ವಿಯೆನ್ನಾ | ಗಾಝಾದಲ್ಲಿ ಕದನ ವಿರಾಮಕ್ಕೆ ಒತ್ತಾಯಿಸಿ ಪ್ರತಿಭಟನೆ

Photo | X
ವಿಯೆನ್ನಾ : ಆಸ್ಟ್ರಿಯಾದ ರಾಜಧಾನಿಯಾದ ವಿಯೆನ್ನಾದಲ್ಲಿ ಫೆಲೆಸ್ತೀನ್ ಪರ ಒಗ್ಗಟ್ಟನ್ನು ವ್ಯಕ್ತಪಡಿಸಿ ನೂರಾರು ಮಂದಿ ಪ್ರತಿಭಟನೆ ನಡೆಸಿ ಕದನ ವಿರಾಮಕ್ಕೆ ಒತ್ತಾಯಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವೀಡಿಯೊಗಳಲ್ಲಿ ಪ್ರತಿಭಟನಾಕಾರರು ಫೆಲೆಸ್ತೀನ್ ಧ್ವಜವನ್ನು ಬೀಸಿದರು ಮತ್ತು ಫೆಲೆಸ್ತೀನ್ ಜನರನ್ನು ಬೆಂಬಲಿಸುವ ಬ್ಯಾನರ್ ಪ್ರದರ್ಶಿಸಿದರು. ಇದಲ್ಲದೆ "ಈಗ ಕದನ ವಿರಾಮ" ಎಂದು ಘೋಷಣೆ ಕೂಗಿದ್ದಾರೆ.
ಈ ತಿಂಗಳು ಗಾಝಾಗೆ ತೆರಳುತ್ತಿದ್ದ ಮಾನವೀಯ ನೆರವು ಹಡಗಿನಲ್ಲಿದ್ದ ಸಾಮಾಜಿಕ ಕಾರ್ಯಕರ್ತೆ ಯಾಸ್ಮಿನ್ ಅಕಾರ್ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಭಾಷಣವನ್ನು ಮಾಡಿದ್ದಾರೆ.
Next Story





