ಈ ಜಪಾನಿ ಕೂದಲು ತೊಳೆಯುವ ವಿಧಾನ ವೈರಲ್ ಆಗಿರುವುದೇಕೆ?

ಸಾಂದರ್ಭಿಕ ಚಿತ್ರ | Photo Credit : freepik
ಕೂದಲನ್ನು ತಕ್ಷಣದ ಹೊಳಪಿಗೆ ಮತ್ತು ಸೌಂದರ್ಯಕ್ಕಾಗಿ ತೊಳೆಯುವುದಲ್ಲ, ಬದಲಾಗಿ ದೀರ್ಘಕಾಲೀನ ನೆತ್ತಿಯ ಆರೋಗ್ಯವೆಂದು ತಿಳಿಯಲಾಗುತ್ತದೆ. ಈ ಸಿದ್ಧಾಂತವು ಇದೀಗ ಜಾಗತಿಕವಾಗಿ ಮನ್ನಣೆ ಪಡೆದಿದೆ.
ಸಾಮಾಜಿಕ ಮಾಧ್ಯಮಗಳು ಕೇಶ ಆರೋಗ್ಯಕ್ಕೆ ಸಂಬಂಧಿಸಿದ ವಿಷಯಗಳಿಂದ ತುಂಬಿಕೊಂಡಿದೆ. ಆದರೆ ಜಪಾನೀ ಕೂದಲು ತೊಳೆಯುವ ವಿಧಾನವೊಂದು ಅದರ ಸರಳತೆಗೆ ಸುದ್ದಿಯಾಗುತ್ತಿದೆ. ಅನೇಕ ಉತ್ಪನ್ನಗಳನ್ನು ಬಳಸುವ ಬದಲಾಗಿ ಈ ವಿಧಾನವು ಸೌಮ್ಯವಾಗಿ ತೊಳೆಯುವುದು, ನೆತ್ತಿಯ ಆರೋಗ್ಯ ಮತ್ತು ಎಚ್ಚರಿಕೆಯಿಂದ ತೊಳೆಯುವ ಕುರಿತು ವಿವರಿಸುತ್ತದೆ.
ಈ ಸಾಂಪ್ರದಾಯಿಕ ಜಪಾನೀ ಕೇಶ ಸೌಂದರ್ಯದ ವಿಧಾನದಲ್ಲಿ ಕೇಶದ ಆರೋಗ್ಯವನ್ನು ನಿತ್ಯದ ಆಭ್ಯಾಸವಾಗಬೇಕೇ ವಿನಾ ತರಾತುರಿಯಲ್ಲಿ ಮುಗಿಸುವ ಕೆಲಸವಲ್ಲ ಎಂದು ಹೇಳಲಾಗಿದೆ. ಜಪಾನಿನಲ್ಲಿ ಆರೋಗ್ಯಕರ ಕೇಶವೆಂದರೆ ಒಟ್ಟು ಆರೋಗ್ಯ ಎಂದು ಪರಿಗಣಿಸಲಾಗುತ್ತದೆ. ಕೂದಲನ್ನು ತಕ್ಷಣದ ಹೊಳಪಿಗೆ ಮತ್ತು ಸೌಂದರ್ಯಕ್ಕಾಗಿ ತೊಳೆಯುವುದಲ್ಲ, ಬದಲಾಗಿ ದೀರ್ಘಕಾಲೀನ ನೆತ್ತಿಯ ಆರೋಗ್ಯವೆಂದು ತಿಳಿಯಲಾಗುತ್ತದೆ. ಈ ಸಿದ್ಧಾಂತವು ಇದೀಗ ಜಾಗತಿಕವಾಗಿ ಮನ್ನಣೆ ಪಡೆದಿದೆ. ಕೇಶ ಆರೋಗ್ಯವನ್ನು ಸುಧಾರಿಸಲು ಸುಸ್ಥಿರ ಮತ್ತು ಕಡಿಮೆ ಹಾನಿ ತರುವ ವಿಧಾನವನ್ನು ಬಳಸುವುದು ಹೊಸ ಫ್ಯಾಷನ್ ಆಗಿದೆ.
ಜಪಾನೀಸ್ ಕೂದಲು ತೊಳೆಯುವ ವಿಧಾನ ಯಾವುದು?
