತೆ ಇದೆಯೋ ಎಂದು ತಿಳಿಯುವುದು ಕಷ್ಟ.

ಒಂದು ಗಂಟೆಯಲ್ಲಿ ತಲುಪಬೇಕಾದ ದೂರ ಕ್ರಮಿಸಲು ಒಂದೂವರೆ ಎರಡು ಗಂಟೆ ಸಮಯ ಬೇಕು. ವಾಹನದ ಬಿಡಿಭಾಗಗಳ ಜೊತೆಗೆ ವಾಹನದಲ್ಲಿ ಪ್ರಯಾಣಿಸುವ ನಾಗರೀಕರ ಸ್ಪೇರ್ ಪಾರ್ಟ್ಸ್ ಕೂಡ ಹಾಳಾಗುತ್ತಿದೆ. ಸಾಮಾನ್ಯ ನಾಗರೀಕರ ವಾಹನ ಮಾತ್ರವಲ್ಲ ನಮ್ಮ ಗೌರವಾನ್ವಿತ ಜನಪ್ರತಿನಿಧಿಗಳ ಪರಿಸ್ಥಿತಿ ಕೂಡ ಇದಕ್ಕೆ ಭಿನ್ನವಲ್ಲ. ಆದರೆ ಅವರದ್ದು ಸರ್ಕಾರದ ವಾಹನ. ಜನಸಾಮಾನ್ಯರದ್ದು ಸ್ವಂತ ವಾಹನ. ಸಾರ್ವಜನಿಕ ಸಾರಿಗೆ ವಾಹನಗಳ ಡ್ರೈವರ್ ಗಳು ಪ್ರಯಾಣಿಕರ ಜೀವ ಪಣಕ್ಕಿಟ್ಟು ವಾಹನ ಚಲಾಯಿಸಬೇಕಾದ ಪರಿಸ್ಥಿತಿ. ಮಲೆನಾಡಿನ ಜನತೆ ಪ್ರತೀ ವರ್ಷವೂ ಶಾಪಗ್ರಸ್ಥ ಹೊಂಡಗುಂಡಿಗಳ ಅವ್ಯವಸ್ಥೆಯಿಂದ ಹೊರ ಬರಲು ಸಾಧ್ಯವಿಲ್ಲವೇ?

ಮಲೆನಾಡಿನಲ್ಲಿ ಸುರಿಯುತ್ತಿರುವ ವಿಪರೀತ ಮಳೆ ಇದಕ್ಕೆ ಕಾರಣ ಎಂದು ಅಧಿಕಾರಿಗಳು ನೀಡುವ ಮುಖ್ಯ ಕಾರಣ. ಆದರೆ ದಶಕಗಳ ಹಿಂದೆ ಮಲೆನಾಡಿನಲ್ಲಿ ಹೀಗೆ ಮಳೆ ಸುರಿಯುತ್ತಿತ್ತು.ಆದರೆ ಪಿಡಬ್ಲ್ಯುಡಿ ಇಲಾಖೆಯ ಗ್ಯಾಂಗ್ ಮೆನ್ ಮಳೆಗಾಲ ಬೇಸಿಗೆ ಕಾಲದಲ್ಲಿ ರಸ್ತೆಯ ಅಕ್ಕಪಕ್ಕದ ಚರಂಡಿಯಲ್ಲಿ ನೀರು ಹರಿಯುವಂತೆ ಮತ್ತು ರಸ್ತೆ ಬದಿ ಇರುವ ಮರಗಿಡಗಳ ಕಸಿ ಮಾಡಿ ರಸ್ತೆಗೆ ಬೀಳುತ್ತಿರುವ ಮಳೆ ಹನಿಯಿಂದ ರಸ್ತೆಯನ್ನು ರಕ್ಷಿಸುತ್ತಿದ್ದರು. ಸಣ್ಣಪುಟ್ಟ ಪ್ಯಾಚ್ ವರ್ಕ್ ಕೂಡ ನಿರಂತರವಾಗಿ ಮಾಡುತ್ತಿದ್ದರು. ಒಟ್ಟಾರೆ ರಸ್ತೆಯ ಮೇಲ್ವಿಚಾರಣೆ ಕಾಲಕಾಲಕ್ಕೆ ಸರಿಯಾಗಿ ನಡೆಯುತ್ತಿತ್ತು. ಈಗ ಇಲಾಖೆಯಲ್ಲಿ ರಸ್ತೆಯ ಮೇಲ್ವಿಚಾರಣೆ ವರ್ಷವಿಡೀ ಮಾಡುವ ಶಾಶ್ವತ ವ್ಯವಸ್ಥೆ ಇಲ್ಲ. ಇದು ಇಂದು ಮಲೆನಾಡಿನ ರಸ್ತೆ ಶಾಪಗ್ರಸ್ಥವಾಗಲು ಮುಖ್ಯ ಕಾರಣ.

