Tumkuru | ಚೂರಿಯಿಂದ ಇರಿದು ಯುವಕನ ಕೊಲೆ

ತುಮಕೂರು: ಯುವಕನೊಬ್ಬನನ್ನು ಇನ್ನೋರ್ವ ಯುವಕ ಚಾಕುವಿನಿಂದ ಇರಿದು ಕೊಲೆಗೈದಿರುವ ಘಟನೆ ತಿಲಕ್ ಪಾರ್ಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಂಗಳವಾರ ರಾತ್ರಿ ನಡೆದಿರುವುದು ವರದಿಯಾಗಿದೆ.
ಜಯಪುರ ಮುಖ್ಯ ರಸ್ತೆ ಪಿ.ಎಚ್.ಕಾಲನಿ 6ನೇ ಕ್ರಾಸ್ ವಾಸಿ ಸೈಯದ್ ಸುಹೈಲ್(21) ಕೊಲೆಯಾದ ಯುವಕ. ದಿಟ್ಟೂರು ವಾಸಿ ಮುಹಮ್ಮದ್ ರಬ್ಬಾನ್ (23) ಕೊಲೆ ಆರೋಪಿ ಎಂದು ಪೊಲೀಸ್ ಮೂಲಗಳು ದೃಢಪಡಿಸಿವೆ.
ಘಟಾ ಸ್ಥಳಕ್ಕೆ ಧಾವಿಸಿದ ತಿಲಕ್ ಪಾರ್ಕ್ ಸಿಪಿಐ ನದಾಫ್, ಪಿಎಸ್ಸೈ ಯೋಗೀಶ್ ಮತ್ತು ಸಿಬ್ಬಂದಿ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಕೃತ್ಯಕ್ಕೆ ಕಾರಣ ತಿಳಿದುಬಂದಿಲ್ಲ. ಪ್ರಕರಣ ದಾಖಲೆಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
Next Story




