ಸುಶಿಕ್ಷಿತರು ಅಪರಾಧಿಗಳಾಗುತ್ತಿರುವುದು ಸಮಾಜದ ದುರಂತ: ರಿಯಾಝ್ ಅಹ್ಮದ್ ರೋಣ

ಉಡುಪಿ, ಆ.18: ನಾವು ಶಿಕ್ಷಣ ಸಂಸ್ಥೆಗಳನ್ನು ಸಾಕಷ್ಟು ಸಂಖ್ಯೆಯಲ್ಲಿ ಕಾಣುತ್ತೇವೆ. ಆದರೆ ಸಮಾಜದಲ್ಲಿ ಅಪರಾಧಿ ಕೃತ್ಯಗಳಲ್ಲಿ ಸುಶಿಕ್ಷಿತರು ಇರುವುದು ದೊಡ್ಡ ದುರಂತ ಎಂದು ಬೋರ್ಡ್ ಆಫ್ ಇಸ್ಲಾಮಿಕ್ ಎಜುಕೇಶನ್ ಕರ್ನಾಟಕ ಇದರ ರಾಜ್ಯ ಕಾರ್ಯದರ್ಶಿ ರಿಯಾಝ್ ಅಹ್ಮದ್ ರೋಣ ಹೇಳಿದ್ದಾರೆ.
ಹೂಡೆಯ ಸಾಲಿಹಾತ್ ಶಿಕ್ಷಣ ಸಂಸ್ಥೆಯಲ್ಲಿ ಬಿಎ ವತಿಯಿಂದ ನಡೆದ ಪಬ್ಲಿಕ್ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳನ್ನುದ್ದೇಶಿಸಿ ಅವರು ಮಾತನಾಡುತಿದ್ದರು.
ಈ ಸಂದರ್ಭದಲ್ಲಿ ಸಂಪೂರ್ಣ ಕುರ್‌ಆನ್ ಕಂಠಪಾಠ ಮಾಡಿರುವ ವಿದ್ಯಾರ್ಥಿಗಳಾದ ಅಕ್ಮಲ್ ಉಸ್ತಾದ್ ಜಮಾಲ್, ಖನ್ಸಾ ಅಬ್ದುಲ್ ಕಯ್ಯೂಮ್, ಅಸ್ಬಹ್ ಇರಮ್ ಹಾಗೂ ಉಮೈರ್ ಅಬ್ದುಲ್ಲಾಹ್ ಇವರನ್ನು ಸನ್ಮಾನಿಸಲಾಯಿತು.
ಅಧ್ಯಕ್ಷತೆಯನ್ನು ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಇದ್ರೀಸ್ ಹೂಡೆ ವಹಿಸಿದ್ದರು. ಶಿಕ್ಷಕಿ ಮುಸರತ್ ಸ್ವಾಗತಿಸಿ ವಂದಿಸಿದರು. ಶಿಕ್ಷಕಿ ಯಾಸ್ಮೀನ್ ತಾಜ್ ಕಾರ್ಯಕ್ರಮ ನಿರ್ವಹಿಸಿದರು.
Next Story





