ಕೊನೆಗೂ ಆಶ್ರಮ ಸೇರಿದ ವೃದ್ದ ದಂಪತಿ

ಉಡುಪಿ. ಅ.17: ಮಕ್ಕಳಿಲ್ಲದ ವೃದ್ದ ದಂಪತಿ ಅನಾರೋಗ್ಯ ಹಾಗೂ ಮೂಲಸೌಕರ್ಯಗಳ ಕೊರತೆಯಿಂದ ವಾಸದ ಮನೆಯಲ್ಲಿ ಬದುಕಲು ಅಸಾಧ್ಯವಾಗಿ ಸಾಮಾಜಿಕ ಕಾರ್ಯಕರ್ತ ವಿಶುಶೆಟ್ಟಿ ಅಂಬಲಪಾಡಿಯವರ ನೆರವಿನಿಂದ ಕೊಳಲಗಿರಿಯ ಸ್ವರ್ಗ ಆಶ್ರಮಕ್ಕೆ ದಾಖಲಾಗಿದ್ದಾರೆ.
ಪಡುಬಿದ್ರೆ ಠಾಣಾ ವ್ಯಾಪ್ತಿಯ ಹೆಜಮಾಡಿಯ ಜನಾರ್ದನ್ ಆರ್ಚಾ (70) ಹಾಗೂ ಲಿಲಾವತಿ (65) ದಂಪತಿ ಆಶ್ರಮಕ್ಕೆ ದಾಖಲಾದ ಹಿರಿಯ ನಾಗರಿಕರು. ಅಸ್ತಮಾ ಖಾಯಾಲೆಯಿಂದ ಬದುಕುತ್ತಿದ್ದ ಪತಿ ಹಾಗೂ ಅಂಗ ವೈಫಲ್ಯ ಹೊಂದಿದ ಪತ್ನಿ ಈ ಮೊದಲು ಆಶ್ರಮ ಸೇರುವ ಇಚ್ಚೆ ಹೊಂದಿದ್ದು ತುರ್ತು ಸಹಾಯ ವಿಶುಶೆಟ್ಟಿ ನೀಡಿ ಸಂತೈಸಿದ್ದರು.
ಇದೀಗ ದಂಪತಿ ನಮಗೆ ಮನೆಯಲ್ಲಿ ಇರಬೇಕೆಂದು ಆಸೆ ಇದ್ದರೂ ನಮ್ಮಿಂದ ಬದುಕಲು ಆಗುತ್ತಿಲ್ಲ. ಒಂದೆಡೆ ಅನಾರೋಗ್ಯ, ಆರ್ಥಿಕ ಸಮಸ್ಯೆ ಜೊತೆಗೆ ಅಸಹಾಯಕತೆ ಇದೆ. ಈ ಬಗ್ಗೆ ವಿಶುಶೆಟ್ಟಿಯವರಲ್ಲಿ ಆಶ್ರಮಕ್ಕೆ ದಾಖಲಿ ಸುವಂತೆ ವಿನಂತಿಸಿದ್ದು, ವೃದ್ದರ ವಿನಂತಿಗೆ ಸ್ಪಂದಿಸಿದ ವಿಶುಶೆಟ್ಟಿ ಸ್ವರ್ಗ ಆಶ್ರಮದಲ್ಲಿ ಆಶ್ರಯ ಕಲ್ಪಸಿದರು. ಈ ಬಗ್ಗೆ ಪಡುಬಿದ್ರೆ ಠಾಣೆಗೆ ಮಾಹಿತಿ ನೀಡಲಾಗಿದೆ.





