ನೇಜಾರು ಕೊಲೆ ಪ್ರಕರಣ: ದೂರುದಾರೆಯ ಪಾಟಿ ಸವಾಲು

ಉಡುಪಿ, ಆ.22: ನೇಜಾರು ತಾಯಿ ಮತ್ತು ಮೂವರು ಮಕ್ಕಳ ಹತ್ಯೆ ಪ್ರಕರಣದ ಮೂರು ಸಾಕ್ಷಿಗಳ ಪೈಕಿ ದೂರುದಾರೆ ಪ್ರಕರಣದ ದೂರುದಾರೆ ಐಫಾ ಅವರ ಪಾಟಿ ಸವಾಲು ಗುರುವಾರ ಉಡುಪಿ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ನಡೆಯಿತು.
ಆರೋಪಿ ಪರ ವಕೀಲ ರಾಜು ಪೂಜಾರಿ ಪ್ರಕರಣದ ದೂರುದಾರೆ ಐಫಾ ಪಾಟಿ ಸವಾಲು ನಡೆಸಿದರು. ಸಮಯಾವಕಾಶದ ಕೊರತೆಯ ಹಿನ್ನೆಲೆಯಲ್ಲಿ ಸಾಕ್ಷಿದಾರರಾದ ದೂರುದಾರೆಯ ತಾಯಿ ಶಾಹಿನ್ ಬೀಬಿ ಮತ್ತು ಆಟೋ ರಿಕ್ಷಾ ಚಾಲಕ ಶ್ಯಾಮ್ ಅವರ ಪಾಟಿ ಸವಾಲು ಪ್ರಕ್ರಿಯೆಯನ್ನು ಸೆ.12ಕ್ಕೆ ಮುಂದೂಡಿ, ನ್ಯಾಯಧೀಶ ಸಮೀವುಲ್ಲಾ ಆದೇಶ ನೀಡಿದರು.
ಆರೋಪಿ ಪ್ರವೀಣ್ ಅರುಣ್ ಚೌಗಲೆಯನ್ನು ವಿಡಿಯೋ ಕಾನ್ಫ್‌ರೆನ್ಸ್ ಮೂಲಕ ಹಾಜರುಪಡಿಸಲಾಯಿತು. ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ ಶಿವಪ್ರಸಾದ್ ಆಳ್ವಾ ಹಾಜರಿದ್ದರು.
Next Story