ಕಾಲ ಬಹಳಷ್ಟು ಬದಲಾಗಿದೆ. ಹತ್ತಾರು ಸಂಖ್ಯೆಯಲ್ಲಿ ಓಡಾಡುತ್ತಿದ್ದ ವಾಹನಗಳು ಇಂದು ನಮ್ಮ ಮಲೆನಾಡಿನಲ್ಲಿ ನೂರಾರು ಸಂಖ್ಯೆಯಲ್ಲಿ ಓಡಾಡುತ್ತಿದೆ. ಬಹುತೇಕ ರಸ್ತೆಗಳು ಅದೇ ಉದ್ದ ಅಗಲ ಹೊಂದಿದೆ. ರಸ್ತೆ ತೆರಿಗೆ, ವಾಹನ ತೆರಿಗೆಯಿಂದ ಸಾವಿರಾರು ಕೋಟಿ ಆದಾಯ ಸರ್ಕಾರದ ಬೊಕ್ಕಸಕ್ಕೆ ನಿರಂತರವಾಗಿ ಹರಿದು ಬರುತ್ತಿದೆ. ಸರ್ಕಾರ ಶ್ರೀಮಂತವಾಗುತ್ತಿದೆ. ಆದರೆ ಮಲೆನಾಡಿನ ಜನ ಹೊಂಡ ಗುಂಡಿ ರಸ್ತೆಗಳಿಂದ ಮುಕ್ತಿ ಪಡೆಯುವಲ್ಲಿ ಬಡವಾಗುತ್ತಿದ್ದಾರೆ. ಹಣದ ಕೊರತೆ ಖಂಡಿತ ಅಲ್ಲ. ಜನ ಪ್ರತಿನಿಧಿಗಳ ಮತ್ತು ಅಧಿಕಾರಿಗಳ ಇಚ್ಛಾ ಶಕ್ತಿಯ ಕೊರತೆ ಇದಕ್ಕೆ ಮುಖ್ಯ ಕಾರಣ. ಕಳೆದ ಮಳೆಗಾಲದಲ್ಲಿ ಮುಚ್ಚಲ್ಪಟಿದ್ದ ರಸ್ತೆಗಳ ಬಹುತೇಕ ಹೊಂಡ ಗುಂಡಿಗಳು ಮತ್ತಷ್ಟು ಹದಗೆಟ್ಟಿದ್ದರೆ, ಕೆಲವು ಕಡೆ ರಸ್ತೆ ಚೆನ್ನಾಗಿ ಇದೆ. ಇದು ಹೇಗೆ ಸಾಧ್ಯ. ಕೆಲವು ಕಡೆ ಚೆನ್ನಾಗಿ ಇರಬೇಕೆಂದಾದರೆ ಎಲ್ಲಾ ಕಡೆಯೂ ರಸ್ತೆ ಚೆನ್ನಾಗಿ ಇರಬೇಕು ತಾನೇ?

ರಸ್ತೆ ಹಾಳಾಗಲು ಮುಖ್ಯ ಕಾರಣಗಳಲ್ಲಿ ಮತ್ತೊಂದು ಕಳಪೆ ಕಾಮಗಾರಿ. ಗುಣಮಟ್ಟದ ಟಾರ್ ಹಾಕದಿರುವುದು. ಗುಣಮಟ್ಟ ಹಾಳಾಗಲು ಭ್ರಷ್ಟಾಚಾರ ಮತ್ತು ಕಮಿಷನ್ ನೇರ ಕಾರಣ. ವಾಹನ ಮಾಲೀಕರು ಲಕ್ಷಕ್ಕೂ ಹೆಚ್ಚು ರಸ್ತೆ ತೆರಿಗೆ ಕಟ್ಟುತ್ತಿದ್ದರೂ ಮಲೆನಾಡಿನಲ್ಲಿ ರಸ್ತೆಗಳ ಪರಿಸ್ಥಿತಿ ಅಯೋಮಯ. ಮಲೆನಾಡಿನ ಜನರ ಸಹನೆ ಒಂದು ಶಾಪವಾಗಿ ಪರಿಣಮಿಸಿದೆ.ಹೊಂಡ ಗುಂಡಿಗಳಿಂದ ಹಲವಾರು ಅಪಘಾತಗಳು ಸಂಭವಿಸಿವೆ. ಮಲೆನಾಡಿನ ಜನರ ಸಹನೆಗೂ ಒಂದು ಮಿತಿ ಇದೆ. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಜನರ ಆಕ್ರೋಶಕ್ಕೆ ತುತ್ತಾಗುವ ಮೊದಲು ಮಲೆನಾಡಿನ ಜನರನ್ನು ಪ್ರತೀ ವರ್ಷವೂ ಕಾಡುತ್ತಿರುವ ರಸ್ತೆ ಹೊಂಡ ಗುಂಡಿಗಳಿಂದ ಪಾರು ಮಾಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಸಂಚರಿಸುವಾಗ ಜನರ ತೀವ್ರ ಪ್ರತಿರೋಧ ಎದುರಿಸಬೇಕಾದೀತು.

share
ಎಂ.ಯೂಸುಫ್ ಪಟೇಲ್
ಎಂ.ಯೂಸುಫ್ ಪಟೇಲ್
Next Story
X