ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಚುನಾವಣೆ: ರೈತ ಸಂಘಕ್ಕೆ ಬಹುಮತ

ಬ್ರಹ್ಮಾವರ, ಆ.17: ದಕ್ಷಿಣ ಕನ್ನಡ ಸಹಕಾರಿ ಸಕ್ಕರೆ ಕಾರ್ಖಾನೆ ಬ್ರಹ್ಮಾವರ ನಿಯಮಿತ ಇದರ ನೂತನ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಉಡುಪಿ ಜಿಲ್ಲಾ ರೈತರ ಸಂಘದ ಬೆಂಬಲಿತ ಗುಂಪು ಪೂರ್ಣ ಬಹುಮತ ಗಳಿಸಿದೆ.
ರವಿವಾರ ನಡೆದ ಚುನಾವಣೆಯಲ್ಲಿ ಸಾಮಾನ್ಯ ಕ್ಷೇತ್ರದಿಂದ ಭುಜಂಗ ಶೆಟ್ಟಿ ಬ್ರಹ್ಮಾವರ, ಸಂಜೀವ ಶೆಟ್ಟಿ ಸಂಪಿಗೇಡಿ, ಸತೀಶ್ ಕಿಣಿ ಬೆಳ್ವೆ, ಕೆ.ದೋರು ಸದಾನಂದ ಶೆಟ್ಟಿ, ಎಚ್.ಹರಿಪ್ರಸಾದ್ ಶೆಟ್ಟಿ ಬಹುಮತದಿಂದ ಆಯ್ಕೆಯಾದರು. ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಕ್ಷೇತ್ರದಿಂದ ಮಂಜುನಾಥ್ ಗಿಳಿಯಾರು ಆಯ್ಕೆಯಾದರು.
ಈಗಾಗಲೇ ಅವಿರೋಧವಾಗಿ ಆರು ಮಂದಿ ಅಭ್ಯರ್ಥಿಗಳು ಆಯ್ಕೆಯಾಗಿದ್ದು, ಪರಿಶಿಷ್ಟ ಪಂಗಡ ಮೀಸಲು ಸ್ಥಾನದಿಂದ ರಂಗನಾಯಕ, ಪರಿಶಿಷ್ಟ ಜಾತಿ ಮೀಸಲು ಸ್ಥಾನದಿಂದ ಶಿವರಾಮ್ ಹಾಲಾಡಿ, ಹಿಂದುಳಿದ ವರ್ಗದಿಂದ ಭೋಜ ಕುಲಾಲ್ ಬೆಳಂಜೆ, ಹಿಂದುಳಿದ ಬಿ ಕ್ಷೇತ್ರದಿಂದ ವಂಡ್ಸೆ ಉದಯ ಕುಮಾರ್ ಶೆಟ್ಟಿ ಅಡಿಕೆಕೊಡ್ಲು, ಮಹಿಳಾ ಮೀಸಲು ಸ್ಥಾನದಿಂದ ಚೈತ್ರ ಅಡಪಾ, ಗಿರಿಜಾ ಪೂಜಾರ್ತಿ ಅಮಾಸೆಬೈಲು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.





