ಧರ್ಮಸ್ಥಳ ಪ್ರಕರಣ | ಸಿಬಿಐಗೆ ಕೊಡುವ ಬಗ್ಗೆ ಚರ್ಚೆ ನಡೆದಿಲ್ಲ, ಆದಷ್ಟು ಬೇಗ ತನಿಖೆ ಮುಗಿಸುವಂತೆ ಸೂಚಿಸಿದ್ದೇವೆ : ಜಿ.ಪರಮೇಶ್ವರ್

ತುಮಕೂರು : ಧರ್ಮಸ್ಥಳ ಪ್ರಕರಣ ಸಿಬಿಐಗೆ ಕೊಡುವ ಬಗ್ಗೆ ಚರ್ಚೆ ಏನೂ ನಡೆದಿಲ್ಲ. ಎಸ್.ಐ.ಟಿ ತನಿಖೆ ಮುಂದುವರೆಯುತ್ತಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.
ಇಂದು ತುಮಕೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಧ್ಯಂತರ ವರದಿಯಾಗಲಿ ಅಥವಾ ಚಾರ್ಜಶೀಟ್ ಸಲ್ಲಿಸುವ ಯಾವ ಹಂತವೂ ತಲುಪಿಲ್ಲ. ಆದರೆ ತನಿಖೆ ಆದಷ್ಟು ಬೇಗ ಮುಗಿಸುವಂತೆ ಸೂಚಿಸಿದ್ದೇವೆ. ನಿರ್ದಿಷ್ಟವಾಗಿ ಇಷ್ಟೇ ದಿನದಲ್ಲಿ ಮುಗಿಸಿ ಎಂದು ಹೇಳಲು ಬರಲ್ಲ. ಏನೆಲ್ಲಾ ಪುರಾವೆಗಳು, ಸಾಕ್ಷ್ಯಗಳು ಸಿಗುತ್ತದೆ, ಅದನ್ನೆಲ್ಲ ನೋಡಿ ಬೇಗ ಮುಗಿಸಿಕೊಡಿ ಎಂದು ಕೇಳಿದ್ದೇವೆ ಎಂದು ತಿಳಿಸಿದರು.
ದೂರುದಾರ ಚಿನ್ನಯ್ಯ ಪತ್ನಿಗೆ ಜೀವ ಭಯ ಇದ್ದರೆ ರಕ್ಷಣೆ ಕೊಡುತ್ತೇವೆ. ಯಾರಿಗೆ ತೊಂದರೆಯಾಗುತ್ತದೆ ಅಂಥವರಿಗೆ ಪೊಲೀಸ್ ಇಲಾಖೆ ರಕ್ಷಣೆ ಕೊಡುತ್ತದೆ ಎಂದು ಹೇಳಿದರು.
Next Story





