ಆಸ್ಟ್ರೇಲಿಯಾದ ಕ್ರಿಕೆಟ್ ದಿಗ್ಗಜ ಡೇವಿಡ್ ವಾರ್ನರ್ ಟಿ20 ಕ್ರಿಕೆಟ್ ಗೆ ವಿದಾಯ
ಡೇವಿಡ್ ವಾರ್ನರ್ | PC : NDTV
ಸೈಂಟ್ ಲೂಸಿಯಾ: ಆಸ್ಟ್ರೇಲಿಯಾದ ದಿಗ್ಗಜ ಕ್ರಿಕೆಟಿಗ ಡೇವಿಡ್ ವಾರ್ನರ್ ಅವರು ಟಿ20 ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ.
ಈ ವರ್ಷದ ಜನವರಿಯಲ್ಲಿ ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್ಗೂ ವಿದಾಯ ಹೇಳಿದ್ದ ವಾರ್ನರ್, ಮಂಗಳವಾರ ಟಿ20 ಕ್ರಿಕೆಟ್ ಅಂಗಳದಿಂದಲೂ ದೂರ ಸರಿಯುವ ತಮ್ಮ ನಿರ್ಧಾರ ಪ್ರಕಟಿಸಿದ್ದಾರೆ. ಆ ಮೂಲಕ ವಾರ್ನರ್ ಅವರ 15 ವರ್ಷಗಳ ಅಂತರರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನ ಕೊನೆಗೊಂಡಿದೆ.
ಟಿ20 ವಿಶ್ವಕಪ್ ಟೂರ್ನಿಯ ಸೂಪರ್ 8ರ ಹಂತದ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ ಆಫ್ಗಾನಿಸ್ತಾನ ಗೆಲುವು ಸಾಧಿಸುತ್ತಿದ್ದಂತೆ ಡೇವಿಡ್ ವಾರ್ನರ್ ಅಂತರರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಘೋಷಿಸಿ, ಅಚ್ಚರಿ ಮೂಡಿಸಿದ್ದಾರೆ.
ಈ ಬಾರಿ ಟಿ20 ವಿಶ್ವಕಪ್ನ ಸೆಮಿ ಫೈನಲ್ ಹಂತಕ್ಕೇರಲು ಆಸ್ಟ್ರೇಲಿಯಾ ತಂಡವು ವಿಫಲವಾಗಿತ್ತು. ಇದುವರೆಗೆ 110 ಟಿ20 ಪಂದ್ಯಗಳನ್ನು ಆಡಿರುವ ವಾರ್ನರ್ 3,277 ರನ್ ಗಳಿಸಿದ್ದಾರೆ.
Next Story