ತುಮಕೂರು | ಅಂತ್ಯ ಸಂಸ್ಕಾರಕ್ಕಾಗಿ ಪರದಾಟ: ನೆಲಹಾಲ್ ಗ್ರಾಪಂ ಎದುರು ಮೃತದೇಹವನ್ನಿಟ್ಟು ಗ್ರಾಮಸ್ಥರ ಪ್ರತಿಭಟನೆ

ತುಮಕೂರು : ಅಂತ್ಯಸಂಸ್ಕಾರಕ್ಕೆ ಜಾಗ ಸಿಗದೆ ಗ್ರಾಮ ಪಂಚಾಯತ್ ಎದುರು ಮೃತದೇಹವಿಟ್ಟು ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಪ್ರತಿಭಟನೆ ಮಾಡುತ್ತಿರುವ ಅಮಾನವೀಯ ಘಟನೆ ತಾಲೂಕಿನ ನೆಲಹಾಲ್ ಗ್ರಾಮದಲ್ಲಿ ವರದಿಯಾಗಿದೆ.
ಬುಧವಾರ ಗ್ರಾಮದ ನಿವಾಸಿ ನಾಗರಾಜು(60) ಎಂಬವರು ನಿಧನರಾದರು. ಗ್ರಾಮದಲ್ಲಿ ಸ್ಮಶಾನಕ್ಕೆ ಮೀಸಲಿರಿಸಿದ್ದ ಜಾಗವನ್ನು ಪ್ರಭಾವಿಗಳು ಒತ್ತುವರಿ ಮಾಡಿರುವುದರಿಂದ ಮೃತದೇಹದ ಅಂತ್ಯ ಸಂಸ್ಕಾರಕ್ಕೆ ಜಾಗವಿಲ್ಲದೆ ನೆಲಹಾಲ್ ಗ್ರಾಮ ಪಂಚಾಯತ್ ಎದುರು ಮೃತದೇಹವಿಟ್ಟು ಕುಟುಂಬಸ್ಥರು ಮತ್ತು ಗ್ರಾಮಸ್ಥರು ಪ್ರತಿಭಟನೆ ಮಾಡುತ್ತಿದ್ದಾರೆ.
ನೆಲಹಾಲ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಸೋಮಸಾಗರ ಗೇಟ್ ಬಳಿಯ ಸರ್ವೇ 16ರಲ್ಲಿರುವ ಸ್ಮಶಾನ ಜಾಗವನ್ನು ಪ್ರಭಾವಿಗಳು ಒತ್ತುವರಿ ಮಾಡಿಕೊಂಡಿರುವುದರಿಂದ ಸ್ಮಶಾನ ಭೂಮಿಯಿದ್ದರೂ ಗ್ರಾಮಸ್ಥರಿಗೆ ಇಲ್ಲದ ಸ್ಥಿತಿ ಬಂದಿದೆ.
ಗ್ರಾಮ ಪಂಚಾಯತ್ ಎದುರು ಪ್ರತಿಭಟನೆ ಮಾಡುತ್ತಿರುವ ಗ್ರಾಮಸ್ಥರು ಸ್ಥಳಕ್ಕೆ ಬಾರದ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
Next Story