ತುಮಕೂರು: ಬೈಕ್ ಗೆ ಕೆಎಸ್ಸಾರ್ಟಿಸಿ ಬಸ್ ಢಿಕ್ಕಿ; ಸವಾರ ಮೃತ್ಯು
ಅಪಘಾತಕ್ಕೆ ಅವೈಜ್ಞಾನಿಕ ಹಂಪ್ ಕಾರಣ; ಸಾರ್ವಜನಿಕರ ಆರೋಪ

ತುಮಕೂರು: ಬೈಕ್ ಗೆ ಕೆಎಸ್ಸಾರ್ಟಿಸಿ ಬಸ್ ಢಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ತುಮಕೂರಿನ ಹೆಗ್ಗೆರೆ ಬಳಿ ಗೃಹ ಸಚಿವ ಜಿ ಪರಮೇಶ್ವರ್ ಅವರ ಮನೆ ಮುಂಭಾಗ ನಡೆದಿರುವ ಬಗ್ಗೆ ವರದಿಯಾಗಿದೆ.
ಗುಬ್ಬಿ ತಾಲ್ಲೂಕು ಮೂಕನಹಳ್ಳಿಯ ಮಹೇಶ್ (25) ಮೃತ ಯುವಕ. ಮಧುಗಿರಿ ತಾಲೂಕಿನ ಪರ್ತಿಹಳ್ಳಿ ಗ್ರಾಮ ಪಂಚಾಯತಿಯಲ್ಲಿ ವಿಲೇಜ್ ಅಕೌಂಟೆಂಟ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮಹೇಶ್, ಸೋಮವಾರ ಕೆಲಸ ಮುಗಿಸಿ ತನ್ನ ಹೂಟ್ಟೂರಿಗೆ ಬೈಕ್ ನಲ್ಲಿ ತೆರಳುತ್ತಿರುವಾಗ ಹಿಂಬದಿಯಿಂದ ಬಸ್ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಅವೈಜ್ಞಾನಿಕವಾಗಿ ಹೆದ್ದಾರಿಯಲ್ಲಿ ನಿರ್ಮಿಸಿರುವ ಹಂಪ್‌ನಿಂದಾಗಿ ಯುವಕನ ಪ್ರಾಣಹಾನಿಯಾಗಿದೆ. ಗೃಹಸಚಿವರಿಂದ ಶಹಬ್ಬಾಸ್ ಗಿರಿ ಪಡೆಯಲು ಬೇಜವಾಬ್ದಾರಿಯುತ ಅಧಿಕಾರಿಗಳು ಗೃಹಸಚಿವರ ಮನೆ ಮುಂಭಾಗ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಾಕಿರುವ ಹಂಪ್ ಅಮಾಯಕ ಯುವಕನ ಜೀವ ಬಲಿಪಡೆದಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
Next Story