ಜಪಾನಿನ ಕೂದಲು ತೊಳೆಯುವ ವಿಧಾನದಲ್ಲಿ ಕೆಲವು ಸರಳ ಹಂತಗಳಿವೆ. ಮೊದಲಿಗೆ ಕೂದಲನ್ನು ಹದವಾದ ನೀರಿನಲ್ಲಿ ಒಂದೆರಡು ನಿಮಿಷಗಳ ಕಾಲ ಮುಳುಗಿಸಲಾಗುತ್ತದೆ. ಈ ಹಂತದಲ್ಲಿ ಕೊಳೆ ಮತ್ತು ಹೆಚ್ಚುವರಿ ಎಣ್ಣೆಯನ್ನು ತೆಗೆಯಲಾಗುತ್ತದೆ. ಮುಂದಿನ ಹಂತದಲ್ಲಿ ಶಾಂಪೂವನ್ನು ಕೈಯಲ್ಲಿ ತೆಗೆದುಕೊಂಡು ನಂತರ ನೆತ್ತಿಗೆ ಹಚ್ಚಲಾಗುತ್ತದೆ. ನೇರವಾಗಿ ಕೂದಲಿಗೆ ಹಚ್ಚಲಾಗುವುದಿಲ್ಲ. ನಿಧಾನವಾಗಿ ನೆತ್ತಿಯ ಮೇಲೆ ಸವರಿ ಸಣ್ಣ ವೃತ್ತಾಕಾರದ ಚಲನೆಯಲ್ಲಿ ತಿಕ್ಕಲಾಗುತ್ತದೆ. ಹೀಗಾಗಿ ನೆತ್ತಿಯನ್ನು ಪರಚದೆಯೇ ರಕ್ತದ ಪರಿಚಲನೆಯನ್ನು ಸುಧಾರಿಸಬಹುದಾಗಿದೆ.
ನಂತರ ಉದ್ದ ಕೂದಲನ್ನು ಇಳಿದು ಬರುವ ಶಾಂಪೂವಿನ ನೊರೆಯಿಂದಲೇ ಶುಚಿಗೊಳಿಸಬೇಕು. ಹಾಗೆ ತೊಳೆದಾಗ ನೆತ್ತಿ ಒಣಗುವುದಿಲ್ಲ ಮತ್ತು ಕೂದಲು ಮುರಿಯುವುದಿಲ್ಲ.
ಈ ವಿಧಾನ ವೈರಲ್ ಆಗಿರುವುದೇಕೆ?
ಜನರು ಕಡಿಮೆ ಕೂದಲು ಉದುರುವಂತೆ ತೊಳೆಯುವ ವಿಧಾನವನ್ನು ಹುಡುಕುತ್ತಿದ್ದಾರೆ. ಹಾಗೆಯೇ ನೆತ್ತಿಯ ಮೇಲೆ ತುರಿಕೆ ಕಡಿಮೆಯಾಗುತ್ತದೆ. ಕೂದಲಲ್ಲಿ ಹೊಳಪೂ ಇರುತ್ತದೆ. ಬಹಳಷ್ಟು ಮಂದಿ ಈ ರೀತಿ ತೊಳೆದ ನಂತರ ನೆತ್ತಿ ಹೆಚ್ಚು ಸ್ವಚ್ಛವಾಗಿರುವ ಅನುಭವವಾಗಿದೆ ಎನ್ನುತ್ತಿದ್ದಾರೆ. ಹೊಟ್ಟು, ಎಣ್ಣೆಮಯ ನೆತ್ತಿ ಮತ್ತು ಧೂಳು ಶೇಖರಣೆಯನ್ನು ತೆಗೆದು ಹಾಕಲು ಮುಖ್ಯವಾಗಿ ಈ ವಿಧಾನ ಉತ್ತಮ.
ಜನಪ್ರಿಯತೆಗೆ ಮತ್ತೊಂದು ಕಾರಣ ಯಾವುದೇ ಶಾಂಪೂವಿನ ಜೊತೆಗೆ ಈ ವಿಧಾನ ಕೆಲಸ ಮಾಡುವುದು. ದುಬಾರಿ ಉತ್ಪನ್ನಗಳನ್ನು ಪ್ರಾಯೋಜಿಸುವ ಬದಲಾಗಿ ಗುರಿ ತೊಳೆಯುವ ತಂತ್ರದ ಕಡೆಗೆ ಇರುತ್ತದೆ. ಅಗ್ಗದ ಬೆಲೆಯಲ್ಲಿ ಉತ್ತಮವಾಗಿ ಕೂದಲು ತೊಳೆಯಬಹುದಾಗಿದೆ. ತಾಜಾತನದ ಅನುಭವವಾಗಲು ಹೇಗೆ ವಿಭಿನ್ನವಾಗಿ ತಲೆ ತೊಳೆಯಬಹುದು ಎನ್ನುವ ಕಡೆಗೆ ಗಮನ ನೀಡಲಾಗಿದೆ.
