ರಸ್ತೆಯಲ್ಲಿ ನಮಾಝ್ ಮಾಡಲು ಅನುಮತಿ ಪಡೆದಿದ್ದೀರಾ ಎಂದು ಕೇಳಲು ಸಾಧ್ಯವೇ : ಕೆ.ಎನ್.ರಾಜಣ್ಣ

"ಕೆಲವು ಕಾಯ್ದೆಗಳು ನಮ್ಮಲ್ಲಿ ಪುಸ್ತಕದಲ್ಲಿಯೇ ಉಳಿದಿವೆ"
ತುಮಕೂರು : ಈದ್ಗಾ ಮೈದಾನದಲ್ಲಿ ಸಾಮೂಹಿಕ ನಮಾಝ್ ಜನದಟ್ಟಣೆಯಿಂದಾಗಿ ರಸ್ತೆಗಳಲ್ಲಿಯೇ ನಡೆಸಲಾಗುತ್ತದೆ. ಈ ವೇಳೆ ಅವರನ್ನು ರಸ್ತೆಯಲ್ಲಿ ನಮಾಝ್ ಮಾಡಲು ಅನುಮತಿ ಪಡೆದಿದ್ದೀರಾ ಎಂದು ಕೇಳಲು ಸಾಧ್ಯವೇ ಎಂದು ಮಾಜಿ ಸಚಿವ ಕೆ.ಎನ್.ರಾಜಣ್ಣ ಪ್ರಶ್ನಿಸಿದ್ದಾರೆ.
ಡಿಸಿಸಿ ಬ್ಯಾಂಕ್ ಸುದ್ದಿಗೊಷ್ಠಿ ಸಂದರ್ಭದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಆರೆಸ್ಸೆಸ್ ಕಾರ್ಯಚಟುವಟಿಕೆಗಳ ನಿಯಂತ್ರಣ ಕುರಿತ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಕೆಲವು ಕಾಯ್ದೆಗಳು ನಮ್ಮಲ್ಲಿ ಪುಸ್ತಕದಲ್ಲಿಯೇ ಉಳಿದಿವೆ. ಜಾರಿಗೆ ತರಲು ಆಗದು ಎಂದರು.
Next Story





