ಕೋಳಿ ಅಂಕ: ಎಂಟು ಮಂದಿ ಬಂಧನ

ಶಂಕರನಾರಾಯಣ, ಆ.23: ಬೆಳಂಜೆ ಗ್ರಾಮದ ಮಾಬ್ಳಿ ಎಂಬಲ್ಲಿ ಆ.22ರಂದು ಸಂಜೆ ವೇಳೆ ನಡೆಯುತ್ತಿದ್ದ ಕೋಳಿ ಅಂಕಕ್ಕೆ ಸಂಬಂಧಿಸಿ ಎಂಟು ಮಂದಿ ಆರೋಪಿಗಳನ್ನು ಶಂಕರನಾರಾಯಣ ಪೊಲೀಸರು ಬಂಧಿಸಿದ್ದಾರೆ.
ರೋಹಿತ್ ಶೆಟ್ಟಿ, ಚರಣ್ ರಾಜ್, ದಿನೇಶ್ ರಾವ್, ಅರ್ಜುನ್, ಮಂಜುನಾಥ್, ಪ್ರಶಾಂತ, ದಯಾನಂದ ಪೂಜಾರಿ, ಸಂತೋಷ ಶೆಟ್ಟಿ ಬಂಧಿತ ಆರೋಪಿಗಳು. ಇವರಿಂದ 30ಸಾವಿರ ರೂ. ಮೌಲ್ಯದ 30 ಕೋಳಿ ಹುಂಜ, 10 ಕೋಳಿ ಕತ್ತಿ(ಬಾಳು), 10630ರೂ. ನಗದು, 60,000ರೂ. ಮೌಲ್ಯದ ಆರು ಮೊಬೈಲ್ ಫೋನ್‌ಗಳು ಹಾಗೂ 43,45,630 ರೂ. ಮೌಲ್ಯದ 44 ಕಾರು ಮತ್ತು ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





