ಉಳ್ಳಾಲ: ಗಾಳಿ ಮಳೆ ಗೆ ಕುಸಿದು ಬಿದ್ದ ಮನೆ

ಉಳ್ಳಾಲ: ಕಳೆದ ಮೂರು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಗೆ ಮನೆಯೊಂದು ಧರೆಗುರುಳಿದ ಘಟನೆ ಸೋಮೇಶ್ವರದ ರೈಲ್ವೇ ನಿಲ್ದಾಣದ ಬಳಿ ನಡೆದಿರುವ ಬಗ್ಗೆ ವರದಿಯಾಗಿದೆ.
ಸೋಮೇಶ್ವರದ ಉಳ್ಳಾಲ ರೈಲ್ವೇ ನಿಲ್ದಾಣದ ಹಿಂಬದಿಯ ಶೋಭಾ ಎಂಬವರ ಮನೆ ಮಂಗಳವಾರ ರಾತ್ರಿ ಸುರಿದ ಗಾಳಿ, ಮಳೆಗೆ ಸಂಪೂರ್ಣವಾಗಿ ಹಾನಿಗೊಳಗಾಗಿದೆ. ಮನೆಯ ದುರಸ್ತಿ ನಡೆಸುವ ಸಲುವಾಗಿ ಶೋಭಾ ಅವರು ಹತ್ತಿರದ ಮನೆಯೊಂದಕ್ಕೆ ಸ್ಥಳಾಂತರಗೊಂಡಿದ್ದರು. ಘಟನೆ ನಡೆದ ಸಂದರ್ಭ ಕುಟುಂಬ ಸದಸ್ಯರು ಮನೆಯಲ್ಲಿರದ ಕಾರಣ ಪ್ರಾಣಾ ಹಾನಿ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.
ಘಟನಾ ಸ್ಥಳಕ್ಕೆ ಸೋಮೇಶ್ವರ ಪುರಸಭಾ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಉಳ್ಳಾಲ ನಗರ ಸಭೆ ವ್ಯಾಪ್ತಿಯ ಉಳಿಯ ಎಂಬಲ್ಲಿ ಐಡಾಮೋಂತೆರೋ ಕೋಂ ಸಿಲ್ವೆಸ್ಟರ್ ಎಂಬುವರ ವಾಸ್ತವ್ಯದ ಮನೆಗೆ ತೆಂಗಿನ ಮರ ಬಿದ್ದು ಭಾಗಶಃ ಹಾನಿಯಾಗಿದೆ. ಕಲ್ಲಾಪು ಬಳಿ ಬುಧವಾರ ಒಂದು ಮನೆಗೆ ನೀರು ನುಗ್ಗಿದ್ದು ಪರಿಹಾರ ಕಾರ್ಯ ಮುಂದುವರಿದಿದೆ.ಕುತ್ತಾರ್ ಬಳಿ ಒಂದು ಮನೆಗೆ ಕೃತಕ ನೆರೆ ಆವರಿಸಿದೆ.
Next Story