ಉಡುಪಿ ತಾಲೂಕು ಜಮೀಯ್ಯತುಲ್ ಫಲಾಹ್ ಅಧ್ಯಕ್ಷರಾಗಿ ಖತೀಬ್ ರಶೀದ್

ಉಡುಪಿ, ಆ.11: ಜಮೀಯ್ಯತುಲ್ ಫಲಾಹ್ ಉಡುಪಿ ತಾಲೂಕು ಘಟಕದ ನೂತನ ಅಧ್ಯಕ್ಷರಾಗಿ ಖತೀಬ್ ಅಬ್ದುಲ್ ರಶೀದ್ ಮಲ್ಪೆ ಆಯ್ಕೆಯಾಗಿದ್ದಾರೆ.
ಇತ್ತೀಚಗೆ ಸಂಸ್ಥೆಯ ಕಚೇರಿಯಲ್ಲಿ ನಡೆದ ಜಮೀಯ್ಯತುಲ್ ಫಲಾಹ್ ಉಡುಪಿ ತಾಲೂಕು ಘಟಕದ ಮಹಾಸಭೆಯಲ್ಲಿ ಈ ಆಯ್ಕೆ ಮಾಡಲಾಯಿತು.
ಉಪಾಧ್ಯಕ್ಷರುಗಳಾಗಿ ವಿ.ಎಸ್.ಉಮರ್ ಮತ್ತು ಮುಶೀರ್ ಶೇಖ್, ಕಾರ್ಯದರ್ಶಿಯಾಗಿ ಸಮೀರ್ ಮುಹಮ್ಮದ್, ಜತೆ ಕಾರ್ಯದರ್ಶಿಯಾಗಿ ನಾಸಿರ್ ಯಾಕೂಬ್ ಕುಕ್ಕಿಕಟ್ಟೆ, ಖಜಾಂಚಿಯಾಗಿ ನಝೀರ್ ನೇಜಾರು, ಸಂಘಟನಾ ಕಾರ್ಯದರ್ಶಿಯಾಗಿ ಫಾಝಿಲ್ ಆದಿಉಡುಪಿ ಮತ್ತು ಪತ್ರಿಕಾ ಕಾರ್ಯದರ್ಶಿಯಾಗಿ ರಿಯಾಝ್ ಅಹ್ಮದ್ ಕುಕ್ಕಿಕಟ್ಟೆ ಅವಿರೋಧವಾಗಿ ಆಯ್ಕೆಯಾದರು.
ಸಭೆಯ ಅಧ್ಯಕ್ಷತೆಯನ್ನು ಸಮೀರ್ ಮಹಮ್ಮದ್ ವಹಿಸಿದ್ದರು. ಈ ಸಂದರ್ಭದಲ್ಲಿ 2025-27ನೇ ಸಾಲಿಗೆ 21 ಮಂದಿ ಕಾರ್ಯಕಾರಿ ಸಮಿತಿಯ ಸದಸ್ಯರನ್ನು ಆಯ್ಕೆ ಮಾಡಲಾಯಿತು.
ಕುಂದಾಪುರದ ಅಬ್ದುಸ್ಸಲಾಂ ಚಿತ್ತೂರು ಮತ್ತು ಅಸ್ಲಂ ಹೈಕಾಡಿ ಚುನಾವಣಾ ವೀಕ್ಷಕರಾಗಿದ್ದರು.
Next Story





