ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ ಮಾಡಿದ್ದ ವ್ಯಕ್ತಿಗೆ ಥಳಿಸಿ, ಜೈಶ್ರೀರಾಮ್ ಎಂದು ಘೋಷಣೆ ಕೂಗಿ ಮೆರವಣಿಗೆ ನಡೆಸಿದ ಜನ!

ಫೋಟೋ Twitter@NDTV
ಹೈದರಾಬಾದ್: ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅವರ ಕ್ಷೇತ್ರದಲ್ಲಿ ನಿನ್ನೆ ರಾತ್ರಿ ಗುಂಪೊಂದು ಮದ್ಯದ ಅಮಲಿನಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ ಮಾಡಿದ ಆರೋಪದ ಮೇಲೆ ಗುಂಪೊಂದು ಧಾರ್ಮಿಕ ಘೋಷಣೆಗಳನ್ನು ಕೂಗುತ್ತಾ ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ನಡೆಸಿ ಬಲವಂತವಾಗಿ ರಸ್ತೆಯಲ್ಲಿ ಮೆರವಣಿಗೆ ಮಾಡಿರುವ ಆಘಾತಕಾರಿ ಘಟನೆ ನಡೆದಿದೆ.
ಸಿದ್ದಿಪೇಟ್ ಜಿಲ್ಲೆಯ ಗಜ್ವೇಲ್ ಪಟ್ಟಣದಲ್ಲಿ ಈ ಘಟನೆ ನಡೆದಿದ್ದು, "ಜೈ ಶ್ರೀ ರಾಮ್", "ಭಾರತ್ ಮಾತಾ ಕಿ ಜೈ" ಹಾಗೂ "ಛತ್ರಪತಿ ಶಿವಾಜಿ ಕಿ ಜೈ" ಎಂದು ಘೋಷಣೆಗಳನ್ನು ಕೂಗುತ್ತಿದ್ದ ಗುಂಪೊಂದು ವ್ಯಕ್ತಿಯನ್ನು ಹಿಂಸಿಸುತ್ತಿರುವ ದೃಶ್ಯ ಕಂಡುಬಂದಿದೆ..
ಒಂದು ಬಕೆಟ್ ನೀರನ್ನು ತರುತ್ತಿದ್ದ ವ್ಯಕ್ತಿಯನ್ನು ಹಿಡಿದ ಗುಂಪು ಸ್ಥಳದಲ್ಲಿಯೇ ನೀರನ್ನು ಸುರಿಯುವಂತೆ ಬಲವಂತಪಡಿಸಿದೆ. ಮದ್ಯದ ಅಮಲಿನಲ್ಲಿ ಮೂತ್ರ ವಿಸರ್ಜನೆ ಮಾಡಿದ ರಸ್ತೆ ವಿಭಜಕದ ಸಮೀಪ ವ್ಯಕ್ತಿಯಿಂದಲೇ ಬಲವಂತವಾಗಿ ಸ್ವಚ್ಛಗೊಳಿಸಿದ್ದ ಗುಂಪು ನಂತರ ಆತನನ್ನು ರಸ್ತೆಯಲ್ಲಿ ಮೆರವಣಿಗೆ ಮಾಡಲಾಯಿತು, ಬಟ್ಟೆಗಳನ್ನು ಹರಿದು ಹಾಕಲಾಯಿತು.
ವೀಡಿಯೋ ಕ್ಲಿಪ್ ಗಳಲ್ಲಿ ಒಬ್ಬ ಪೋಲೀಸ್ ಸಿಬ್ಬಂದಿಯು ಜನಸಮೂಹದಿಂದ ವ್ಯಕ್ತಿಯನ್ನು ದೂರ ಮಾಡಲು ಪ್ರಯತ್ನಿಸುತ್ತಿರುವುದು ಕಂಡುಬಂದಿದೆ., ಆದರೆ ಪುರುಷರ ಗುಂಪು ವ್ಯಕ್ತಿಯನ್ನು ಬಲವಂತವಾಗಿ ರಸ್ತೆ ವಿಭಜಕದ ಕಡೆಗೆ ಕರೆದೊಯ್ದು ತಲೆ ಕೆಳಗೆ ಮಾಡಿ ಬೀಳಿಸಿದೆ.
ಮೂತ್ರ ವಿಸರ್ಜನೆ ಮಾಡಿದ ಜಾಗವನ್ನು ನೆಕ್ಕಲು ಸಹ ವ್ಯಕ್ತಿಯನ್ನು ಬಲವಂತಪಡಿಸಲಾಗಿದೆ ಎಂದು ವರದಿಯಾಗಿದೆ.







