ಅಟಿಡೊಂಜಿ ದಿನ: ತುಳು ಜನಪದ ಪಾಡ್ದನ ಹಾಡುಗಾರಿಕೆ

ಉಡುಪಿ, ಆ.11: ಲಯನ್ಸ್ ಕ್ಲಬ್ ಉಡುಪಿ ಹಾಗೂ ಲಯನ್ ಲೇಡಿ ಕೌನ್ಸಿಲ್ ಉಡುಪಿ ವತಿಯಿಂದ ’ಅಟಿಡೊಂಜಿ ದಿನ’ ಕಾರ್ಯಕ್ರಮದ ಅಂಗವಾಗಿ ತುಳು ಜನಪದ ಪಾಡ್ದನ ಹಾಡುಗಾರಿಕೆ ಆಯೋಜಿಸಲಾಗಿತ್ತು.
ಆಕಾಶವಾಣಿಯಲ್ಲಿ ಪಾಡ್ದನ ಹಾಡುವ ಜನಪದ ಹಾಡುಗಾರ್ತಿ ವಸಂತಿ ಕಡ್ತಲ ವಿವಿಧ ಪಾಡ್ದನಗಳನ್ನು ಹಾಡಿದರು. ಅವರ ಪತಿ ರಘು ಪರವ ಹಾಗೂ ಮಕ್ಕಳೂ ಸಾಥ್ ನೀಡಿದರು. ವಸಂತಿ ಕಡ್ತಲ ಹಾಗೂ ಕುಟುಂಬದವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಲಯನ್ಸ್ ಕ್ಲಬ್ ಅಧ್ಯಕ್ಷ ಅಲೆವೂರು ದಿನೇಶ್ ಕಿಣಿ ಅಧ್ಯಕ್ಷತೆ ವಹಿಸಿದ್ದರು. ದ್ವಿತೀಯ ಉಪ ಜಿಲ್ಲಾ ಗವನರ್ ಹರಿ ಪ್ರಸಾದ್ ರೈ ಗೌರವ ಅತಿಥಿಯಾಗಿ ಪಾಲ್ಗೊಂಡರು. ಮಾಜಿ ಜಿಲ್ಲಾ ಗವನರ್ರ ಡಾ.ಎ.ರವೀಂದ್ರನಾಥ್ ಶೆಟ್ಟಿ, ಲಯನ್ಸ್ ವಲಯಾಧ್ಯಕ್ಷ ಲೂಯಿಸ್ ಲೋಬೊ, ಲಯನ್ ಲೇಡಿ ಕೌನ್ಸಿಲ್ ಅಧ್ಯಕ್ಷೆ ರೇಣುಕಾ ದಾಮೋದರ್ ಶೆಟ್ಟಿ, ಕಾರ್ಯದರ್ಶಿ ರಾಧಿಕಾ ಶೆಣೈ, ಕೋಶಾಧಿಕಾರಿ ಸುಜಯ ಶೆಟ್ಟಿ ಉಪಸ್ಥಿತರಿದ್ದರು.
ಲಯನ್ ಲೇಡಿ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಮನೆಯಲ್ಲಿಯೇ ತಯಾರಿಸಿದ ತುಳುನಾಡ ಸಾಂಪ್ರದಾಯಿಕ ಖಾದ್ಯ ಗಳನ್ನೊಳಗೊಂಡ ಊಟೋಪಚಾರದ ವ್ಯವಸ್ಥೆ ವಿಶೇಷವಾಗಿತ್ತು. ಕಾರ್ಯದರ್ಶಿ ಡಾ.ರೋಷನ್ ಕುಮಾರ್ ಶೆಟ್ಟಿ ವರದಿ ಮಂಡಿಸಿದರು. ಕೋಶಾಧಿಕಾರಿ ರಮಾನಂದ ಎಲ್.ನಾಯಕ್ ವಂದಿಸಿದರು.





