ಉಡುಪಿಯಲ್ಲಿ ಆಟಿಡೊಂಜಿ ವಿಪ್ರ ಕೂಟ

ಉಡುಪಿ, ಆ.16: ಉಡುಪಿ ತಾಲೂಕು ಬ್ರಾಹ್ಮಣ ಮಹಾಸಭಾದ ನೇತೃತ್ವದಲ್ಲಿ ಆಟಿಡೊಂಜಿ ವಿಪ್ರಕೂಟ ಕಾರ್ಯ ಕ್ರಮ ಉಡುಪಿ ಕನ್ನರ್ಪಾಡಿಯ ಶ್ರೀದೇವಿ ಸಭಾಭವನದಲ್ಲಿ ನಡೆಯಿತು.
ವಿದ್ವಾನ್ ಹೆರ್ಗ ಹರಿದಾಸ ಭಟ್ ಆಟಿ ತಿಂಗಳ ಬಗ್ಗೆ ವಿಶೇಷ ಮಾಹಿತಿ ನೀಡಿದರು. ಮುಖ್ಯ ಅತಿಥಿಗಳಾಗಿ ಮಾಹೆಯ ಶರತ್ ಕೆ.ರಾವ್, ಮಾಜಿ ಶಾಸಕ ಕೆ.ರಘುಪತಿ ಭಟ್, ಶ್ರೀದೇವಿ ಸಭಾಭವನದ ಮಾಲಕ ರಮೇಶ್ ಬೀಡು, ನಗರ ಸಭಾ ಸದಸ್ಯ ಕೃಷ್ಣರಾವ್ ಕೊಡಂಚ, ಚಲನಚಿತ್ರ ನಟಿ ರಾಧಿಕಾ ನಾರಾಯಣ ಉಪಸ್ಥಿತರಿದ್ದರು.
ತಾಲೂಕು ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಶ್ರೀಕಾಂತ್ ಉಪಾಧ್ಯ ಕೆ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಹಲವು ಸಾಧಕರನ್ನು ಅಭಿನಂದಿಸಲಾಯಿತು. ಪ್ರಧಾನ ಕಾರ್ಯದರ್ಶಿ ಕೆ.ದುರ್ಗಾಪ್ರಸಾದ್ ಭಾರ್ಗವ್ ಸ್ವಾಗತಿಸಿದರು. ಕೋಶಾಧಿಕಾರಿ ಹಯವದನ ಭಟ್ ವಂದಿಸಿದರು.
ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಆಟಿ ಮಾಸದ ವಿಶೇಷ ಖಾದ್ಯಗಳ ಸಹ ಭೋಜನ ವ್ಯವಸ್ಥೆಯನ್ನು ಮಾಡಲಾಗಿತ್ತು. ಉಡುಪಿ ತಾಲೂಕಿನ ಸುಮಾರು 26 ವಿಪ್ರ ವಲಯಗಳು ಮತ್ತು 7 ವಿವಿಧ ಬ್ರಾಹ್ಮಣ ಸಂಘಗಳ ಸದಸ್ಯರು ಭಾಗವಹಿಸಿದ್ದರು.





