ಕೊಲ್ಲೂರು ದೇವಸ್ಥಾನದಲ್ಲಿ ಮಹಿಳೆಯ ಚಿನ್ನದ ಸರ ಕಳವು: ಪ್ರಕರಣ ದಾಖಲು

ಕೊಲ್ಲೂರು, ಆ.16: ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನದ ಶ್ರೀವೀರಭದ್ರ ದೇವರ ಗುಡಿಯಲ್ಲಿ ಕಳ್ಳರು ಮಹಿಳೆಯೊಬ್ಬರ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಕಳವು ಮಾಡಿರುವ ಘಟನೆ ಆ.15ರಂದು ಮಧ್ಯಾಹ್ನ ವೇಳೆ ನಡೆದಿದೆ.
ಹೆಬ್ರಿ ಮುದ್ರಾಡಿ ಗ್ರಾಮದ ಜಯಂತಿ(64) ಎಂಬವರು ತಮ್ಮ ಮಗಳು ಹಾಗೂ ಅಳಿಯರೊಂದಿಗೆ ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನಕ್ಕೆ ಹೋಗಿದ್ದು, ಅಲ್ಲಿ ಜಯಂತಿ ಶ್ರೀವೀರಭದ್ರ ದೇವರಿಗೆ ಕೈ ಮುಗಿದು ಬರುವುದಾಗಿ ಹೇಳಿ ಹೋದಾಗ ಒಮ್ಮೇಲೆ ಮಳೆ ಬಂತ್ತೆನ್ನಲಾಗಿದೆ.
ಈ ವೇಳೆ ದೇವಸ್ಥಾನದ ಹೊರಾಂಗಣದಲ್ಲಿ ನೆರೆದ ಜನರು ಒಮ್ಮೇಲೆ ವೀರಭದ್ರ ದೇವರ ಗುಡಿಯ ಕಡೆಗೆ ನುಗ್ಗಿ ಜಯಂತಿ ಅವರ ಮೈ ಮೇಲೆ ಬಿದ್ದರು. ಜನರು ಹೋದ ಬಳಿಕ ನೋಡಿದಾಗ ಜಯಂತಿ ಅವರ ಕುತ್ತಿಗೆಯಲ್ಲಿದ್ದ 5 ಪವನ್ ಇರುವ ಚಿನ್ನದ ಸರವನ್ನು ಕಳವು ಆಗಿರುವುದು ಕಂಡುಬಂದಿದೆ. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





