ಸಾರ್ವಜನಿಕ ಸೇವೆ | ಲಿಮ್ಕಾ ದಾಖಲೆ ಸೃಷ್ಟಿಸಿದ ರೈಲ್ವೆ ಸಚಿವಾಲಯ
PC : X
ಹೊಸದಿಲ್ಲಿ : ವಿಶ್ವದ ಅತ್ಯಂತ ದೊಡ್ಡ ಸಾರ್ವಜನಿಕ ಸೇವಾ ಕಾರ್ಯಕ್ರಮಕ್ಕಾಗಿ ಪ್ರತಿಷ್ಠಿತ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ತನ್ನ ಹೆಸರನ್ನು ದಾಖಲಿಸುವ ಮೂಲಕ ಭಾರತೀಯ ರೈಲ್ವೆ ಹೊಸ ಸಾಧನೆಯನ್ನು ಮಾಡಿದೆ.
ರೈಲ್ವೆ ಸಚಿವಾಲಯವು ಫೆಬ್ರವರಿ 26ರಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 2,140 ಸ್ಥಳಗಳಲ್ಲಿ ಒಟ್ಟು 40,19,516 ಜನರು ಪಾಲ್ಗೊಂಡಿದ್ದರು ಎಂದು ಹೇಳಿಕೆಯು ತಿಳಿಸಿದೆ.
ಪ್ರಧಾನಿ ನರೇಂದ್ರ ಮೋದಿಯವರಿಂದ ರೈಲ್ವೆ ಓವರ್ಪಾಸ್ಗಳು/ಅಂಡರ್ಪಾಸ್ಗಳ ಉದ್ಘಾಟನೆ ಮತ್ತು ರೈಲು ನಿಲ್ದಾಣಗಳಿಗೆ ಶಿಲಾನ್ಯಾಸಕ್ಕಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
Next Story