ಕಾಂಗ್ರೆಸ್ ಪಕ್ಷದಲ್ಲಿ ಶಿಸ್ತು ಕ್ರಮ ಜರುಗಿಸುವ ಸಂದರ್ಭದಲ್ಲಿ ದೊರೆ, ಸೇವಕ ಎಂಬಂತಾಗಿದೆ : ಕೆ.ಎನ್.ರಾಜಣ್ಣ

ತುಮಕೂರು : ʼಕಾಂಗ್ರೆಸ್ ಪಕ್ಷದಲ್ಲಿ ಶಿಸ್ತು ಕ್ರಮ ಜರುಗಿಸುವ ಸಂದರ್ಭದಲ್ಲಿ ದೊರೆ, ಸೇವಕ ಎಂಬಂತಾಗಿದೆʼ ಎಂದು ಎಂದು ಮಾಜಿ ಸಚಿವ ಹಾಗೂ ಮಧುಗಿರಿ ಶಾಸಕ ಕೆ.ಎನ್.ರಾಜಣ್ಣ ಹೇಳಿದ್ದಾರೆ.
ಮಧುಗಿರಿಯಲ್ಲಿ ನಡೆದ ಉದ್ಯೋಗ ಮೇಳದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ʼಈ ಹಿಂದೆ ಸದ್ಗುರು ಅವರು ಯಾರು ರಾಹುಲ್‍ಗಾಂಧಿ ಕೇಳಿದ್ದರು, ಆದರೆ ಕೆಲವರು ಅವರ ಜೊತೆಯಲ್ಲಿ ವೇದಿಕೆಯ ಮೇಲೆ ಕುಳಿತ ಕಾರ್ಯಕ್ರಮ ನಡೆಸಿದರು. ಇದು ಶಿಸ್ತು ಮೀರುವುದಿಲ್ಲವೇ ? ಎಂದು ಪ್ರಶ್ನಿಸಿದರು.
ಮಹಿಳಾ ಮೀಸಲಾತಿ ಜಾರಿಗಾಗಿ ವಿಶೇಷ ಅಧಿವೇಶನ ಕರೆದಿರುವುದನ್ನು ನಾನು ಸ್ವಾಗತಿಸುತ್ತೇನೆ. 20 ವರ್ಷಗಳ ಹಿಂದೆಯೇ ಪ್ರಧಾನಿ ಮನಮೋಹನ್‍ಸಿಂಗ್ ಕಾಲದಲ್ಲಿಯೇ ಮಸೂದೆ ಮಂಡನೆಗೆ ಕಾಂಗ್ರೆಸ್ ಪಕ್ಷ ಮುಂದಾಗಿತ್ತು. ಆಗ ಜೆಡಿಯು ಮುಖಂಡರಾಗಿದ್ದ ಶರದ ಯಾದವ್, ಬಿಲ್ ಮಂಡನೆಯಾದರೆ ಗಂಡಸರೆಲ್ಲಾ ವಿಷ ತೆಗೆದುಕೊಳ್ಳಬೇಕಾಗುತ್ತದೆ ಎಂದು ಹೋರಾಟ ಮಾಡಿದ್ದರು ಎಂದು ತಿಳಿಸಿದ್ದಾರೆ.
ಲೋಕಸಭೆ ಮತ್ತು ವಿಧಾನ ಸಭಾ ಕ್ಷೇತ್ರಗಳ ಪುನರ್ ವಿಂಗಡನೆಯಲ್ಲಿ 2 ಲಕ್ಷ ಮತದಾರರಿಗೆ ಒಂದು ವಿಧಾನಸಭೆ, ಹಾಗೆಯೇ 10 ಲಕ್ಷ ಮತದಾರರಿಗೆ ಒಂದು ಲೋಕಸಭಾ ಕ್ಷೇತ್ರದ ರೀತಿ ವಿಂಗಡನೆಗೆ ಮುಂದಾಗಿದ್ದಾರೆ. ಅಲ್ಲದೆ , ಮಹಿಳಾ ಮೀಸಲಾತಿಯೂ ಚರ್ಚೆಗೆ ಬರಲಿದೆ. ಇದರಿಂದ ಎಸ್ಸಿ, ಎಸ್ಟಿ, ಓಬಿಸಿ ಸೇರಿದಂತೆ ಎಲ್ಲಾ ವರ್ಗದ ಮಹಿಳೆಯರಿಗೂ ಅನುಕೂಲವಾಗಲಿದೆ.ಹಾಗಾಗಿ ಇದನ್ನು ನಾನು ಸ್ವಾಗತಿಸುತ್ತೇನೆ ಎಂದು ಕೆ.ಎನ್.ರಾಜಣ್ಣ ನುಡಿದರು.




