MrBeast ಲ್ಯಾಂಬೋರ್ಗಿನಿ ಸವಾಲು; ಭಾರತದಲ್ಲಿ ಸ್ಪರ್ಧಿಯ ಐಷಾರಾಮಿ ಕಾರಿಗೆ ದ್ವಿಚಕ್ರ ವಾಹನ ಢಿಕ್ಕಿ!
ವಿಡಿಯೋ ವೈರಲ್

Screengrab: X.com/@yoxics
ಭಾರತದ ರಸ್ತೆಯೊಂದರಲ್ಲಿ ಲ್ಯಾಂಬೋರ್ಗಿನಿ ಕಾರು ಚಲಾಯಿಸುತ್ತಿದ್ದಾಗ ಬೈಕ್ ಕಾರಿಗೆ ಡಿಕ್ಕಿ ಹೊಡೆದಿದೆ. ಇದರಿಂದ ಕಾರಿನ ಎಡಭಾಗಕ್ಕೆ ಹಾನಿಯಾಗಿದ್ದು, ಸ್ಪರ್ಧಿ ತೀವ್ರ ನಿರಾಶೆಗೊಂಡು ತಲೆಮೇಲೆ ಕೈಹೊತ್ತು ನಿಂತಿರುವ ದೃಶ್ಯ ಆನ್ಲೈನ್ನಲ್ಲಿ ವೈರಲ್ ಆಗಿದೆ.
ಮಿಸ್ಟರ್ಬೀಸ್ಟ್ ಅವರ ಇತ್ತೀಚೆಗಿನ "Drive Around Earth In Lamborghini, Keep It!" (ಲ್ಯಾಂಬೋರ್ಗಿನಿ ಕಾರನ್ನು ಭೂಮಿಯ ಸುತ್ತ ಚಲಾಯಿಸಿ, ಗೆದ್ದುಕೊಳ್ಳಿ) ಎಂಬ ಡ್ರೈವಿಂಗ್ ಚಾಲೆಂಜ್ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಬಹಳ ಸುದ್ದಿಯಾಗಿದೆ.
2026 ನವೆಂಬರ್ 28ರಂದು ಬಿಡುಗಡೆಯಾದ ವೀಡಿಯೋದಲ್ಲಿ ಸ್ಪರ್ಧಿಯು ಭಾರತದಲ್ಲಿ ಸಂಚರಿಸುತ್ತಿದ್ದಾಗ ಅನಿರೀಕ್ಷಿತ ಘಟನೆಯೊಂದು ನಡೆದಿದೆ. ಭಾರತದ ರಸ್ತೆಯೊಂದರಲ್ಲಿ ಲ್ಯಾಂಬೋರ್ಗಿನಿ ಕಾರು ಚಲಾಯಿಸುತ್ತಿದ್ದಾಗ ಬೈಕ್ ಒಂದು ಕಾರಿಗೆ ಢಿಕ್ಕಿ ಹೊಡೆದಿದೆ. ಇದರಿಂದ ಕಾರಿನ ಎಡಭಾಗಕ್ಕೆ ಹಾನಿಯಾಗಿದ್ದು, ಸ್ಪರ್ಧಿ ತೀವ್ರ ನಿರಾಶೆಗೊಂಡು ತಲೆಮೇಲೆ ಕೈಹೊತ್ತು ನಿಂತಿರುವ ದೃಶ್ಯ ಆನ್ಲೈನ್ನಲ್ಲಿ ವೈರಲ್ ಆಗಿದೆ.
ಈ ಸ್ಪರ್ಧೆಯಲ್ಲಿ ಇಬ್ಬರು ಸ್ಪರ್ಧಿಗಳಿಗೆ ಹೊಚ್ಚ ಹೊಸ ಲ್ಯಾಂಬೋರ್ಗಿನಿ ನೀಡಲಾಗುತ್ತಿದೆ. ಅವರು ಈ ಕಾರನ್ನು ಪ್ರಪಂಚದ ವಿವಿಧ ದೇಶಗಳ ಮೂಲಕ ಚಲಾಯಿಸಿಕೊಂಡು ಯಶಸ್ವಿಯಾಗಿ ಪ್ರವಾಸ ಮುಗಿಸಿದರೆ ಆ ದುಬಾರಿ ಕಾರು ಅವರಿಗೇ ಸ್ವಂತವಾಗುತ್ತದೆ ಎಂಬುದು ಈ ಸವಾಲಿನ ನಿಯಮವಾಗಿರುತ್ತದೆ. ಜಿಮ್ ಮತ್ತು ಮೋನಿಕಾ ಎಂಬ ಇಬ್ಬರು ಸ್ಪರ್ಧಿಗಳು ಈ ಸವಾಲನ್ನು ಸ್ವೀಕರಿಸಿ ಪ್ರಪಂಚ ಸುತ್ತಾಡಲು ಹೊರಟಿದ್ದರು.
