ತುಮಕೂರು | ಖಾಸಗಿ ಬಸ್-ಕಾರಿನ ನಡುವೆ ಢಿಕ್ಕಿ; ಮೂವರು ಮೃತ್ಯು

ತುಮಕೂರು : ಖಾಸಗಿ ಬಸ್ ಹಾಗೂ ಕಾರಿನ ನಡುವೆ ಮುಖಾಮುಖಿ ಢಿಕ್ಕಿಯಾಗಿ ಮೂವರು ಮೃತಪಟ್ಟಿರುವ ಘಟನೆ ಶನಿವಾರ ಸಂಜೆ ಕೊರಟಗೆರೆ- ತುಮಕೂರು ರಸ್ತೆಯ ಬೆಳಧರ ಗ್ರಾಮದ ಬಳಿ ನಡೆದಿದೆ.
ಕಾರಿನಲ್ಲಿ ಇದ್ದವರೆಲ್ಲರೂ ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೂಕಿನ ಬೇರೆ-ಬೇರೆ ಗ್ರಾಮದವರು. ಕಾರಿನಲ್ಲಿದ್ದ ಐವರ ಪೈಕಿ ಮೂವರು ಸಾವನ್ನಪ್ಪಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಕತ್ತಿನಾಗೇನಹಳ್ಳಿಯ ಶಿವಕುಮಾರ್ (28), ಬೈಚಾಪುರದ ಶಿವಶಂಕರ್ (28) ಹಾಗೂ ಗೋವಿಂದಪ್ಪ (60) ಮೃತರು. ಇನ್ನು, ರೆಡ್ಡಿಹಳ್ಳಿಯ ಶಂಕರ್ ಹಾಗೂ ಕತ್ತಿನಾಗೇನಹಳ್ಳಿಯ ವೇಣುಗೋಪಾಲ್ ಗಂಭೀರ ಗಾಯಗೊಂಡಿದ್ದಾರೆ.
ಐವರು ಕಾರಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಹೋಗುತ್ತಿದ್ದರು. ತುಮಕೂರಿನಿಂದ ಪಾವಗಡಕ್ಕೆ ತೆರಳುತಿದ್ದ ಖಾಸಗಿ ಬಸ್, ಕೊರಟಗೆರೆಯಿಂದ ತುಮಕೂರು ಕಡೆ ಬರುತಿದ್ದ ಕಾರಿನ ನಡುವೆ ಅಪಘಾತ ಸಂಭವಿಸಿದೆ.
ಖಾಸಗಿ ಬಸ್‌ನ ಚಾಲಕ ಪರಾರಿಯಾಗಿದ್ದು, ಸ್ಥಳಕ್ಕೆ ತುಮಕೂರು ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ, ಪರಿಶೀಲನೆ ನಡೆಸಿದ್ದಾರೆ
Next Story