ಈ ವಿಧಾನ ಕೂದಲಿಗೆ ಹೇಗೆ ನೆರವಾಗುತ್ತದೆ?
ತಜ್ಞರು ಹೇಳುವ ಪ್ರಕಾರ ಅತಿಯಾಗಿ ತಿಕ್ಕುವುದು ಮತ್ತು ಅನೇಕ ಉತ್ಪನ್ನ ಬಳಸುವುದರಿಂದ ನೆತ್ತಿಗೂ ಮತ್ತು ಕೂದಲಿಗೂ ಹಾನಿಯಾಗಬಹುದು. ಜಪಾನಿನ ವಿಧಾನವು ಕೂದಲನ್ನು ಸೌಮ್ಯವಾಗಿ ತೊಳೆಯುವುದನ್ನು ವಿವರಿಸುತ್ತದೆ. ನೆತ್ತಿಯ ಮೇಲೆ ಮಸಾಜ್ ಮಾಡುವುದರಿಂದ ರಕ್ತದ ಹರಿವನ್ನು ಸುಧಾರಿಸುತ್ತದೆ. ಅಲ್ಲದೆ ಕೂದಲು ಆರೋಗ್ಯಕರವಾಗಿ ಬೆಳೆಯಲು ನೆರವಾಗುತ್ತದೆ. ಉದ್ದ ಕೂದಲನ್ನು ನೇರವಾಗಿ ತಿಕ್ಕದೆ ಇರುವ ಕಾರಣ ನೈಸರ್ಗಿಕ ಎಣ್ಣೆಯು ಉಳಿದುಕೊಳ್ಳುತ್ತದೆ. ನೆತ್ತಿ ಒಣಗಿದ ಅನುಭವವಾಗುವುದಿಲ್ಲ. ಕೂದಲು ಇಬ್ಭಾಗವಾಗುವುದಿಲ್ಲ.
ಯಾರು ಪ್ರಯತ್ನಿಸಬೇಕು ಮತ್ತು ಯಾರಿಗೆ ಬೇಡ
ಜಪಾನೀ ಶೈಲಿಯಲ್ಲಿ ಕೂದಲು ತೊಳೆಯುವ ವಿಧಾನ ಬಹುತೇಕ ಎಲ್ಲಾ ವಿಧದ ಕೂದಲುಗಳಿಗೂ ಸೂಕ್ತವಾಗಿದೆ. ಮುಖ್ಯವಾಗಿ ಸೂಕ್ಷ್ಮವಾದ ನೆತ್ತಿ ಇರುವವರು. ನೆತ್ತಿಯಲ್ಲಿ ಒಣಗಿದ ಅನುಭವ ಇರುವವರು ಮತ್ತು ಕೂದಲು ಉದುರುವ ಸಮಸ್ಯೆ ಇರುವವರು. ಗುಂಗುರು ಕೂದಲು, ಬಣ್ಣ ಬಳಿದವರು ಮತ್ತು ರಾಸಾಯನಿಕವಾಗಿ ಕೂದಲನ್ನು ಚಿಕಿತ್ಸೆಗೆ ಒಳಪಡಿಸಿದವರಿಗೆ ಸೂಕ್ತವಾಗಿರುತ್ತದೆ.
ಆದರೆ ನೆತ್ತಿ ಮೇಲೆ ಸಮಸ್ಯೆ ಇರುವವರಿಗೆ, ಹೊಟ್ಟು, ಸೊರಿಯಾಸಿಸ್ ಅಥವಾ ಫಂಗಲ್ ಸೋಂಕು ಇರುವವರು ಚರ್ಮ ತಜ್ಞರು ಹೇಳಿದ ವಿಧಾನವನ್ನೇ ಅನುಸರಿಸಬೇಕಿದೆ. ಈ ತಂತ್ರ ನೆತ್ತಿಯ ಆರೋಗ್ಯವನ್ನು ಶಮನ ಮಾಡಿದರೂ ವೈದ್ಯಕೀಯ ಚಿಕಿತ್ಸೆಗೆ ಪರ್ಯಾಯವಲ್ಲ.
ಕೃಪೆ: indiatoday.in