ಸ್ಪರ್ಧೆಯ ಭಾರತದ ಹಂತದಲ್ಲಿ ದ್ವಿಚಕ್ರ ವಾಹನವೊಂದು ಲ್ಯಾಂಬೋರ್ಗಿನಿಗೆ ಢಿಕ್ಕಿ ಹೊಡೆದ ನಂತರ ಮಿಸ್ಟರ್ಬೀಸ್ಟ್ ಡ್ರೈವಿಂಗ್ ಚಾಲೆಂಜ್ ಸ್ಪರ್ಧಿಯಾಗಿದ್ದ ಜಿಮ್ ನಿರಾಶೆಗೊಂಡು ತಲೆಮೇಲೆ ಕೈಹೊತ್ತು ಕುಳಿತುಕೊಂಡಿರುವುದನ್ನು ಕಾಣಬಹುದಾಗಿದೆ.
ವೈರಲ್ ವೀಡಿಯೋದಲ್ಲಿ ಭಾರತೀಯ ರಸ್ತೆಯಲ್ಲಿ ದ್ವಿಚಕ್ರ ವಾಹನ ಡಿಕ್ಕಿ ಹೊಡೆದಾಗ ಸ್ಪರ್ಧಿ ಕಿತ್ತಳೆ ಬಣ್ಣದ ಲ್ಯಾಂಬೋರ್ಗಿನಿ ಓಡಿಸುತ್ತಿರುವುದನ್ನು ಕಾಣಬಹುದು. ಘಟನೆಯ ನಂತರ ದುಬಾರಿ ವಾಹನಕ್ಕೆ ಆಗಿರುವ ಹಾನಿ ಪರಿಶೀಲಿಸುವಾಗ ತಲೆ ಹಿಡಿದು ಕೂದಲು ಎಳೆಯುತ್ತಿರುವುದನ್ನು ತೋರಿಸಲಾಗಿದೆ.
ಲ್ಯಾಂಬೋರ್ಗಿನಿ ಎಡಭಾಗದಲ್ಲಿ ರಂಧ್ರ ಮತ್ತು ಗೀರುಗಳು ಸೇರಿದಂತೆ ಗಮನಾರ್ಹ ಹಾನಿ ಎದುರಿಸಿದೆ. ಢಿಕ್ಕಿಯ ನಿಖರವಾದ ಸಂದರ್ಭ ಮತ್ತು ಜವಾಬ್ದಾರರು ಯಾರು ಎಂಬುದನ್ನು ಸ್ವತಂತ್ರವಾಗಿ ಪರಿಶೀಲಿಸಲಾಗಿಲ್ಲ. ಯಾವುದೇ ಗಾಯಗಳನ್ನು ದೃಢಪಡಿಸಲಾಗಿಲ್ಲ.
“ನನ್ನ ಕಾರಿನಲ್ಲಿ ಯಾವುದೇ ಗೀರು ಇಲ್ಲದೆ ಏಷ್ಯಾದ್ಯಂತ ಸುತ್ತಿದ್ದೇನೆ. ಈಗ ನಾನು ಅದನ್ನು ಹೇಳಲು ಸಾಧ್ಯವಿಲ್ಲ” ಎಂದು ಅವರು ವೀಡಿಯೋದಲ್ಲಿ ಹೇಳುತ್ತಾರೆ. ವೀಡಿಯೋ ತ್ವರಿತವಾಗಿ ಜನರ ಆಕರ್ಷಣೆ ಗಳಿಸಿದೆ. ಅಲ್ಲದೆ, ಸ್ಪರ್ಧಿಯ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
“ಭಾರತದಲ್ಲಿ ನಡೆದ ಲ್ಯಾಂಬೋರ್ಗಿನಿ ಅಪಘಾತದಲ್ಲಿ ಮಿಸ್ಟರ್ಬೀಸ್ಟ್ ಸ್ಪರ್ಧಿ ಕಾರಿನ ತಪ್ಪು ಭಾಗದಲ್ಲಿ ಕುಳಿತಿದ್ದರು ಮತ್ತು ಅದನ್ನು ಅಕ್ಷರಶಃ ಹೇಳುತ್ತಿದ್ದೇನೆ” ಎಂದು ಬಳಕೆದಾರರೊಬ್ಬರು ಹೇಳಿದ್ದಾರೆ.
“ಮಿರರ್ ಸೂಚನೆ ಇಲ್ಲದೆ ಅಥವಾ ಪರಿಶೀಲಿಸದೆ ಲ್ಯಾಂಬೋರ್ಗಿನಿ ಅನ್ನು ವೇಗದ ಲೇನ್ಗೆ ತಿರುಗಿಸುತ್ತಿದ್ದಾನೆ. ಅತ್ಯಂತ ಮೂರ್ಖ ವ್ಯಕ್ತಿ. ಇದು ನಿಜಕ್ಕೂ ಆಗಬೇಕಿದೆ” ಎಂದು ಮತ್ತೊಬ್ಬ ಬಳಕೆದಾರರು ಬರೆದಿದ್ದಾರೆ.






